ಹಣ ಪೀಕಲು ರಾಖಿ ಮೊದಲ ಗಂಡಂಗೂ ಹೀಗೆ ಮಾಡಿದ್ಲು ಎಂದ ಆದಿಲ್ ಲಾಯರ್​!

By Suvarna News  |  First Published Feb 14, 2023, 9:49 AM IST

ರಾಖಿ ಸಾವಂತ್​ ಅವರು ಪತಿಯ ವಿರುದ್ಧ ದೂರು ದಾಖಲಿಸಿದ ನಂತರ ಅವರು ಅರೆಸ್ಟ್​ ಆಗಿದ್ದಾರೆ. ಇದೀಗ ರಾಖಿ ಸಾವಂತ್​ ವಿರುದ್ಧ ಪತಿ ಆದಿಲ್​ ಖಾನ್​ ದುರಾನಿ ವಕೀಲರು ಗಂಭೀರ ಆರೋಪ ಮಾಡಿದ್ದಾರೆ. ಏನದು?


ರಾಖಿ ಸಾವಂತ್ ತಮ್ಮ ಪತಿ ಆದಿಲ್ ಖಾನ್ ದುರಾನಿ (Adil Khan Durrani) ಜೊತೆಗಿನ ವೈವಾಹಿಕ ವಿವಾದಕ್ಕಾಗಿ ಸುದ್ದಿಯಾಗಿದ್ದಾರೆ. ಮೊದಲಿನಿಂದಲೂ ಇವರಿಬ್ಬರ ಮದುವೆಯ ವಿಷಯ ವಿಚಿತ್ರವೇ ಆಗಿದೆ. ಮದುವೆಯಾಗಿ ಹಲವು ತಿಂಗಳು ಕಳೆದ ಮೇಲೆ ತಮ್ಮಿಬ್ಬರ ಮದುವೆಯಾಗಿದೆ ಎಂದು ರಾಖಿ ರಿವೀಲ್​ ಮಾಡಿದ್ದರು. ಮೈಸೂರಿನ ಹುಡುಗ ಆದಿಲ್​ ಖಾನ್​ ಮಾತ್ರ ರಾಖಿ (Rakhi Sawanth) ಅವರನ್ನು ಮದ್ವೆಯಾಗಿಲ್ಲ ಎಂದು ಹೇಳುತ್ತಲೇ ಬಂದರು. ನಂತರ ಹೈಡ್ರಾಮಾದ ನಂತರ ಮದುವೆಯಾಗಿರೋದನ್ನು ಒಪ್ಪಿಕೊಂಡರು. ಈ ರೀತಿ ಒಪ್ಪಿಕೊಂಡ ಬಳಿಕ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ರಾಖಿ ಹೆಸರನ್ನೂ ಬದಲಾಯಿಸಿಕೊಂಡರು ಎನ್ನಲಾಗಿತ್ತು. ಕೇಸರಿ ಬುರ್ಖಾ ಧರಿಸಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದ ರಾಖಿ, ಅಲ್ಲಾನನ್ನು ಹಾಡಿ ಹೊಗಳಿದ್ದರು. ನಂತರ ಇಬ್ಬರೂ ಫೋಟೋ ಶೂಟ್​ ಮಾಡಿಸಿಕೊಂಡಿದ್ದರು. ಒಂದೇ ರೀತಿಯ ಟೀ-ಷರ್ಟ್​ ಧರಿಸಿ ಅದರಲ್ಲಿ ಅದರಲ್ಲಿ ರಾಖಿ ಮತ್ತು ಆದಿಲ್​ ಹೆಸರು ಸೇರಿಸಿ ರಾದಿಲ್​ (Radil) ಎಂದೂ ಬರೆಯಲಾಗಿತ್ತು.

ಇಷ್ಟೆಲ್ಲಾ ಆಗುತ್ತಿದ್ದಂತೆಯೇ ಇನ್ನೇನು ಕೊನೆಗೂ ಇವರ ವಿವಾಹ ಸುಖಾಂತ್ಯ ಕಂಡಿತು ಎಂದುಕೊಳ್ಳುತ್ತಿರುವಾಗಲೇ, ರಾಖಿ ಪತಿಯ ವಿರುದ್ಧ ಹೊಸ ವರಸೆ ಶುರು ಮಾಡಿದರು. ತಾವು ಮರಾಠಿಯ ಬಿಗ್​ಬಾಸ್ (Biggboss) ಮನೆಯೊಳಗೆ ಇರುವಾಗ ಇನ್ನೊಬ್ಬಳ ಜೊತೆ ಆದಿಲ್​ ಖಾನ್​ ಅಕ್ರಮ ಸಂಬಂಧ ಹೊಂದಿರುವುದಾಗಿ ತಿಳಿಸಿ ಆ ಯುವತಿಯ ಹೆಸರನ್ನೂ ಬಹಿರಂಗಗೊಳಿಸಿದ್ದರು. ನಂತರ ಇಲ್ಲಿಗೆ ಮುಗಿಯಲಿಲ್ಲ. ಆದಿಲ್ ಖಾನ್​ ವಿವಾಹೇತರ ಸಂಬಂಧ ಹೊಂದಿದ್ದಾನೆ. ನನ್ನ ಮೇಲೆ ದೌರ್ಜನ್ಯ ನಡೆಸುತ್ತಿದ್ದಾನೆ,  ನನ್ನ ಹಣ ಮತ್ತು ಚಿನ್ನಾಭರಣಗಳನ್ನು ಕದ್ದು, ಕೌಟುಂಬಿಕ ಹಿಂಸಾಚಾರದಲ್ಲಿ ತೊಡಗಿದ್ದಾನೆ. ನನ್ನ ನಗ್ನ ವಿಡಿಯೋಗಳನ್ನು  ಚಿತ್ರೀಕರಿಸಿ ಮಾರಾಟ ಮಾಡಿದ್ದಾನೆ, ಅಸ್ವಾಭಾವಿಕ ಸಂಭೋಗಕ್ಕೆ ಒತ್ತಾಯಿಸುತ್ತಿದ್ದಾನೆ... ಹೀಗೆ ಒಂದಲ್ಲಾ, ಎರಡಲ್ಲಾ... ಹತ್ತು ಹಲವು ಆರೋಪಗಳನ್ನು ಗಂಡ ಆದಿಲ್​ ಖಾನ್​ ಅವರ ವಿರುದ್ಧ ರಾಖಿ ಸಾವಂತ್​ ಮಾಡಿದ್ದಾರೆ. 

Tap to resize

Latest Videos

ಪತಿಯರಿಂದ ಟಾರ್ಚರ್​ ಸಹಿಸಿಕೊಂಡ ಖ್ಯಾತ ಬಾಲಿವುಡ್​ ನಟಿಯರಿವರು...

ಈ ಎಲ್ಲಾ ಹಿನ್ನೆಲೆಗಳಲ್ಲಿ ಆದಿಲ್​ ಖಾನ್​ ವಿರುದ್ಧ ಎಫ್​ಐಆರ್​ (FIR) ದಾಖಲಾಗಿತ್ತು.  ಆದಿಲ್ ಅವರನ್ನು ಕಳೆದ ವಾರ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿತ್ತು. ಈಗ ಈ ಕುರಿತು ಆದಿಲ್​ ಖಾನ್​ ವಕೀಲ ನೀರಜ್ ಗುಪ್ತಾ (Neeraj Guptha) ಮಾತನಾಡಿದ್ದಾರೆ. ಟೈಮ್ಸ್​ ಆಫ್​ ಇಂಡಿಯಾದ ಜೊತೆ ನಡೆಸಿದ ಸಂದರ್ಶನಲ್ಲಿ ವಕೀಲರು ತಮ್ಮ ಕಕ್ಷಿದಾರರಾಗಿರುವ ಆದಿಲ್​ ಖಾನ್​ ಪರ ವಹಿಸಿಕೊಂಡಿದ್ದು, ರಾಖಿ ಮಾಡುತ್ತಿರುವ ಆರೋಪಗಳನ್ನು ನಿರಾಕರಿಸಿದ್ದಾರೆ. ಮಾತ್ರವಲ್ಲದೇ ರಾಖಿ ವಿರುದ್ಧ ಗಂಭೀರ ಆರೋಪ ಮಾಡಿರುವ ಅವರು, 'ಈ ಹಿಂದೆ ರಾಖಿ ತನ್ನ ಮೊದಲ ಪತಿ ರಿತೇಶ್‌ನಿಂದ ಹಣ ಪೀಕಲು ಇದೇ ರೀತಿ ನಾಟವಾಡಿದ್ದರು. ಹೀಗೆ ಮಾಡುವುದು ಆಕೆಗೆ ಮಾಮೂಲು. ಈಗ ಹಣಕ್ಕಾಗಿ  ಆದಿಲ್‌ ಖಾನ್​ ಅವರಿಗೂ  ಅದೇ ರೀತಿ ಮಾಡುತ್ತಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ. 

'ಇದೆಲ್ಲವೂ ಪೂರ್ವ ಯೋಜಿತ. ಆರೋಪಗಳೆಲ್ಲವೂ ಆಧಾರರಹಿತವಾಗಿವೆ. ರಾಖಿ ಸಾವಂತ್ ತುಂಬಾ ದುರ್ಬಲ ಎಂದು ನೀವು ಭಾವಿಸುತ್ತೀರಾ, ಯಾವುದೇ ವ್ಯಕ್ತಿ ಅವರನ್ನು ಸೋಲಿಸಬಹುದು ಮತ್ತು ಅವರು ಎಲ್ಲವನ್ನೂ ಸತ್ಯವೇ ಹೇಳು ಹೇಳಿಕೊಳ್ಳುತ್ತಾರೆ ಎಂದರೆ ನೀವು ನಂಬಲು ಸಾಧ್ಯವಿದೆಯೆ ಎಂದು ಪ್ರಶ್ನಿಸಿದ್ದಾರೆ. ಆದಿಲ್ ಉತ್ತಮ ಕುಟುಂಬದ ಹಿನ್ನೆಲೆಯಿಂದ ಬಂದವನಾಗಿದ್ದಾರೆ. ಅವರು ರಾಖಿ ಮಾಡಿರುವ ಆರೋಪದಂತೆ ಆಕೆಯಿಂದ ಸ್ವಲ್ಪವೂ ಹಣ ಪಡೆದುಕೊಳ್ಳಲಿಲ್ಲ.  ಅವಳ ವಿಡಿಯೋ (Vedio) ಮಾಡಿರುವ ಆರೋಪಗಳೆಲ್ಲವೂ ಸುಳ್ಳು ಎಂದಿದ್ದಾರೆ.  ರಾಖಿ  ಹಿಂದಿನ ಪತಿ ರಿತೇಶ್ ಅವರಿಂದ ಬೇರ್ಪಟ್ಟಾಗ ಅವರಿಂದ ಹಣವನ್ನು ಪಡೆದಿದ್ದರು ಮತ್ತು ಈಗ  ಆದಿಲ್ ಜೊತೆಯಲ್ಲಿ ಹೀಗೆಯೇ ನಡೆದುಕೊಳ್ಳುತ್ತಿದ್ದಾರೆ.  ಇವೆಲ್ಲವನ್ನೂ ಕೋರ್ಟ್​ ಮುಂದೆ ಇಡುತ್ತೇನೆ' ಎಂದಿದ್ದಾರೆ. 

Rakhi Sawant ಪತಿ ಜೊತೆ ಅಕ್ರಮ ಸಂಬಂಧ ಹೊಂದಿರೋ '99%' ಸುಂದರಿ ಯಾರು?

ಇದೇ ವೇಳೆ ಆದಿಲ್ ತಮಗೆ ಮೋಸ ಮಾಡಿದ್ದರಿಂದ ವಿಚ್ಛೇದನಕ್ಕೆ (Divorce) ಮುಂದಾಗುವುದಾಗಿ ರಾಖಿ ಹೇಳಿದ್ದಾರೆ. ಅದೇ ಇನ್ನೊಂದೆಡೆ, ಆದಿಲ್‌ನೊಂದಿಗೆ ಸಂಬಂಧ ಹೊಂದಿದ್ದ ಇರಾನ್ ವಿದ್ಯಾರ್ಥಿಯೊಬ್ಬಳು ಆದಿಲ್​ ತನ್ನ ಮೇಲೆ ಅತ್ಯಾಚಾರ, ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಆದಿಲ್ ವಿರುದ್ಧ ಮೈಸೂರಿನಲ್ಲಿ ಎಫ್ ಐಆರ್ ದಾಖಲಿಸಿದ್ದಾಳೆ. 

click me!