'ಸಂಘಿ' ಕುರಿತು ಮಗಳು ಐಶ್ವರ್ಯ ಹೇಳಿದ್ದನ್ನು ತಿರುಚಬೇಡಿ ಎಂದು ಮನವಿ ಮಾಡಿಕೊಂಡ ನಟ ರಜನೀಕಾಂತ್. ಅಷ್ಟಕ್ಕೂ ಆಗಿದ್ದೇನು?
ಇದೇ 22ರಂದು ನಡೆದಿದ್ದ ರಾಮ ಲಲ್ಲಾ ಪ್ರತಿಷ್ಠಾಪನೆ ದಿನ ಅಯೋಧ್ಯೆಗೆ ರಜನಿಕಾಂತ್ ಹೋದ ಕಾರಣ, ಕೆಲವರು ಅವರನ್ನು ಸಂಘಿ ಎಂದು ಕರೆದಿದ್ದರು. ಹಿಂದೂ ದೇವತೆಯ ಪ್ರಾಣಪ್ರತಿಷ್ಠೆಗೆ ಹೋದ ಕಾರಣ, ಕೆಲವು ಹಿಂದೂಗಳೇ ಅವರನ್ನು ಒಂದು ಪಕ್ಷದ ಏಜೆಂಟ್ ಅಂತಲೂ ಟ್ರೋಲ್ ಮಾಡಿದ್ದರು. ಈ ವಿಚಾರವಾಗಿ ರಜನಿಕಾಂತ್ ಪುತ್ರಿ ಐಶ್ವರ್ಯ ಅವರು ಉತ್ತರಿಸಿದ್ದರು. ಹೀಗೆ ನನ್ನ ತಂದೆಯನ್ನು ಕರೆಯಬೇಡಿ, ಅವರು ಸಂಘಿ ಅಲ್ಲ ಎಂದಿದ್ದರು. ಒಂದು ವೇಳೆ ಅವರೇನಾದರೂ ಸಂಘಿ ಆಗಿದ್ದರೆ ಲಾಲ್ ಸಲಾಂ ಸಿನಿಮಾದಲ್ಲಿ ನಟಿಸುತ್ತಿರಲಿಲ್ಲ ಎಂದೂ ಹೇಳಿದ್ದರು.
ಆದರೆ ಈ ಮಾತಿಗೆ ಬೇರೆ ಅರ್ಥ ಕಲ್ಪಿಸಲಾಗಿತ್ತು. ಸಂಘಿ ಎನ್ನುವ ಪದವನ್ನು ಐಶ್ವರ್ಯಾ ಅವರು ವಿರೋಧಿಸಿದ್ದಾರೆ. ಅದು ಕೆಟ್ಟ ಪದ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ ಎಂದು ವಿರೋಧ ವ್ಯಕ್ತವಾಗಿತ್ತು. ಅದಕ್ಕೆ ಈಗ ಖುದ್ದು ರಜನೀಕಾಂತ್ ಸ್ಪಷ್ಟನೆ ನೀಡಿದ್ದಾರೆ. ತೆರಳಲು ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಟ ರಜನೀಕಾಂತ್ ಮಾಧ್ಯಮಗಳ ಜೊತೆ ಮಾತನಾಡುತ್ತಾ ತಮ್ಮ ಮಗಳು ಹೇಳಿದ್ದನ್ನು ಅಪಾರ್ಥ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
30ನೇ ವಯಸ್ಸಲ್ಲೇ ಇಬ್ಬರು ಮಕ್ಕಳ ಅಮ್ಮ ಆಗಬಯಸಿದ್ದ ಸಾಯಿ ಪಲ್ಲವಿ ಇನ್ನೂ ಮದ್ವೆ ಯಾಕಾಗಿಲ್ಲ? ಇಲ್ಲಿದೆ ಕಾರಣ...
ಐಶ್ವರ್ಯಾ ಅವರು ಸಂಘಿ ಅನ್ನೋದು ಕೆಟ್ಟ ಪದ ಅನ್ನೋ ಅರ್ಥದಲ್ಲಿ ಹೇಳಲಿಲ್ಲ. ನನ್ನ ತಂದೆಯ ಬಗ್ಗೆ ಯಾಕೆ ಈ ರೀತಿ ಪ್ರಚಾರ ಮಾಡ್ತಾರೆ ಎಂದಷ್ಟೇ ಕೇಳಿದುದಾಗಿ ಸಮರ್ಥಿಸಿಕೊಂಡರು. ನನ್ನ ತಂದೆ ಯಾರ ಜೊತೆಯೂ ಗುರುತಿಸಿಕೊಂಡವರಲ್ಲ. ಓರ್ವ ಹಿಂದೂವಾಗಿ ರಾಮಲಲ್ಲಾ ಪ್ರಾಣಪ್ರತಿಷ್ಠೆಗೆ ಹೋಗಿದ್ದಾರಷ್ಟೇ. ಅವರನ್ನು ಸಂಘಿ ಎನ್ನುವಲ್ಲಿ ಅರ್ಥವಿಲ್ಲ ಎಂದಷ್ಟೇ ಮಗಳು ಹೇಳಿದ್ದರು. ಆದರೆ ಅದನ್ನು ಬೇರೆ ರೀತಿಯಲ್ಲಿ ಕಲ್ಪಿಸಲಾಗಿದೆ ಎಂದು ರಜನೀಕಾಂತ್ ಹೇಳಿದರು.
ಅಷ್ಟಕ್ಕೂ, ಐಶ್ವರ್ಯ ಅವರು, ಚೆನ್ನೈನಲ್ಲಿ ನಡೆದ ರಜನಿಕಾಂತ್ ಅವರ ಲಾಲ್ ಸಲಾಂ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತಾಡುವ ವೇಳೆ, ನನ್ನ ತಂದೆ ಸಂಘಿ ಅಲ್ಲ. ನಾನು ಸೋಶಿಯಲ್ ಮೀಡಿಯಾಗಳಿಂದ ದೂರ ಉಳಿದಿದ್ದೆ. ಆದ್ರೆ ನನ್ನ ಟೀಮ್ ತೋರಿಸಿ ಪೋಸ್ಟ್ನಿಂದ ಬೇಸತ್ತು ಸಂಘಿ ಎನ್ನುವ ಪದದ ಅರ್ಥ ಹುಡುಕಿದೆ. ಈ ರೀತಿ ನನ್ನ ತಂದೆಯನ್ನು ಕರೆಯಬೇಡಿ ಎಂದಿದ್ದರು. ನನ್ನ ತಂದೆ ಲಾಲ್ ಸಲಾಂ ಚಿತ್ರದ ಸ್ಕ್ರಿಪ್ಟ್ ಅನ್ನು ಕೇಳಿದಾಗ ಮೊಯ್ದಿನ್ ಭಾಯಿ ಪಾತ್ರ ತನಗೆ ಮಾಡಬಹದೇ ಎಂದು ತಂದೆ ನನ್ನನ್ನು ಕೇಳಿದರು. ಆರಂಭದಲ್ಲಿ ಹಿಂಜರಿದೆ. ಆ ಪಾತ್ರಕ್ಕೆ ಅವರನ್ನು ಆರಿಸುವ ಬಗ್ಗೆ ನಾನು ಅವರು ಸೂಚಿಸುವ ತನಕ ಯೋಚಿಸಲೇ ಇಲ್ಲ. ಲಾಲ್ ಸಲಾಂ ಒಂದು ಸೂಕ್ಷ್ಮ ವಿಚಾರದ ಸಿನಿಮಾ ಆಗಿ ಎಂದು ನಿರ್ದೇಶಕಿ ಐಶ್ವರ್ಯಾ ಹೇಳಿದ್ರು.
ಅವಾರ್ಡ್ ಫಂಕ್ಷನ್ನಲ್ಲಿ ರಣಬೀರ್-ಆಲಿಯಾ ಇದೆಂಥ ರೊಮ್ಯಾನ್ಸ್! ಆಕೆ ತೃಪ್ತಿ ಡಿಮ್ರಿ ಅಲ್ಲಪ್ಪಾ ಎಂದ ಫ್ಯಾನ್ಸ್