KGF 2 ಇಂಡಿಯನ್ ಸಿನಿಮಾ, ಒಂದು ಭಾಷೆಗೆ ಸೀಮಿತ ಮಾಡ್ಬೇಡಿ ಅಂದ್ರು ರಾಕಿಂಗ್ ಸ್ಟಾರ್ Yash

Published : Apr 09, 2022, 02:40 PM IST
KGF 2 ಇಂಡಿಯನ್ ಸಿನಿಮಾ, ಒಂದು ಭಾಷೆಗೆ ಸೀಮಿತ ಮಾಡ್ಬೇಡಿ ಅಂದ್ರು ರಾಕಿಂಗ್ ಸ್ಟಾರ್ Yash

ಸಾರಾಂಶ

KGF Chapter 2 Release:  ಕೆಜಿಎಫ್ 2 ಏಪ್ರಿಲ್ 14ರಂದು ತೆರೆಗೆ ಅಪ್ಪಳಿಸಲಿದೆ. 2 ಗಂಟೆ 48 ನಿಮಿಷಗಳ ಚಿತ್ರವಿದು. ಭಾರತ ಮಾತ್ರ ಅಲ್ಲ ಇಂಟರ್‌ನ್ಯಾಶನಲ್ ಲೆವೆಲ್‌ನಲ್ಲೂ ಈ ಸಿನಿಮಾ ಸದ್ದು ಮಾಡ್ತಿದೆ. ರಾಜ್ಯದ ಕೆಲವೆಡೆ ಇದೀಗ ಕೆಜಿಎಫ್ ನ ಮೊದಲ ಭಾಗದ ಪ್ರದರ್ಶನ ನಡೆಯುತ್ತಿದೆ.

ಯಶ್ (Yash) ನಟಿಸಿರೋ ಕೆಜಿಎಫ್ 2 (KGF 2) ಚಿತ್ರದ ಹವಾ ದೇಶಾದ್ಯಂತ ವ್ಯಾಪಿಸಿದೆ. ಯಾವ ನ್ಯಾಶನಲ್ ಮೀಡಿಯಾ ನೋಡಿದರೂ ಅದರಲ್ಲಿ ಯಶ್ (Rocking Star Yash) ಸಂದರ್ಶನ ಹೈಪ್‌ ಸೃಷ್ಟಿಸುತ್ತಿದೆ. ಕಳೆದ ಒಂದು ವಾರದಲ್ಲಿ ಯಶ್ ಹಾಗೂ ಟೀಮ್ ಕೆಜಿಎಫ್ 2 ದೇಶಾದ್ಯಂತ ಸಂಚಾರ ಮಾಡಿದೆ. ಇದ್ದಬದ್ದ ನ್ಯಾಶನಲ್ ಮೀಡಿಯಾಗಳಿಗೆಲ್ಲ ಸಂದರ್ಶನ ನೀಡಿದೆ. ಅದ್ದೂರಿ ಚಿತ್ರಗಳಿಗೆ ಮತ್ತೊಂದು ಹೆಸರಿನಂತೆ ಇದ್ದದ್ದು ತೆಲುಗು ಸಿನಿಮಾ ಇಂಡಸ್ಟ್ರಿ. ಆ ಭಾಷೆಯ ಸ್ಟಾರ್‌ಗಳು ಸಿನಿಮಾ ಪ್ರಮೋಶನ್‌ ಲಕ್ಸುರಿ ಪ್ರೈವೇಟ್ ಜೆಟ್ ನಲ್ಲಿ ಓಡಾಡೋದೇನು, ಪ್ರಚಾರಕ್ಕೆ ಕೋಟ್ಯಂತರ ರೂಪಾಯಿ ಸುರಿಯೋದೇನು... ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ದುಡ್ಡಿದೆ, ಇಂಥವೆಲ್ಲ ಅವರಿಗಷ್ಟೇ ಸಾಧ್ಯ ಅಂತ ಈವರೆಗೆ ಜನ ಅಂದುಕೊಂಡಿದ್ದರು. ಆದರೆ ಕನ್ನಡ ಚಿತ್ರವೊಂದು ಅದ್ದೂರಿತನದಲ್ಲಿ ತೆಲುಗು ಇಂಡಸ್ಟ್ರಿಯನ್ನೂ ಮೀರಿಸಬಹುದು ಅನ್ನೋದು ಕೆಲವು ವರ್ಷಗಳಿಗೆ ಮೊದಲು ಊಹಿಸೋದಕ್ಕೂ ಆಗದ ವಿಚಾರ. ಆದರೆ ಸದ್ಯಕ್ಕೆ ಕೆಜಿಎಫ್ ೨ ಟೀಮ್ ನಮ್ ಸಿನಿಮಾಕ್ಕೆ ಆ ಕೆಪ್ಯಾಸಿಟಿ ಇದೆ ಅಂತ ಸಾರಿ ಹೇಳಿದೆ. 

ರಾಮ್ ಗೋಪಾಲ್ ವರ್ಮಾ Dangerous cinema ಪೋಸ್ಟ್‌ಪೋನ್‌, ಅತಿ ಪ್ರಚೋದಕತೆ ಇದಕ್ಕೆ ಕಾರಣವಾ?

ಕಳೆದೊಂದು ವಾರದಿಂದ ಕೆಜಿಎಫ್‌ 2 ಚಿತ್ರತಂಡ ದೇಶದ ಮಹಾನಗರಗಳಿಗೆ ವಿಸಿಟ್‌ ಮಾಡುತ್ತಿದೆ. ಐಷಾರಾಮಿ ಪ್ರೈವೇಟ್ ಜೆಟ್‌ಗಳಲ್ಲಿ ಓಡಾಟ, ಟಾಪ್ ಹೊಟೇಲ್‌ಗಳಲ್ಲಿ ಸುದ್ದಿಗೋಷ್ಟಿ ನಡೆಸುತ್ತಿದೆ. ನ್ಯಾಶನಲ್ ಮೀಡಿಯಾಗಳು ಕನ್ನಡ ಸ್ಟಾರ್ ನಟ, ನಿರ್ದೇಶಕರ ಸಂದರ್ಶನಕ್ಕೆ ಮುಗಿ ಬೀಳ್ತಿದ್ದಾರೆ. ಕನ್ನಡ ಮೂಲದ ಚಿತ್ರವೊಂದು ಈ ಲೆವೆಲ್‌ನ ಹೈಪ್ ಕ್ರಿಯೇಟ್‌ ಮಾಡಿದ್ದು ಈ ಕಾಲದಲ್ಲಿ ಇದೇ ಮೊದಲು. ಕೆಜಿಎಫ್ ಮೊದಲ ಭಾಗ ಮಾಡುವ ಹೊತ್ತಿಗೆ ಇಂಥದ್ದನ್ನೆಲ್ಲ ಚಿತ್ರತಂಡ ಕನಸಿನಲ್ಲೂ ಊಹಿಸಿರಲಿಕ್ಕಿಲ್ಲ. ಆದರೆ ಇದು ಇಂದು ಸಾಧ್ಯವಾಗಿದೆ ಅಂದರೆ ಅದಕ್ಕೆ ಟೀಮ್ ಕೆಜಿಎಫ್ ಸ್ಕ್ರೀನ್ ಮೇಲೆ ಮಾಡಿರೋ ಮ್ಯಾಜಿಕ್ ಕಾರಣ ಅನ್ನೋದನ್ನ ನಿಸ್ಸಂಶಯವಾಗಿ ಹೇಳಬಹುದು.

ಸದ್ಯಕ್ಕೀಗ ಯಶ್ ಅವರ ಮಾತು ನ್ಯಾಶನಲ್ ಮೀಡಿಯಾಗಳ ಟಾಪ್ ಸುದ್ದಿಯ ಸ್ಥಾನ ಆಕ್ರಮಿಸಿಕೊಂಡಿದೆ. ಈ ವೇಳೆ ಕೆಜಿಎಫ್ 2 ಕನ್ನಡ ಸಿನಿಮಾ ಅಂದವರಿಗೆ ಯಶ್ ಬೇರೆ ಥರ ಉತ್ತರ ನೀಡಿದ್ದಾರೆ. ಕೆಜಿಎಫ್ ೨ ವನ್ನು ಒಂದು ಭಾಷೆಗೆ ಒಂದು ಪ್ರಾಂತ್ಯಕ್ಕೆ ಸೀಮಿತ ಮಾಡೋದಕ್ಕಿಂತ ಇದನ್ನು ಇಂಡಿಯನ್ ಸಿನಿಮಾ ಅಂತ ನೋಡೋದೇ ಹೆಚ್ಚು ಸೂಕ್ತ ಅಂತ ಅನಿಸುತ್ತೆ. ಸಿನಿಮಾವೇ ಒಂದು ಭಾಷೆ. ಸಿನಿಮಾಕ್ಕೆ ಭಾಷೆಯ ಗಡಿ ಹಾಕಿ ಸೀಮಿತ ಮಾಡೋದರಲ್ಲಿ ಅರ್ಥ ಇಲ್ಲ ಅನ್ನೋ ಥರದ ಮಾತುಗಳನ್ನಾಡಿದ್ದಾರೆ. ಈ ಮೂಲಕ ಕೆಜಿಎಫ್ ೨ವನ್ನು ಒಂದು ಭಾಷೆಯ ಸಿನಿಮಾ ಅಂತ ನೋಡಬೇಡಿ, ಇದನ್ನು ಭಾರತೀಯ ಸಿನಿಮಾ ಅಂತ ನೋಡಿ ಅಂದಿದ್ದಾರೆ.

'KGF 2'; ಹಿಂದಿಯಲ್ಲಿ 12 ಗಂಟೆಯಲ್ಲಿ 1 ಲಕ್ಷಕ್ಕೂ ಅಧಿಕ ಟಿಕೆಟ್ ಸೋಲ್ಡ್ ಔಟ್

'ದಕ್ಷಿಣ, ಉತ್ತರ ಅನ್ನೋದೆಲ್ಲ ಬರೀ ದಿಕ್ಕುಗಳು ಮಾತ್ರ. ಸಿನಿಮಾವನ್ನು ಭಾಷೆ ಅಥವಾ ರಾಜ್ಯದ ಆಧಾರದಲ್ಲಿ ಡಿವೈಡ್ ಮಾಡಿ ನೋಡೋದು ಹಳೇ ಕಾಂಸೆಪ್ಟ್. ಇದನ್ನು ಯಾವುದೋ ವುಡ್, ಯಾವುದೋ ಭಾಷೆ ಅನ್ನೋದಕ್ಕಿಂತ ನಮ್ಮ ಭಾರತೀಯ ಸಿನಿಮಾ ಅಂತ ನೋಡಬೇಕು. ಜನರಿಗೆ ಈಗ ಮನರಂಜನೆ ಬೇಕು. ಅದು ಯಾವ ವುಡ್ ನಿಂದ ದೇಶದ ಯಾವ ಭಾಗದಿಂದ ಬಂದರೂ ಓಕೆ, ಜನ ಅದನ್ನು ಒಪ್ಪಿಕೊಳ್ಳುತ್ತಾರೆ. ಈ ಸ್ಯಾಂಡಲ್‌ವುಡ್, ಕಾಲಿವುಡ್, ಬಾಲಿವುಡ್ ಅನ್ನೋದೆಲ್ಲ ಸಿನಿಮಾ ಇಂಡಸ್ಟ್ರಿಯ ಭಾಷೆ ಅಷ್ಟೇ. ಜನ ಬಹಳ ಮುಂದೆ ಹೋಗಿದ್ದಾರೆ. ನಾನೇ ಆದರೂ ಒಬ್ಬ ವೀಕ್ಷಕನಾಗಿ ಸಿನಿಮಾ ಹಿಂದಿಯದ್ದೋ, ತಮಿಳಿನದ್ದೋ ಅಂತ ನೋಡೋದಿಲ್ಲ. ಒಂದೊಳ್ಳೆ ಸಿನಿಮಾ ಅಂತ ನೋಡ್ತೇನೆ. ನಾವೆಲ್ಲ ಈ ವುಡ್ ಗೆ ಚಿತ್ರಗಳನ್ನು ಸೀಮಿತ ಮಾಡೋದನ್ನು ಬಿಟ್ಟು ಭಾರತೀಯ ಚಿತ್ರರಂಗದ ಸಿನಿಮಾ ಅಂತ ಚಿತ್ರಗಳನ್ನು ನೋಡಬೇಕು' ಅಂದಿದ್ದಾರೆ. 

ಕೆಜಿಎಫ್ 2 ಏಪ್ರಿಲ್ 14ರಂದು ತೆರೆಗೆ ಅಪ್ಪಳಿಸಲಿದೆ. 2 ಗಂಟೆ 48 ನಿಮಿಷಗಳ ಚಿತ್ರವಿದು. ಭಾರತ ಮಾತ್ರ ಅಲ್ಲ ಇಂಟರ್‌ನ್ಯಾಶನಲ್ ಲೆವೆಲ್‌ನಲ್ಲೂ ಈ ಸಿನಿಮಾ ಸದ್ದು ಮಾಡ್ತಿದೆ. ರಾಜ್ಯದ ಕೆಲವೆಡೆ ಇದೀಗ ಕೆಜಿಎಫ್ ನ ಮೊದಲ ಭಾಗದ ಪ್ರದರ್ಶನ ನಡೆಯುತ್ತಿದೆ. ಅಮೆರಿಕಾದಲ್ಲಿ ಈ ಸಿನಿಮಾ ಏ.13ಕ್ಕೇ ರಿಲೀಸ್ ಆಗುತ್ತೆ. ಗ್ರೀಸ್‌ನಲ್ಲಿ ತೆರೆ ಕಾಣ್ತಿರೋ ಮೊದಲ ಭಾರತೀಯ ಚಿತ್ರ ಅನ್ನೋ ಹೆಗ್ಗಳಿಕೆಗೂ ಕೆಜಿಎಫ್ 2 ಪಾತ್ರವಾಗಿದೆ. ಈ ಸಿನಿಮಾದ ಜೊತೆಗೆ ಈ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ (Prashant Neel) ನಿರ್ದೇಶನದ ಇನ್ನೊಂದು ಸಿನಿಮಾ 'ಸಲಾರ್'ನ (Salar) ಟ್ರೇಲರ್ ಲಾಂಚ್ ಆಗಲಿದೆ. ಒಟ್ಟಾರೆ ಇನ್ನು ೫ ದಿನ ಕಳೆದರೆ ದೇಶಾದ್ಯಂತ ರಾಕಿ ಬಾಯ್ ಯದೇ ಹವಾ.

'KGF 2' ನಟಿಯ 'ಮ್ಯೂಟ್' ಸಿನಿಮಾಗೆ ಸಾಥ್ ನೀಡಿದ ಬಾಲಿವುಡ್ ಬೆಡಗಿ ರವೀನಾ ಟಂಡನ್
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?