ಪಾಲಕ್​ಗೆ ನಿಮಿಷ ನಿಮಿಷಕ್ಕೂ ಒಬ್ಬ ಬೇಕು, ಅಫೇರ್ಸ್​ಗೆ ಲೆಕ್ಕವೇ ಇಲ್ಲ: ಮಗಳ ಬಗ್ಗೆ ಕಿರುತೆರೆ ನಟಿ ಇದೆಂಥ ಹೇಳಿಕೆ!

Published : Aug 14, 2024, 04:21 PM ISTUpdated : Aug 14, 2024, 04:29 PM IST
ಪಾಲಕ್​ಗೆ ನಿಮಿಷ ನಿಮಿಷಕ್ಕೂ ಒಬ್ಬ ಬೇಕು, ಅಫೇರ್ಸ್​ಗೆ ಲೆಕ್ಕವೇ ಇಲ್ಲ: ಮಗಳ ಬಗ್ಗೆ ಕಿರುತೆರೆ ನಟಿ  ಇದೆಂಥ ಹೇಳಿಕೆ!

ಸಾರಾಂಶ

ತಮ್ಮ ಪುತ್ರ ಪಾಲಕ್ ತಿವಾರಿ​ಗೆ ನಿಮಿಷ ನಿಮಿಷಕ್ಕೂ ಒಬ್ಬ ಹುಡುಗ ಬೇಕು, ಅವಳ ಅಫೇರ್ಸ್​ಗೆ ಲೆಕ್ಕವೇ ಇಲ್ಲ ಎನ್ನುವ ಮೂಲಕ ಅಮ್ಮ ಶ್ವೇತಾ ತಿವಾರಿ ಶಾಕಿಂಗ್​ ಹೇಳಿಕೆ ಕೊಟ್ಟಿದ್ದಾರೆ! ಏನಿದರ ಅಸಲಿಯತ್ತು?  

ಚಿತ್ರತಾರೆಯರು ಮತ್ತು ಗಾಸಿಪ್​ಗಳು ಎರಡೂ ಒಂದಕ್ಕೊಂದು ಮೇಳೈಸಿಕೊಂಡೇ ಇರುತ್ತವೆ. ನಟಿಯರಿಗೆ ನಟರ ಜೊತೆ, ನಟರಿಗೆ ನಟಿಯರ ಜೊತೆ ಹೀಗೆ ಹೆಸರುಗಳು ಥಳಕು ಹಾಕಿಕೊಳ್ಳುತ್ತಲೇ ಇರುತ್ತವೆ. ಇದರ ಜೊತೆಜೊತೆಗೆನೇ ಹಲವಾರು ತಾರೆಯರಿಗೆ ಸಂಬಂಧ, ಮದುವೆ ಇದ್ಯಾವುವೂ ಗಣನೆಗೆ ಬರುವುದೇ ಇಲ್ಲ. ಒಬ್ಬರ ಜೊತೆ ಸಂಬಂಧ ಬೆಳೆಸಿ, ಇನ್ನೊಬ್ಬರ ಜೊತೆ ಮದುವೆಯಾಗುವುದು, ಮತ್ತೊಬ್ಬರಿಂದ ಮಕ್ಕಳು ಮಾಡಿಕೊಳ್ಳುವುದು, ಡಿವೋರ್ಸ್​... ಇವೆಲ್ಲವೂ ಮಾಮೂಲಾಗಿಯೇ ಇವೆ. ಇನ್ನು ಲಿವ್​ ಇನ್​ ಮತ್ತು ಡೇಟಿಂಗ್​ ಅಂತೂ ಲೆಕ್ಕವೇ ಇಲ್ಲದಷ್ಟು. ಇವುಗಳ ಪೈಕಿ ಕೆಲವು ಬಾರಿ ಹರಡುವ ಸುದ್ದಿಗಳು ನಿಜವೇ ಆಗಿದ್ದರೆ, ಇನ್ನು ಕೆಲವು ಗಾಸಿಪ್​ಗಳಿಗೆ ತಲೆಬುಡವೇ ಇರುವುದಿಲ್ಲ. ಒಟ್ಟಿನಲ್ಲಿ ಯಾರದ್ದೋ ಜೊತೆ ಇನ್ನಾರದ್ದೋ ಹೆಸರು ಥಳಕು ಹಾಕಿಕೊಂಡು ಸುದ್ದಿಗಳು ಓಡಾಡುತ್ತಲೇ ಇರುತ್ತವೆ.

ಆದರೆ ಇದೀಗ  'ಬಿಗ್ ಬಾಸ್' ಖ್ಯಾತಿಯ ಭೋಜ್‌ಪುರಿ ಮತ್ತು ಕಿರುತೆರೆ ನಟಿ. 'ಬಿಗ್ ಬಾಸ್' ವಿನ್ನರ್‌  ಶ್ವೇತಾ ತಿವಾರಿ ಅವರು ತಮ್ಮ ಪುತ್ರಿ, ನಟಿಯೂ ಆಗಿರುವ ಪಾಲಕ್​ ತಿವಾರಿ ಕುರಿತು ಶಾಕಿಂಗ್​ ಸ್ಟೇಟ್​ಮೆಂಟ್​ ಕೊಟ್ಟಿದ್ದಾರೆ. ತಮ್ಮ ಪುತ್ರಿ ಪಾಲಕ್​ಗೆ ನಿಮಿಷ ನಿಮಿಷಕ್ಕೂ ಒಬ್ಬ ಹುಡುಗ, ಅಫೇರ್ಸ್​ಗಳಿಗೆ ಲೆಕ್ಕವೇ ಇಲ್ಲ. ಇವತ್ತು ಒಬ್ಬರ ಜೊತೆ ನಾಳೆ ಇನ್ನೊಬ್ಬರ ಮತ್ತೆ, ಕೆಲವು ಕ್ಷಣಗಳಲ್ಲಿ ಮತ್ತೊಬ್ಬರ ಜೊತೆ ಬೇಕೇ ಬೇಕು ಎಂದಿದ್ದಾರೆ! ಮಗಳ ಬಗ್ಗೆ ಈ ಪರಿ ಮಾತನಾಡುತ್ತಿರುವುದನ್ನು ಕೇಳಿ ಪಾಲಕ್​ ಫ್ಯಾನ್ಸ್​ ಶಾಕ್​ ಆಗಿದ್ದಾರೆ. ಹಾಗೆಂದು ತಮ್ಮ ಮಗಳ ಬಗ್ಗೆ ಶ್ವೇತಾ ನಿಜ ಹೇಳಿದ್ದಲ್ಲ. ಸಿನಿ ಇಂಡಸ್ಟ್ರಿಯಲ್ಲಿನ ಗಾಸಿಪ್​ಗಳಿಗೆ ಸಂಬಂಧಪಟ್ಟಂತೆ ಅವರು ವ್ಯಂಗ್ಯವಾಗಿ ಈ ಮಾತುಗಳನ್ನಾಡಿದ್ದಾರೆ. 

ಸೀರೆಯ ಸೆರಗು ಕೆಳಕ್ಕೆ ಬಿದ್ದ ತಕ್ಷಣ ಓಡೋಡಿ ಬರೋ ಸಿಬ್ಬಂದಿ! ಶ್ವೇತಾ ತಿವಾರಿ ವಿಡಿಯೋ ಸಕತ್​ ಟ್ರೋಲ್​

ಗಾಲ್ಟಾ ಇಂಡಿಯಾದೊಂದಿಗೆ ಮಾತನಾಡಿದ ಶ್ವೇತಾ ತಿವಾರಿ ಅವರು ನನ್ನ ಮಗಳು ಸಕತ್​ ಬಲಶಾಲಿಯಾಗಿದ್ದಾಳೆ.  ಸಿನಿಮಾ ತಾರೆ ಅಲ್ವೆ? ಅವಳ ಸುತ್ತಲೂ ಸಾಕಷ್ಟು ಗಾಸಿಪ್​ಗಳು ಹರಡುತ್ತಿವೆ. ಇವತ್ತು ಒಬ್ಬರು, ಮತ್ತೊಂದು ನಿಮಿಷಕ್ಕೆ ಇನ್ನೊಬ್ಬರು ಹೀಗೆ ಅವಳಿಗೆ ನಿಮಿಷಕ್ಕೆ ಒಬ್ಬ ಬಾಯ್​ಫ್ರೆಂಡ್​ ಬೇಕು ಎಂಬೆಲ್ಲಾ ಅರ್ಥದಲ್ಲಿ ಮಾತನಾಡಲಾಗುತ್ತದೆ. ಆದರೆ ಇದಕ್ಕೆ ಯಾವುದಕ್ಕೂ ಅವಳು ತಲೆ  ತಲೆಕೆಡಿಸಿಕೊಳ್ಳುವುದಿಲ್ಲ.  ಒಬ್ಬ ವ್ಯಕ್ತಿಯ ಬಗ್ಗೆ ಹೆಚ್ಚು ಕಾಲ ಗಾಸಿಪ್ ಮಾಡಲು ಸಾಧ್ಯವಿಲ್ಲ ಎಂದು ಅವಳು ನಂಬಿದ್ದಾಳೆ ಎಂದಿದ್ದಾರೆ.  ಕೆಲವೊಮ್ಮೆ ನನಗೆ ಭಯವಾಗಿ ಬಿಡುತ್ತದೆ. ಪಾಲಕ್​ಗೆ ಜೊತೆ ಕೆಟ್ಟ ಕೆಟ್ಟ ಕಮೆಂಟ್​ ಮಾಡಿದಾಗ ನನಗೆ ಭಯವಾಗುತ್ತದೆ. ಅವಳಿನ್ನೂ ಚಿಕ್ಕಮಗು. ಅವಳಿಗೂ ಘಾಸಿಯಾಗುತ್ತದೆ. ಆದರೆ ಅವಳು ತಲೆ ಕೆಡಿಸಿಕೊಳ್ಳುವುದಿಲ್ಲ. ಪಾಲಕ್​ ತುಂಬಾ ಸ್ಟ್ರಾಂಗ್​ ಎಂದಿದ್ದಾರೆ ಶ್ವೇತಾ. 
  
 ಅಂದಹಾಗೆ, ಪಾಲಕ್ ತಿವಾರಿ ಅವರು, ಶ್ವೇತಾ ಮತ್ತು ರಾಜಾ ಚೌಧರಿ ಅವರ ಪುತ್ರಿ. ಶ್ವೇತಾ ಮತ್ತು ರಾಜಾ 1998 ರಲ್ಲಿ ವಿವಾಹವಾದರು. ಪಾಲಕ್ 8 ಅಕ್ಟೋಬರ್ 2000 ರಂದು ಜನಿಸಿದರು. ಆದರೆ ಶ್ವೇತಾ ಮತ್ತು ರಾಜಾ ನಡುವಿನ ಸಂಬಂಧವು ಹೆಚ್ಚು ಕಾಲ ಉಳಿಯಲಿಲ್ಲ. ವಿವಾದಗಳ ನಂತರ, ಶ್ವೇತಾ ಮತ್ತು ರಾಜಾ 2007 ರಲ್ಲಿ ಪರಸ್ಪರ ವಿಚ್ಛೇದನ ಪಡೆದರು. 2021 ರಲ್ಲಿ, ಪಾಲಕ್   ಅವರು ಸಂಧು ಅವರ ಹಾಡು ಬಿಜ್ಲಿ ಬಿಜ್ಲಿಯಲ್ಲಿ ಕಾಣಿಸಿಕೊಂಡರು. ಅಲ್ಲಿಂದ ಅವರು  ಖ್ಯಾತಿ ಗಳಿಸಿದರು. ಪಾಲಕ್ ಅನೇಕ ಸ್ಟಾರ್ ಮಕ್ಕಳೊಂದಿಗೆ ಪಾರ್ಟಿ ಮಾಡುತ್ತಿರುವುದು ಕಂಡುಬಂದಿದೆ. ಅವರ ಹೆಸರು ಹೆಚ್ಚಾಗಿ ಸೈಫ್ ಅಲಿ ಖಾನ್ ಅವರ ಮಗ ಇಬ್ರಾಹಿಂ ಅಲಿ ಖಾನ್‌ಗೆ ಸಂಬಂಧಿಸಿದೆ. ಆದರೆ, ಪಾಲಕ್ ಮತ್ತು ಇಬ್ರಾಹಿಂ ಈ ಸುದ್ದಿಗೆ ಬಹಿರಂಗವಾಗಿ ಪ್ರತಿಕ್ರಿಯಿಸಿಲ್ಲ.

ಇನ್ನು ಶ್ವೇತಾ ಕುರಿತು ಹೇಳುವುದಾದರೆ, ಇವರಿಗೆ ವಯಸ್ಸು 43 ಆದರೂ ಈಕೆಯ ಸೌಂದರ್ಯ ಇನ್ನೂ ಕುಗ್ಗಿಲ್ಲ. ಯುವತಿಯಂತೆಯೇ ಕಂಗೊಳಿಸುತ್ತಿದ್ದಾರೆ. ಆಗಾಗ್ಗೆ ಫೋಟೋಗಳನ್ನು ಶೇರ್​ ಮಾಡುತ್ತಿರುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯವಾಗಿರುವ ನಟಿ ತನ್ನ ಬೋಲ್ಡ್ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.  ಈಕೆ ಹಲವಾರು ಧಾರಾವಾಹಿಗಳನ್ನು ಮಾಡಿದರೂ ಮೈ ಹೂಂ ಅಪರಾಜಿತಾ ಧಾರಾವಾಹಿಯ ಮೂಲಕ ಚಿರಪರಿಚಿರತಾಗಿದ್ದಾರೆ. ಹೆಚ್ಚಾಗಿ ಈಕೆ ಧಾರಾವಾಹಿಗಳಲ್ಲಿ ಸಾಂಪ್ರದಾಯಿಕ ಪಾತ್ರಗಳನ್ನು ಮಾಡಿದರೂ  ನಿಜ ಜೀವನದಲ್ಲಿ ಅವರ ವ್ಯಕ್ತಿತ್ವವೇ ಬೇರೆ. 43 ನೇ ವಯಸ್ಸಿನಲ್ಲಿ, ಶ್ವೇತಾ ಫಿಟ್​ನೆಸ್​ಗೆ ಫ್ಯಾನ್ಸ್​ ಫಿದಾ ಆಗುವುದು ಇದೆ. ಸೀರೆಯಲ್ಲಿ ಫೋಟೋಶೂಟ್​ ಮಾಡಿಸಿಕೊಂಡರೂ, ಸೆಕ್ಸಿ ಇಮೇಜಿನಲ್ಲಿ ಈಕೆ ಕಾಣಿಸಿಕೊಳ್ಳುತ್ತಾರೆ. 

ಮುಂದೆ ಪಶ್ಚಾತ್ತಾಪ ಪಡೋ ಬದ್ಲು ಇಂದು ಹುಡುಗಿಯರು ಹೇಗಿರಬೇಕು? ಸುಧಾರಾಣಿ ಅನುಭವದ ಮಾತು ಕೇಳಿ...
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?