ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಅವಳಿ ಮಕ್ಕಳ ತಾಯಿ ಯಾರು? ಹಲವರ ಕಾಡುತ್ತಿರೋ ಪ್ರಶ್ನೆಗೆ ಅವರು ಕೊಟ್ಟ ಉತ್ತರ ಕೇಳಿ...
ಬಾಲಿವುಡ್‌ನ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ಅವರಿಗೆ ಈಗ 52 ವರ್ಷ ವಯಸ್ಸು. ಅವರು ಇನ್ನೂ ಮದುವೆಯಾಗಿಲ್ಲ. ಆದರೆ ಅವರು ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಬಾಡಿಗೆ ತಾಯಿ ಮೂಲಕ ಅವರು ಅವಳಿ ಮಕ್ಕಳನ್ನು ಪಡೆದು ಸಾಕುತ್ತಿರುವ ಕರಣ್ ಅವರು ಸಲಿಂಗಕಾಮಿ ಎನ್ನುವ ಮಾತೂ ಇದೆ. ತಮ್ಮ ಕರಣ್ ಷೋನಲ್ಲಿಯೂ ಇವರು ಹೆಚ್ಚಾಗಿ ಸೆಕ್ಸ್ ಕುರಿತೇ ಮಾತನಾಡುತ್ತಿರುತ್ತಾರೆ. ಅದಕ್ಕಾಗಿ ಅವರಿಗೆ ಸಲಿಂಗ ಕಾಮಿಯೇ ಎನ್ನುವ ಪ್ರಶ್ನೆ ಪದೇ ಪದೇ ಎದುರಾಗುತ್ತಲೇ ಇರುತ್ತದೆ. ಕೆಲವು ತಿಂಗಳ ಹಿಂದೆ ಅವರಿಗೆ ನೆಟ್ಟಿಗರೊಬ್ಬರು ನೇರಾನೇರವಾಗಿ ನೀವು ಸಲಿಂಗ ಕಾಮಿಯೇ ಎಂದು ಪ್ರಶ್ನಿಸಿದ್ದರು. ಅದಕ್ಕೆ ಕರಣ್, ‘ನಿಮಗೆ ಆಸಕ್ತಿ ಇದೆಯೇ’ ಮರುಪ್ರಶ್ನೆ ಹಾಕುವ ಮೂಲಕ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದರು. ಆಗಿನಿಂದಲೂ ಇವರು ಸಲಿಂಗಕಾಮಿ ಎನ್ನುವ ಮಾತು ಮತ್ತಷ್ಟು ಕೇಳಿಬರುತ್ತಿದೆ. ಅದೇನೇ ಇದ್ದರೂ ಅವರು ಈಗ ಎರಡು ಮಕ್ಕಳ ತಂದೆಯಾಗಿದ್ದಾರೆ. ಆದರೆ ಆ ಮಕ್ಕಳಿಗೆ ತಾಯಿ ಯಾರು ಎನ್ನುವುದೇ ಎಲ್ಲರ ಪ್ರಶ್ನೆ.
ಅಷ್ಟಕ್ಕೂ ಕರಣ್ ಅವರು ಬಾಡಿಗೆ ತಾಯ್ತನದ ಮೂಲಕ ಇಬ್ಬರು ಅವಳಿ ಮಕ್ಕಳನ್ನು ಪಡೆದುಕೊಂಡಿದ್ದಾರೆ. ಸಾಮಾನ್ಯವಾಗಿ ನಟಿಯರು ಹೀಗೆ ಮಾಡುತ್ತಾರೆ. ಇಂಥ ಸಂದರ್ಭಗಳಲ್ಲಿ ಆ ಮಗುವನ್ನು ಹೆತ್ತವರು ಯಾರು ಎಂಬ ಬಗ್ಗೆ ತಿಳಿಯುವುದಿಲ್ಲ. ಹೀಗೆ ಹೇಳುವುದು ಅಪರಾಧ ಕೂಡ. ಆ ಮಹಿಳೆಯ ಹೆಸರನ್ನು ಗೌಪ್ಯವಾಗಿಯೇ ಇಡಲಾಗುತ್ತದೆ. ಆದರೆ ಕರಣ್ ಜೋಹರ್ ಅವರಿಗೆ ಮಾತ್ರ ಪದೇ ಪದೇ ಈ ಪ್ರಶ್ನೆ ಎದುರಾಗುತ್ತದೆ. ಅಂದಹಾಗೆ, ಇವರು 2017 ರಲ್ಲಿ ಯಶ್ ಮತ್ತು ರೂಹಿ ಎಂಬ ಮುದ್ದಾದ ಮಕ್ಕಳ ತಂದೆಯಾಗಿದ್ದಾರೆ. ತಾಯಿ ಯಾರು ಎಂಬ ಪ್ರಶ್ನೆ ಪ್ರತಿಬಾರಿ ಎದುರಾದಗೂ ಏನೂ ಹೇಳದ ಕರಣ್ ಅವರು ಈ ಬಾರಿ ತಮ್ಮದೇ ಆದ ಶೈಲಿಯಲ್ಲಿ ಅದನ್ನು ಹೇಳಿದ್ದಾರೆ.
ನನ್ನ ದೇಹ ನೀವು ನೋಡಿದ್ರೆ... ಸಲಿಂಗಕಾಮಿ ಮಾತಿನ ನಡುವೆಯೇ ಕರಣ್ ಜೋಹರ್ ಓಪನ್ ಮಾತು...
ಅಷ್ಟಕ್ಕೂ, ಇವರ ಇಬ್ಬರು ಮಕ್ಕಳ ಜೊತೆಗಿನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರ ಮಗಳು ರೂಹಿ ಮೊಬೈಲ್ ಫೋನ್ನಲ್ಲಿ 'ಸಿರಿ' ಹಾಡನ್ನು ಹಾಡಲು ಕೇಳುತ್ತಾಳೆ. ಆಕೆಯ ಈ ತಮಾಷೆಯ ವಿಡಿಯೋಗೆ ಹಲವು ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ. ನಟಿ ನೀಲಂ ಕೊಠಾರಿ, ಆಯುಷ್ಮಾನ್ ಖುರಾನಾ, ಸಬಾ ಪಟೌಡಿ ಮುಂತಾದ ಸೆಲೆಬ್ರಿಟಿಗಳು ರೂಹಿಯನ್ನು ಹೊಗಳಿದ್ದಾರೆ. ಆದರೆ ಕೆಲವು ನೆಟ್ಟಿಗರು ಈಕೆಯ ತಾಯಿ ಯಾರು ಎಂದು ಕೇಳಿದ್ದದಾರೆ. ನನಗೆ ತುಂಬಾ ಗೊಂದಲವಿದೆ. ದಯವಿಟ್ಟು ಹೇಳಿ ಎಂದಿದ್ದಾರೆ. ಅದಕ್ಕೆ ಕರಣ್, 'ನಾನು. ನಿಮ್ಮ ಗೊಂದಲದ ಬಗ್ಗೆ ಆಳವಾಗಿ ಚಿಂತಿಸುತ್ತಿದ್ದೇನೆ. ನಿಮ್ಮ ಈ ಪ್ರಶ್ನೆಗೆ ಅಷ್ಟೇ ಒತ್ತಾಯಪೂರ್ವಕವಾಗಿ ಉತ್ತರಿಸುತ್ತಿದ್ದೇನೆ ಎಂದು ಹೇಳುತ್ತಲೇ ರೂಹಿಯ ತಂದೆ ತಾಯಿ ಎರಡೂ ನಾನೇ ಎಂದು ರಿಪ್ಲೈ ಮಾಡಿದ್ದಾರೆ. ಅಲ್ಲಿಗೆ ತಾಯಿಯ ಗುಟ್ಟು ಬಿಟ್ಟುಕೊಟ್ಟಿಲ್ಲ. ಈ ಪ್ರಶ್ನೆಗೆ ಕರಣ್ ಸ್ವಲ್ಪ ಗರಂ ಆಗಿರುವಂತೆ ಕಂಡಿದೆ. ಮಕ್ಕಳು ಎಂದರೆ ಮಕ್ಕಳು ಅಷ್ಟೇ. ಇಂಥ ಪ್ರಶ್ನೆ ಪದೇ ಪದೇ ಕೇಳಬೇಡಿ ಎಂದಿದ್ದಾರೆ.
ಹಾಗೆಂದು ಕರಣ್ ಅವರಿಗೆ ಜನರಿಂದ ಮಾತ್ರವಲ್ಲದೇ ಖುದ್ದು ಮಕ್ಕಳಿಂದಲೂ ಈ ಪ್ರಶ್ನೆ ಎದುರಾಗಿದ್ದು ಇದೆ. ಈ ಬಗ್ಗೆ ಹಿಂದೊಮ್ಮೆ ಸಂದರ್ಶನದಲ್ಲಿ ಅವರೇ ಹೇಳಿಕೊಂಡಿದ್ದರು. ಮಕ್ಕಳು ತಮ್ಮ ತಾಯಿ ಮತ್ತು ಹುಟ್ಟಿನ ಬಗ್ಗೆ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದ್ದಾರೆ. ಮಕ್ಕಳ ಈ ಪ್ರಶ್ನೆಗಳಿಗೆ ಉತ್ತರಿಸಲು ಅಗತ್ಯ ಮಾರ್ಗದರ್ಶನವನ್ನೂ ತೆಗೆದುಕೊಳ್ಳಬೇಕು ಎಂದಿದ್ದರು. ‘ನಮ್ಮದು ಆಧುನಿಕ ಕುಟುಂಬ. ಇದೊಂದು ವಿಚಿತ್ರ ಸನ್ನಿವೇಶ. ಹಾಗಾಗಿ ಮಕ್ಕಳಿಂದ ನಾನಾ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ನಾವು ಯಾರ ಹೊಟ್ಟೆಯಲ್ಲಿ ಹುಟ್ಟಿದ್ದೇವೆ ಎಂದು ಪ್ರಶ್ನಿಸುತ್ತಾರೆ. ಸದ್ಯ ಅವರನ್ನು ನನ್ನ ಅಮ್ಮ ನೋಡಿಕೊಳ್ಳುತ್ತಿದ್ದಾರೆ. ಆದರೆ ಅವರು ನನ್ನ ಮಕ್ಕಳಿಗೆ ಅಜ್ಜಿ. ಆದ್ದರಿಂದ ನಮಗೆ ಅಮ್ಮ ಯಾರು ಎಂಬ ಪ್ರಶ್ನೆಗೆ ಉತ್ತರ ಬೇಕು ಎನ್ನುತ್ತಿದ್ದಾರೆ ಎಂದಿದ್ದರು. ಅವರಿಗೆ ಹೇಗೆ ಸಮಾಧಾನ ಹೇಳಬೇಕು ಗೊತ್ತಾಗುವುದಿಲ್ಲ. ನಾನೇ ಕೌನ್ಸೆಲಿಂಗ್ ಹೋಗುತ್ತಿದ್ದೇನೆ. ಪೋಷಕರಾಗಿರುವುದು ಎಂದಿಗೂ ಸುಲಭವಲ್ಲ ಎಂದಿದ್ದರು.
ತುಪ್ಪದ ಬೆಡಗಿ ರಾಗಿಣಿಗೆ ಮದ್ವೆ ಯಾವಾಗ? ಓಪನ್ನಾಗಿ ಮನದಾಳದ ಮಾತು ತೆರೆದಿಟ್ಟ ನಟಿ ಹೇಳಿದ್ದೇನು ನೋಡಿ...