ಹೊಸ ಅವತಾರದಲ್ಲಿ ಚಹಾಲ್ ಪತ್ನಿ , ಲವ್ ಸೆಕ್ಸ್ ಔರ್ ದೋಖಾ 2 ಚಿತ್ರದಲ್ಲಿ ಧನಶ್ರಿ ಮೋಡಿ!

Published : Apr 04, 2024, 06:46 PM IST
ಹೊಸ ಅವತಾರದಲ್ಲಿ ಚಹಾಲ್ ಪತ್ನಿ , ಲವ್ ಸೆಕ್ಸ್ ಔರ್ ದೋಖಾ 2 ಚಿತ್ರದಲ್ಲಿ ಧನಶ್ರಿ ಮೋಡಿ!

ಸಾರಾಂಶ

ಸ್ಪಿನ್ನರ್ ಯಜುವೇಂದ್ರ ಚಹಾಲ್ ಪತ್ನಿ ಧನಶ್ರಿ ವರ್ಮಾ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಲವ್ ಸೆಕ್ಸ್ ಔರ್ ದೋಖಾ 2 ಚಿತ್ರದ ಹಾಡಿನ ಟೀಸರ್ ಬಿಡುಗಡೆಯಾಗಿದೆ. ಕಮ್ಸನ್ ಕಾಲಿ ಹಾಡಿನಲ್ಲಿ ಧನಶ್ರೀ ವರ್ಮಾ ಸಖಕ್ ಸ್ಟೆಪ್ಸ್ ಹಾಕಿದ್ದಾರೆ.  

ಮುಂಬೈ(ಏ.04) ರಾಜಸ್ಥಾನ ರಾಯಲ್ಸ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಪತ್ನಿ ಧನಶ್ರೀ ವರ್ಮಾ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಕ್ರಿಯವಾಗಿದ್ದಾರೆ. ಇತ್ತೀಚೆಗೆ ಧನಶ್ರಿ ವರ್ಮಾ ಫೋಟೋ ಒಂದು ಭಾರಿ ಟ್ರೋಲ್ ಆಗಿತ್ತು. ಇಷ್ಟೇ ಅಲ್ಲ ಈ ಫೋಟೋ ಕುರಿತು ಸ್ಪಷ್ಟನೆ ನೀಡಿದ್ದ ಧನಶ್ರೀ ವರ್ಮಾ ಭಾವುಕರಾಗಿದ್ದರು. ಇದೀಗ ಧನಶ್ರೀ ವರ್ಮಾ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹುನಿರೀಕ್ಷಿತ ಚಿತ್ರ ಲವ್ ಸೆಕ್ಸ್ ಔರ್ ದೋಖಾ 2 ಚಿತ್ರದಲ್ಲಿ ಧನಶ್ರೀ ವರ್ಮಾ ಕಾಣಿಸಿಕೊಂಡಿದ್ದಾರೆ. ಇದೀಗ ಚಿತ್ರದ ಹಾಡಿನ ಟೀಸರ್ ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಧನಶ್ರೀ ವರ್ಮಾ ಸಖತ್ ಸ್ಟೆಪ್ಸ್ ಹಾಕಿದ್ದಾರೆ.

ಕಮ್ಸನ್ ಕಾಲಿ ಹಾಡಿನಲ್ಲಿ ಟೋನಿ ಕಾಕರ್ ಜೊತೆ ಧನಶ್ರೀ ವರ್ಮಾ ಕಾಣಿಸಿಕೊಂಡಿದ್ದಾರೆ. ಈ ಹಾಡನ್ನು ಟೋನಿ ಕಾಕರ್ ಹಾಗೂ ಟೋನಿ ಸಹೋದರಿ ನೇಹಾ ಕಾಕರ್ ಸಂಯೋಜಿಸಿದ್ದಾರೆ. ಪಿಂಕ್ ಬಣ್ಣದ ಡ್ರೆಸ್‌ನಲ್ಲಿ ಧನಶ್ರೀ ವರ್ಮಾ ಟೋನಿ ಕಾಕರ್ ಜೊತೆ ಹೆಜ್ಜೆ ಹಾಕಿದ್ದಾರೆ. ಹಾಡಿನ ಸಣ್ಣ ತುಣುಕು ಇಂದು ಬಿಡುಗಡೆಯಾಗಿದೆ. ಹಾಟ್ ಅಂಡ್ ಬೋಲ್ಡ್ ಸೀನ್‌ಗಳು ಈ ಹಾಡಿನಲ್ಲಿದೆ. ಆದರೆ ಸದ್ಯ ಬಿಡುಗಡೆಯಾಗಿರುವ ಈ ಹಾಡಿನಲ್ಲಿ ಸೊಂಟಕ್ಕೆ ಚಿವುಟುವ ದೃೃಶ್ಯವನ್ನು ಹಾಕಲಾಗಿದೆ. 

ನನ್ನ ಕುಟುಂಬದ ಮೇಲೆ ಪರಿಣಾಮ,ಟ್ರೋಲ್‌ಗೆ ಮೊದಲ ಬಾರಿಗೆ ತುಟಿಬಿಚ್ಚಿದ ಚಹಾಲ್ ಪತ್ನಿ!

ಲವ್ ಸೆಕ್ಸ್ ಔರ್ ದೋಖಾ ಚಿತ್ರದ 2ನೇ ಭಾಗ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಬರೋಬ್ಬರಿ 14 ವರ್ಷದ ಬಳಿಕ ಈ ಚಿತ್ರದ 2ನೇ ಭಾಗ ನಿರ್ಮಾಣಗೊಂಡಿದೆ. ದಿಬಾಕರ್ ಬ್ಯಾನರ್ಜಿಯ ಈ ಚಿತ್ರ ಇದೀಗ ಭಾರಿ ಕುತೂಹಲ ಕೆರಳಿಸಿದೆ. ಲವ್ ಸೆಕ್ಸ್ ದೋಖಾ 2 ನೇ ಭಾಗದ ಮೊದಲ ಟೀಸರ್ ಎಪ್ರಿಲ್ 1 ರಂದು ಬಿಡುಗಡೆಯಾಗಿತ್ತು. ಇದೀಗ ಹಾಡಿನ ಟೀಸರ್ ಬಿಡುಗಡೆಯಾಗಿದೆ. ಲವ್ ಸೆಕ್ಸ್ ದೋಖಾ ಚಿತ್ರದ ಮೊದಲ ಭಾಗ 2010ರಲ್ಲಿ ಬಿಡುಗಡೆಯಾಗಿತ್ತು.

ಈ ಚಿತ್ರದ ನಿರ್ಮಾಣ ಜವಾಬ್ದಾರಿಯನ್ನು ಏಕ್ತಾ ಕಪೂರ್ ವಹಿಸಿಕೊಂಡಿದ್ದಾರೆ. ದಿಬಾಕರ್ ಬ್ಯಾನರ್ಜಿ ನಿರ್ದೇಶನದ ಈ ಚಿತ್ರ ಎಪ್ರಿಲ್ 19 ರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಇದೀಗ ಯಜುವೇಂದ್ರ ಚಹಾಲ್ ಪತ್ನಿ ಧನಶ್ರಿ ವರ್ಮಾ ಕಾಣಿಸಿಕೊಂಡಿರುವುದು ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

 

 

ಚಹಾಲ್ ಪತ್ನಿ ಧನಶ್ರೀ ವರ್ಮಾ ಯೂಟ್ಯೂಬ್‌ನಲ್ಲಿ 6.1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಧನಶ್ರೀ ವರ್ಮಾ  ಇದೇ ಕಾರಣದಿಂದ ಟ್ರೋಲ್ ಕೂಡ ಆಗಿದ್ದಾರೆ. ಪತಿ ಚಹಾಲ್ ಜೊತೆಗಿನ ಸಂಬಂಧ ಹಳಸಿದೆ ಅನ್ನೋ ವರದಿಗಳು ಭಾರಿ ಕೋಲಾಹಲ ಸೃಷ್ಟಿಸಿತ್ತು.

ಬಿಕಿನಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಚಹಾಲ್ ಪತ್ನಿ, ಮಿಯಾಮಿ ಬೀಚ್‌ನಲ್ಲಿ ಜಾಲಿ ಡೇ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!