ಮತ್ತೆ ಚಿರಂಜೀವಿ ಮನೆಗೆ ಶಿಫ್ಟ್ ಆಗ್ತಿದ್ದಾರೆ ರಾಮ್ ಚರಣ್-ಉಪಾಸನಾ ದಂಪತಿ: ಕಾರಣವೇನು?

Published : Jun 17, 2023, 03:28 PM IST
ಮತ್ತೆ ಚಿರಂಜೀವಿ ಮನೆಗೆ ಶಿಫ್ಟ್ ಆಗ್ತಿದ್ದಾರೆ ರಾಮ್ ಚರಣ್-ಉಪಾಸನಾ ದಂಪತಿ: ಕಾರಣವೇನು?

ಸಾರಾಂಶ

ಮತ್ತೆ ಚಿರಂಜೀವಿ ಮನೆಗೆ ಶಿಫ್ಟ್ ಆಗ್ತಿರುವುದಾಗಿ ರಾಮ್ ಚರಣ್ ಪತ್ನಿ ಉಪಾಸನಾ ಬಹಿರಂಗ ಪಡಿಸಿದ್ದಾರೆ. ಕಾರಣವೇಣು? 

ಟಾಲಿವುಡ್ ಸ್ಟಾರ್ ರಾಮ್ ಚರಣ್ ಸದ್ಯ ತಂದೆಯಾಗುತ್ತಿರುವ ಸಂತಸದಲ್ಲಿದ್ದಾರೆ. ರಾಮ್ ಚರಣ್ ಪತ್ನಿ ಉಪಾಸನಾ ಗರ್ಭಿಣಿ. ಇಬ್ಬರೂ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು ಮಗುವನ್ನು ಸ್ವಾಗತಿಸಲು ಉತ್ಸುಕರಾಗಿದ್ದಾರೆ. ಈ ನಡುವೆ ರಾಮ್ ಚರಣ್ ದಂಪತಿ ಮತ್ತೆ ಚಿರಂಜೀವಿ ಮನೆಗೆ ಮರಳುವ ಯೋಜನೆ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಮೆಗಾಸ್ಟಾರ್ ಮನೆಗೆ ವಾಪಾಸ್ ಆಗುವ ಬಗ್ಗೆ ರಾಮ್ ಚರಣ್ ಪತ್ನಿ ಉಪಾಸನಾ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಉಪಾಸನಾ ಈ ಬಗ್ಗೆ ಬಹಿರಂಗ ಪಡಿಸಿದ್ದಾರೆ. 

ಸದ್ಯ ರಾಮ್ ಚರಣ್ ಮತ್ತು ಉಪಾಸನಾ ಇಬ್ಬರೂ ಪ್ರತ್ಯೇಕವಾಗಿ ವಾಸುತ್ತಿದ್ದಾರೆ. ಮದುವೆಯಾದ ಬಳಿಕ ಇಬ್ಬರೂ ಚಿರಂಜೀವಿ ಮನೆಯಿಂದ ಹೊರಬಂದು ಬೇರೆ ಮನೆಯಲ್ಲಿ ಇದ್ದರು. ಇದೀಗ ಉಪಾಸನಾ ಗರ್ಭಿಣಿ. ಹಾಗಾಗಿ ಮತ್ತೆ ಮೆಗಾಸ್ಟಾರ್ ಮನೆಗೆ ವಾಪಾಸ್ ಹೋಗುವ ಪ್ಲಾನ್ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿ, ' ನಾವು ಈಗ ಪ್ರತ್ಯೇಕವಾಗಿ ಬದುಕುತ್ತಿದ್ವಿ. ಆದರೆ ಶೀಘ್ರದಲ್ಲೇ ಚರಣ್ ಅವರ ಪೋಷಕರ ಮನೆಗೆ ಮರಳುತ್ತಿದ್ದೇವೆ. ನಮ್ಮ ಪಾಲನೆಯಲ್ಲಿ ನಮ್ಮ ಅಜ್ಜಿಯರು ತೋಡಗಿಕೊಂಡಿದ್ದರು. ನಮ್ಮ ಮಗುವಿನ ಸಂತೋಷವನ್ನು ಕಸಿದಿಕೊಳ್ಳಲು ನಾವು ಬಯಸಲ್ಲ' ಎಂದು ಹೇಳಿದ್ದಾರೆ.  

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕುಟುಂಬ ಜುಬಿಲಿ ಹಿಲ್ಸ್‌ನಲ್ಲಿರುವ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಇದೀಗ ರಾಮ್ ಚರಣ್ ದಂಪತಿ ಕೂಡ ಎಂಟ್ರಿ ಕೊಡುತ್ತಿರುವುದರಿಂದ ಮನೆಯ ಸಂತಸ ಮತ್ತಷ್ಟು ಹೆಚ್ಚಾಗಲಿದೆ. ಅಷ್ಟೆಯಲ್ಲದೇ ಮನೆಗೆ ಮಗು ಬರುವ ಖುಷಿ ಸಂತಸವನ್ನು ದುಪ್ಪಟ್ಟು ಮಾಡಿದೆ. ತಮ್ಮ ಮಗುವಿಗೆ ಅಜ್ಜಿ, ತಾತ ಸೇರಿದಂತೆ ಇಡೀ ಕುಟುಂಬದ ಪ್ರೀತಿ ಸಿಗಬೇಕು ಎನ್ನುವುದು ಉಪಾಸನಾ ದಂಪತಿಯ ಆಸೆ. ಹಾಗಾಗಿ ಪೋಷಕರ ಜೊತೆ ಇರಲು ಇಷ್ಟಟ್ಟಿದ್ದಾರೆ.   

ಮದುವೆಯಾದ ಪ್ರಾರಂಭದಲ್ಲೇ Egg Freeze ಮಾಡಿದ್ದ ರಾಮ್ ಚರಣ್ - ಉಪಾಸನಾ ದಂಪತಿ

ಅಭಿಮಾನಿಗಳು ಮತ್ತು ಹಿತೈಷಿಗಳು ಕೊನಿಡೇಲ ಕುಟುಂಬದ ಹೊಸ ಸದಸ್ಯರ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಸಂತೋಷದಾಯಕ ಸಂದರ್ಭಕ್ಕಾಗಿ ನಿರೀಕ್ಷಿಸುತ್ತಿದ್ದಾರೆ.

ರಾಮ್ ಚರಣ್-ಉಪಾಸನಾ ಮದುವೆ ವಾರ್ಷಿಕೋತ್ಸವ: ಪವರ್‌ ಕಪಲ್‌ ಸುಂದರ ಲವ್‌ಸ್ಟೋರಿ ಇಲ್ಲಿದೆ

ಪತ್ನಿ ಗರ್ಭಿಣಿ ಎಂದಾಗ ರಾಮ್ ಚರಣ್ ರಿಯಾಕ್ಷನ್ ಹೇಗಿತ್ತು?  

ಗರ್ಭಿಣಿ ಎಂದು ಗೊತ್ತಾದಾಗ ಪತಿ ರಾಮ್​ ಚರಣ್​ ಅವರ ರಿಯಾಕ್ಷನ್​ ಹೇಗಿತ್ತು ಎಂದು ಉಪಾಸನಾ ಬಹಿರಂಗ ಪಡಿಸಿದ್ದರು. ತಾವು ಪ್ರೆಗ್ನೆಂಟ್​  ಎಂಬ ವಿಚಾರವನ್ನು ಮೊದಲ ಬಾರಿಗೆ ತಿಳಿಸಿದಾಗ  ರಾಮ್​​ ಚರಣ್​ ಅವರು ಮೊದಲಿಗೆ ಅತಿಯಾಗಿ ಖುಷಿಪಡಲಿಲ್ಲ ಎಂದು ಉಪಾಸನಾ ಹೇಳಿದ್ದಾರೆ.‘ನಾನು ರಾಮ್​ ಚರಣ್​ ಅವರಿಗೆ ಮೊದಲ ಬಾರಿ ಈ ವಿಷಯ ತಿಳಿಸಿದಾಗ ಅವರು ಈಗಲೇ ಇಷ್ಟೆಲ್ಲಾ  ಖುಷಿಪಡಬೇಡ, ಸಮಾಧಾನದಿಂದ ಇರು ಅಂತ ಅವರು ನನಗೆ ಹೇಳಿದರು. ಏಕೆಂದರೆ ಗರ್ಭಿಣಿ ಹೌದೋ ಅಲ್ಲವೋ ಎನ್ನುವುದು ಮೊದಲು ಕನ್​ಫರ್ಮ್​ ಆಗಬೇಕಿತ್ತು. ಪ್ರೆಗ್ನೆಂಟ್​ ಆಗಿರೋದು ನಿಜವೋ ಅಲ್ಲವೋ ಎಂಬ ಬಗ್ಗೆ ಹಲವು ಬಾರಿ ಪರೀಕ್ಷೆ ಮಾಡಿಸಿದೆವು. ಎಲ್ಲ ಪರೀಕ್ಷೆ ಸರಿಯಾಗಿದೆ ಎಂದು ತಿಳಿದ ನಂತರವಷ್ಟೇ ರಾಮ್​ ಚರಣ್​ ಸೆಲೆಬ್ರೇಟ್​ ಮಾಡಿದರು' ಎಂದು ಉಪಾಸನಾ ಬಹಿರಂಗ ಪಡಿಸಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?