'ಆದಿಪುರುಷ್' ರಿಲೀಸ್ ಬೆನ್ನಲ್ಲೇ ಪ್ರಭಾಸ್ ಬಗ್ಗೆ ಮತ್ತೊಂದು ಸುದ್ದಿ ವೈರಲ್: 'ರಾಯಲ್' ಆಗಿ ಬರ್ತಾರಾ ಸ್ಟಾರ್

Published : Jun 17, 2023, 04:44 PM IST
'ಆದಿಪುರುಷ್' ರಿಲೀಸ್ ಬೆನ್ನಲ್ಲೇ ಪ್ರಭಾಸ್ ಬಗ್ಗೆ ಮತ್ತೊಂದು ಸುದ್ದಿ ವೈರಲ್: 'ರಾಯಲ್' ಆಗಿ ಬರ್ತಾರಾ ಸ್ಟಾರ್

ಸಾರಾಂಶ

'ಆದಿಪುರುಷ್' ರಿಲೀಸ್ ಬೆನ್ನಲ್ಲೇ ಪ್ರಭಾಸ್ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿ. ಸಂಜಯ್ ದತ್ ಮತ್ತು ಪ್ರಭಾಸ್ ನಟನೆಯ ಸಿನಿಮಾಗೆ 'ರಾಯಲ್' ಎಂದು ಟೈಟಲ್ ಇಡಲಾಗಿದೆ ಎನ್ನಲಾಗಿದೆ. 

ಟಾಲಿವುಡ್ ಸ್ಟಾರ್ ಸದ್ಯ ಆದಿಪುರುಷ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಆದಿಪುರುಷ್ ಜೂನ್ 16ರಂದು ಅದ್ದೂರಿಯಾಗಿ ತೆರೆಗೆ ಬಂದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದ ಆದಿಪುರುಷ್ ಚಿತ್ರದ ಬಗ್ಗೆ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಈ ನಡುವೆ ಪ್ರಭಾಸ್ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ಪ್ರಭಾಸ್ ರಾಯಲ್ ಆಗಲು ಸಜ್ಜಾಗಿದ್ದಾರೆ ಎನ್ನಲಾಗಿದೆ. 

ಪ್ರಭಾಸ್ ಮತ್ತು ಸಂಜಯ್ ದತ್ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಈ ಮೊದಲೇ ಕೇಳಿದ್ರಿ. ಆದರೆ ಈ ಸಿನಿಮಾ ಬಗ್ಗೆ ಹೆಚ್ಚಿನ ಅಪ್‌ಡೇಟ್ ಹೊರಬಿದ್ದಿರಲಿಲ್ಲ. ಆದಿಪುರುಷ್ ಸಿನಿಮಾದಲ್ಲಿ ಪ್ರಭಾಸ್ ಬ್ಯುಸಿ ಇದ್ದ ಕಾರಣ ಈ ಹೊಸ ಸಿನಿಮಾದ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿರಲಿಲ್ಲ. ಇದೀಗ ಸಂಜಯ್ ದತ್ ಮತ್ತು ಪ್ರಭಾಸ್ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಇದೊಂದು ಹಾರರ್ ಕಾಮಿಡಿ ಸಿನಿಮಾವಾಗಿದ್ದು ಚಿತ್ರಕ್ಕೆ 'ರಾಯಲ್' ಎನ್ನುವ ಹೆಸರು ಫೈನಲ್ ಆಗಿದೆಯಂತೆ. 

ಪ್ರಭಾಸ್ ಆದಿಪುರುಷ್ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿ ಇದ್ದ ಕಾರಣ ಸಿನಿಮಾದ ಶೂಟಿಂಗ್ ಇನ್ನೂ ಪ್ರಾರಂಭವಾಗಿಲ್ಲ. ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಮೂಲಗಳು ಆಂಗ್ಲ ಮಾಧ್ಯಮಕ್ಕೆ ಮಾಹಿತಿ ನೀಡಿವೆ. ಈ ಸಿನಿಮಾಗೆ ಮಾರುತಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾಗೆ ಈಗಾಗಲೇ ಮೂರು ಹೆಸರುಗಳನ್ನು ಸೂಚಿಸಲಾಗಿತ್ತಂತೆ. ರಾಜ ಡಿಲಕ್ಸ್, ಅಂಬಾಸಿಡರ್, ರಾಯಲ್ ಎನ್ನುವ ಮೂರು ಹೆಸರುಗಳನ್ನು ಸೂಚಿಸಲಾಗಿತ್ತಂತೆ. ಆದರೆ ನಿರ್ದೇಶಕರು ರಾಯಲ್ ಹೆಸರನ್ನು ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ. 

ಬೆಂಕಿಗೆ ಹಾರಿ ನರ್ಗಿಸ್ ಜೀವ ಉಳಿಸಿದ ಸುನೀಲ್ ದತ್; ಸಂಜಯ್‌ ದತ್‌ ಪೋಷಕರ ಇಂಟರೆಸ್ಟಿಂಗ್‌ ಲವ್‌ಸ್ಟೋರಿ

ಅಂದಹಾಗೆ ರಾಯಲ್ ಸಿನಿಮಾ 50 ಕೋಟಿ ಬಜೆಟ್ ನಲ್ಲಿ ತಯಾರಾಗುತ್ತಿದಂತೆ. 'ಈಗಾಗಲೇ ಶೂಟಿಂಗ್ 50ರಷ್ಟು ಶೂಟಿಂಗ್ ಮುಗಿದಿದೆ.  ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ. ಇದು ಸುಮಾರು 50 ಕೋಟಿ ರೂಪಾಯಿಗಳ ಸಣ್ಣ ಬಜೆಟ್ ಚಿತ್ರ' ಎಂದು ಮೂಲಗಳು ತಿಳಿಸಿವೆ. ಸಂಜಯ್ ದತ್ ಅವರ ಆತ್ಮ ಪ್ರಭಾಸ್ ದೇಹಕ್ಕೆ ಪ್ರವೇಶಿಸುತ್ತದೆ. ನಂತರ ಏನಾಗುತ್ತೆ ಎನ್ನುವುದೇ ಸಿನಿಮಾ ಅಂತೆ. 

Adipurush: ಪ್ರಭಾಸ್-ಕೃತಿ ಸಿನಿಮಾ ಹಿಗ್ಗಾಮುಗ್ಗಾ ಟ್ರೋಲ್, ಮೀಮ್ಸ್ ವೈರಲ್

ಸಂಜಯ್ ದತ್ ಮತ್ತು ಪ್ರಭಾಸ್ ಸಿನಿಮಾದ ಬಗ್ಗೆ ಸಿನಿಮಾತಂಡ ಯಾವುದೇ  ಮಾಹಿತಿ ಬಹಿರಂಗ  ಪಡಿಸಿಲ್ಲ. ಸಿನಿಮಾದ ಟೈಟಲ್ ಕೂಡ ರಿವೀಲ್ ಮಾಡಿಲ್ಲ. ಪ್ರಭಾಸ್ ಸದ್ಯ ಸಲಾರ್ ಸಿನಿಮಾದಲ್ಲೂ ನಿರತರಾಗಿದ್ದಾರೆ. ಸಲಾರ್ ಕೂಡ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ. ಈಗಾಗಲೇ ಬಹುತೇಕ ಶೂಟಿಂಗ್ ಕೂಡ ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಸಿನಿಮಾ ಜೊತೆಗೆ ಇನ್ನೂ ಹೆಸರಿಡದ ನಾಗ್ ಅಶ್ವಿನ್ ಅವರ ಚಿತ್ರದಲ್ಲೂ ಬ್ಯುಸಿಯಾಗಿದ್ದಾರೆ. ಇನ್ನೂ ಸಂಜಯ್ ದತ್ ವಿಜಯ್ ನಟನೆಯ ಲಿಯೋ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?