ನಂದೇ ವಿಡಿಯೋ ಇರ್ಬಹುದಾ? ರೈಲು ನಿಲ್ದಾಣದಲ್ಲಿ ಅಶ್ಲೀಲ ಚಿತ್ರ ಪ್ರಸಾರ ಬಳಿಕ ಪೋರ್ನ್ ಸ್ಟಾರ್ ರಿಯಾಕ್ಷನ್ ವೈರಲ್

By Shruthi KrishnaFirst Published Mar 22, 2023, 4:12 PM IST
Highlights

ನಂದೇ ವಿಡಿಯೋ ಇರ್ಬಹುದಾ ಎಂದು ರೈಲು ನಿಲ್ದಾಣದಲ್ಲಿ ಅಶ್ಲೀಲ ಚಿತ್ರ ಪ್ರಸಾರ ಬಳಿಕ ಪೋರ್ನ್ ಸ್ಟಾರ್  ಕೇಂದ್ರ ಲಸ್ಟ್ ಪ್ರತಿಕ್ರಿಯೆ ನೀಡಿದ್ದಾರೆ. 

ಬಿಹಾರದ ಪಾಟ್ನಾ ರೈಲು ನಿಲ್ದಾಣದಲ್ಲಿ ಇತ್ತೀಚೆಗೆ ಮುಜುಗರಕ್ಕೆ ಇಡಾಗುವಂತ ಪ್ರಸಂಗ ಜರುಗಿತ್ತು. ರೈಲು ನಿಲ್ದಾಣದ ಟಿವಿಯಲ್ಲಿ ಅಚಾನಕ್ಕಾಗಿ ಅಶ್ಲೀಲ ಸಿನಿಮಾ ಪ್ರಸಾರವಾಗಿತ್ತು. ಟಿವಿಯಲ್ಲಿ ಬರ್ತಿದ್ದ ನೀಲಿ ಚಿತ್ರ ನೋಡಿ ಪ್ರಯಾಣಿಕರು ಒಮ್ಮೆ ತಬ್ಬಿಬ್ಬಾಗಿದ್ದರು. ಅನೇಕರು ಅಲ್ಲಿಂದ ಓಟ ಕಿತ್ತಿದ್ದರು. ಅಲ್ಲಿದ್ದವರು ಮುಜುಗರಕ್ಕೊಳಗಾಗಿದ್ದರು. ಸುಮಾರು 3-4 ನಿಮಿಷ ಅಶ್ಲೀಲ ವಿಡಿಯೋ ಪ್ರಸಾರವಾಗಿತ್ತು. ಇದು ರೈಲ್ವೆ ಇಲಾಖೆಯ ಬೇಜವಾಬ್ದಾರಿ ಎಂದು ಅನೇಕರು ಕಿಡಿ ಕಾರಿದ್ದರು. ಆದರೆ ಈ ಘಟನೆ ಸಂಭವಿಸಿ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯಿತು. ಟ್ರೋಲ್ ಮತ್ತು ಮೀಮ್‌ಗಳಿಂದ ಸಾಮಾಜಿಕ ಜಾಲತಾಣ ತುಂಬಿ ಹೋಗಿತ್ತು. 

ಜಾಹೀರಾತು ತೋರಬೇಕಾಗಿದ್ದ ಸಮಯದಲ್ಲಿ ನೀಲಿ ಸಿನಿಮಾ ಪ್ರದರ್ಶಿಸಿ ಸುಮಾರು 4 ನಿಮಿಷಗಳ ಮಟ್ಟಿಗೆ ದೊಡ್ಡ ಆಚಾತುರ್ಯವೇ ನಡೆದು ಹೋಗಿತ್ತು. ಆ ವಿಡಿಯೋವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಯಿತು. ಈ ಘಟನೆ ವಿರುದ್ಧ ತೀವ್ರ ಆಕ್ರೋಶ ಕೂಡ ವ್ಯಕ್ತವಾಯಿತು. ಈ ಘಟನೆ ಭಾರತದಲ್ಲಿ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಘಟನೆ ಪೋರ್ನ್ ಸ್ಟಾರ್‌ಗ ಗಮನಕ್ಕೂ ಬಂದಿದೆ.    

ವಿಡಿಯೋ ವೈರಲ್ ಆದ ಬೆನ್ನಲ್ಲೇ ಖ್ಯಾತ ಪೋರ್ನ್ ಸ್ಟಾರ್ ಕೆಂದ್ರಾ ಲಸ್ಟ್ ಹಾಟ್ ಫೋಟೋ ಶೇರ್ ಮಾಡಿ 'ಇಂಡಿಯಾ' ಎಂದು ಕ್ಯಾಪ್ಷನ್ ನೀಡಿದ್ದರು. ಜೊತೆಗೆ  ಬಿಹಾರ್ ರೈಲ್ವೇ ಸ್ಟೇಷನ್ ಎಂದು ಹ್ಯಾಶ್ ಟ್ಯಾಗ್ ಕೂಡ ಹಾಕಿದ್ದರು. ಕೆಂದ್ರಾ ಲಸ್ಟ್ ಪೋಸ್ಟ್ ಗಮನಿಸಿದ ನೆಟ್ಟಿಗರು, ಈ ವಿಡಿಯೋ ನೋಡಿದ್ರಾ, ಅದರಲ್ಲಿ ಇರುವುದು ನೀವೆ ತಾನೆ?' ಎಂದು ಪ್ರಶ್ನೆ ಮಾಡಿದ್ದಾರೆ. ನೆಟ್ಟಿಗರ ಪ್ರಶ್ನೆಗೆ ಉತ್ತರ ನೀಡಿರುವ ಕೇಂದ್ರ ಲಸ್ಟ್, ನನ್ನದೇ ಇರಬೇಕೆಂದು ಭಾವಿಸುತ್ತೇನೆ' ಎಂದು ಹೇಳಿದ್ದಾರೆ.

India 🇮🇳 pic.twitter.com/R2Mxfbfarc

— Kendra Lust™ (@KendraLust)

ರೈಲು ನಿಲ್ದಾಣದಲ್ಲಿ 3 ನಿಮಿಷ ಪೋರ್ನ್‌ ಪ್ಲೇ... ಮಕ್ಕಳ ಕರೆದುಕೊಂಡು ಓಡಿದ ಜನ

ಅಷ್ಟಕ್ಕೆ ಸುಮ್ಮನಾಗದ ನೆಟ್ಟಿಗರು ತಹೇವಾರಿ ಕಾಮೆಂಟ್ ಮಾಡಿ ಕಾಲೆಳೆಯಿತ್ತಿದ್ದಾರೆ. ಮತ್ತೋರ್ವ ನೆಟ್ಟಿಗ ಪ್ರತಿಕ್ರಿಯೆ ನೀಡಿ, ಈ ರೀತಿಯ ಘಟನೆಗಳನ್ನು ತಡೆಯಲು ಹೊಸ ಭದ್ರತಾ ಏಜೆನ್ಸಿಯನ್ನು ನೇಮಿಸಲಾಗಿದೆ' ಎಂದು ಪೋಸ್ಟ್ ಮಾಡಿ ಖ್ಯಾತ ಪೋರ್ನ್ ಸ್ಟಾರ್ ಜಾನಿ ಸಿನ್ ಫೋಟೋವನ್ನು ಹಾಕಿದ್ದಾರೆ.  ಈ ಪೋಸ್ಟ್ ಮತ್ತಷ್ಟು ವೈರಲ್ ಆಗಿದೆ. ಮತ್ತೋರ್ವ ಕಾಮೆಂಟ್ ಮಾಡಿ, 'ಜೀವನದ ಈ ದುಃಖದ ಹಂತದಲ್ಲಿ ನೀವು ನಮಗೆಲ್ಲರಿಗೂ ಅಪಾರ ಆನಂದವನ್ನು ನೀಡಿದ್ದೀರಿ. ತುಂಬು ಹೃದಯದಿಂದ ಧನ್ಯವಾದಗಳು ಕೇಂದ್ರಾ' ಎಂದು ಹೇಳಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶದ ಜೊತೆಗೆ ತಮಾಷೆಯ ಪ್ರಸಂಗಗಳು ನಡೆಯುತ್ತಿವೆ. ಆದರೆ ರೈಲ್ವೇ ಇಲಾಖೆ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಎಚ್ಚೆತ್ತ ಭಾರತೀಯ ರೈಲ್ವೇ ಇಲಾಖೆ, ರೈಲು ನಿಲ್ದಾಣದಲ್ಲಿ ಟಿವಿ ಜಾಹೀರಾತು ಪ್ರಸಾರ ಮಾಡುವ ಜವಾಬ್ದಾರಿ ಹೊತ್ತ ಏಜೆನ್ಸಿ ಜೊತೆಗಿನ ಒಪ್ಪಂದ ರದ್ದು ಮಾಡಿದೆ. ಈ ಕೃತ್ಯ ಖಂಡನೀಯ ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಹೇಳಿಕೆ ನೀಡಿದೆ.   

  

click me!