ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಗೆ ಯಶಸ್ಸು ಥಟ್ ಅಂತ ಸಿಗ್ಲಿಲ್ಲ. ಕಾಲೇಜಿನಲ್ಲಿರುವಾಗ್ಲೇ ಹೋರಾಟ ಶುರು ಮಾಡಿದ್ದ ಐಶ್, ಈಗ ಜಾಗತಿಕ ಐಕಾನ್. ಅವರ ಸಾಧನೆ ಅನೇಕರಿಗೆ ಸ್ಫೂರ್ತಿಯಾಗಿದೆ.
ಬಾಲಿವುಡ್ ನಟಿ (Bollywood actress) ಹಾಗೂ ಮಾಜಿ ವಿಶ್ವ ಸುಂದರಿ (Former Miss World) ಐಶ್ವರ್ಯ ರೈ ಬಚ್ಚನ್, ಸದ್ಯ ಡಿವೋರ್ಸ್ ವಿಷ್ಯಕ್ಕೆ ಸುದ್ದಿಯಲ್ಲಿದ್ದಾರೆ. ನಟ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಬಚ್ಚನ್ (Aishwarya Rai Bachchan) ದೂರವಾಗ್ತಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಮದುವೆ ನಂತ್ರವೂ ಫಿಟ್ನೆಸ್ ಹಾಗೂ ಪ್ರಸಿದ್ಧಿಯನ್ನು ಕಾಯ್ದುಕೊಂಡು ಬಂದ ನಟಿಯರಲ್ಲಿ ಒಬ್ಬರಾಗಿರುವ ಐಶ್ ಸಾಧನೆ ಕಡಿಮೆ ಏನಿಲ್ಲ. ಬಾಲ್ಯದಿಂದಲೂ ಹೋರಾಟದ ಹಾದಿಯಲ್ಲೇ ನಡೆದುಬಂದಿರುವ ಮಂಗಳೂರಿನ ಬೆಡಗಿ, ಬಂದ ಅಪವಾದ, ಸಮಸ್ಯೆಗೆ ಎಂದೂ ಹೆದರುವವರಲ್ಲ.
ಐಶ್ವರ್ಯಾ ರೈ ಬಚ್ಚನ್ ಸ್ಟಾರ್ಡಮ್ ಪಯಣ ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ. ಮಂಗಳೂರಿನಲ್ಲಿ ಜನಿಸಿದ ಐಶ್ವರ್ಯಾ ಅನೇಕ ಸವಾಲುಗಳನ್ನು ಎದುರಿಸಿದ್ದರು. ಆದ್ರೆ ಅವರ ದೃಢತೆ ಮತ್ತು ಕಠಿಣ ಪರಿಶ್ರಮ ಅವರು ವಿಶ್ವದಾದ್ಯಂತ ಪ್ರಸಿದ್ಧಿ ಪಡೆಯಲು ದಾರಿಯಾಯ್ತು.
ಈಗೀಗ ಸೀತಾರಾಮ ಸೀರಿಯಲ್ ಸಖತ್ ಬೋರಿಂಗ್, ನಮ್ಗೆ ಮೊದಲಿನ ಸೀತಾ, ರಾಮ್ ಬೇಕು ಅಂತಿರೋದ್ಯಾಕೆ ಫ್ಯಾನ್ಸ್
ಚಿಕ್ಕ ವಯಸ್ಸಿನಿಂದಲೂ ಐಶ್ವರ್ಯಾ ತಮ್ಮ ಸೌಂದರ್ಯಕ್ಕಾಗಿ ಮಾತ್ರವಲ್ಲದೆ ತಮ್ಮ ಬುದ್ಧಿವಂತಿಕೆಯಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಮಾಡೆಲಿಂಗ್ ಜೊತೆ ವಿದ್ಯಾಭ್ಯಾಸ ಮುಂದುವರೆಸಿದ್ದ ನಟಿ, 1994 ರಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ರು. ವಿಶ್ವ ಸುಂದರಿ ಕಿರೀಟವನ್ನು ಪಡೆದು ಭಾರತೀಯರ ಪ್ರೀತಿಗೆ ಪಾತ್ರರಾದ್ರು. ಅಲ್ಲಿಂದ ಅವರ ಪ್ರಯಾಣ ಹೊಸ ತಿರುವು ಪಡೆಯಿತು. ವಿಶ್ವ ಸುಂದರಿ ಪಟ್ಟ ಸಿಕ್ಕಿದ್ಮೇಲೆ ಬಾಲಿವುಡ್ ಗೆ ಕಾಲಿಟ್ಟ ಐಶ್ ನೋಡಿ, ಸೌಂದರ್ಯದ ಕಾರಣಕ್ಕೆ ಸಿನಿಮಾ ಸಿಕ್ಕಿದೆ ಅಂತ ಜನ ಮಾತನಾಡಿಕೊಂಡಿದ್ರು. ಆದ್ರೆ ಬರೀ ಸೌಂದರ್ಯವಲ್ಲ, ನನ್ನ ಬಳಿಯೂ ಪ್ರತಿಭೆ ಇದೆ ಎಂಬುದನ್ನು ತೋರಿಸಿದ್ರು ಐಶ್. ಹಮ್ ದಿಲ್ ದೇ ಚುಕೆ ಸನಮ್, ದೇವದಾಸ್, ಮತ್ತು ಜೋಧಾ ಅಕ್ಬರ್ ನಂತಹ ಚಲನಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿದ ಐಶ್ವರ್ಯ ರೈ, ಅಭಿಮಾನಿಗಳಿಗೆ ಹತ್ತಿರವಾದ್ರು. ಐಶ್ವರ್ಯ ರೈ ಬಚ್ಚನ್ ಜಾಗತಿಕ ಐಕಾನ್. ಕೇನ್ಸ್ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರರಾಗಿ ಪಾಲ್ಗೊಂಡ ಭಾರತದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಐಶ್ ಪಾತ್ರರಾಗಿದ್ದಾರೆ.
ಬಾಲಿವುಡ್ ಸಿನಿಮಾ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲೂ ಐಶ್ ಕೆಲ ಸವಾಲುಗಳನ್ನು ಎದುರಿಸಿದ್ದರು. ಬಾಲಿವುಡ್ ನಟರಾದ ವಿವೇಕ್ ಒಬೆರಾಯ್ ಹಾಗೂ ಸಲ್ಮಾನ್ ಖಾನ್ ಪ್ರೀತಿ ವಿಷ್ಯ ದೊಡ್ಡ ಚರ್ಚೆಯಾಗಿತ್ತು. ನಂತ್ರ ಐಶ್ ಕೈ ಹಿಡಿದಿದ್ದು ಬಿಗ್ ಬಿ ಮಗ ಅಭಿಷೇಕ್ ಬಚ್ಚನ್ ಅವರನ್ನು.
2007ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐಶ್, ಮದುವೆ ನಂತ್ರವೂ ಕೆಲ ಚಿತ್ರಗಳಲ್ಲಿ ನಟಿಸಿದ್ದರು. ಮಗಳು ಆರಾದ್ಯ ಬರ್ತಿದ್ದಂತೆ ವೃತ್ತಿ ಜೀವನಕ್ಕೆ ಬ್ರೇಕ್ ಪಡೆದಿದ್ದ ಬಿಗ್ ಬಿ ಸೊಸೆ ಈಗ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಐಶ್ವರ್ಯ ರೈ ಬಚ್ಚನ್, ಮಣಿರತ್ನಂ ನಿರ್ದೇಶನದ ಸೌತ್‌ನ ಬಿಗ್ ಬಜೆಟ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಪಾರ್ಟ್ ಒನ್, ಪಾರ್ಟ್ 2 ತೆರೆಗೆ ಬಂದಿದೆ.
ನಟಿಸ್ತಿರೋ ಸೀರಿಯಲ್ ಸ್ಟಾಪ್ ಆಯ್ತು, Biggboss ಮನೆಗೆ ಹೋಗ್ತಾರಾ ಇವರೆಲ್ಲಾ.
ಅಮಿತಾಬ್ ಬಚ್ಚನ್ ಹಾಗೂ ಜಯಾ ಬಚ್ಚನ್ ಸೊಸೆಯಾಗಿ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಐಶ್ವರ್ಯ ರೈ, 800 ಕೋಟಿಗೂ ಹೆಚ್ಚು ಮೌಲ್ಯದ ನಿವ್ವಳ ಆಸ್ತಿಯನ್ನು ಹೊಂದಿದ್ದಾರೆ. ಪ್ರತಿ ಚಿತ್ರಕ್ಕೆ 10 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಐಶ್, ಬ್ಯುಸಿ ನಟಿಯರಲ್ಲಿ ಒಬ್ಬರು. ಅನೇಕ ಪ್ರಸಿದ್ಧ ಬ್ರಾಂಡ್ಗೆ ಅಂಬಾಸಿಡರ್ ಆಗಿರುವ ಐಶ್ವರ್ಯ ರೈ ಬಚ್ಚನ್, ವಾರ್ಷಿಕವಾಗಿ 80 -90 ಕೋಟಿ ಸಂಪಾದನೆ ಮಾಡುತ್ತಾರೆ. 2021 ರಲ್ಲಿ ಅವರು ಪೌಷ್ಠಿಕಾಂಶ ಆಧಾರಿತ ಆರೋಗ್ಯ ಕಂಪನಿಯಲ್ಲಿ ಸುಮಾರು 5 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ.