
ಸೌತ್ ಸ್ಟಾರ್ ಕೀರ್ತಿ ಸುರೇಶ್ ಸದ್ಯ ದಸರಾ ಸಿನಿಮಾದ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾದಲ್ಲಿ ಕೀರ್ತಿ ತೆಲುಗು ಸ್ಟಾರ್ ನಾನಿ ಜೊತೆ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟ್ರೈಲರ್ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿರುವ ದಸರ ಇದೇ ಮಾರ್ಚ್ 30ರಂದು ರಿಲೀಸ್ ಆಗುತ್ತಿದೆ. ಅಂದಾಹೆಗ ಈ ಸಿನಿಮಾದಲ್ಲಿ ಕೀರ್ತಿ ಸಂಪೂರ್ಣ ಡಿ ಗ್ಲಾಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೀರ್ತಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ದಸರಾ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ನಾನಿ ಸದ್ಯ ಈ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಕೀರ್ತಿ ಹೆಚ್ಚಾಗಿ ಪ್ರಮೋಷ್‌ನಲ್ಲಿ ಕಾಣಿಸಿಕೊಂಡಿಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು ಭಾರತದಾದ್ಯಂತ ಸಂಚರಿಸಿ ಸಿನಿಮಾದ ಪ್ರಮೋಷನ್ ಮಾಡುತ್ತಿದೆ ಸಿನಿಮಾತಂಡ. ಈ ನಡುವ ಕೀರ್ತಿ ಸುರೇಶ್ ಚಿನ್ನದ ನಾಣ್ಯಗಳನ್ನು ಗಿಫ್ಟ್ ನೀಡಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.
ತಮಿಳು ನಟಿ ಕೀರ್ತಿ ಸುರೇಶ್ ಸುಮಾರು 130 ಚಿನ್ನದ ನಾಣ್ಯಗಳನ್ನು ಗಿಫ್ಟ್ ನೀಡಿದ್ದಾರೆ. 70 ಲಕ್ಷ ರೂಪಾಯಿ ಬೆಲೆ ಬಾಳುವ ಗೋಲ್ಡ್ ಕಾಯಿನ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಷ್ಟಕ್ಕೂ ಯಾರಿಗೆ, ಯಾಕೆ ಅಂತಿರಾ? ಕೀರ್ತಿ ಗಿಫ್ಟ್ ಮಾಡಿದ್ದು ದಸರಾ ಸಿನಿಮಾತಂಡಕ್ಕೆ. ದಸರಾ ಸಿನಿಮಾಗೆ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಗಿಫ್ಟ್ ಮಾಡಿದ್ದಾರೆ. ಚಾಲಕ, ಲೈಟ್ ಬಾಯ್ ಸೇರಿದಂತೆ ಎಲ್ಲರಿಗೂ ಗೋಲ್ಡ್ ಕಾಯಿನ್ ಕೊಟ್ಟಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಿನಿಮಾ ಪ್ರಚಾರಕರು, 'ಹೌದು ಕೀರ್ತಿ ಮೇಡಮ್ ದಸರಾದ ಪ್ರತಿಯೊಬ್ಬ ಸಿಬ್ಬಂದಿಗೂ ಚಿನ್ನದ ನಾಣ್ಯವನ್ನು ಗಿಫ್ಟ್ ನೀಡಿದ್ದಾರೆ. ಇದರಲ್ಲಿ ಚಾಲಕರು ಮತ್ತು ಲೈಟ್ಸ್ ಬಾಯ್ಸ್ ಕೂಡ ಸೇರಿದ್ದಾರೆ. ಆದರೆ ಚಿನ್ನದ ನಾಣ್ಯಗಳ ಮೌಲ್ಯದ ಬಗ್ಗೆ ನನಗೆ ಖಚಿತವಿಲ್ಲ ಸುಮಾರು 70 ಲಕ್ಷ ರೂಪಾಯಿ ಇರಬಹುದು' ಎಂದು ಹೇಳಿದರು. ಮೂಲಗಳ ಪ್ರಕಾರ ಪ್ರತಿ ಒಬ್ಬರಿಗೂ 10 ಗ್ರಾಂ ಗೋಲ್ಡ್ ಕಾಯಿನ್ ನೀಡಿದ್ದಾರೆ ಎನ್ನಲಾಗಿದೆ.
ದಳಪತಿ ವಿಜಯ್ ದಾಂಪತ್ಯದಲ್ಲಿ ಬಿರುಗಾಳಿ ಎಬ್ಬಿಸಿದ್ರಾ 'ಮಹಾನಟಿ'? #JusticeForSangeetha ಟ್ರೆಂಡ್
ದಸರಾ ಸಿನಿಮಾದಲ್ಲಿ ಕೀರ್ತಿ ಸುರೇಶ್ ವೆನ್ನೆಲಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒದೆಲಾ ಸ್ರೀಕಾಂತ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ನಾನಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ತೆಲಂಗಾಣದ ಗೋದಾವರಿಕಣಿಯ ಸಿಂಗರೇಣಿ ಕಲ್ಲಿದ್ದಲು ಗಣಿಯ ಹಿನ್ನಲೆಯಲ್ಲಿ ಸಿನಿಮಾ ಮೂಡಿ ಬಂದಿದೆ. ಈ ಬಗ್ಗೆ ಸ್ವತಃ ನಾನಿ ಕೂಡ ವಿವರಿಸಿದ್ದಾರೆ. ಪಕ್ಕ ಹಳ್ಳಿನಗಾಡಿನ ರಾ ಸಿನಿಮಾ ಎಂದು ಹೇಳಿದ್ದಾರೆ.
Keerthy Suresh; ಸಖತ್ ಹಾಟಾಗಿ ಹೊಸ ವರ್ಷ ಆಚರಿಸಿದ 'ಮಹಾನಟಿ'; ಫ್ಯಾನ್ಸ್ ಹೇಳಿದ್ದೇನು?
ಈ ಬ್ಗಗೆ ಮಾತನಾಡಿದ್ದ ನಾನಿ 'ಕಳೆದ ವರ್ಷ ತೆಲುಗು ಚಿತ್ರರಂಗದಿಂದ RRR ಬಂದಿತ್ತು. ಕೆಜಿಎಫ್ ಮತ್ತು ಕಾಂತಾರ ಕನ್ನಡ ಚಿತ್ರರಂಗದಿಂದ ಬಂದವು. 2023 ರಲ್ಲಿ ತೆಲುಗು ಚಿತ್ರರಂಗದಿಂದ ದಸರಾ ಬರಲಿದೆ ಎಂದು ನಾನು ಆತ್ಮವಿಶ್ವಾಸದಿಂದ ಮತ್ತು ಹೆಮ್ಮೆಯಿಂದ ಹೇಳಬಲ್ಲೆ' ಎಂದು ಹೇಳಿದರು. ದಸರಾ ಸಿನಿಮಾ ತೆಲುಗು ಜೊತೆಗೆ ತಮಿಳು, ಮಲಯಾಳಂ ಮತ್ತು ಕನ್ನಡ ಹಾಗೂ ಹಿಂದಿಯಲ್ಲಿ ರಿಲೀಸ್ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.