ಡಕ್‌ ನಡಿಗೆಯ ಟೀ ಶರ್ಟ್ ಹಾಕ್ಕೊಂಡ್ ಬಂದ ಮಲೈಕಾ, ತನ್ನದೇ ವಾಕಿಂಗ್ ಸ್ಟೈಲ್‌ ಕಸ್ಟಮೈಸ್ ಮಾಡಿದ ನಟಿ!

Published : Apr 05, 2024, 01:23 PM ISTUpdated : Apr 05, 2024, 02:17 PM IST
ಡಕ್‌ ನಡಿಗೆಯ ಟೀ ಶರ್ಟ್ ಹಾಕ್ಕೊಂಡ್ ಬಂದ ಮಲೈಕಾ, ತನ್ನದೇ ವಾಕಿಂಗ್ ಸ್ಟೈಲ್‌ ಕಸ್ಟಮೈಸ್ ಮಾಡಿದ ನಟಿ!

ಸಾರಾಂಶ

ಮಲೈಕಾ ಅರೋರಾ, ಬಾಲಿವುಡ್​ನ ಅತ್ಯಂತ ಬೇಡಿಕೆಯ ನಟಿ ಹಾಗೂ ಮಾಡೆಲ್. 50ರ ಆಸು-ಪಾಸಿನಲ್ಲಿದ್ರೂ ಸಖತ್ ಹಾಟ್‌. ಫಿಗರ್ ಮೈಂಟೇನ್ ಮಾಡ್ಕೊಂಡಿದ್ದಾರೆ. ಯೋಗ ಪಟುವಾಗಿ ಗುರುತಿಸಿಕೊಂಡಿರುವ ಈ ಫಿಟ್ನೆಸ್ ಫ್ರೀಕ್ ಇತ್ತೀಚಿಗೆ ಧರಿಸಿರೋ ಕಸ್ಟಮೈಸ್ಡ್‌ ಟೀ ಶರ್ಟ್ ಎಲ್ಲರ ಗಮನ ಸೆಳೆದಿದೆ.

ಮಲೈಕಾ ಅರೋರಾ ಅವರು ಬಾಲಿವುಡ್​ನ ಅತ್ಯಂತ ಬೇಡಿಕೆಯ ನಟಿ ಹಾಗೂ ಮಾಡೆಲ್. 50ರ ಆಸು-ಪಾಸಿನಲ್ಲಿದ್ರೂ ಸಖತ್ ಹಾಟ್‌. ಫಿಗರ್ ಮೈಂಟೇನ್ ಮಾಡ್ಕೊಂಡು ಇನ್ನೂ ಹದಿನೆಂಟರ ಹುಡುಗಿಯರು ನಾಚೋ ಹಾಗೆ ಇದ್ದಾರೆ. ಸಖತ್‌ ಸ್ಟೈಲಿಶ್ ಆಗಿ ಡ್ರೆಸ್ ಮಾಡ್ಕೊಂಡು ಪಡ್ಡೆಗಳ ನಿದ್ದೆಗೆಡಿಸುತ್ತಲೇ ಇರುತ್ತಾರೆ. ಯೋಗ ಪಟುವಾಗಿ ಗುರುತಿಸಿಕೊಂಡಿರುವ ಈ ಫಿಟ್ನೆಸ್ ಫ್ರೀಕ್ ಇತ್ತೀಚಿಗೆ ಧರಿಸಿರೋ ಕಸ್ಟಮೈಸ್ಡ್‌ ಟೀ ಶರ್ಟ್ ಎಲ್ಲರ ಗಮನ ಸೆಳೆದಿದೆ.ಮಲೈಕಾ ಅರೋರಾ ತನ್ನ ಸ್ವಂತ ನಡಿಗೆಯನ್ನೇ ಕಸ್ಟಮೈಸ್ಡ್ ಮಾಡಿಕೊಂಡಿದ್ದಾರೆ ಎಂದು ಪಾಪರಾಜಿಗಳು ಹೇಳುತ್ತಿದ್ದಾರೆ.

ಅದ್ಭುತ ವೃತ್ತಿಜೀವನದ ಹೊರತಾಗಿ, ಮಲೈಕಾ ತನ್ನ ವಯಸ್ಸು, ಜೀವನಶೈಲಿ ಮತ್ತು ಅರ್ಜುನ್ ಕಪೂರ್ ಅವರೊಂದಿಗಿನ ಸಂಬಂಧದಿಂದಾಗಿ ಆಗಾಗ ಟ್ರೋಲ್‌ಗೆ ಒಳಗಾಗುತ್ತಾರೆ. ಜಿಮ್‌ನ ನಂತರ ಮಲೈಕಾ ನಡಿಗೆ ಆಗಾಗ ಟ್ರೋಲ್ ಆಗುತ್ಲೇ ಇರುತ್ತದೆ. ವಿಚಿತ್ರವಾಗಿ ನಡೆಯುವ ಈ ಸ್ಟೈಲ್‌ಗೆ ಪಾಪರಾಜಿಗಳು ಡಕ್‌ ಸ್ಟೈಲ್ ಎಂದೇ ಹೆಸರಿಸುತ್ತಾರೆ. ಇತ್ತೀಚಿಗೆ ಮಲೈಕಾ ತಮ್ಮದೇ ವಾಕಿಂಗ್ ಸ್ಟೈಲ್‌ನ ಟೀ ಶರ್ಟ್ ಧರಿಸಿ ಸುದ್ದಿಯಾಗಿದ್ದಾರೆ.

ರೆಡ್‌ ಸ್ಯಾರಿಯಲ್ಲಿ ಹಾಟ್ ಬ್ಯೂಟಿ ಮಲೈಕಾ, ಚಳಿಯಲ್ಲಿ ಮೈ ಬೆಚ್ಚಗೆ ಮಾಡಿದ್ರಿ ಎಂದ ಫ್ಯಾನ್ಸ್‌!

ಏಪ್ರಿಲ್ 4, 2024ರಂದು, ಸಡಿಲವಾದ- ಕಸ್ಟಮೈಸ್ಡ್ ಟೀ-ಶರ್ಟ್‌ನ್ನು ಧರಿಸಿದ್ದರು. ಇದರಲ್ಲಿ ಹುಡುಗಿಯೊಬ್ಬಳು ತನ್ನ ಪೆಟ್‌ನ್ನು ಹಿಡಿದುಕೊಂಡು ಸ್ಟೈಲಾಗಿ ನಡೆದುಕೊಂಡು ಹೋಗುವ ಫೋಟೋವಿದೆ. ಇದು ಸಂಪೂರ್ಣವಾಗ ಮಲೈಕಾ ವಾಕಿಂಗ್ ಸ್ಟೈಲ್‌ನ್ನೇ ಹೋಲುತ್ತದೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ,

2022ರಲ್ಲಿ, ಮಲೈಕಾ ತನ್ನ ರಿಯಾಲಿಟಿ ಶೋ ಮೂವಿಂಗ್ ಇನ್ ವಿತ್ ಮಲೈಕಾದೊಂದಿಗೆ ತಮ್ಮ ಜೀವನದ ಬಗ್ಗೆ ಮಾತನಾಡಿದ್ದರು. ಪ್ರೋಮೋ ಕ್ಲಿಪ್ ಒಂದರಲ್ಲಿ, ಮಲೈಕಾ ತನ್ನನ್ನು ಎಲ್ಲರೂ ಮಾತನಾಡಲು ಇಷ್ಟಪಡುವ ಮಹಿಳೆ ಎಂದು ಪರಿಚಯಿಸಿಕೊಂಡರು. ಈ ಸಂದರ್ಭದಲ್ಲಿ ನೆಟ್ಟಿಗರು ಆಕೆಯ ಡಕ್‌ ವಾಕಿಂಗ್‌ ಸ್ಟೈಲ್‌ ಮತ್ತು ಬಿಕಿನಿಗಳಿಗೆ ಸಂಜೆಯ ನಿಲುವಂಗಿಯನ್ನು ಧರಿಸಿದ್ದಕ್ಕಾಗಿ ಟ್ರೋಲ್ ಮಾಡಿದ್ದರು.

ಮೈಗಂಟಿದ ಬಿಗಿ ಉಡುಪಲ್ಲಿ ಬೋಲ್ಡ್‌ ಬ್ಯೂಟಿ ಮಲೈಕಾ ಅರೋರಾ: ನಿಮಗೆ ವಯಸ್ಸೇ ಆಗೋಲ್ವಾ ಎಂದ ಫ್ಯಾನ್ಸ್‌!

ಮಲೈಕಾ ಅರೋರಾ ತನ್ನ ಕಾಲಿನ ಮೇಲೆ ದೊಡ್ಡ ಗಾಯಗಳನ್ನು ಮರೆಮಾಡಲು ಪ್ರಯತ್ನಿಸಿದಾಗಲೂ ನೆಟಿಜನ್ ಟ್ರೋಲ್ ಮಾಡಿದ್ದರು. ಮಲೈಕಾ ಗಾಯವನ್ನು ಸಲೂನ್‌ಗೆ ಪ್ರವೇಶಿಸುತ್ತಿದ್ದಂತೆ, ಅದನ್ನು ತನ್ನ ಶಾರ್ಟ್ಸ್‌ನಿಂದ ಮುಚ್ಚಲು ಪ್ರಯತ್ನಿಸಿದರು. ವೀಡಿಯೋ ಅಪ್‌ಲೋಡ್ ಆದ ತಕ್ಷಣ ನೆಟಿಜನ್‌ಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಅದರಲ್ಲಿ ಹಲವರು, ಆಕೆ ಅದನ್ನು ಮರೆಮಾಡಲು ಬಯಸಿದರೆ ಶಾರ್ಟ್ಸ್ ಬದಲಿಗೆ ಪ್ಯಾಂಟ್ ಧರಿಸಬಹುದಿತ್ತು ಎಂದು ಹೇಳಿಕೊಂಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?