Prabhas: ಪ್ರತಿ ಚಿತ್ರಮಂದಿರಗಳಲ್ಲಿ ಹನುಮನಿಗೆ 1 ಸೀಟು ಮೀಸಲಿಟ್ಟ 'ಆದಿಪುರುಷ' ತಂಡ: ಏನಿದು ವಿಶೇಷ?

Published : Jun 06, 2023, 03:56 PM IST
Prabhas: ಪ್ರತಿ ಚಿತ್ರಮಂದಿರಗಳಲ್ಲಿ ಹನುಮನಿಗೆ 1 ಸೀಟು ಮೀಸಲಿಟ್ಟ 'ಆದಿಪುರುಷ' ತಂಡ: ಏನಿದು ವಿಶೇಷ?

ಸಾರಾಂಶ

ಆದಿಪುರುಷ್ ಸಿನಿಮಾ ಪ್ರದರ್ಶನಗೊಳ್ಳುವ ಪ್ರತಿ ಚಿತ್ರಮಂದಿರಗಳಲ್ಲಿ ಹನುಮನಿಗೆ 1 ಸೀಟು ಮೀಸಲಿಡಲು ಸಿನಿಮಾತಂಡ ನಿರ್ಧರಿಸಿದೆ. 

ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಅಭಿಮಾನಿಗಳ ವಿರೀಕ್ಷೆ ಹೆಚ್ಚಿಸಿರುವ ಆದಿಪುರುಷ್ ಅಭಿಮಾನಿಗಳ ಮುಂದೆ ಸಜ್ಜಾಗಿದೆ. ಪ್ರಭಾಸ್ ಮತ್ತು ತಂಡ ಸದ್ಯ ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಚಿತ್ರದ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿ ಬಹಿರಂಗವಾಗಿದೆ. ಆದಿಪುರುಷ ಸಿನಿಮಾ ಪ್ರಚಾರವಾಗುವ ಪ್ರತಿಯೊಂದು ಚಿತ್ರಮಂದಿರಗಳಲ್ಲೂ ಒಂದು ಸೀಟನ್ನು ಹನುಮಂತನಿಗೆ ಮೀಸಲಿಡಲು ಚಿತ್ರತಂಡ ನಿರ್ಧರಿಸಿದೆ. ಆ ಸೀಟನ್ನು ಹನುವಂತನಿಗೆ ಅರ್ಪಿಸಲು ಚಿತ್ರತಂಡ ತೀರ್ಮಾನಿಸಿದೆ.  

ಓಂ ರಾವುತ್ ನಿರ್ದೇಶನದ ಆದಿಪುರುಷ್ ಸಿನಿಮಾ ಇದೇ ತಿಂಗಳು ಜೂನ್ 16ಕ್ಕೆ ತೆರೆಗೆ ಬರುತ್ತಿದೆ. ಈ ಸಿನಿಮಾ ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಸೇರಿ ಒಟ್ಟು ಐದು ಭಾಷೆಗಳಲ್ಲಿ ತೆರೆ ಕಾಣಲಿದೆ. ಸಿನಿಮಾ ಪ್ರದರ್ಶನವಾಗುವ ಪ್ರತಿಯೊಂದು ಚಿತ್ರಮಂದಿರಗಳಲ್ಲಿ ಒಂದು ಆಸನವನ್ನು ಮೀಸಲಿಡಲಾಗುವುದು ಎಂದು ನಿರ್ಮಾಪಕರು ಘೋಷಣೆ ಮಾಡಿದ್ದಾರೆ. 

'ರಾಮಾಯಣವನ್ನು ಪಠಿಸುವಾಗಲೆಲ್ಲಾ ಭಗವಾನ್ ಹನುಮಂತನು ಕಾಣಿಸಿಕೊಳ್ಳುತ್ತಾನೆ, ಇದು ನಮ್ಮ ನಂಬಿಕೆಯಾಗಿದೆ, ಈ ನಂಬಿಕೆಯನ್ನು ಗೌರವಿಸಿ. ಪ್ರಭಾಸ್ ರಾಮನಾಗಿ ನಟಿಸಿರುವ ಆದಿಪುರುಷ ಚಿತ್ರ ಪ್ರದರ್ಶನಗೊಳ್ಳುವ ಪ್ರತಿ ಥಿಯೇಟರ್ ಗಳಲ್ಲಿ ಒಂದು ಟಿಕೆಟ್ ಮಾರಾಟ ಮಾಡದೆ ಹನುಮಂತನಿಗೆ ಒಂದು ಆಸನವನ್ನು ಕಾಯ್ದಿರಿಸಲಾಗುವುದು. ಗೌರವ ಸಲ್ಲಿಸಿದ ಇತಿಹಾಸವನ್ನು ಕೇಳಿ. ರಾಮನ ಪರಮ ಭಕ್ತ ನಾವು ಈ ಮಹಾನ್ ಕಾರ್ಯವನ್ನು ಅಜ್ಞಾತ ರೀತಿಯಲ್ಲಿ ಪ್ರಾರಂಭಿಸಿದ್ದೇವೆ. ಭಗವಾನ್ ಹನುಮಂತನ ಸನ್ನಿಧಿಯಲ್ಲಿ ಅತ್ಯಂತ ವೈಭವ ಮತ್ತು ವೈಭವದಿಂದ ನಿರ್ಮಿಸಲಾದ ಆದಿಪುರುಷನನ್ನು ನಾವೆಲ್ಲರೂ ನೋಡಬೇಕು' ಎಂದು ಹೇಳಿದ್ದಾರೆ.

Adipurush: ಸಿನಿಮಾ ಬಿಡುಗಡೆಯೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಭಾಸ್

ಆದಿಪುರುಷ್ ರಾಮಾಯಣ ಮಹಾಕಾವ್ಯದ ಆಧುನಿಕ ರೂಪಾಂತರವಾಗಿದೆ. ಚಿತ್ರದಲ್ಲಿ ಪ್ರಭಾಸ್ ರಾಮನಾಗಿ ಕಾಣಿಸಿಕೊಂಡಿದ್ದಾರೆ. ಕೃತಿ ಸನೊನ್ ಸೀತೆಯ ಪಾತ್ರದಲ್ಲಿ ಮಿಂಚಿದ್ದಾರೆ. ದೊಡ್ಡ ಬಜೆಟ್ ನಲ್ಲಿ ಈ ಸಿನಿಮಾ ಮೂಡಿ ಬಂದಿದ್ದು ಇದೇ ತಿಂಗಳು ಜೂನ್ 16ರಂದು ರಿಲೀಸ್‌ಗೆ ಸಿದ್ಧವಾಗಿದೆ. ಸೈಫ್ ಅಲಿ ಖಾನ್ ರಾವಣನಾಗಿ ಮಿಂಚಿದ್ದಾರೆ. ಇಂದು (ಜೂನ್ 6) ಸಿನಿಮಾದ  ಅದ್ದೂರಿ ಪ್ರೀ ರಿಲೀಸ್ ಈವೆಂಟ್ ನಡೆಯುತ್ತಿದೆ. ತಿರುಪತಿಯಲ್ಲಿ ಅದ್ದೂರಿ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಇಂದು ಸಂಜೆ ಸಮಾರಂಭ ನಡೆಯಲಿದೆ.

 ಡಾರ್ಲಿಂಗ್ ಪ್ರಭಾಸ್ ಫ್ಯಾನ್ಸ್‌ಗೆ ಮತ್ತೊಂದು ಸರ್ಪ್ರೈಸ್: ನಿಮ್ಮ ಮುಂದೆ ಬರಲಿದೆ ಆದಿಪುರುಷ್ ಆಕ್ಷನ್ ಟ್ರೈಲರ್..!

ಪ್ರೀ ರಿಲೀಸ್ ಈವೆಂಟ್‌ಗೂ ಮೊದಲು ನಟ ಪ್ರಭಾಸ್ ಇಂದು ಬೆಳ್ಳಂಬೆಳಗ್ಗೆಯೇ ತಿರುಪತಿ ತಮ್ಮಪ್ಪನ ದರ್ಶನ ಪಡೆದಿದ್ದಾರೆ. ಪ್ರಭಾಸ್ ತಿರುಪತಿ ತಮ್ಮಪ್ಪನ ದರ್ಶನ ಪಡೆದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬಿಳಿ ಪಂಚೆ ಮತ್ತು ಶರ್ಟ್ ಧರಿಸಿರುವ ಪ್ರಭಾಸ್ ತಿಮ್ಮಪ್ಪನ ಸನ್ನಿದಾನದಲ್ಲಿ ಕಾಣಿಸಿಕೊಂಡಿದ್ದಾರೆ. ತಿಮ್ಮಪ್ಪನ ದರ್ಶನಕ್ಕೆ ಬಂದ ಪ್ರಭಾಸ್ ಅಭಿಮಾನಿಗಳು ಮತ್ತು ಪಾಪರಾಜಿಗಳತ್ತ ಕೈ ಬೀಸಿ ಮುಂದೆ ಸಾಗಿದರು. ದೇವರ ದರ್ಶನ ಪಡೆದು ಆದಿಪುರುಷ್ ಸಕ್ಸಸ್‌ಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಲ್ಮಾನ್ ಖಾನ್ ಹೊಂದಿರೋ ಅಷ್ಟೊಂದು ಆಸ್ತಿಯ ರಹಸ್ಯವೇನು? ಎಲ್ಲಿಲ್ಲಿ ಹೂಡಿಕೆ ಮಾಡಿದ್ದಾರೆ?
ತುಂಡುಡುಗೆ ತೊಟ್ಟು ಎಲ್ಲಾ ತೋರಿಸೋ ತರ ಬಟ್ಟೆ ಹಾಕಬೇಡಿ ಎಂದ ನಟನ ಪರ ನಿಂತ ನಟಿ ಶ್ರೀ ರೆಡ್ಡಿ