ಅಯ್ಯೋ! ನೋಡಲಾಗದ ಸ್ಥಿತಿಯಲ್ಲಿ ಪ್ರಭಾಸ್; ರಜನಿಕಾಂತ್- ಶಿವಣ್ಣ ವೈರಲ್ ಫೋಟೋ ಹಿಂದಿರುವ ಅಸಲಿ ಸತ್ಯವೇನು?

Published : Mar 18, 2023, 09:45 AM IST
ಅಯ್ಯೋ! ನೋಡಲಾಗದ ಸ್ಥಿತಿಯಲ್ಲಿ ಪ್ರಭಾಸ್; ರಜನಿಕಾಂತ್- ಶಿವಣ್ಣ ವೈರಲ್ ಫೋಟೋ ಹಿಂದಿರುವ ಅಸಲಿ ಸತ್ಯವೇನು?

ಸಾರಾಂಶ

ಶಿವಣ್ಣ ಮತ್ತು ರಜನಿಕಾಂತ್ ಜೊತೆ ಪ್ರಭಾಸ್. ವಿಚಿತ್ರ ಆಕಾರದಲ್ಲಿ ಪಡೆದಿರುವುದು ಯಾಕೆ? ವೈರಲ್ ಫೋಟೋ ಹಿಂದಿರುವ ಗುಟ್ಟು ಏನು?  

ಟಾಲಿವುಡ್‌ 6 ಅಡಿ ಹೀರೋ ಪ್ರಭಾಸ್‌ ತುಂಬಾ ಸ್ಟ್ರಾಂಗ್ ಸೋಷಿಯಲ್ ಮೀಡಿಯಾದಲ್ಲಿ ಪ್ರೆಸೆನ್ಸ್‌ ಹೊಂದಿದ್ದಾರೆ. ಬಾಹುಬಲಿ ನಟನ ಬಗ್ಗೆ ಏನೇ ಪೋಸ್ಟ್‌ ಆದರೂ ಕ್ಷಣದಲ್ಲಿ ವೈರಲ್ ಆಗುತ್ತದೆ. ಏನೇ ನೆಗೆಟಿವ್ ಕಾಮೆಂಟ್ ಇದ್ದರೂ ಅಭಿಮಾನಿಗಳು ಪರ ನಿಂತುಕೊಂಡು ವಾದ ಮಾಡುತ್ತಾರೆ. ಅಪಾರ ಸಂಖ್ಯೆಯಲ್ಲಿ ವಿಶ್ವಾದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ನಟಯಲ್ಲಿ ಪ್ರಭಾಸ್ ಕೂಡ ಒಬ್ಬರು. ಹೀಗಾಗಿ ಇಂಟರ್‌ನೆಟ್‌ನಲ್ಲಿ ಏನೇ ಆದ್ರೂ ಪ್ರಭಾಸ್‌ಗೂ ಮೊದಲು ಅಭಿಮಾನಿಗಳು ರಿಯಾಕ್ಟ್‌ ಮಾಡುತ್ತಾರೆ. 

ಕೆಲವು ದಿನಗಳಿಂದ ವೈರಲ್ ಆಗುತ್ತಿರುವ ಪ್ರಭಾಸ್ ಫೋಟೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಪ್ರಭಾಸ್‌ ಯಾರೆಂದು ಗೊತ್ತಿಲ್ಲದವರೂ ಕೂಡ ನೋಡಿ ಗಾಬರಿ ಆಗೋದು ಗ್ಯಾರಂಟಿ. ಟಾಲಿವುಡ್ ತಲೈವಾ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಡುವೆ ಪ್ರಭಾಸ್ ನಿಂತುಕೊಂಡಿರುವ ಫೋಟೋ ವೈರಲ್ ಆಗುತ್ತಿದೆ. ಸಿಕ್ಕಾಪಟ್ಟೆ ದಪ್ಪ ವಿಚಿತ್ರ ಆಕಾರದಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಅಯ್ಯೋ ಇದೇನಾಯ್ತು ಪ್ರಭಾಸ್ ಇಷ್ಟೊಂದು ಚೆನ್ನಾಗಿದ್ದರು ಇದ್ದಕ್ಕಿದ್ದಂತೆ ಈ ರೀತಿ ಆಗಿದ್ದಾರೆ ಎಂದು ಅಭಿಮಾನಿಗಳು ಸತ್ಯ ಹುಡುಕಲು ಶುರು ಮಾಡಿದಾಗ ಅಸಲಿ ಕಥೆ ತಿಳಿಯಿತ್ತು.

2023ರಲ್ಲಿ ನಟ ಪ್ರಭಾಸ್‌ಗೆ ಆರೋಗ್ಯ ಸಮಸ್ಯೆ ಕಾಡಲಿದೆ; ಭವಿಷ್ಯ ನುಡಿದ ಜ್ಯೋತಿಷಿ ವೇಣುಸ್ವಾಮಿ

ಪ್ರಭಾಸ್‌ಗೆ ಏನಾಯ್ತು? ಇಷ್ಟೊಂದು ವಿಚಿತ್ರ ಆಕಾರ ಪಡೆದಿರುವುದು ಯಾಕೆ? ಪ್ರಭಾಸ್ ಮುಖ ನೋಡಿ ವಯಸ್ಸಾಗಿದೆ, ರಜನಿ ಮತ್ತು ಶಿವಣ್ಣ ಮಿಂಚುತ್ತಿದ್ದಾರೆ ಪ್ರಭಾಸ್ ಕೆಟ್ಟದಾಗಿದ್ದಾರೆ ಎಂದು ಸಾಕಷ್ಟು ಕಾಮೆಂಟ್‌ಗಳು ವೈರಲ್ ಆಗತ್ತಿದೆ. 

ಅಸಲಿ ಸತ್ಯವೇನು? 

ರಜನಿಕಾಂತ್, ಪ್ರಭಾಸ್ ಮತ್ತು ಶಿವಣ್ಣ ಯಾವಾಗ ಮತ್ತು ಎಲ್ಲಿ ಭೇಟಿ ಮಾಡಿದರು ಎಂದು ಅಭಿಮಾನಿಗಳು ಮಾಹಿತಿ ಹುಡುಕಲು ಆರಂಭಿಸಿದಾಗ ತಿಳಿಯಿತ್ತು ಇದು ಜೈಲರ್ ಸಿನಿಮಾ ಶೂಟ್‌ನ ವೇಳೆ ಸೆರೆ ಹಿಡಿದಿರುವ ಚಿತ್ರ ಆದರೆ ಅದು ಪ್ರಭಾಸ್ ಅಲ್ಲ ಎಂದು. ಹೌದು ರಜನಿಕಾಂತ್ ಮತ್ತು ಶಿವಣ್ಣ ಜೈಲರ್ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ನೆಲ್ಸನ್ ನಿರ್ದೇಶನ ಮಾಡುತ್ತಿರುವ ಚಿತ್ರ ಇದಾಗಿದ್ದು ಚಿತ್ರೀಕರಣದ ವೇಳೆ ಸೆಟ್‌ಗೆ ಆಗಮಿಸಿದ ಅತಿಥಿಗಳನ್ನು ಭೇಟಿ ಮಾಡಿ ಅವರೊಟ್ಟಿಗೆ ಕ್ಲಿಕ್ ಮಾಡಿಕೊಂಡಿರುವ ಚಿತ್ರವಿದು. ಹೀಗಾಗಿ ಇದು ಪಕ್ಕಾ ಎಡಿಟ್ ಮಾಡಿರುವ ಪೋಟೋ ಪ್ರಭಾಸ್ ಅಲ್ಲ ಅನ್ನೋದು ಕನ್ಫರ್ಮ್ ಆಗಿದೆ. 

ಸಲ್ಮಾನ್ ಖಾನ್ ಮದುವೆ ಆದ್ಮೇಲೆ ನಂದು; ಬಾಲಯ್ಯ ಪ್ರಶ್ನೆಗೆ ಪ್ರಭಾಸ್ ರಿಯಾಕ್ಷನ್ ವೈರಲ್

2023ರ ಬಹುನಿರೀಕ್ಷಿತ ಸಿನಿಮಾ ಜೈಲರ್‌ನಲ್ಲಿ ರಜನಿಕಾಂತ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಎರಡು ವರ್ಷಗಳ ನಂತರ ರಜನಿ ಬಿಗ್ ಕಮ್ ಬ್ಯಾಕ್ ಕಾಣಲಿದ್ದಾರೆ.  2021 ನವೆಂಬರ್ 4ರಂದು ಬಿಡುಗಡೆ ಕಂಡ ಅನ್ನತ್ತೆ ಸಿನಿಮಾದಲ್ಲಿ ತಲೈವಾ ಕೊನೆಯದಾಗಿ ಕಾಣಿಸಿಕೊಂಡಿದ್ದು. 

ಕೆಲವು ದಿನ ಶೂಟಿಂಗ್ ಬ್ರೇಕ್?

ಪ್ರಭಾಸ್ ಪ್ಯಾನ್ ಇಂಡಿಯಾ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಸಲಾರ್ ಮತ್ತು ಬಾಲಿವುಡ್ ನಿರ್ದೇಶಕ ಓಂ ರಾವುತ್ ನಿರ್ದೇಶನದಲ್ಲಿ ಆದಿಪುರುಷ ಮುಂತಾದ ಚಿತ್ರಗಳನ್ನು ಮಾಡುತ್ತಿದ್ದಾರೆ. ಈ ಎರಡು ಸಿನಿಮಾಗಳ ರೇಂಜ್ ಹಾಲಿವುಡ್ ಮಟ್ಟದಲ್ಲಿ ಇರಲಿದೆ ಎನ್ನಲಾಗಿದೆ. ಆದರೆ ಈಗ ಪ್ರಭಾಸ್​ ಅಭಿಮಾನಿಗಳಿಗೆ ಶಾಕಿಂಗ್​ ನ್ಯೂಸ್​  ಒಂದು ಬಂದಿದೆ. ಅದೇನೆಂದರೆ ಪ್ರಭಾಸ್​ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.  ಪೀಪಲ್ ಮೀಡಿಯಾ ಸಿನಿಮಾ ಇದೇ ತಿಂಗಳೇ ಶುರುವಾಗಬೇಕಿತ್ತು. ಆದರೆ ಪ್ರಭಾಸ್ ಅವರು ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಶೂಟಿಂಗ್ ಕ್ಯಾನ್ಸಲ್ ಮಾಡಿದ್ದಾರೆ ಎಂದು ಸುದ್ದಿಯಾಗಿದೆ. ಇದು ಮಾಮೂಲು ಜ್ವರವಷ್ಟೇ, ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?