
ಕೆಲವು ಹೀರೋಗಳಿಗೆ, ಹೀರೋಯಿನ್‌ಗಳಿಗೆ ತಮ್ಮ ದೇಹದ ಬಗ್ಗೆ ತೀರದ ವ್ಯಾಮೋಹವಿರುತ್ತದೆ. ಕನ್ನಡಿಯಲ್ಲಿ ಎಷ್ಟು ಹೊತ್ತು ತಮ್ಮ ದೇಹವನ್ನು ನೋಡಿಕೊಂಡರೂ ಅವರಿಗೆ ತೃಪ್ತಿಯಾಗಲ್ಲ. ಇಲ್ಲಿರುವ ಹೀರೋ ಅಂಥ ಒಬ್ಬ ವ್ಯಕ್ತಿ. ವಿನೋದದ ಮಾತುಕತೆಯಲ್ಲಿ ಈ ವಿಷಯ ವ್ಯಕ್ತವಾಗಿದೆಯಾದರೂ, ಈ ಹೀರೋನ ಸ್ವಭಾವ ತಿಳಿಯಲು ಸಹಾಯ ಮಾಡುವಂತಿದೆ.
ಬಾಲಿವುಡ ಹೀರೋ ಹಿಮೇಶ್ ರೇಶಮಿಯಾ ಅಭಿನಯದ ʼಬ್ಯಾಡಾಸ್ ರವಿಕುಮಾರ್ʼ ಚಿತ್ರ ಥಿಯೇಟರ್‌ಗಳಲ್ಲಿ ಓಡುತ್ತಿದೆ. ಹಿಮೇಶ್ ರೇಶಮಿಯಾ ಇತ್ತೀಚೆಗೆ ತಮ್ಮ ಪತ್ನಿ ಸೋನಿಯಾ ಕಪೂರ್ ಅವರ ಪಾಡ್‌ಕ್ಯಾಸ್ಟ್ ʼದಿ ಸೋನಿಯಾ ಕಪೂರ್ ಶೋʼ ಅನ್ನು ಪ್ರಾರಂಭಿಸಿದರು. ಅಲ್ಲಿ ಅವರು ಲಘುವಾದ ಚಾಟ್ ನಡೆಸಿದರು. ಅವರ ವೃತ್ತಿಜೀವನ ಮತ್ತು ಅವರ ಹೊಸ ಚಿತ್ರ ʼಬ್ಯಾಡಾಸ್ ರವಿಕುಮಾರ್ʼ ಬಗ್ಗೆ ಚರ್ಚಿಸುವಾಗ, ಸೋನಿಯಾ ಹಿಮೇಶ್ ಅವರನ್ನು ಕನ್ನಡಿಯಲ್ಲಿ ಗಂಟೆಗಟ್ಟಲೆ ತನ್ನನ್ನು ನೋಡಿಕೊಳ್ಳುವ ಅಭ್ಯಾಸದ ಬಗ್ಗೆ ಲೇವಡಿ ಮಾಡಿದರು.
“ನಿನ್ನಲ್ಲಿ ನೀನು ಮೆಚ್ಚಿಕೊಳ್ಳುವ ವಿಷಯ ಯಾವುದು? ಬಾತ್ರೂಮ್‌ನಲ್ಲಿ ನಾಲ್ಕು ಗಂಟೆಗಳ ಕಾಲ ನಿನ್ನನ್ನು ನೀನು ನೋಡುವುದನ್ನು ನೀವು ಇಷ್ಟಪಡುತ್ತೀರಿ ಎಂಬ ಅಂಶವನ್ನು ಹೊರತುಪಡಿಸಿ!" ಎಂದು ಕಿಂಡಲ್ ಮಾಡಿದರು. ಆಶ್ಚರ್ಯಗೊಂಡ ಹಿಮೇಶ್, “ಏನು ಹೇಳ್ತಿದೀಯಾ? ನಿನ್ನ ಕಾರ್ಯಕ್ರಮಕ್ಕೆ ನಿಮಗೆ ಟಿಆರ್‌ಪಿ ಬೇಕು, ಅದಕ್ಕಾಗಿ ನೀನು ಅದನ್ನು ನನ್ನ ಹೆಸರಿನಲ್ಲಿ ಕ್ರಿಯೇಟ್ ಮಾಡ್ತಿದೀರಿ” ಎಂದು ತಿರುಗೇಟು ನೀಡಿದರು. ಸೋನಿಯಾ ತಮ್ಮ ಮಾತನ್ನು ಸಮರ್ಥಿಸಿಕೊಂಡರು- "ನಾನು ಸತ್ಯ ಹೇಳುತ್ತಿದ್ದೇನೆ. ನೀನು ಹೀಗೇ ಇದ್ದೀಯಾ. ನೀನು 9 ಗಂಟೆಗೆ ವಿಮಾನ ಪ್ರಯಾಣಕ್ಕೆ ಹೋಗಬೇಕಿದ್ದರೆ, 3 ಗಂಟೆಗೇ ಎದ್ದು ರೆಡಿಯಾಗಲು ಆರಂಭಿಸುತ್ತೀಯಾ! ಯಾರು ಹೀಗೆ ಮಾಡ್ತಾರೆ?” ಅಂದಳು.
ಪ್ರಯಾಣಕ್ಕೆ ತಯಾರಾಗಲು ತಾನು ಇಷ್ಟಪಡ್ತೇನೆ, ಆತುರಪಡೋಲ್ಲ ಎಂದು ಹಿಮೇಶ್ ಹೇಳುತ್ತಾನೆ. ಅದಕ್ಕೆ ಸೋನಿಯಾ, "ಹೌದು, ನೀನು ಎರಡು ಗಂಟೆಗಳ ಕಾಲ ಕನ್ನಡಿಯಲ್ಲಿ ನಿನ್ನನ್ನು ನೋಡಬಹುದು" ಎಂದು ಉತ್ತರಿಸಿದರು. ಹಿಮೇಶ್ ಸೋನಿಯಾ ಮೇಲೆ "ನೀನು ಏನು ಮಾತನಾಡುತ್ತಿದ್ದೀಯಾ?" ಎಂದು ರೇಗಿದರೆ ಸೋನಿಯಾ, "ನನ್ನನ್ನು ಕ್ಷಮಿಸು, ನಾನು ನಿನ್ನನ್ನು ಎಕ್ಸ್‌ಪೋಸ್ ಮಾಡುತ್ತಿದ್ದೇನೆ" ಎಂದಳು.
ಹಿಮೇಶ್ ರೇಶಮಿಯಾ 2018ರಲ್ಲಿ ಸೋನಿಯಾ ಕಪೂರ್ ಅವರನ್ನು ವಿವಾಹವಾದರು. ಹಿಮೇಶ್ ಅವರ ಮೊದಲ ಪತ್ನಿ ಕೋಮಲ್. ಅವರ ಜೊತೆಗಿನ ವಿಚ್ಛೇದನದ ನಂತರ ಇವರಿಬ್ಬರ ವಿವಾಹ ನಡೆಯಿತು. ಹಿಮೇಶ್, "ಆಶಿಕ್ ಬನಾಯಾ ಆಪ್ನೆ" ಮತ್ತು "ಝಲಕ್ ದಿಖ್ಲಾ ಜಾ" ನಂತಹ ಹಿಟ್ ಹಾಡುಗಳಿಗೆ ಹೆಸರುವಾಸಿಯಾಗಿದ್ದಾರೆ. ಅನೇಕ ಚಾರ್ಟ್-ಟಾಪ್ ಹಿಟ್‌ಗಳೊಂದಿಗೆ ಯಶಸ್ವಿ ಸಂಗೀತ ವೃತ್ತಿಜೀವನವನ್ನು ಹೊಂದಿದ್ದಾರೆ.
ಹಿಮೇಶ್ ಅವರ ಇತ್ತೀಚೆಗೆ ಬಿಡುಗಡೆಯಾದ ʼಬ್ಯಾಡಾಸ್ ರವಿಕುಮಾರ್ʼ ಭಾರತದಲ್ಲಿ 8.3 ಕೋಟಿ ರೂಪಾಯಿಗಳನ್ನು ಗಳಿಸಿದೆ. ಫೆಬ್ರವರಿ 7ರಂದು ಇದು ಬಿಡುಗಡೆಯಾಗಿತ್ತು. ಕೀತ್ ಗೋಮ್ಸ್ ನಿರ್ದೇಶಿಸಿದ ಈ ಚಲನಚಿತ್ರ 2014ರ ಡ್ರಾಮಾ ಮೂವಿ ದಿ ಎಕ್ಸ್‌ಪೋಸ್‌ನ ರಿಮೇಕ್. ಪ್ರಭುದೇವ, ಕೀರ್ತಿ ಕುಲ್ಹಾರಿ, ಸನ್ನಿ ಲಿಯೋನ್, ಸಂಜಯ್ ಮಿಶ್ರಾ, ಜಾನಿ ಲೀವರ್, ಮೋಹನ್ ಜೋಶಿ, ರಜಾ ಮುರಾದ್ ಮತ್ತು ಇತರ ಖ್ಯಾತನಾಮರನ್ನು ಒಳಗೊಂಡಿದೆ.
ವೆಬ್ ಸೀರಿಸ್ ಗೆ ಮೊದಲ ಹೆಜ್ಜೆ ಇಟ್ಟ ಪರಿಣೀತಿ ಚೋಪ್ರಾ, ರಹಸ್ಯ ಥ್ರಿಲ್ಲರ್ ಕಥೆ!
ಇತ್ತೀಚೆಗೆ ಮತ್ತೊಂದು ಸಂದರ್ಶನದಲ್ಲಿ ಮಾತನಾಡಿದ್ದ ಹಿಮೇಶ್, ದೀಪಿಕಾ ಪಡುಕೋಣೆಯನ್ನು ತಾನು ಮೊದಲ ಬಾರಿಗೆ ಬಾಲಿವುಡ್‌ಗೆ ಪರಿಚಯಿಸಿದ್ದರ ಕುರಿತು ಹೇಳಿಕೊಂಡಿದ್ದ. “ನಾವು ಅನೇಕ ಹುಡುಗಿಯರನ್ನು ಇಂಟ್ರಡ್ಯೂಸ್ ಮಾಡಿದ್ದೇವೆ, ಆದರೆ ಅವರು ಯಾರೂ ದೀಪಿಕಾ ಪಡುಕೋಣೆ ಆಗಲಿಲ್ಲ. ಅದರ ಸಂಪೂರ್ಣ ಕ್ರೆಡಿಟ್ ಅವಳಿಗೆ ಸಲ್ಲುತ್ತದೆ. ಅವಳು 'ನಾಮ್ ಹೈ ತೇರಾ' ಸಂಗೀತ ವೀಡಿಯೋದಲ್ಲಿ ನಟಿಸಿದ ಮೊದಲ ದಿನದಿಂದಲೂ ಸ್ಟಾರ್ ಆಗಿದ್ದಳು. ಅವಳು ಅದ್ಭುತವಾಗಿದ್ದಳು. ಆಕೆಯ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಆಗಲೂ ಚೆನ್ನಾಗಿತ್ತು."
ಕಾಂಗ್ರೆಸ್‌ಗೆ ಮಂಗಳಾರತಿ ಮಾಡಿದ ಪ್ರೀತಿ ಜಿಂಟಾ, ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಪಕ್ಷ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.