'ಪಠಾಣ್' ಶೂಟಿಂಗ್‌ನಲ್ಲಿ ಶಾರುಖ್ ಪುತ್ರನನ್ನು ತಬ್ಬಿ ಮುದ್ದಾಡಿದ ದೀಪಿಕಾ; ಫೋಟೋ ವೈರಲ್

By Shruthi KrishnaFirst Published Feb 14, 2023, 11:12 AM IST
Highlights

ಪಠಾಣ್ ಸಿನಿಮಾ ಶೂಟಿಂಗ್ ವೇಳೆ ಶಾರುಖ್ ಖಾನ್ ಪುತ್ರನನ್ನು ತಬ್ಬಿ ಮುದ್ದಾಡಿದ ದೀಪಿಕಾ ಪಡುಕೋಣೆ ವಿಡಿಯೋ ವೈರಲ್ ಆಗಿದೆ. 

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಪಠಾಣ್ ಸಿನಿಮಾದ ಸಕ್ಸಸ್ ಎಂಜಾಯ್ ಮಾಡುತ್ತಿದ್ದಾರೆ. ಪಠಾಣ್ ರಿಲೀಸ್ ಆಗಿ ಸೂಪರ್ ಸಕ್ಸಸ್ ಆಗಿದೆ. ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಮಾಯಿ ಮಾಡಿದೆ. ಬಾಲಿವುಡ್‌ನ ಅನೇಕ ಸಿನಿಮಾಗಳ ದಾಖಲೆಗಳನ್ನು ಹಿಂದಿಕ್ಕಿರುವ ಶಾರುಖ್ ಪಠಾಣ್ ಸೌತ್ ಬ್ಲಾಕ್ ಬಸ್ಟರ್‌ಗಳಾದ ಆರ್ ಆರ್ ಆರ್ ಮತ್ತು ಕೆಜಿಎಫ್2 ದಾಖಲೆ ಮುರಿಯುತ್ತಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ನಾಲ್ಕು ವರ್ಷಗಳ ಬಳಿಕ ಶಾರುಖ್ ಖಾನ್ ಅಭಿಮಾನಿಗಳ ಮುಂದೆ ಬಂದಿದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದಾರೆ. 

ವಿವಾದ ಗಳಿಂದನೇ ಸದ್ದು ಮಾಡಿದ್ದ ಪಠಾಣ್ ನಿಷೇಧಕ್ಕೆ ಭಾರಿ ಒತ್ತಾಯ ಕೇಳಿ ಬಂದಿತ್ತು. ಪಠಾಣ್ ಸಿನಿಮಾದ ಬೇಷರಂ ರಂಗ್ ಹಾಡು ವಿವಾದದ ಕಿಡಿ ಹೊತ್ತಿಸಿತ್ತು. ಅಂದಹಾಗೆ ಈ ಹಾಡನ್ನು ವಿದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಹಾಡಿನಲ್ಲಿ ದೀಪಿಕಾ ಸಂಪೂರ್ಣವಾಗಿ ಬಿಕಿನಿ ಮತ್ತು ಸ್ವಿಮ್ ಸೂಟ್ ನಲ್ಲಿ ಮಿಂಚಿದ್ದಾರೆ. ಸದ್ಯ ಬೇಷರಂ ರಂಗ್ ಹಾಡಿನ ಮೇಕಿಂಗ್ ವಿಡಿಯೋ ವೈರಲ್ ಆಗಿದೆ.

Latest Videos

 

ಚಿತ್ರೀಕರಣ ವೇಳೆ ದೀಪಿಕಾ ಕಿಂಗ್ ಖಾನ್ ಪುತ್ರನನ್ನು ಮುದ್ದಾಡಿರುವ ಫೋಟೋಗಳು ವೈರಲ್ ಆಗಿವೆ. ಶಾರುಖ್ ಕೊನೆಯ ಪುತ್ರ ಅಬ್‌ರಾಮ್ ಕೂಡ ಚಿತ್ರೀಕರಣ ಸ್ಥಳದಲ್ಲಿದ್ದರು. ಶೂಟಿಂಗ್ ಬಿಡುವಿನ ವೇಳೆ ದೀಪಿಕಾ ಪುಟ್ಟ ಹುಡುಗ ಅಬ್‌ರಾಮ್ ನನ್ನು ತಬ್ಬಿ ಮುದ್ದಾಡಿದ್ದಾರೆ. ಕ್ಯೂಟ್ ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ರೀ-ರಿಲೀಸ್ ಆಗ್ತಿದೆ ಸೂಪರ್ ಹಿಟ್ DDLJ; ನಾನು 'ಪಠಾಣ್' ನೋಡ್ತಿನಿ ಎಂದ ಶಾರುಖ್ ಖಾನ್

ಬೇಷರಂ ರಂಗ್ ಹಾಡನ್ನು ಸ್ಪೇನ್ ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಆ ವೇಳೆ ಶಾರುಖ್ ಕುಟುಂಬ ಕೂಡ ಜೊತೆಯಲ್ಲಿತ್ತು. ಶಾರುಖ್ ಚಿಕ್ಕ ಮಗ ಅಬ್ ರಾಮ್ ಜೊತೆ ಉತ್ತಮ ಸಮಯ ಕಳೆದಿರುವುದಾಗಿ ಸಿನಿಮಾತಂಡ ಹೇಳಿದೆ. ಅಬ್ ರಾಮ್ ಲಾಲಿಪಾಪ್ ತಿನ್ನುತ್ತಾ ಎಂಜಾಯ್ ಮಾಡುತ್ತ ಕುಳಿತ್ತಿದ್ದ. ಆಗ ದೀಪಿಕಾ ಅಬ್ ರಾಮ್‌ನನ್ನು ಹಗ್ ಮಾಡಿದ್ದಾರೆ. ಇಬ್ಬರ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

The song which became a vibe! Watch how was shot and experience the journey of the cast and crew now! Book your tickets now - https://t.co/SD17p6wBSa | https://t.co/VkhFng5XLL

Celebrate with only at a big screen near you, in Hindi, Tamil and Telugu pic.twitter.com/gkaMJQGl9V

— Yash Raj Films (@yrf)

'ಪಠಾಣ್' ಸಕ್ಸಸ್‌ಮೀಟ್‌ಗೆ ದುಬಾರಿ ವಾಚ್ ಧರಿಸಿದಿದ್ದ ಶಾರುಖ್; ಬೆಲೆ ಕೇಳಿದ್ರೆ ಅಚ್ಚರಿ ಪಡ್ತೀರಿ

ಪಠಾಣ್ ಸಿನಿಮಾದ ಬಗ್ಗೆ ಸಿನಿಮಾತಂಡ ಯವುದೇ ಪ್ರಮೋಷನ್ ಕೂಡ ಮಾಡಿಲ್ಲ. ಸಿನಿಮಾ ರಿಲೀಸ್ ಆಗಿ ಸೂಪರ್ ಸಕ್ಸಸ್ ಆದ ಬಳಿಕ ಚಿತ್ರತಂಡ ಮಾಧ್ಯಮದ ಮುಂದೆ ಹಾಜರಾಗಿದ್ದರು. ಅಲ್ಲಿವೆರೂ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಪ್ರೆಸ್ ಮೀಟ್ ನಲ್ಲಿ ಶಾರುಖ್ ಮತ್ತು ದೀಪಿಕಾ ಇಬ್ಬರೂ ಸಕ್ಸಸ್ ಸಂಭ್ರಮ ಹಂಚಿಕೊಂಡರು. ಸಿದ್ಧಾರ್ಥ್ ಆನಂದ್ ಸಾರಥ್ಯದಲ್ಲಿ ಬಂದಿರುವ ಪಠಾಣ್ ಸಿನಿಮಾದಲ್ಲಿ ಜಾನ್ ಅಬ್ರಹಾಂ ವಿಲನ್ ಆಗಿ ಅಬ್ಬರಿಸಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ನಲ್ಲಿ ಸಿನಿಮಾ ಮೂಡಿ ಬಂದಿದೆ.  

 

click me!