ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಫಿಟ್ನೆಸ್ ಪ್ರೀತಿ ಎಲ್ಲರಿಗೂ ತಿಳಿದಿದೆ. ಅದೇ ಕಾರಣಕ್ಕೆ ನಿರ್ದೇಶಕಿ ಫರ್ಹಾ ಖಾನ್ ಅವರು ಶಿಲ್ಪಾ ಜೊತೆ ವಿಮಾನದಲ್ಲಿ ಕೂರಲು ಹಿಂದೇಟು ಹಾಕಿ ಸೀಟೇ ಬದಲಾಯಿಸಿಕೊಳ್ಳಲು ಮುಂದಾದ ಘಟನೆ ನಡೆದಿದೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ತಮ್ಮ ನೃತ್ಯ, ನಟನೆಗಿಂತ ಹೆಚ್ಚಾಗಿ ಫಿಟ್‌ನೆಸ್ ಕಾರಣಕ್ಕೆ ಇತ್ತೀಚೆಗೆ ಸಾಕಷ್ಟು ಚರ್ಚೆಯಲ್ಲಿರುವ ನಟಿ. ಇತ್ತ ಫರ್ಹಾ ಖಾನ್ ಸರಿ ಉಲ್ಪಾ ಸಿಕ್ಕಿದ್ದೆಲ್ಲಾ ತಿನ್ಬೇಕು ಬಿಂದಾಸ್ ಆಗಿ ಇರ್ಬೇಕು ಎಂಬ ಪಾಲಿಸಿ ನಿರ್ದೇಶಕಿ ಹಾಗೂ ಬಾಲಿವುಡ್‌ನ ಖ್ಯಾತ ಕೋರಿಯೋಗ್ರಾಫರ್ ಆಗಿರುವ ಫರ್ಹಾ ಖಾನ್ ಅವರದ್ದು, ಹೀಗಿರುವಾಗ ಇವರಿಬ್ಬರು ಜೊತೆಗೆ ವಿಮಾನದಲ್ಲಿ ಹೋದ್ರೆ ಹೇಗಿರುತ್ತೆ ಹೇಳಿ... ಸೀಟೇ ಚೇಂಜ್ ಮಾಡಿ ಬಿಡ್ಬೇಕಾಗುತ್ತೆ ಅಂದಿದ್ದಾರೆ ಫರ್ಹಾ ಖಾನ್.
ಬಾಲಿವುಡ್‌ನ ಖ್ಯಾತ ನೃತ್ಯ ನಿರ್ದೇಶಕಿ ಆಗಿರುವ ಫರ್ಹಾ ಖಾನ್ ಅವರು ಸೋಶೀಯಲ್ ಮೀಡಿಯಾದಲ್ಲಿ ಏನಾದರೊಂದು ಟ್ವಿಸ್ಟ್ ಇರುವಂತಹ ರೀಲ್ಸ್ ಶೇರ್ ಮಾಡ್ತಾ ತಮ್ಮ ಅಭಿಮಾನಿಗಳಿಗೆ ಖುಷಿಯ ಜೊತೆ ಹೊಟ್ಟೆ ತುಂಬಾ ನಗು ಉಕ್ಕುವಂತೆ ಮಾಡ್ತಿರ್ತಾರೆ ಫರ್ಹಾ ಖಾನ್. ಹೆಚ್ಚಾಗಿ ಸಿನಿಮಾ ಕೇತ್ರದ ತಮ್ಮ ಸ್ನೇಹಿತರು ಸಹೋದ್ಯೋಗಿಗಳ ಜೊತೆಗಿರುವ ರೀಲ್ಸ್ ಶೇರ್ ಮಾಡುವ ಮೂಲಕ ಫರ್ಹಾ ಅಭಿಮಾನಿಗಳಿಗೆ ಖುಷಿ ನೀಡ್ತಿರ್ತಾರೆ. ಅದೇ ರೀತಿ ಈ ಬಾರಿ ಫರ್ಹಾ ಖಾನ್ ಅವರು ನಟಿ ಶಿಲ್ಪಾ ಶೆಟ್ಟಿ ಜೊತೆಗಿನ ವೀಡಿಯೋವೋಂದನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದು, ಜೊತೆಗೆ ಅಭಿಮಾನಿಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ ಫರ್ಹಾ ಖಾನ್. ಇದಕ್ಕೆ ಶಿಲ್ಪಾ ಶೆಟ್ಟಿ ಪತಿ ಕೂಡ ರಿಯಾಕ್ಟ್ ಮಾಡಿದ್ದು, ಫರ್ಹಾ ಖಾನ್ ನೋವು ನನಗೆ ಅರ್ಥವಾಗುತ್ತಿದೆ ಎಂದು ಹೇಳಿದ್ದಾರೆ.
ಹಾಗಿದ್ರೆ ಫರ್ಹಾ ಖಾನ್ ಶೇರ್ ಮಾಡಿರುವ ವೀಡಿಯೋದಲ್ಲೇನಿದೆ.
ಫಿಟ್ನೆಸ್ ಕ್ವೀನ್ ಶಿಲ್ಪಾ ಶೆಟ್ಟಿ ಹಾಗೂ ಫರ್ಹಾ ಖಾನ್ ಒಂದೇ ಫ್ಲೈಟ್‌ನಲ್ಲಿ ಅಕ್ಕ ಪಕ್ಕ ಕುಳಿತು ಪ್ರಯಾಣ ಮಾಡುತ್ತಿದ್ದು, ಈ ವೇಳೆ ಫರ್ಹಾ ಕ್ಯಾಬಿನ್ ಕ್ರೀವ್ ನೀಡಿದ ಪಾನೀಯವನ್ನು ಸ್ವೀಕರಿಸಲು ಮುಂದಾಗುತ್ತಾರೆ. ಆದರೆ ಫರ್ಹಾ ಅವರತ್ತ ತಿರುಗಿದ ಶಿಲ್ಪಾ ಕೈ ಬೆರಳನ್ನು ತಿರುಗಿಸುತ್ತಾ ನೋ ಎಂಬಂತೆ ಸಿಗ್ನಲ್ ಮಾಡುತ್ತಾರೆ. ಇದೇ ವೇಳೆ ಫರ್ಹಾ ಖಾನ್ ಮೆನುವಿನಲ್ಲಿ ಕೆಲವು ಆಹಾರವನ್ನು ತೆಗೆದುಕೊಳ್ಳಲು ಮುಂದಾಗುತ್ತಾರೆ. ಆದರೆ ಆಗಲೂ ಕೂಡ ಶಿಲ್ಪಾ ಶೆಟ್ಟಿ ಅವರ ರಿಯಾಕ್ಷನ್ ನೋಡಿ ಆಹಾರ ತಿನ್ನಲೋ ಬೇಡವೋ ಎಂಬ ರಿಯಾಕ್ಷನ್ ನೀಡುತ್ತಾರೆ. ವೀಡಿಯೋದ ಕೊನೆಯಲ್ಲಿ ಫರ್ಹಾ, ಶಿಲ್ಪಾ ಶೆಟ್ಟ ಸಮೀಪದಿಂದ ಎದ್ದು ತಾವು ಕುಳಿತ ಸೀಟನ್ನೇ ಬದಲಾಯಿಸುವಂತೆ ಕ್ಯಾಬಿನ್ ಸಿಬ್ಬಂದಿಗೆ ಹೇಳುತ್ತಾರೆ. ಈ ವೇಳೆ ಶಿಲ್ಪಾ ಶೆಟ್ಟಿ ಜೋರಾಗಿ ನಗುತ್ತಾರೆ.
ಆಗರ್ಭ ಶ್ರೀಮಂತ ಉದ್ಯಮಿಗಳನ್ನ ಮದ್ವೆಯಾದ ಬಾಲಿವುಡ್ ಸ್ಟಾರ್ ನಟಿಯರಿವರು…
ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ ಫರ್ಹಾ ಖಾನ್ ವಿಮಾನದಲ್ಲಿ ಶಿಲ್ಪಾ ಶೆಟ್ಟಿ ಜೊತೆ ಯಾವತ್ತೂ ಕುಳಿತುಕೊಳ್ಳಬೇಡಿ, ನಿಮಗೆ ತಿನ್ನುವುದಕ್ಕೆ ಏನೂ ಸಿಗುವುದಿಲ್ಲ, ಆದರೂ ನೀವೇನೂ ಅವಳಂತೆ ಕಾಣಿಸೋಲ್ಲ ಎಂದು ತಮಾಷೆ ಮಾಡಿದ್ದಾರೆ ಫರ್ಹಾ.ಈ ವೀಡಿಯೋಗೆ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಕೂಡ ಕಾಮೆಂಟ್ ಮಾಡಿದ್ದು, ಫರ್ಹಾ ನನಗೆ ನಿಮ್ಮ ಭಾವನೆ ನೋವು ಅರ್ಥ ಆಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಅಭಿಮಾನಿಗಳು ಕೂಡ ಈ ವೀಡಿಯೋಗೆ ನಗುವ ಇಮೋಜಿ ಕಾಮೆಂಟ್ ಮಾಡಿದ್ದಾರೆ. ನೀವು ಸೀಟ್ ಚೇಂಜ್ ಮಾಡುವ ಮೂಲಕ ಒಳ್ಳೆ ಕೆಲಸ ಮಾಡಿದ್ದೀರಿ ಎಂದು ಶಿಲ್ಪಾ ಶೆಟ್ಟಿ ಕಾಮೆಂಟ್ ಮಾಡಿದ್ದಾರೆ. ಫರ್ಹಾ ಖಾನ್ ಇದ್ದಲ್ಲಿ ನಗು ಇಲ್ಲದೇ ಇರೋದಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಫಿಟ್‌ನೆಸ್ ಫ್ರಿಕ್ ಶಿಲ್ಪಾ ಜೊತೆ ತಿಂಡಿಪೋತಿಯೊಬ್ಬರು ಪ್ರಯಾಣ ಮಾಡೋದು ಎಷ್ಟು ಕಷ್ಟ ಎಂಬುದನ್ನು ಫರ್ಹಾ ತೋರಿಸಿಕೊಟ್ಟಿದ್ದಾರೆ.
ಪರ್ಹಾ ಖಾನ್ ಡಾನ್ಸ್ ರಿಯಾಲಿಟಿ ಶೋ ಝಲಕ್ ದಿಕ್ಲಾಜಾ ಸೀಸನ್ 11ರಲ್ಲಿ ಜಡ್ಜ್ ಆಗಿ ಕೆಲಸ ಮಾಡುತ್ತಿದ್ದರು. ಅದು ಮಾರ್ಚ್‌ನಲ್ಲಿ ಕೊನೆಗೊಂಡಿದೆ. ಅಲ್ಲದೇ ಫರ್ಹಾ ಕೆಲವು ಜನಪ್ರಿಯ ಹಾಡುಗಳಿಗೆ ಕೊರಿಯಾಗ್ರಾಫ್ ಮಾಡಿದ್ದಾರೆ.
ಮಧ್ಯರಾತ್ರಿಯ ಸ್ನೇಹಿತ ಯಾರು? ಯಾವ ಆಸನ ಇಷ್ಟ.... ಅಂತೆಲ್ಲಾ ಕೇಳಿದ ಪ್ರಶ್ನೆಗೆ ಶಿಲ್ಪಾ ಕೊಟ್ಟ ಉತ್ತರ ವೈರಲ್