ನನ್ನ ಪ್ರಶಸ್ತಿಗಳನ್ನು ಬಾತ್‌ರೂಮ್ ಬಾಗಿಲಿಗೆ ಹಿಡಿಕೆಗಳಾಗಿ ಬಳಸಿದ್ದೀನಿ: ನಾಸಿರುದ್ದೀನ್ ಶಾ ಶಾಕಿಂಗ್ ಹೇಳಿಕೆ

By Shruthi KrishnaFirst Published Jun 5, 2023, 5:49 PM IST
Highlights

ನನ್ನ ಪ್ರಶಸ್ತಿಗಳನ್ನು ಬಾತ್‌ರೂಮ್ ಬಾಗಿಲಿಗೆ ಹಿಡಿಕೆಗಳಿಗೆ ಬಳಸ್ತಿದ್ದೀನಿ ಎಂದು ಖ್ಯಾತ ನಟ ನಾಸಿರುದ್ದೀನ್ ಶಾ ಶಾಕಿಂಗ್ ಹೇಳಿಕೆ ನೀಡಿದ್ದಾರೆ. 

ಬಾಲಿವುಡ್ ಹಿರಿಯ ನಟ ನಾಸಿರುದ್ದೀನ್ ಶಾ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು. ಪ್ರತಿಭಾವಂತ ನಟ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದ್ಭುತ ನಟನೆಗೆ ನಾಸಿರುದ್ದೀನ್ ಶಾ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆದರೆ ಪ್ರಶಸ್ತಿಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ನಾಸಿರುದ್ದೀನ್ ಶಾ ಬಹಿರಂಗ ಪಡಿಸಿದ್ದಾರೆ. ತಾವು ಗೆದ್ದೆ ಎಲ್ಲಾ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಬಾತ್‌ರೂಮಿಗೆ ಹ್ಯಾಂಡಲ್‌ಗಳಾಗಿ ಬಳಸ್ತಿದ್ದೀನಿ ಎಂದು ಹೇಳಿದ್ದಾರೆ. ನಾಸಿರುದ್ದೀನ್ ಶಾ ಮಾತುಗಳು ಅಚ್ಚರಿ ಮೂಡಿಸಿವೆ. ಪ್ರಶಸ್ತಿಗಳನ್ನು ಗೆಲ್ಲಲು ಕಲಾವಿದರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಪ್ರಶಸ್ತಿಗಾಗಿ ಎಷ್ಟೋ ಲಾಬಿಗಳು ನಡೆಯುತ್ತೆ. ಆದರೆ  ನಾಸಿರುದ್ದೀನ್ ಶಾ ಸಿಕ್ಕ ಪ್ರಶಸ್ತಿಗಳನ್ನು ಹೀಗೆಲ್ಲ ಬಳಸುತ್ತಿದ್ದಾರ ಎಂದು ಅಚ್ಚರಿ ವ್ಯಕ್ತವಾಗುತ್ತಿದೆ. 

ನಾಸಿರುದ್ದೀನ್ ಶಾ ಪಾರ್, ಸ್ಪರ್ಶ್ ಮತ್ತು ಇಕ್ಬಾಲ್‌ಗಾಗಿ ಮೂರು ರಾಷ್ಟ್ರಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.  ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆಕ್ರೋಶ್, ಚಕ್ರ ಮತ್ತು ಮಾಸೂಮ್ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ನಾಸಿರುದ್ದೀನ್ ಶಾ, ಪ್ರಶಸ್ತಿಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. 

ವಾಶ್‌ರೂಮ್ ಬಾಗಿಲಿಗೆ ಹಿಡಿಕೆಯಾಗಿವೆ

' ಪಾತ್ರವನ್ನು ನಿರೂಪಿಸಲು ತಮ್ಮ ಜೀವನ ಮತ್ತು ಶ್ರಮವನ್ನು ಹಾಕುವ ಯಾವುದೇ ನಟ ಉತ್ತಮ ನಟ ಆಗಿರುತ್ತಾನೆ. ನೀವು ತುಂಬಾ ಕಲಾವಿದರಲ್ಲಿ ಒಬ್ಬ ವ್ಯಕ್ತಿಯನ್ನು ಆರಿಸಿ ಮತ್ತು 'ಇವರು ವರ್ಷದ ಅತ್ಯುತ್ತಮ ನಟ' ಎಂದು ಹೇಳಿದರೇ ಅದು ಹೇಗೆ ನ್ಯಾಯಸಮ್ಮತವಾಗಿರುತ್ತದೆ?' ಎಂದು ಪ್ರಶ್ನೆ ಮಾಡಿದ್ದಾರೆ. 'ಆ ಪ್ರಶಸ್ತಿಗಳ ಬಗ್ಗೆ ನನಗೆ ಹೆಮ್ಮೆ ಇಲ್ಲ. ನನಗೆ ಬಂದಿದ್ದ ಕೊನೆಯ ಎರಡು ಪ್ರಶಸ್ತಿಗಳನ್ನು ಸ್ವೀಕರಿಸಲು ನಾನು ಹೋಗಲಿಲ್ಲ. ಹಾಗಾಗಿ, ನಾನು ತೋಟದ ಮನೆಯನ್ನು ನಿರ್ಮಿಸಿದಾಗ ಈ ಪ್ರಶಸ್ತಿಗಳನ್ನು ಅಲ್ಲಿ ಇರಿಸಲು ನಾನು ನಿರ್ಧರಿಸಿದೆ. ವಾಶ್‌ರೂಮ್ ಬಾಗಿಲಿಗೆ ಫಿಲ್ಮ್‌ಫೇರ್ ಪ್ರಶಸ್ತಿಗಳ ಹ್ಯಾಂಡಲ್ ಮಾಡಿರುವುದರಿಂದ ಯಾರೇ ವಾಶ್‌ರೂಮ್‌ಗೆ ಹೋದರೂ ತಲಾ ಎರಡು ಪ್ರಶಸ್ತಿಗಳನ್ನು ಪಡೆಯುತ್ತಾರೆ' ಎಂದು ಹೇಳಿದ್ದಾರೆ. 

ಪ್ರಶಸ್ತಿಗಳಿಗೆ ಮೌಲ್ಯವಿಲ್ಲ, ಲಾಬಿಯಷ್ಟೆ

ಪ್ರಶಸ್ತಿಗಳು ಲಾಬಿಯ ಫಲಿತಾಂಶಗಳಲ್ಲದೆ ಬೇರೇನೂ ಅಲ್ಲ ಎಂದು ನಾಸಿರುದ್ದೀನ್ ಶಾ ಹೇಳಿದ್ದಾರೆ. 'ಈ  ಪ್ರಶಸ್ತಿಗಳಲ್ಲಿ ನನಗೆ ಯಾವುದೇ ಮೌಲ್ಯ ಕಾಣುವುದಿಲ್ಲ. ಮೊದಲಿನವುಗಳನ್ನು ಸ್ವೀಕರಿಸಿದಾಗ ನನಗೆ ಸಂತೋಷವಾಯಿತು. ಆದರೆ ನಂತರ ಪ್ರಶಸ್ತಿಗಳು ನನ್ನ ಸುತ್ತಲೂ ರಾಶಿಯಾಗಲಾರಂಭಿಸಿದವು. ಈ ಪ್ರಶಸ್ತಿಗಳು ಲಾಬಿಯ ಫಲಿತಾಂಶ ಎಂದು ನಾನು ಸ್ವಲ್ಪ ಸಮಯದ ನಂತರ ಅರ್ಥಮಾಡಿಕೊಂಡಿದ್ದೇನೆ. ಒಬ್ಬರು ಈ ಪ್ರಶಸ್ತಿಗಳನ್ನು ಪಡೆಯುತ್ತಿರುವುದು ಅವರ ಅರ್ಹತೆಯ ಕಾರಣದಿಂದಲ್ಲ. ಹಾಗಾಗಿ ನಾನು ಅವರನ್ನು ಬಿಡಲು ಪ್ರಾರಂಭಿಸಿದೆ' ಎಂದು ಹೇಳಿದ್ದಾರೆ.  

ಕೇರಳ ಸ್ಟೋರಿ ನೋಡಲ್ಲ, ಈ ಚಿತ್ರದ ಸಕ್ಸಸ್‌ ಡೇಂಜರಸ್‌ ಟ್ರೆಂಡ್‌: ನಾಸಿರುದ್ದೀನ್‌ ಶಾ!

 'ಪದ್ಮಶ್ರೀ, ಪದ್ಮಭೂಷಣ ಪಡೆದಾಗ, ‘ಈ ನಿಷ್ಪ್ರಯೋಜಕ ಕೆಲಸ ಮಾಡಿದರೆ ಮೂರ್ಖನಾಗುತ್ತೀಯಾ’ ಎಂಬಂತೆ ಸದಾ ನನ್ನ ಕೆಲಸದ ಬಗ್ಗೆ ಚಿಂತಿಸುತ್ತಿದ್ದ ನನ್ನ ಮೃತ ತಂದೆಯನ್ನು ನೆನಪಿಸಿತು. ಆದ್ದರಿಂದ, ನಾನು ಪ್ರಶಸ್ತಿಗಳನ್ನು ಸಂಗ್ರಹಿಸಲು ರಾಷ್ಟ್ರಪತಿ ಭವನಕ್ಕೆ ಹೋದಾಗ, ನಾನು ತಲೆಯೆತ್ತಿ ನೋಡಿದೆ ಮತ್ತು ನನ್ನ ತಂದೆ ಇದೆಲ್ಲವನ್ನು ನೋಡುತ್ತಿದ್ದೀರಾ ಎಂದು ಕೇಳಿದೆ. ಮತ್ತು ಅವರು ಸಂತೋಷಪಟ್ಟಿದ್ದಾರೆ ಎಂದು ನನಗೆ ಖಚಿತವಾಗಿದೆ. ಆ ಪ್ರಶಸ್ತಿಗಳನ್ನು ಸ್ವೀಕರಿಸಲು ನನಗೆ ಸಂತೋಷವಾಯಿತು. ಆದರೆ ನಾನು ಈ ಸ್ಪರ್ಧಾತ್ಮಕ ಪ್ರಶಸ್ತಿಗಳನ್ನು ತಡೆದುಕೊಳ್ಳಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ. 

ಪ್ರಧಾನಿ ಮೋದಿ ಮುಂದೆ ಬಂದು ದ್ವೇಷದ ವಿಷವನ್ನು ತಡೆಯುವ ಅಗತ್ಯವಿದೆ: ನಾಸಿರುದ್ದೀನ್ ಶಾ

ನಾಸಿರುದ್ದೀನ್ ಷಾ ಕೊನೆಯದಾಗಿ ತಾಜ್: ರೀನ್ ಆಫ್ ರಿವೆಂಜ್ ನ ಎರಡನೇ ಸೀಸನ್ ನಲ್ಲಿ ಕಾಣಿಸಿಕೊಂಡಿದ್ದರು. ಅದಿತಿ ರಾವ್ ಹೈದರಿ, ರಾಹುಲ್ ಬೋಸ್, ಸಂಧ್ಯಾ ಮೃದುಲ್ ಮತ್ತು ಜರೀನಾ ವಹಾಬ್ ಕೂಡ ನಟಿಸಿದ್ದಾರೆ. ಇದು ಮೇ 12, 2023 ರಂದು Zee5 ನಲ್ಲಿ ಸ್ಟ್ರೀಮಿಂಗ್ ಆರಂಭಿಸಿತು. 

click me!