Bollywood ನಟರ ಬಾಡಿಗಾರ್ಡ್ಸ್ ಸಂಬಳ ಕೇಳಿದ್ರೆ ತಲೆ ತಿರುಗಿ ಬೀಳ್ತೀರಿ

By Suvarna News  |  First Published Mar 22, 2023, 8:26 PM IST

ಚಿತ್ರನಟ ನಟಿಯರು ಸುರಕ್ಷಿತವಾಗಿರಲು ಅಂಗರಕ್ಷಕರ ಅಗತ್ಯವಿದೆ. ಅದರಂತೆ ಬಹುತೇಕ ಸೆಲೆಬ್ರಿಟಿಗಳು ಬಾಡಿಗಾರ್ಡ್ಸ್​ಗಳನ್ನು ನೇಮಕ ಮಾಡಿಕೊಂಡಿದ್ದಾರೆ. ಅವರ ಸಂಬಳ ಎಷ್ಟಿದೆ ಗೊತ್ತಾ?
 


ಸಿನಿ ತಾರೆಯರು ಎಂದರೆ ಅವರಿಗೆ ರಕ್ಷಣೆ ಸದಾ ಅಗತ್ಯವಿರುತ್ತದೆ. ರಾಜಕಾರಣಿಗಳಂತೆಯೇ ಪ್ರಸಿದ್ಧ ನಟ-ನಟಿಯರು ಬಾಡಿಗಾರ್ಡ್​ಗಳನ್ನು (Body Guard) ನೇಮಕ ಮಾಡಿಕೊಳ್ಳುತ್ತಾರೆ. ರಾಜಕಾರಣಿಗಳಿಗೆ ಜೀವ ಭಯವಿದ್ದರೆ, ಸಿನಿಮಾ ನಟ-ನಟಿಯರು ಹೋದ ಕಡೆಗಳಲ್ಲಿ ಅಭಿಮಾನಿಗಳು ಮುತ್ತಿಕೊಂಡು ತೊಂದರೆ ಕೊಡುವ ಸಾಧ್ಯತೆ ಇರುವುದರಿಂದ ತಮ್ಮ ರಕ್ಷಣೆಗೆ ಹಲವು ತಾರೆಯರು ಬಾಡಿಗಾರ್ಡ್​ಗಳನ್ನು ನೇಮಕ ಮಾಡಿಕೊಳ್ಳುತ್ತಾರೆ. ಹಲವರಿಗೆ ಚಿತ್ರತಾರೆಯರೇ ತಮ್ಮ ನಾಯಕರು. ಅವರಂತೆಯೇ ಅನುಸರಿಸುವುದು, ಅವರು ಮಾಡಿದಂತೆ ಮಾಡುವುದು, ಅವರ ಡೈಲಾಗ್​ಗಳನ್ನೇ ಹೇಳುವುದು ಮಾಡುತ್ತಿರುತ್ತಾರೆ. ಚಿತ್ರತಾರೆಯರೇ ತಮ್ಮ ಸರ್ವಸ್ವ ಎಂದುಕೊಳ್ಳುವ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ಇಂದಿನ ದಿನಗಳಲ್ಲಿ ನಾಯಕರು ಲಾಂಗು, ಮಚ್ಚು ಹಿಡಿದು ಹೊಡಿ, ಬಡಿ, ಕೊಲೆ ಎನ್ನುತ್ತ ರಾರಾಜಿಸುವ ಕಾರಣದಿಂದಲೇ  ಇಂದಿನ ಅಪರಾಧ ಪ್ರಕರಣಗಳನ್ನು ನೋಡಿದಾಗಲೂ ಅದೇ ರೀತಿಯಲ್ಲಿ ಮಾಡಲು ಹೋಗಿ ಸಿಕ್ಕಿಬೀಳುತ್ತಿದ್ದಾರೆ. ಇದು ಇಂದು ಜನರು ಚಿತ್ರತಾರೆಯರ ಮೇಲೆ ಇಟ್ಟಿರುವ ವಿಪರೀತ ಅಭಿಮಾನವನ್ನು ತೋರಿಸುತ್ತದೆ.

ಈ ಅಭಿಮಾನದ ಕಾರಣದಿಂದಾಗಿಯೇ ಖ್ಯಾತಿ ಹೆಚ್ಚಿದಂತೆ ಚಿತ್ರ ನಟರಿಗೆ ರಕ್ಷಣೆಯ ಅಗತ್ಯ ಕಂಡುಬರುತ್ತದೆ. ಇಂಥ ಅಂಗರಕ್ಷಕರಿಗೆ ಭಾರಿ ಪ್ರಮಾಣದ ಸಂಬಳವನ್ನು ತಾರೆಯರು ನೋಡುತ್ತಿದ್ದಾರೆ.  ಅವರು ತಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ಮುಖ್ಯವಾಗಿದೆ. ಆದ್ದರಿಂದ ಅಂಗರಕ್ಷಕರಿಗೆ  ಸಂಬಳದ ರೂಪದಲ್ಲಿ ದೊಡ್ಡ ಮೊತ್ತವನ್ನು ನೀಡಲಾಗುತ್ತದೆ.  ಹಾಗಿದ್ದರೆ ಯಾರು ಎಷ್ಟು ಸಂಬಳವನ್ನು ತಮ್ಮ ಅಂಗರಕ್ಷಕರಿಗೆ ನೀಡುತ್ತಾರೆ ಎನ್ನುವುದನ್ನು ಇಲ್ಲಿ ನೋಡೋಣ. ಬಹುತೇಕ ಎಲ್ಲಾ ಸೆಲೆಬ್ರಿಟಿಗಳು (Celebrities) ಅಂಗರಕ್ಷಕರನ್ನು ನೇಮಕ ಮಾಡಿಕೊಂಡಿದ್ದರೂ, ಇಲ್ಲಿ ಕೆಲವು ನಟ-ನಟಿಯರ ಅಂಗರಕ್ಷಕರ ಕುರಿತು ವಿವರಣೆ ನೀಡಲಾಗಿದೆ. ಇವರ ಪೈಕಿ ಹಲವರ ಸಂಬಳ ದೊಡ್ಡ ದೊಡ್ಡ ಕಂಪೆನಿಗಳ ಸಿಇಒಗಳನ್ನೂ ಮೀರಿಸುವಂತಿದೆ. 

Tap to resize

Latest Videos

Salman Khan ಮನೆಗೆ ಫುಲ್‌ ಸೆಕ್ಯುರಿಟಿ: ಎಲ್ಲಾ ಕಾರ್ಯಕ್ರಮ ಸ್ಥಗಿತ!


 ಶಾರುಖ್ ಖಾನ್ (Shah Rukh Khan), ಸಲ್ಮಾನ್​ ಖಾನ್​
ಕಿಂಗ್ ಖಾನ್ ಅವರ ಅಂಗರಕ್ಷಕ ರವಿ ಸಿಂಗ್ ಅತ್ಯಧಿಕ ಸಂಬಳ ಪಡೆಯುತ್ತಾರೆ. ಅವರ ವಾರ್ಷಿಕ ಸಂಬಳ ಸುಮಾರು  2.5 ಕೋಟಿ ರೂಪಾಯಿಗಳು. ಮಾಸಿಕದ ಲೆಕ್ಕಾಚಾರದಲ್ಲಿ 20 ಲಕ್ಷಕ್ಕೂ ಅಧಿಕ. ಶೇರಾ ಎಂದು ಕರೆಯಲ್ಪಡುವ ಗುರ್ಮೀತ್ ಸಿಂಗ್ ಜಾಲಿ ಸಲ್ಮಾನ್ ಖಾನ್ ಅಭಿಮಾನಿಗಳಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಅವರು ಸ್ವತಃ ಸೆಲೆಬ್ರಿಟಿಗಿಂತ ಕಡಿಮೆಯಿಲ್ಲ. ಇವರು ಸಲ್ಮಾನ್​ ಖಾನ್​ (Salman Khan) ಅವರ ಅಂಗರಕ್ಷಕರಾಗಿದ್ದು, ಇವರ ಮಾಸಿಕ ವೇತನವು  15 ಲಕ್ಷ ರೂಪಾಯಿಯಾಗಿದೆ.  ವಾರ್ಷಿಕ 2 ಕೋಟಿ ರೂಪಾಯಿ 

ಆಮೀರ್ ಖಾನ್ (Aamir Khan), ಅಮಿತಾಭ್​ ಬಚ್ಚನ್
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಕರೆಯಲ್ಪಡುವ ಆಮೀರ್​ ಖಾನ್​ ಅವರು ತಮ್ಮ ಅಂಗರಕ್ಷಕ ಯುವರಾಜ್ ಘೋರ್ಪಡೆ ಅವರಿಗೆ ನೀಡುವ ಸಂಬಳ ವಾರ್ಷಿಕ 2 ಕೋಟಿ ರೂಪಾಯಿಗಳು.  ಮಾಸಿಕದ ಲೆಕ್ಕಾಚಾರದಲ್ಲಿ ಸುಮಾರು 15 ಲಕ್ಷ ರೂಪಾಯಿ. ಇನ್ನು ಬಾಲಿವುಡ್​ ಬಿಗ್​ ಬಿ  ಅಮಿತಾಭ್​ ಬಚ್ಚನ್ (Amitabh Bachchan) ಅವರ ಅಂಗರಕ್ಷಕನ ಹೆಸರು  ಜಿತೇಂದ್ರ ಶಿಂಧೆ. ಅವರು ಪಡೆಯುತ್ತಿರುವುದು  ವಾರ್ಷಿಕವಾಗಿ 1.2 ಕೋಟಿ ರೂಪಾಯಿಗಳು. 

Kriti Sanon: ಸೋಷಿಯಲ್‌ ಮೀಡಿಯಾದಲ್ಲಿ ನಟಿಯ ಮೂಗಿನದ್ದೇ ಚರ್ಚೆ- ಅಂಥದ್ದೇನಿದೆ?

 ದೀಪಿಕಾ ಪಡುಕೋಣೆ (Deepika Padukone), ಅಕ್ಷಯ್ ಕುಮಾರ್ 
ದೀಪಿಕಾ ಪಡುಕೋಣೆ ಅವರು ತಮ್ಮ ಅಂಗರಕ್ಷಕ ಜಲಾಲ್ ಅವರಿಗೆ ವಾರ್ಷಿಕವಾಗಿ  80 ಲಕ್ಷ ರೂಪಾಯಿಗಳನ್ನು ನೀಡುತ್ತಾರೆ. ಅಂಗರಕ್ಷಕ ಜಲಾಲ್​ ಅವರನ್ನು ತಮ್ಮ  ರಾಖಿ ಸಹೋದರನನ್ನಾಗಿ ಮಾಡಿಕೊಂಡಿದ್ದಾರೆ. ಅಕ್ಷಯ್ ಕುಮಾರ್ (Akshay Kumar) ಅವರು ಬಾಲಿವುಡ್‌ನ ಫಿಟೆಸ್ಟ್ ನಟರಲ್ಲಿ ಒಬ್ಬರಾಗಿದ್ದರೂ, ಅವರನ್ನು ಜನಸಂದಣಿಯಿಂದ ಸುರಕ್ಷಿತವಾಗಿರಿಸುವ ಅಂಗರಕ್ಷಕನ ಅಗತ್ಯವಿದೆ. ಅವರ ಅಂಗರಕ್ಷಕ ಶ್ರೇಯ್ಸೆ ಥೆಲೆ ವಾರ್ಷಿಕವಾಗಿ 1.2 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ.  
 

click me!