ರಾಮನ ಹೆಸರು ಹಾಳುಮಾಡಬೇಡಿ: ಪ್ರಭಾಸ್- ಕೃತಿ 'ಅದಿಪುರುಷ್' ವಿರುದ್ಧ ಕಂಗನಾ ಪರೋಕ್ಷ ಕಿಡಿ

Published : Jun 17, 2023, 04:07 PM IST
ರಾಮನ ಹೆಸರು ಹಾಳುಮಾಡಬೇಡಿ: ಪ್ರಭಾಸ್- ಕೃತಿ 'ಅದಿಪುರುಷ್' ವಿರುದ್ಧ ಕಂಗನಾ ಪರೋಕ್ಷ ಕಿಡಿ

ಸಾರಾಂಶ

ರಾಮನ ಹೆಸರು ಹಾಳುಮಾಡಬೇಡಿ ಎಂದು ನಟಿ ಕಂಗನಾ ರಣಾವತ್ ಪ್ರಭಾಸ್ ಮತ್ತು ಕೃತಿ ಸನೊನ್ ನಟನೆಯ 'ಅದಿಪುರುಷ್' ಸಿನಿಮಾ ವಿರುದ್ಧ ಕಂಗನಾ ಪರೋಕ್ಷ ಕಿಡಿ ಕಾರಿದ್ದಾರೆ.  

ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಬಹು ನಿರೀಕ್ಷೆಯ ಸಿನಿಮಾ ಆದಿಪುರುಷ್ ಅದ್ದೂರಿಯಾಗಿ ತೆರೆಗೆ ಬಂದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿರುವ ಆದಿಪುರುಷ್ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಭಾಸ್ ನಟನೆಗೆ ಸೂಪರ್ ಎಂದಿರುವ ಫ್ಯಾನ್ಸ್ ನಿರ್ದೇಶನ ಹಾಗೂ ವಿಎಕ್ಸ್‌ಎಫ್‌ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆದಿಪುರುಷ್ ಸಿನಿಮಾ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ. ಇದೊಂದು ಕಾರ್ಟೂನ್, ವಿಡಿಯೋ ಗೇಮ್ ಎಂದು ಕಾಲೆಳೆಯುತ್ತಿದ್ದಾರೆ. ಈ ನಡುವೆ ನಟಿ ಕಂಗನಾ ರಣಾವತ್ ಕೂಡ ಕಿಡಿ ಕಾರಿದ್ದಾರೆ. 

ಆದಿಪುರುಷ್ ಅಥವಾ ಸಿನಿಮಾತಂಡದ ಯಾರ ಹೆಸರನ್ನು ಉಲ್ಲೇಖ ಮಾಡದೆ ಕಂಗನಾ ಪರೋಕ್ಷವಾಗಿ ಆಕ್ರೋಶ ಹೊರಹಾಕಿದ್ದಾರೆ. ಯಾವುದೇ ಸಿನಿಮಾ ಅಥವಾ ಘಟನೆ ಬಗ್ಗೆ ತಕ್ಷಣಕ್ಕೆ ಪ್ರತಿಕ್ರಿಯೆ ನೀಡುವ ಕಂಗನಾ ಆದಿಪುರುಷ್ ಬಗ್ಗೆಯೂ ಮಾತನಾಡಿದ್ದಾರೆ. ಸಿನಿಮಾ ಚೆನ್ನಾಗಿದ್ದರೆ ಹೊಗಳುತ್ತಾರೆ, ಇಲ್ಲವೆಂದರೆ ನೇರವಾಗಿ ಕಿಡಿಕಾರುತ್ತಾರೆ. ಇದೀಗ ಆದಿಪುರುಷ್ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ರಾಮನ ಹೆಸರು ಹಾಳುಮಾಡಬೇಡಿ’ ಎಂದು ಕಂಗನಾ ಕೇಳಿಕೊಂಡಿದ್ದಾರೆ.

Adipurush: ಪ್ರಭಾಸ್-ಕೃತಿ ಸಿನಿಮಾ ಹಿಗ್ಗಾಮುಗ್ಗಾ ಟ್ರೋಲ್, ಮೀಮ್ಸ್ ವೈರಲ್

ರಾಮ ಮತ್ತು ಸೀತೆಯ ಫೋಟೋವನ್ನು ಇನ್​ಸ್ಟಾಗ್ರಾಮ್ ಸ್ಟೇಟಸ್​ನಲ್ಲಿ ಕಂಗನಾ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಅವರು ‘ರಾಮ್ ಕ ನಾಮ್ ಬದ್ನಾಮ್ ನ ಕರೋ’(ರಾಮನ ಹೆಸರನ್ನು ಕೆಡಿಸಬೇಡಿ) ಎಂದು ಸಾಂಗ್ ಹಾಕಿದ್ದಾರೆ. ಇದು ‘ಆದಿಪುರುಷ್’ ತಂಡಕ್ಕೆ ಹೇಳಿದ ಮಾತು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಕಂಗನಾ ಮಾತಿಗೆ ಅನೇಕರು ಬೆಂಬಲ ಸೂಚಿಸಿದ್ದಾರೆ. ಕಂಗನಾ ಯಾರ ಹೆಸರನ್ನು ತೆಗೆದುಕೊಂಡಿಲ್ಲ, ಆದರೂ ಇದು ಆದಿಪುರುಷ್ ಸಿನಿಮಾ ಟೀಕಿಸಿದ್ದು ಎನ್ನುವುದು ಗೊತ್ತಾಗುತ್ತಿದೆ.

ನನ್ನದೇ ಕುಟುಂಬ ಹೊಂದಲು ಬಯಸುತ್ತೇನೆ, ಮದ್ವೆ ಆಗಬೇಕು ಆದರೆ...; ಮದುವೆ ಬಗ್ಗೆ ಮೌನ ಮುರಿದ ನಟಿ ಕಂಗನಾ

ಆದಿಪುರುಷ್ ಸಿನಿಮಾದಲ್ಲಿ ಪ್ರಭಾಸ್ ರಾಮನಾಗಿ ಕಾಣಿಸಿಕೊಂಡಿದ್ದಾರೆ. ಸೀತೆಯಾಗಿ ಕೃತಿ ಸನೊನ್ ನಟಿಸಿದ್ದಾರೆ. ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ಮಿಂಚಿದ್ದಾರೆ. ಸಿನಿಮಾದ ಟೀಸರ್ ರಿಲೀಸ್ ಆದಾಗಿನಿಂದ ಆದಿಪುರುಷ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ರಾವಣನ ಲುಕ್, ವಿಎಕ್ಸ್‌ಎಫ್ ಸೇರಿದಂತೆ ಪ್ರತಿಯೊಂದು ವಿಚಾರಕ್ಕೂ ಟ್ರೋಲ್ ಆಗುತ್ತಿದೆ. ಇದೀಗ ಸಿನಿಮಾ ಕೂಡ ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ. ಆದಿಪುರುಷ್ ಸಿನಿಮಾ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಪ್ರಭಾಸ್, ಕೃತಿ ಸನೋನ್, ದೇವದತ್ತ ನಾಗೆ, ಸೈಫ್ ಅಲಿ ಖಾನ್ ಮತ್ತು ಸನ್ನಿ ಸಿಂಗ್ ಸೇರಿದಂತೆ ಅನೇಕರು ನಟಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದ ಆರಂಭದಲ್ಲೇ ಚಿರಂಜೀವಿಗೆ ಮೋಸ ಮಾಡಿದ್ದ ನಿರ್ಮಾಪಕ! ಆಗ ಮೆಗಾಸ್ಟಾರ್ ತಂದೆ ಮಾಡಿದ್ದೇನು?
AR Rahman ಕೋಮುವಾದಿ ವಿವಾದ: ಜನರು ಬೊಗಳೋಕೆ ಶುರು ಮಾಡಿದ್ದಾರೆ: ಟೀಕಿಸಿದ PraKash Raj!