ಇದು ಲಕ್ಷ ಮುತ್ತುಗಳ ಕಥೆ! ಆಲಿಯಾ ಭಟ್​ ದುಬಾರಿ ಡ್ರೆಸ್​ ಹಿಂದೆ ಮೂರು ದೇಶಗಳ ಕೌತುಕ...

By Suchethana D  |  First Published Aug 25, 2024, 4:55 PM IST

ಒಂದು ಲಕ್ಷ ಮುತ್ತುಗಳು ಇರುವ ಬಿಳಿ ಬಣ್ಣದ ಡ್ರೆಸ್​ ನೋಡಿ ನಟಿ ಆಲಿಯಾ ಭಟ್​ ಪುಳುಕಿತರಾಗಿರುವ ವಿಡಿಯೋ ವೈರಲ್​ ಆಗಿದೆ. ಈ ಡ್ರೆಸ್​ ಹಿಂದಿದೆ ಮೂರು ದೇಶಗಳ ಸಮ್ಮಿಳನ! 
 


ಬಾಲಿವುಡ್​ ನಟಿ ಆಲಿಯಾ ಭಟ್​ ಈಗ ಪುಟಾಣಿ ಮಗುವಿನ ಅಮ್ಮ. ತಮ್ಮ ಫ್ಯಾಮಿಲಿ ಲೈಫ್​ ಎಂಜಾಯ್​ ಮಾಡುವ ಜೊತೆಗೆ ನಟಿಗೆ ಬಾಲಿವುಡ್​​ನಲ್ಲಿಯೂ ಸಕತ್​ ಬೇಡಿಕೆ ಇದೆ. ಸಾಮಾನ್ಯವಾಗಿ ಮದುವೆಯಾಗಿ, ಮಕ್ಕಳಾದ ಮೇಲೆ ನಟಿಯರ ಬೇಡಿಕೆ ಕುಂದುತ್ತದೆ. ಆದರೆ ಆಲಿಯಾ ವಿಷಯದಲ್ಲಿ ಹಾಗಾಗಲಿಲ್ಲ. ಇನ್ನೂ ಸಕತ್​ ಬೇಡಿಕೆ ಕುದುರಿಸಿಕೊಳ್ತನೇ ಇದ್ದಾರೆ ಈ ನಟಿ. ಇನ್ನು ನಟಿಯರ ಫ್ಯಾಷನ್​ ವಿಷಯಕ್ಕೆ ಬರುವುದಕ್ಕಾಗಿ ಇವರ ಒಂದೇ ಒಂದು ಡ್ರೆಸ್​ ಬೆಲೆ ಕೋಟಿಗಳಲ್ಲಿ ಇದ್ದರೂ ಅಚ್ಚರಿ ಏನಿಲ್ಲ ಬಿಡಿ. ಸೆಲೆಬ್ರಿಟಿಗಳ ಲೈಫೇ ಹಾಗಲ್ವಾ? ನೂರು, ಸಾವಿರಗಳ ಮಾತೇ ಇಲ್ಲ. ಲಕ್ಷ ಕೂಡ ಎಷ್ಟೋ ವೇಳೆ ಅಲಕ್ಷ್ಯ. ಅವರ ಮಾತು ಏನಿದ್ದರೂ ಕೋಟಿಗಳಲ್ಲಿ. ಆದರೆ ಇಲ್ಲಿ ಹೇಳ್ತಿರೋದು ಆಲಿಯಾ ಭಟ್​ ಅವರ ಲಕ್ಷ ಮುತ್ತುಗಳು ಇರುವ  ಡ್ರೆಸ್​ ಕುರಿತು.

ಮೇಲಿನಿಂದ ಕೆಳಗಿನವರೆಗೂ ಮುತ್ತುಗಳಿಂದಲೇ ಡಿಸೈನ್​ ಮಾಡಿರುವ ಡ್ರೆಸ್​ ಇದು. ಇದನ್ನು ಫ್ಯಾಷನ್​ ಡಿಸೈನರ್​ ಫ್ಯಾಷನ್‌ ಡಿಸೈನರ್‌ ಪ್ರಬಲ್‌ ಗುರುಂಗ್‌ ಆಲಿಯಾ ಭಟ್​ಗೆ ತೋರಿಸಿದಾಗ, ಅದನ್ನು ನೋಡಿ ನಟಿ ಪುಳಕಿತರಾಗಿರುವ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಆಗ ಫ್ಯಾಷನ್​ ಡಿಸೈನರ್​ ಇದಕ್ಕೆ ಸಾವಿರ ನೂರು ರೂಪಾಯಿ, ಅಂದರೆ ಒಂದು ಲಕ್ಷ ರೂಪಾಯಿ ಎಂದಿದ್ದಾರೆ. ಎಂಬ್ರಾಯ್ಡರಿಯನ್ನು ಭಾರತದಲ್ಲಿ ಮಾಡಲಾಗಿದೆ. ಫ್ರಾನ್ಸ್​ನ ಫ್ಯಾಬ್ರಿಕ್​ ಮತ್ತು ಮೇಡ್​ ಇನ್ ನ್ಯೂಯಾರ್ಕ್​ ಎಂದಿದ್ದಾರೆ. ಅಂದರೆ ಈ ಡ್ರೆಸ್​ನ ಹಿಂದೆ ಇಷ್ಟೆಲ್ಲಾ ದೇಶಗಳ ಕಥೆ ಇದೆ.

Tap to resize

Latest Videos

ಸೀರೆ ತೊಡುವ ಭರದಲ್ಲಿ ಒಳಗಿಂದೆಲ್ಲಾ ಮರೆತುಬಿಟ್ರಾ ಉರ್ಫಿ? ವಿಡಿಯೋ ನೋಡಿ ಕಣ್ಮುಚ್ಚಿದ ನೆಟ್ಟಿಗರು!

ಅಂದಹಾಗೆ, ಈ ಡ್ರೆಸ್​ ಅನ್ನು ಆಲಿಯಾ ಅವರು ನ್ಯೂಯಾರ್ಕ್​ನಲ್ಲಿ ನಡೆದ ಮೆಟ್​ ಗಾಲಾ ಎಂಬ ಫ್ಯಾಷನ್​ ಫೆಸ್ಟಿವಲ್​ನಲ್ಲಿ ಹಾಕಿಕೊಂಡು ಮಿಂಚಿದ್ದಾರೆ.  ಪ್ರತಿ ವರ್ಷ ನ್ಯೂಯಾರ್ಕ್​ನಲ್ಲಿ ಈ  ಫ್ಯಾಷನ್​ ಹಬ್ಬ ನಡೆಯುತ್ತದೆ. ಇದರಲ್ಲಿ  ಜಗತ್ತಿನ ಹಲವು ಖ್ಯಾತ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ. ಇಲ್ಲಿ ಆಲಿಯಾ ಭಟ್  ಈ ಡ್ರೆಸ್​ನಲ್ಲಿ ಮಿಂಚಿದ್ದಾರೆ.  ಭಾರತೀಯ ಸಿಲೆಬ್ರಿಟಿಗಳು ಸೇರಿದಂತೆ ವಿವಿಧ ದೇಶಗಳ, ವಿವಿಧ ಕ್ಷೇತ್ರಗಳಿಗೆ ಸೇರಿದ ಗಣ್ಯ ವ್ಯಕ್ತಿಗಳು ಈ ರೆಡ್‌ ಕಾರ್ಪೆಟ್‌ ಸಮಾರಂಭದಲ್ಲಿ ಸ್ಟೈಲಿಶ್‌ ಮತ್ತು ಚಿತ್ರವಿಚಿತ್ರ ಉಡುಪುಗಳನ್ನು ಧರಿಸಿ ಮೆರೆದರೆ, ನಟಿ ಮೇಡ್​ ಇನ್​ ಇಂಡಿಯಾ ಡ್ರೆಸ್​ನಲ್ಲಿ ಮಿಂಚಿದರು. 
 
ಅಂದಹಾಗೆ ಇದು ಆಲಿಯಾ ಭಟ್​ ಅವರಿಗೆ ಮೊದಲ ಕಾರ್ಯಕ್ರಮವಾಗಿತ್ತು.  ಮೆಟ್‌ ಗಾಲಾ ಸಮಾರಂಭದಲ್ಲಿ ಭಾರತೀಯ ಸೆಲೆಬ್ರಿಟಿಗಳು ಇದಾಗಲೇ ಹಲವರು ಹೋಗಿದ್ದಾರೆ. ಆಲಿಯಾಗೆ ಇದು ಮೊದಲ ಕಾರ್ಯಕ್ರಮ.   ಬಿಳಿ ಬಣ್ಣದ ಮುತ್ತುಗಳಿಂದ ಕೂಡದ ಗೌನ್‌ ಧರಿಸಿದ ನಟಿ ಶ್ವೇತಾಂಬರಿಯಂತೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟರು. ಭಾರತದ ಫ್ಯಾಷನ್‌ ಡಿಸೈನರ್‌ ಪ್ರಬಲ್‌ ಗುರುಂಗ್‌ ವಿನ್ಯಾಸಗೊಳಿಸಿರುವ ಈ ಉಡುಪಿನಲ್ಲಿ 1 ಲಕ್ಷ ಬಿಳಿ ಮುತ್ತುಗಳ ಕಸೂತಿ ಮಾಡಲಾಗಿದೆ. ಈ ಉಡುಪಿಗೆ ಪೂರಕವಾಗಿ ಅವರು ಬಿಳಿ ಬಣ್ಣದ ಫಿಂಗರ್‌ಲೆಸ್‌ ಗ್ಲೌಸ್‌ ಮತ್ತು ಆಭರಣಗಳನ್ನು ಧರಿಸಿದ್ದರು.  

ತುಪ್ಪದ ಬೆಡಗಿ ರಾಗಿಣಿಗೆ ಮದ್ವೆ ಯಾವಾಗ? ಓಪನ್ನಾಗಿ ಮನದಾಳದ ಮಾತು ತೆರೆದಿಟ್ಟ ನಟಿ ಹೇಳಿದ್ದೇನು ನೋಡಿ...

click me!