
ಮುಂಬೈ: ನಟ, ನಿರ್ದೆಶಕ ಅನುರಾಗ್ ಕಶ್ಯಪ್ ಮಲಯಾಳಂನ ಸಸ್ಪೆನ್ಸ್ ಸಿನಿಮಾವೊಂದನ್ನು ಹಿಂದಿ ವರ್ಷನ್‌ನಲ್ಲಿ ಬಿಡುಗಡೆಗೊಳಿಸಲು ಸಿದ್ಧರಾಗಿದ್ದಾರೆ. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಮಂಜು ವಾರಿಯರ್ ನಟಿಸಿದ್ದಾರೆ. ಈ ಚಿತ್ರ ನೋಡಿದ ಬಳಿಕ ಕಮೆಂಟ್ ಮಾಡಿರುವ ಅನುರಾಗ್ ಕಶ್ಯಪ್, ಸಿನಿಮಾ ಬಗ್ಗೆ ಅಪಾರವಾದ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ನಾನು ಮಲಯಾಳಂ ವರ್ಷನ್‌ನಲ್ಲಿರುವ 'ಫೂಟೇಜ್' ಸಿನಿಮಾ (Footage) ನೋಡಿದೆ. ಈ ಚಿತ್ರ ನನ್ನ ಮನಸ್ಸನ್ನು ಬೆಚ್ಚಿ ಬೀಳಿಸಿದ ಎಂದು ಅನುರಾಗ್ ಕಶ್ಯಪ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕಳೆದ ವರ್ಷ ಈ ಸಿನಿಮಾ ಕೇರಳದಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರ ಪ್ರೇಕ್ಷಕರಿಂದ ಅಪಾರ ಪ್ರಮಾಣದಲ್ಲಿ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಇದೀಗ ಫೂಟೇಜ್ ಸಿನಿಮಾವನ್ನು ಬೇರೆ ಭಾಷೆಗಳಲ್ಲಿಯೂ ಬಿಡುಗಡೆ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸೈಜು ಶ್ರೀಧರನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.
ಮಹೆಶಿಂತೆ ಪ್ರತಿಕಾರಮ್, ಕುಂಬಲಂಗಿ ನೈಟ್ಸ್ ಯಶಸ್ವಿ ಸಿನಿಮಾಗಳನ್ನು ನೀಡಿರುವ ಸಜ್ಜು ಶ್ರೀಧರನ್ (Saiju Sreedharan) ನಿರ್ದೇಶನದಲ್ಲಿ ಬಂದ ಮತ್ತೊಂದು ಅದ್ಭುತವಾದ ಸಿನಿಮಾ ಫೂಟೇಜ್. ಮಲಯಾಳಂ ಚಿತ್ರರಂಗದ ಯುವ ನಿರ್ದೇಶಕರು ಹೊಸ ಕಲ್ಪನೆಯೊಂದಿಗೆ ವಿನೂತನ ಶೈಲಿಯಲ್ಲಿ ಅದ್ಭುತವಾದ ಕಥೆಯನ್ನು ತೆರೆ ಮೇಲೆ ತೆಗೆದುಕೊಂಡು ಬರುತ್ತಿದ್ದಾರೆ. ಇಂತಹ ಸಿನಿಮಾಗಳನ್ನು ನೋಡಲು ರೋಮಾಂಚನವಾಗುತ್ತದೆ. ಈ ಹೊಸ ಯುವ ಸಮುದಾಯ ಸ್ಟೀರಿಯೊಟೈಪ್‌ಗಳನ್ನು ಬ್ರೇಕ್ ಮಾಡಿ ಹೊಸ ವಿಷಯಗಳನ್ನು ಪ್ರಯತ್ನಿಸುತ್ತಿದ್ದಾರೆ ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ.
ಫೂಟೇಜ್ ಸಿನಿಮಾದಲ್ಲಿ ಮಂಜು ವಾರಿಯರ್‌ಗೆ (Manju Warrier) ಜೊತೆಯಾಗಿ ವಿಶಾಕ್ ನಾಯರ್ ಮತ್ತು ಗಾಯಿತ್ರಿ ಅಶೋಕ್ ನಟಿಸಿದ್ದಾರೆ. ಕೋವಿಡ್-19 ಕಾಲಘಟ್ಟದ ಕಥೆಯನ್ನು ಒಳಗೊಂಡಿದ್ದು, ಯುಟ್ಯೂಬ್ ವ್ಲಾಗಿಂಗ್ ದಂಪತಿ ತಮ್ಮ ಸಹಾಯಕನನ್ನು ಹುಡುಕುತ್ತಾರೆ. ಈ ಹುಡುಕಾಟ ದಂಪತಿಯನ್ನು ಹೊಸ ದ್ವೀಪಕ್ಕೆ ಕರೆದುಕೊಂಡು ಹೋಗುತ್ತದೆ. ದಂಪತಿಯ ರೋಮಾಂಚನಕಾರಿ ಹುಡುಕಾಟದ ಪಯಣವೇ ಫೂಟೇಜ್ ಸಿನಿಮಾದ ಒನ್ ಲೈನ್ ಕಥೆಯಾಗಿದೆ.
ಇದನ್ನೂ ಓದಿ: 11 ದಿನಕ್ಕೆ 47 ಸಿನ್ಮಾಗೆ ಸಹಿ ಹಾಕ್ತಿದ್ದ ನಟನ 1 ತಪ್ಪಿನಿಂದ ಸ್ಟಾರ್ ಪಟ್ಟ ಪಡೆದ ಶಾರೂಖ್ ಖಾನ್
ಫೌಂಡ್-ಫೂಟೇಕ್ ಫಾರ್ಮೆಟ್ ಈ ಸಿನಿಮಾವನ್ನು ತುಂಬಾ ವಿಶೇಷವಾಗಿಸಿದೆ. ಸಿನಿಮಾದ ಇಡೀ ಕಥೆಯನ್ನು ವಿಡಿಯೋ ರೆಕಾರ್ಡಿಂಗ್ ಮೂಲಕ ತೋರಿಸಲಾಗಿದೆ. ಹಾಗಾಗಿ ಈ ಸಿನಿಮಾ ತುಂಬಾ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತದೆ. ಪ್ರತಿಯೊಂದು ದೃಶ್ಯ ಮತ್ತು ಪಾತ್ರ ವೀಕ್ಷಕರಿಗೆ ಇಷ್ಟವಾಗುತ್ತದೆ ಎಂದು ಚಿತ್ರದ ನಟ ಮಂಜು ವಾರಿಯರ್ ಹೇಳುತ್ತಾರೆ. ಹಿಂದಿ ಆವೃತ್ತಿಯ ಸಿನಿಮಾವನ್ನು ಫ್ಲಿಪ್ ಫಿಲ್ಮ್ಸ್, ಸಿನೆಪೊಲಿಸ್ ಜೊತೆಯಾಗಿ ಬಿಡುಗಡೆ ಮಾಡುತ್ತಿದೆ. ಸದ್ಯ ಅನುರಾಗ್ ಕಶ್ಯಪ್ ಕನ್ನಡದ 'ಟೈಗರ್ಸ್ ಪಾಂಡ್' ಸಿನಿಮಾದೊಂದಿಗೆ ಸೇರಿಕೊಂಡಿದ್ದಾರೆ. ಟೈಗರ್ಸ್ ಪಾಂಡ್ ಈ ವರ್ಷದ ಬರ್ಲಿನೇಲ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಮೊದಲ ಕನ್ನಡ ಚಿತ್ರವಾಗಿದೆ.
ನಮ್ಮ ಫೂಟೇಜ್ ಸಿನಿಮಾವನ್ನು ಹಿಂದಿ ಪ್ರೇಕ್ಷಕರಿಗೆ ತಲುಪಿಸಲು ಅನುರಾಗ್ ಕಶ್ಯಪ್ ಮತ್ತು ಸಿನೆಪೊಲೀಸ್ ನಮಗೆ ಸಹಾಯ ಮಾಡುತ್ತಿರೋದು ಸಂತೋಷವನ್ನುಂಟು ಮಾಡುತ್ತಿದೆ. ಅನುರಾಗ್ ಕಶ್ಯಪ್ ಅವರ ಬೆಂಬಲದಿಂದ ನಮ್ಮ ಕಲಾವಿದರು ಮತ್ತು ಚಿತ್ರತಂಡದ ಸದಸ್ಯರು ಬೆಳೆಯಲು ಕಾರಣವಾಗಲಿದೆ. ತಾಂತ್ರಿಕವಾಗಿ ಮತ್ತು ಕಲಾತ್ಮಕವಾಗಿ ಅದ್ಭುತವಾದ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ. ಇದಕ್ಕೆ ಇಡೀ ಚಿತ್ರತಂಡ ಕಾರಣ ಎಂದು ನಿರ್ದೇಶಕ ಸಜ್ಜು ಶ್ರೀಧರನ್ ಹೇಳಿದ್ದಾರೆ. ಮಾರ್ಚ್ 7ರಂದು ಹಿಂದಿ ಆವೃತ್ತಿಯ ಫೂಟೇಜ್ ಸಿನಿಮಾ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ರಾತ್ರಿ ರೈಲಿನಲ್ಲಿ ಪ್ರಯಾಣಿಸುವಾಗ ಈ ಸಿನಿಮಾ ನೆನಪಾದ್ರೆ ಖಂಡಿತ ಭಯ ಆಗುತ್ತೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.