ನಟಿ ಸೌಂದರ್ಯರ ಬಯೋಪಿಕ್​ನಲ್ಲಿ ನಟಿಸುವ ಆಸೆ ರಶ್ಮಿಕಾಗೆ! ಅಷ್ಟಕ್ಕೂ ಇವರಿಬ್ಬರ ಸಂಬಂಧವೇನು?

Published : Jan 29, 2024, 07:25 PM IST
ನಟಿ ಸೌಂದರ್ಯರ ಬಯೋಪಿಕ್​ನಲ್ಲಿ ನಟಿಸುವ ಆಸೆ ರಶ್ಮಿಕಾಗೆ! ಅಷ್ಟಕ್ಕೂ ಇವರಿಬ್ಬರ ಸಂಬಂಧವೇನು?

ಸಾರಾಂಶ

ಬಹುಭಾಷಾ ನಟಿ ಸೌಂದರ್ಯ ಅವರ ಬಯೋಪಿಕ್​ನಲ್ಲಿ ನಟಿಸುವ ಆಸೆಯಂತೆ ನಟಿ ರಶ್ಮಿಕಾ ಮಂದಣ್ಣ ಅವರಿಗೆ. ಅಷ್ಟಕ್ಕೂ ಈ ಆಸೆ ಹುಟ್ಟಲು ಕಾರಣವೇನು?   

ರಶ್ಮಿಕಾ ಮಂದಣ್ಣ ಈಗ ಅನಿಮಲ್​ ಯಶಸ್ಸಿನ ಬಳಿಕ ಸಕತ್​ ಸೌಂಡ್​ ಮಾಡುತ್ತಿದ್ದಾರೆ. ಇದಾಗಲೇ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿರುವ ನಟಿ ಈಗ ಒಂದು ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಅದೇನೆಂದರೆ, ಅವರಿಗೆ ಸ್ಯಾಂಡಲ್​ವುಡ್​ ಬ್ಯೂಟಿ ಸೌಂದರ್ಯ ಅವರ ಬಯೋಪಿಕ್​ನಲ್ಲಿ ಸೌಂದರ್ಯ ಆಗಿ ನಟಿಸುವ ಆಸೆ ಇದೆಯಂತೆ. ತಾವು ಸಿನಿಮಾ ಇಂಡಸ್ಟ್ರಿಗೆ ಬರುವುದಕ್ಕೂ ಮುನ್ನ ತಮ್ಮ ಮತ್ತು  ಸೌಂದರ್ಯ ಅವರ ನಡುವಿನ ಹೋಲಿಕೆಯ ಬಗ್ಗೆ ಅವರ ತಂದೆ ಹೇಗೆ ಹೇಳುತ್ತಿದ್ದರು ಎಂಬುದನ್ನು ನೆನಪಿಸಿಕೊಂಡಿರುವ ನಟಿ, ನನ್ನ ತಂದೆ ನಾನು ನಟಿ ಸೌಂದರ್ಯ ಅವರಂತೆಯೇ ಕಾಣುತ್ತೇನೆ ಎನ್ನುತ್ತಿದ್ದರು ಎಂದಿದ್ದಾರೆ.  ಆದ್ದರಿಂದ ಸೌಂದರ್ಯ ಅವರ ಜೀವನಾಧಾರಿತ ಚಿತ್ರ ಮಾಡುವ ಆಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೂ ಎಲ್ಲರಿಗೂ ತಿಳಿದಿರುವಂತೆ ನಟಿ ಸೌಂದರ್ಯ ಅವರದ್ದು ದುರಂತ ಸಾವು. 2004 ಏಪ್ರಿಲ್ 17 ಚಿತ್ರರಂಗದ ಪಾಲಿಗೆ ಕರಾಳ ದಿನ. ಭಾರತೀಯ ಚಿತ್ರರಂಗ ಕಂಡ ಟ್ಯಾಲೆಂಟೆಡ್‌ ನಟಿ ಸೌಂದರ್ಯ ದುರಂತ ಸಾವು ಕಂಡ ದಿನವಿದು. ತೆಲಂಗಾಣದ ಕರೀಂನಗರಕ್ಕೆ ಚುನಾವಣಾ ಪ್ರಚಾರಕ್ಕೆಂದು ಸೌಂದರ್ಯ ಅವರು ತಮ್ಮ ಸಹೋದರ ಅಮರನಾಥರೊಂದಿಗೆ ಬೆಂಗಳೂರಿನ ಮನೆಯಿಂದ ಹೊರಟಾಗ ವಿಮಾನ ದುರಂತ (Air Crash) ಸಂಭವಿಸಿ ಮೃತಪಟ್ಟರು. ಆ ಸಂದರ್ಭದಲ್ಲಿ ಐದು ತಿಂಗಳ ಗರ್ಭಿಣಿಯಾಗಿದ್ದರು ಈಕೆ,  ಕೋಟ್ಯಂತರ ಅಭಿಮಾನಿಗಳನ್ನು ಬಿಟ್ಟು ಹೋದರು. ಹೆಸರಿಗೆ ತಕ್ಕಂತೆ ಸೌಂದರ್ಯದ ಘನಿಯಾಗಿದ್ದ  ನಟಿ, ಅದ್ಭುತ ನಟನೆಗೆ ಹೆಸರುವಾಸಿಯಾದವರು. 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸ್ಟಾರ್ ನಟರಿಗೆ ನಾಯಕಿಯಾಗಿ ಮುಂಚೂಣಿಯಲ್ಲಿದ್ದ ಕಲಾವಿದೆ. 

30ನೇ ವಯಸ್ಸಲ್ಲೇ ಇಬ್ಬರು ಮಕ್ಕಳ ಅಮ್ಮ ಆಗಬಯಸಿದ್ದ ಸಾಯಿ ಪಲ್ಲವಿ ಇನ್ನೂ ಮದ್ವೆ ಯಾಕಾಗಿಲ್ಲ? ಇಲ್ಲಿದೆ ಕಾರಣ...

ಸೌಂದರ್ಯ ಎಂದಾಕ್ಷಣ ನೆನಪಾಗುವುದು ಆಪ್ತಮಿತ್ರ ಚಿತ್ರ. ವಿಭಜಿತ ವ್ಯಕ್ತಿತ್ವ (split personality) ನಟನೆಯಿಂದ ಮೋಡಿ ಮಾಡಿದ ಸೌಂದರ್ಯ 27ನೇ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ ಕಲಾವಿದೆ. ಈ ಚಿಕ್ಕ ವಯಸ್ಸಿನಲ್ಲಿಯೇ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದು, ಈಕೆಯ ಮರಣದ ನಂತರ ಬಹಿರಂಗಗೊಂಡಿತ್ತು. ಅಂಥ ವ್ಯಕ್ತಿತ್ವ ಈಕೆಯದ್ದು. 

ಸೌಂದರ್ಯ  ಮೂಲ ಹೆಸರು  ಸೌಮ್ಯ ಸತ್ಯನಾರಾಯಣ (Sowmya Satyanarayana). ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಸೈ ಎನಿಸಿಕೊಂಡು ಕೋಟ್ಯಂತರ ಅಭಿಮಾನಿಗಳನ್ನು (Fans) ಗಳಿಸಿದ್ದ ಸೌಂದರ್ಯ, ಚಿಕ್ಕ ವಯಸ್ಸಿನಲ್ಲಿಯೇ ನಿರ್ಮಾಪಕಿಯೂ ಆಗಿದ್ದರು. ಇವರು ಕನ್ನಡದಲ್ಲಿ ನಿರ್ಮಾಣ ಮಾಡಿದ್ದ `ದ್ವೀಪ' (Dweepa) ಸಿನಿಮಾ ರಾಷ್ಟ್ರ ಪ್ರಶಸ್ತಿ ಪಡೆಯುವ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಸೈ ಎನಿಸಿಕೊಂಡು ಕೋಟ್ಯಂತರ ಅಭಿಮಾನಿಗಳನ್ನು (Fans) ಗಳಿಸಿದ್ದ ಸೌಂದರ್ಯ, ಚಿಕ್ಕ ವಯಸ್ಸಿನಲ್ಲಿಯೇ ನಿರ್ಮಾಪಕಿಯೂ ಆಗಿದ್ದರು. ಇವರು ಕನ್ನಡದಲ್ಲಿ ನಿರ್ಮಾಣ ಮಾಡಿದ್ದ `ದ್ವೀಪ' (Dweepa) ಸಿನಿಮಾ ರಾಷ್ಟ್ರ ಪ್ರಶಸ್ತಿ ಪಡೆಯುವ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ಇವರ ಜೀವನಾಧರಿತ ಚಿತ್ರವನ್ನು ಮಾಡಲು ನಟಿ ರಶ್ಮಿಕಾ ಮಂದಣ್ಣ ಆಸೆ ಪಟ್ಟಿದ್ದಾರೆ. 

ಅವಾರ್ಡ್​ ಫಂಕ್ಷನ್​ನಲ್ಲಿ ರಣಬೀರ್​-ಆಲಿಯಾ ಇದೆಂಥ ರೊಮ್ಯಾನ್ಸ್​! ಆಕೆ ತೃಪ್ತಿ ಡಿಮ್ರಿ ಅಲ್ಲಪ್ಪಾ ಎಂದ ಫ್ಯಾನ್ಸ್​
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!
ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!