ಬಾಲಿವುಡ್ ನಟಿ ಕಾಲೋಜ್ 50ರ ಹರೆಯದಲ್ಲೂ ನಟನೆಯನ್ನು ಬಿಟ್ಟಿಲ್ಲ. ವೃತ್ತಿ ಹಾಗೂ ವೈಯಕ್ತಿಕ ಜೀವನದ ಮೂಲಕ ಸದಾ ಸುದ್ದಿಯಲ್ಲಿರುವ ನಟಿ ಒಂದ್ಕಾಲದಲ್ಲಿ ಹಿಟ್ ಚಿತ್ರಗಳನ್ನು ತಿರಸ್ಕರಿಸಿದ್ದರು. ಅದ್ರ ಬಗ್ಗೆ ಅವರು ಮಾತನಾಡಿದ್ದಾರೆ.
ಬಾಲಿವುಡ್ ನಟಿ ಕಾಜೋಲ್ (Bollywood actress Kajol) , ಮಾತಿನ ಮಲ್ಲಿ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಒಂದೇ ಸಮನೆ ಮಾತನಾಡುವ ಇವರು, ನಟನೆಯಲ್ಲಿ ಎತ್ತಿದ ಕೈ. ಬಾಲಿವುಡ್ ನ ಅನೇಕ ಸೂಪರ್ ಹಿಟ್ (super hit) ಚಿತ್ರಗಳಲ್ಲಿ ನಟಿಸಿರುವ ಕಾಜೋಲ್, ತಮ್ಮ ಪಾತ್ರಗಳನ್ನು ತುಂಬಾ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ತಾರೆ. ಒಂದ್ಕಾಲದಲ್ಲಿ ಶಾರುಕ್ ಖಾನ್ (Shahrukh Khan) ಹಾಗೂ ಕಾಜೋಲ್ ಜೋಡಿಯನ್ನು ನೋಡಲು ಅಭಿಮಾನಿಗಳು ಮುಗಿ ಬೀಳ್ತಿದ್ದರು. ಅವರಿಬ್ಬರು ಮಾಡಿದ ಎಲ್ಲ ಸಿನಿಮಾ ಸೂಪರ್ ಹಿಟ್ ಎನ್ನುವ ಕಲ್ಪನೆ ಇತ್ತು. ಇಷ್ಟಿದ್ರೂ ಕಾಜೋಲ್ ಎಲ್ಲ ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲ. ಕೆಲ ಚಿತ್ರಗಳನ್ನು ಕಾಜೋಲ್ ರಿಜೆಕ್ಟ್ ಮಾಡಿದ್ರು. ಅವೆಲ್ಲ ಸೂಪರ್ ಹಿಟ್ ಆಗಿತ್ತು. ಚಿತ್ರದಲ್ಲಿ ತಮ್ಮ ಪಾತ್ರದ ಮಹತ್ವ ಹಾಗೂ ತಮಗೆ ಅದು ಹೊಂದುತ್ತಾ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕಾಜೋಲ್ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ತಾರೆ. ಸಂದರ್ಶನವೊಂದರಲ್ಲಿ ತಿರಸ್ಕರಿಸಿದ್ದ ಸೂಪರ್ ಹಿಟ್ ಚಿತ್ರಗಳ ಬಗ್ಗೆ ಮಾತನಾಡಿದ ಕಾಜೋಲ್, ಅದ್ರಿಂದ ಆದ ನಷ್ಟವೇನು ಎಂಬುದನ್ನು ತಿಳಿಸಿದ್ದಾರೆ.
ಗದರ್ ಚಿತ್ರ ರಿಜೆಕ್ಟ್ ಮಾಡಿದ್ದೇಕೆ? : ಇಂಡಿಯಾ ಟಿವಿಯ ಆಪ್ ಕಿ ಅದಾಲತ್ ನಲ್ಲಿ ಪಾಲ್ಗೊಂಡಿದ್ದ ಕಾಜೋಲ್, ಸೂಪರ್ ಹಿಟ್ ಚಿತ್ರ ಗದರ್ ಏಕ್ ಪ್ರೇಮ್ ಕಥಾದಲ್ಲಿ ನಟಿಸಲು ಒಪ್ಪಿಕೊಂಡಿರಲಿಲ್ಲ. ಈ ಬಗ್ಗೆ ಕೇಳಿದ ಪ್ರಶ್ನೆಗೆ, ಆ ಪಾತ್ರ ನನಗೆ ಸೂಟ್ ಆಗುತ್ತೆ ಎನ್ನಿಸಿರಲಿಲ್ಲ ಅಂತ ಕಾಜೋಲ್ ಉತ್ತರ ನೀಡಿದ್ದಾರೆ.
ಮುಂದೆ ಪಶ್ಚಾತ್ತಾಪ ಪಡೋ ಬದ್ಲು ಇಂದು ಹುಡುಗಿಯರು ಹೇಗಿರಬೇಕು? ಸುಧಾರಾಣಿ ಅನುಭವದ ಮಾತು ಕೇಳಿ...
ದಿಲ್ ಸೇಯಿಂದ ದೂರ : ಇನ್ನು ಶಾರುಕ್ ಖಾನ್ ಹಾಗೂ ಮನಿಶಾ ಕೊಯಿರಾಲಾ ಅಭಿನಯದ ದಿಲ್ ಸೇ ಚಿತ್ರವನ್ನು ರಿಜೆಕ್ಟ್ ಮಾಡಿದ್ದರು. ಈ ಚಿತ್ರದ ಶೂಟಿಂಗ್ ಡೇಟ್ ನನಗೆ ಹೊಂದಿಕೆ ಆಗ್ತಿರಲಿಲ್ಲ ಅಂತ ಕಾಜೋಲ್ ಹೇಳಿದ್ದಾರೆ.
ನನಗೆ ಆಫರ್ ಬಂದಿತ್ತಾ? : ಇನ್ನು ಮೊಹಬ್ಬತ್ತೇನ್ ಚಿತ್ರದಲ್ಲಿ ಶಾರುಕ್ ಖಾನ್ ಜೊತೆ ಐಶ್ವರ್ಯ ರೈ ನಟಿಸಿದ್ರು. ಈ ಚಿತ್ರದ ಆಫರ್ ಯಾಕೆ ರಿಜೆಕ್ಟ್ ಮಾಡಿದ್ರಿ ಅಂದ್ರೆ ನನಗೆ ಆಫರ್ ಬಂದಿತ್ತಾ? ನನಗೆ ನೆನಪಿಲ್ಲ ಅಂತ ನಗ್ತಾ ಉತ್ತರ ನೀಡಿದ್ದಾರೆ ಕಾಜೋಲ್.
ದಿಲ್ ತೋ ಪಾಗಲ್ ಹೇ : ಬಾಲಿವುಡ್ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾದ ದಿಲ್ ತೋ ಪಾಗಲ್ ಹೇಯನ್ನು ಕಾಜೋಲ್ ತಿರಸ್ಕರಿಸಿದ್ದರು. ಮೊದಲೇ ಹೇಳಿದಂತೆ ತಮ್ಮ ಪಾತ್ರಕ್ಕೆ ಹೆಚ್ಚು ಆದ್ಯತೆ ನೀಡುವ ಕಾಜೋಲ್, ಈ ಚಿತ್ರದಲ್ಲಿ ನನ್ನ ಪಾತ್ರ ಚಿಕ್ಕದಿತ್ತು ಎನ್ನುವ ಕಾರಣಕ್ಕೆ ರಿಜೆಕ್ಟ್ ಮಾಡಿದ್ದೆ ಎಂದಿದ್ದಾರೆ.
ಥ್ರೀ ಈಡಿಯಟ್ಸ್ ನಲ್ಲಿ ಮಾಧವನ್ ಪಾತ್ರದ ಮೇಲೆ ಕಣ್ಣು : ಥ್ರೀ ಈಡಿಯಟ್ಸ್ ಚಿತ್ರದಲ್ಲಿ ಕರೀನಾ ಕಪೂರ್ ಪಾತ್ರದಲ್ಲಿ ಕಾಜೋಲ್ ಕಾಣಿಸಿಕೊಳ್ಬೇಕಿತ್ತು. ಆದ್ರೆ ಅದನ್ನು ಕೂಡ ಕಾಜೋಲ್ ತಿರಸ್ಕರಿಸಿದ್ದರು. ಆಫರ್ ಬಂದಾಗ, ಮಾಧವನ್ ಪಾತ್ರ ನೀಡುವಂತೆ ಕಾಜೋಲ್ ಕೇಳಿದ್ದರಂತೆ. ಥ್ರೀ ಈಡಿಯಟ್ಸ್ ನಲ್ಲಿ ಹುಡುಗಿ ಇರ್ಬಾರದು ಎಂದಿಲ್ಲ. ನನಗೆ ಮಾಧವನ್ ಪಾತ್ರ ಇಷ್ಟವಾಗಿದೆ. ಅದನ್ನು ನಾನು ಮಾಡ್ತೇನೆ ಎಂದಿದ್ದರಂತೆ ಕಾಜೋಲ್. ಪಾತ್ರಕ್ಕಾಗಿ ಸಿನಿಮಾ ಸ್ಕ್ರಿಪ್ಟ್ ಬದಲಿಸಲು ಹೋಗಿದ್ದರು ನಟಿ.
bollywood : ಸೋಲು, ಸವಾಲಿನ ನಡುವೆ ಗೆದ್ದ ಬಿಗ್ ಬಿ ಸೊಸೆ ಐಶ್ವರ್ಯ ರೈ ಬಚ್ಚನ್ ಸಾಧನೆಗೊಂದು ಸಲಾಂ
ಬಿಗ್ ಆಫರ್ ತಪ್ಪಿದ್ದಕ್ಕೆ ಪಶ್ಚಾತಾಪವಿಲ್ಲ : ನನ್ನದಲ್ಲದ ಚಿತ್ರವನ್ನು ನಾನು ನನ್ನದೆಂದುಕೊಂಡಿಲ್ಲ ಎನ್ನುವ ಕಾಜೋಲ್, ಇದ್ರಿಂದ ನನಗೆ ಬೇಸರವಿಲ್ಲ ಎಂದಿದ್ದಾರೆ. ಆಗಸ್ಟ್ ಐದರಂದು 50ನೇ ವರ್ಷಕ್ಕೆ ಕಾಲಿಟ್ಟಿರುವ ಕಾಜೋಲ್, 2022ರಲ್ಲಿ ಸಲಾಂ ವೆಂಕಿ ಚಿತ್ರದಲ್ಲಿ ನಟಿಸಿದ್ದರು. 2023ರಲ್ಲಿ ಲಸ್ಟ್ ಸ್ಟೋರೀಸ್ 2 ನಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆಯಾದ್ಮೇಲೂ ಇಂಡಸ್ಟ್ರಿ ಆಳ್ತಿರುವ ನಟಿಯರಲ್ಲಿ ಒಬ್ಬರಾಗಿರುವ ಕಾಜೋಲ್, 240 ಕೋಟಿ ನಿವ್ವಳ ಆಸ್ತಿ ಹೊಂದಿದ್ದಾರೆ.