ನಟ ಗೋವಿಂದ ಡಿವೋರ್ಸ್​ ಬೆನ್ನಲ್ಲೇ ಹರಿದಾಡ್ತಿದೆ ಸೊಸೆಯ ಮತಾಂತರ ಸುದ್ದಿ! ಏನಿದು ಖಾಸ್​ ಬಾತ್​?

Published : Feb 25, 2025, 09:48 PM ISTUpdated : Feb 26, 2025, 08:23 AM IST
ನಟ ಗೋವಿಂದ ಡಿವೋರ್ಸ್​ ಬೆನ್ನಲ್ಲೇ ಹರಿದಾಡ್ತಿದೆ ಸೊಸೆಯ ಮತಾಂತರ ಸುದ್ದಿ! ಏನಿದು ಖಾಸ್​ ಬಾತ್​?

ಸಾರಾಂಶ

ಖ್ಯಾತ ನಟ ಗೋವಿಂದ ಮತ್ತು ಪತ್ನಿ ಸುನೀತಾ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. 37 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಬೀಳಲಿದೆಯೇ ಎಂಬ ಅನುಮಾನ ಮೂಡಿದೆ. ಈ ನಡುವೆ, ಗೋವಿಂದ ಅವರ ಸೊಸೆ ರಾಗಿಣಿ ಖನ್ನಾ ಮತಾಂತರದ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ, ರಾಗಿಣಿ ಈ ಬಗ್ಗೆ ಸ್ಪಷ್ಟನೆ ನೀಡಿ, ಅಭಿಮಾನಿಯ ಪೋಸ್ಟ್ ರೀಪೋಸ್ಟ್ ಮಾಡುವಾಗ ಆದ ತಪ್ಪಿನಿಂದ ಹೀಗಾಯಿತೆಂದು ತಿಳಿಸಿದ್ದಾರೆ.

ಬಾಲಿವುಡ್​ನ ಖ್ಯಾತ ನಟ ಗೋವಿಂದ ಅವರು ಪತ್ನಿಯ ಜೊತೆ ಡಿವೋರ್ಸ್​ ಪಡೆದಿದ್ದಾರೆ ಎನ್ನುವ ಸುದ್ದಿ ಇದೀಗ ಭಾರಿ ಸದ್ದು ಮಾಡುತ್ತಿದೆ.  ಸುನೀತಾ ಅಹುಜಾ ಅವರೊಂದಿಗಿನ 37 ವರ್ಷಗಳ ದಾಂಪತ್ಯ ಜೀವನಕ್ಕೆ ನಟ ತೆರೆ ಎಳೆಯಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.   ಕೆಲದಿನಗಳಿಂದ ಅವರು ಒಟ್ಟಿಗೆ ವಾಸಿಸುತ್ತಿರಲಿಲ್ಲ ಎಂದು ಕೆಲವೊಂದು ಮಾಧ್ಯಮಗಳು ಹೇಳಿವೆ. ಗೋವಿಂದ ಅವರು ಕೆಲವು ನಟಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎನ್ನುವ ಗಾಳಿಸುದ್ದಿಯೂ ಹರಿದಾಡುತ್ತಿದೆ.  61 ವರ್ಷದ ಗೋವಿಂದ ಅವರಿಗೆ ಸುನೀತಾ ಈಗಾಗಲೇ ಡಿವೋರ್ಸ್‌ ನೋಟಿಸ್ ಕಳುಹಿಸಿದ್ದಾರೆ ಎಂದೆಲ್ಲಾ ಹೇಳಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ಅದೇನೆಂದರೆ,  ಕೆಲವು ದಿನಗಳ ಹಿಂದೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸುನೀತಾ ವಿಚ್ಛೇದನ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದ್ದರು. ಆದರೆ, ವಿಚ್ಛೇದನದ ಸುದ್ದಿಯನ್ನು ದಂಪತಿ ಇನ್ನೂ ದೃಢಿಕರಿಸಿಲ್ಲ. ಇದರ ನಡುವೆಯೇ, ನಟ ಗೋವಿಂದ ಅವರ ಸೊಸೆ ಅಂದರೆ ಅಕ್ಕನ ಮಗಳು, ಕಿರುತೆರೆ ನಟಿ ನಟಿ ರಾಗಿಣಿ ಖನ್ನಾ  ಅವರು ಮತಾಂತರವಾಗಿದ್ದ ಸುದ್ದಿ ಇದೀಗ ಪುನಃ ಮುನ್ನೆಲೆಗೆ ಬಂದಿದೆ. 

ಅಂದಹಾಗೆ ರಾಗಿಣಿ, ಹಿಂದಿಯ  ‘ಸಸುರಾಲ್ ಗೇಂಡಾ ಫೂಲ್’ ಮತ್ತು ‘ಭಾಸ್ಕರ್ ಭಾರ್ತಿ’ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದವರು.  2008ರಲ್ಲಿ ಕಿರುತೆರೆ ಪ್ರವೇಶಿಸಿದ ನಟಿ ‘ರಾಧಾ ಕಿ ಬೇಟಿಯಾ ಕುಚ್ ಕರ್​ದಿಕಾಯೇಂಗಿ’ ಧಾರಾವಾಹಿ ಮೂಲಕ ಅವರು ಫೇಮಸ್ ಆದರು. ರಾಗಿಣಿ ಅವರು ‘ಸಸುರಾಲ್ ಗೇಂಡಾ ಫೂಲ್ 2’ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ರಾಗಿಣಿ ಅವರು ಹಿಂದೂ ಧರ್ಮ ಬಿಟ್ಟು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿರುವುದಾಗಿ ಈ ಹಿಂದೆ  ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಮತಾಂತರಗೊಂಡ ಒಂದೇ ದಿನಕ್ಕೆ ಅವರು ಬೇಸತ್ತು ಪುನಃ ಹಿಂದೂ ಧರ್ಮಕ್ಕೆ ಮರಳಿದ್ದಾರೆ  ಎಂದು ಹೇಳಲಾಗಿತ್ತು. ಈ ಕುರಿತಂತೆ ಕೊನೆಗೆ ನಟಿ ಸ್ಪಷ್ಟನೆ ಕೊಟ್ಟು, ತಾವು ಮಾಡಿದ್ದ ಎಡವಟ್ಟಿನ ಬಗ್ಗೆ ತಿಳಿಸಿದ್ದರು. ಮತಾಂತರದ ಸುದ್ದಿ ಈಗ ಮತ್ತೆ ಮುನ್ನೆಲೆಗೆ ಬಂದಿದೆ.  ರಾಗಿಣಿಯವರು ಪೋಸ್ಟ್​ನಲ್ಲಿ, ‘ನಾನು ರಾಗಿಣಿ ಖನ್ನಾ. ನಾನು ಹಿಂದೂ ಧರ್ಮವನ್ನು ತ್ಯಜಿಸಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದೇನೆ. ಆದರೆ ಈಗ ನಾನು ಕಟ್ಟಾ ಹಿಂದೂ ಆಗಿಬಿಟ್ಟಿದ್ದೇನೆ. ನಾನು ಹಿಂದೂ ಸಂಪ್ರದಾಯಸ್ಥನಾಗುವತ್ತ ಸಾಗಿದ್ದೇನೆ’ ಎಂದು ಬರೆಯಲಾಗಿತ್ತು. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಿದ್ದಕ್ಕೆ ಅವರು ಕ್ಷಮೆ ಕೇಳಿದ ರೀತಿ ಪೋಸ್ಟ್​ ಇತ್ತು.  ಸನಾತನ ಧರ್ಮವೇ ಶ್ರೇಷ್ಠವೆಂದು ಅದರಲ್ಲಿ ಉಲ್ಲೇಖವಾಗಿತ್ತು. ಇದರಿಂದ ನಟಿ ಮತಾಂತರವಾಗಿ ಮತ್ತೆ ವಾಪಸಾಗಿದ್ದಾರೆ ಎಂದೇ ಸದ್ದು ಮಾಡಿತ್ತು.  

ತುಟಿಗೆ ಚುಂಬಿಸಿದ ಬೆನ್ನಲ್ಲೇ ಉದಿತ್‌ ನಾರಾಯಣ್‌ಗೆ ಪತ್ನಿಯಿಂದ ಸಂಕಷ್ಟ! ಜೀವನಾಂಶಕ್ಕಾಗಿ ದೂರು ದಾಖಲು

ಆದರೆ ಈ ಮತಾಂತರದ ಸುದ್ದಿ ಹೇಗೆ ಹರಡಿತ್ತು ಎನ್ನುವ ಬಗ್ಗೆ ರಾಗಿಣಿ ಸ್ಪಷ್ಟನೆ ಕೊಟ್ಟಿದ್ದರು. ಈ ಎಡವಟ್ಟು ಆಗಿದ್ದು ಹೇಗೆ ಎಂದು ತಿಳಿಸಿದ್ದ ರಾಗಿಣಿ ಅವರು, ಈ ಸುದ್ದಿ ಹರಡಲು ತಮ್ಮಿಂದ ಆದ ಚಿಕ್ಕ ಎಡವಟ್ಟು ಕಾರಣ ಎಂದಿದ್ದರು. ತಾವು ಮತಾಂತರ ಆಗಿರುವ ಸುದ್ದಿ ಸುಳ್ಳು ಎಂದಿದ್ದರು. 'ನಾನು ಇತ್ತೀಚೆಗೆ ಅಭಿಮಾನಿಗಳ ಪೋಸ್ಟ್​ಗಳನ್ನು ರೀಪೋಸ್ಟ್ ಮಾಡುತ್ತಿದ್ದೇನೆ. ಹೀಗೆ ರೀ ಪೋಸ್ಟ್​ ಮಾಡುವ ಭರದಲ್ಲಿ ಈ ಮತಾಂತರದ ಕುರಿತು ಅಭಿಮಾನಿಯೊಬ್ಬ ಹಾಕಿದ್ದ ಪೋಸ್ಟ್​ ಅನ್ನು ಸರಿಯಾಗಿ ಗಮನಿಸದೇ ರೀ ಪೋಸ್ಟ್​ ಮಾಡಿಬಿಟ್ಟೆ. ಅದರಲ್ಲಿ ಮತಾಂತರಗೊಂಡು ಬಳಿಕ ವಾಪಸಾದೆ ಎಂದು ವರದಿಯಾಗಿತ್ತು. ಅದನ್ನು ನಾನು ಗಮನಿಸದೇ ಪೋಸ್ಟ್​ ಮಾಡಿರುವ ಕಾರಣ ಹೀಗಾಯಿತು' ಎಂದು ನಟಿ ಸ್ಪಷ್ಟನೆ ಕೊಟ್ಟಿದ್ದರು.
  
. ‘ನನಗೆ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ಯಾರೋ ಒಬ್ಬವನು ಮಾಡಿದ ತಪ್ಪಿನಿಂದ ನಾನು ನನ್ನ ಎಲ್ಲಾ ಅಭಿಮಾನಿಗಳನ್ನು ದೂಷಿಸಲಾರೆ. ನನ್ನ ಅಭಿಮಾನಿಗಳು ನನಗೆ ತುಂಬಾನೇ ನಿಷ್ಠಾವಂತರಾಗಿದ್ದಾರೆ. ಹೀಗಾಗಿ ನಾನು ಅವರನ್ನು ಗೌರವಿಸುತ್ತೇನೆ’ ಎಂದೂ ಅವರು ಹೇಳಿದ್ದರು. ಕಲಾವಿದರ ಸದಾ ಎಚ್ಚರಿಕೆಯಿಂದ ಇರಬೇಕು. ನಾನು ಈ ಬಗ್ಗೆ ಈಗ ಕಲಿತಿದ್ದೇನೆ.  ಫ್ಯಾನ್ಸ್​ ಪೋಸ್ಟ್​ ನೊಡದೇ ರೀಪೋಸ್ಟ್​ ಮಾಡಿದರೆ ಆಗುವ ಎಡವಟ್ಟು ಏನೆಂದು ಎಲ್ಲರೂ ತಿಳಿದುಕೊಳ್ಳಬೇಕಿದೆ ಎಂದಿದ್ದರು. ನಾನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುತ್ತೇನೆ ಎನ್ನುವ ಫೇಕ್ ಪೋಸ್ಟ್​ನ ಅಭಿಮಾನಿಯೋರ್ವ ಪೋಸ್ಟ್ ಮಾಡಿದ್ದೂ ಅಲ್ಲದೇ  ಕೊಲಾಬರೇಷನ್​ಗೆ ರಿಕ್ವೆಸ್ಟ್ ಕೂಡ ಕಳುಹಿಸಿದ್ದ. ಅದನ್ನು ಗಮನಿಸದೇ ನಾನು  ಅಕ್ಸೆಪ್ಟ್​  ಮಾಡಿಬಿಟ್ಟೆ. ನಾನೀಗ ಅದನ್ನು ಡಿಲೀಟ್​ ಮಾಡಿದ್ದು ರಿಪೋರ್ಟ್ ಕೂಡ ಮಾಡಿದ್ದೇನೆ ಎಂದಿದ್ದರು. 

ಶ್ರೀದೇವಿ ಸಾವಿಗಿಂದು 7 ವರ್ಷ: ವಾರದ ಹಿಂದೆಯೇ ನಡೆದಿತ್ತು ಸಂಚು? ನಟಿಗೆ ಮಾಮುಷಿ ವಿಷ ಕೊಟ್ಟವರಾರು?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?