ಮೇಕಪ್‌ ಪಾತ್ರದಲ್ಲಿ ವಿಭಿನ್ನತೆ ತರಲಾರದು ಎಂದ್ಬಿಟ್ರು ಸಾಯಿ ಪಲ್ಲವಿ; ಎಂಥ ಮಾತು ಅಂತಿದಾರಲ್ರೀ!

By Shriram Bhat  |  First Published Apr 4, 2024, 7:30 PM IST

'ಪ್ರೇಮಂ ಚಿತ್ರದ ಬಳಿಕ ನಾನು ನಟಿಸಿದ ಚಿತ್ರದ ಫೋಟೋ ಶೂಟ್ ವೇಳೆ ನನಗೆ ಲೆನ್ಸ್ ಹಾಗೂ ಮೇಕಪ್ ಮಾಡಲಾಯಿತು. ಆದರೆ, ಬಳಿಕ ಚಿತ್ರದ ನಿರ್ದೇಶಕರು ಮೇಕಪ್-ಲೆನ್ಸ್ ಬೇಡ, ನೀವು ಇರುವಂತೆಯೇ ಸಾಕು' ಎಂದು ಸೀದಾ ಸಾದಾ ಶೂಟ್ ಮಾಡಿದ್ದಾರೆ..


ಮಲಯಾಳಂ ಮೂಲದ ನಟಿ ಸಾಯಿ ಪಲ್ಲವಿ ಈಗ ಪ್ಯಾನ್ ಇಂಡಿಯಾ ನಟಿಯಾಗಿ ಬೆಳೆದಿರುವುದು ಗೊತ್ತೇ ಇದೆ. ಮಲಯಾಳಂನ 'ಪ್ರೇಮಂ' ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ನಟಿ ಸಾಯಿ ಪಲ್ಲವಿ, ಬಳಿಕ ತೆಲುಗು, ಕನ್ನಡ, ತಮಿಳು ಸಿನಿಮಾರಂಗದಲ್ಲೂ ತಮ್ಮ ಮಿಂಚು ಹರಿಸಿದ್ದಾರೆ. ಸದ್ಯ ಕೆಜಿಎಫ್ ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್, ಬಾಲಿವುಡ್‌ ಸ್ಟಾರ್ ನಟ ರಣಬೀರ್ ಕಪೂರ್ ಜತೆ ನಟಿ ಸಾಯಿ ಪಲ್ಲವಿ ಕೂಡ 'ರಾಮಾಯಣ' ಚಿತ್ರದಲ್ಲಿ ಸೀತೆಯ ಪಾತ್ರಕ್ಕೆ ಬಣ್ಣ ಹಚ್ಚಲಿರುವುದು ಪಕ್ಕಾ ಆಗಿದೆ. 

ಜತೆಗೆ, ಸದ್ಯ ಶೂಟಿಂಗ್ ಶುರುವಾಗಿರುವ ಯಶ್ ನಟನೆ ಹಾಗೂ ಗೀತೂ ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾದಲ್ಲಿ ಕೂಡ ಸಾಯಿ ಪಲ್ಲವಿಯೇ ಹೀರೋಯಿನ್ ಎನ್ನಲಾಗುತ್ತಿದೆ. ನಟಿ ಕರೀನಾ ಕಪೂರ್ ಕೂಡ ಮುಖ್ಯ ಪಾತ್ರವೊಂದಕ್ಕೆ ಬಣ್ಣ ಹಚ್ಚಲಿದ್ದು, ಇನ್ನುಳಿದಂತೆ ಟಾಕ್ಸಿಕ್ ಸಿನಿಮಾದಲ್ಲಿ ಹಲವಾರು ದೊಡ್ಡ ದೊಡ್ಡ ಸ್ಟಾರ್ ನಟರು ನಟಿಸಲಿದ್ದಾರೆ ಎನ್ನಲಾಗಿದೆ. ಅದಿರಲಿ, ನಟಿ ಸಾಯಿ ಪಲ್ಲವಿ ಮೇಕಪ್ ಬಗ್ಗೆ ಮಾತನಾಡಿರುವ ವೀಡಿಯೋ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. 

Tap to resize

Latest Videos

ಸರ್ಜರಿ ಬಳಿಕ ಮತ್ತೆ ಬಣ್ಣ ಹಚ್ಚಿದ ಚೆಲುವೆ 'ಪಟಾಕ'..; ನಿಖಿಲ್ ಸಿದ್ದಾರ್ಥ್ 'ಸ್ವಯಂಭು'ನಲ್ಲಿ ನಭಾ ನಟೇಶ್!

ವೀಡಿಯೋದಲ್ಲಿ ನಟಿ ಸಾಯಿ ಪಲ್ಲವಿ 'ಪ್ರೇಮಂ ಚಿತ್ರದ ಬಳಿಕ ನಾನು ನಟಿಸಿದ ಚಿತ್ರದ ಫೋಟೋ ಶೂಟ್ ವೇಳೆ ನನಗೆ ಲೆನ್ಸ್ ಹಾಗೂ ಮೇಕಪ್ ಮಾಡಲಾಯಿತು. ಆದರೆ, ಬಳಿಕ ಚಿತ್ರದ ನಿರ್ದೇಶಕರು ಮೇಕಪ್-ಲೆನ್ಸ್ ಬೇಡ, ನೀವು ಇರುವಂತೆಯೇ ಸಾಕು' ಎಂದು ಸೀದಾ ಸಾದಾ ಶೂಟ್ ಮಾಡಿದ್ದಾರೆ. ನನ್ನ ಪ್ರಕಾರ ಪಾತ್ರ ಮಾಡುವಾಗ ವಿಭಿನ್ನ ಹೇರ್‌ಸ್ಟೈಲ್ ಹಾಗು ಮೇಕಪ್ ಮಾಡಿ ಡಿಫ್ರೆಂಟ್ ಆಗಿ ತೋರಿಸುವ ಬದಲು ಪಾತ್ರಕ್ಕೆ ತಕ್ಕಂತೆ ಇದ್ದರೆ ಸಾಕು. ಪ್ರತಿ ಚಿತ್ರದಲ್ಲೂ ಪಾತ್ರ ಕೆತ್ತಿರುವ ರೀತಿ ವಿಭಿನ್ನವಾಗಿಯೇ ಇರುತ್ತೆ, ಹೀಗಾಗಿ ಅದಕ್ಕೆ ತಕ್ಕಂತೆ ನಾವು ಕೂಡ ಜನರಿಗೆ ವಿಭಿನ್ನವಾಗಿಯೇ ಕಾಣಿಸುತ್ತೇವೆ. 

ನೀವು ಇದನ್ನ ಬೋಲ್ಡ್ ಬಟ್ಟೆ ಅಂತ ಕರಿತೀರಾ ಅಂದ್ರೆ ನಾನು ಬೋಲ್ಡ್ ಕ್ಯಾರೆಕ್ಟರ್‌ ಮಾಡ್ತೀನಿ; ನಟಿ-ಗಾಯಕಿ ಚೈತ್ರಾ ಆಚಾರ್

ನನ್ನ ಪ್ರಕಾರ, ಪ್ರತಿ ಚಿತ್ರದಲ್ಲಿ ಕಲಾವಿದರು ಬೇರೆಬೇರೆ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ನಟಿಸಿದರೆ ಸಹಜವಾಗಿಯೇ ವಿಭಿನ್ನತೆ ಇದ್ದೇ ಇರುತ್ತದೆ. ಆದರೆ, ಒಂದೇ ರೀತಿಯ ಪಾತ್ರಕ್ಕೆ ಬೇರೆಬೇರೆ ರೀತಿಯಲ್ಲಿ ಹೇರ್‌ಸ್ಟೈಲ್ ಮಾಡಿಕೊಂಡು, ವಿಭಿನ್ನ ಮೇಕಪ್ ಮಾಡಿದರೆ ಅದರಿಂದ ಯಾವುದೇ ಪ್ರಯೋಜನ ಇಲ್ಲ ಎಂಬುದು ನನ್ನ ನಿಲುವು. ಇದು ಕೇವಲ ನನ್ನ ನಿಲುವು ಎನ್ನುವುದಕ್ಕಿಂತ ನಾನು ಕೆಲಸ ಮಾಡಿರುವ ಎಲ್ಲಾ ಸಿನಿಮಾಗಳ ಡೈರೆಕ್ಟರ್‌ಗಳ ನಿಲುವು ಕೂಡ ಇದೇ ಆಗಿದೆ ಎನ್ನಬಹುದು. ಹೀಗಾಗಿ ನನಗೆ ಯಾವತ್ತೂ ಮೇಕಪ್ ಕಾಟ ಅಷ್ಟಾಗಿ ಕಾಡಲೇ ಇಲ್ಲ' ಎಂದಿದ್ದಾರೆ ನಟಿ ಸಾಯಿ ಪಲ್ಲವಿ. 

ಯಶ್-ರಾಧಿಕಾ ಭೇಟಿಯಾದ ಸಪ್ತಮಿ ಗೌಡ; ಕಾಂತಾರ ಚೆಲುವೆ ಹೇಳಿದ್ದೇನು, ರಾಕಿಂಗ್ ಸ್ಟಾರ್ ಮಾಡಿದ್ದೇನು?

click me!