ಪತಿಯ ಮುಂದೆ ಸೆಕ್ಸ್ ದೃಶ್ಯ ಮಾಡಲು ಕಷ್ಟವಾಗಿತ್ತು; 'ಟೈಟಾನಿಕ್' ಹೀರೋ ಜೊತೆಗಿನ ಶೂಟಿಂಗ್ ಅನುಭವ ಬಿಚ್ಚಿಟ್ಟ ಕೇಟ್

By Shruthi KrishnaFirst Published Feb 13, 2023, 5:59 PM IST
Highlights

ಪತಿಯ ಮುಂದೆ ಸೆಕ್ಸ್ ದೃಶ್ಯ ಮಾಡಲು ಕಷ್ಟವಾಗಿತ್ತು ಎಂದು ನಟಿ ಕೇಟ್  'ಟೈಟಾನಿಕ್' ಹೀರೋ ಲಿಯೊನಾರ್ಡೊ ಡಿಕಾಪ್ರಿಯೊ ಜೊತೆಗಿನ ಶೂಟಿಂಗ್ ಅನುಭವ ಬಿಚ್ಚಿಟ್ಟಿದ್ದಾರೆ. 

ಟೈಟಾನಿಕ್ ಸಿನಿಮಾದ ಹೀರೋ ಮತ್ತು ನಾಯಕಿಯನ್ನು ಮರೆಯಲು ಸಾಧ್ಯನಾ? 1997ರಲ್ಲಿ ಬಂದ ಟೈಟಾನಿಕ್ ಸಿನಿಮಾ ಮೂಲಕ ನಾಯಕ ಲಿಯೊನಾರ್ಡೊ ಡಿಕಾಪ್ರಿಯೊ ಮತ್ತು ನಾಯಕಿ  ಕೇಟ್ ವಿನ್ಸ್ಲೆಟ್  ಇಬ್ಬರು ವಿಶ್ವ ಸಿನಿ ಪ್ರೇಕ್ಷಕರನ್ನು ಮೋಡಿ ಮಾಡಿದ್ದರು. ಈ ಮಹಾಕಾವ್ಯ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಸಾರಥ್ಯದಲ್ಲಿ ಮೂಡಿ ಬಂದಿದ್ದು ವಿಶ್ವ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಸಿನಿಮಾ ಬಳಿಕವೂ ಲಿಯೊನಾರ್ಡೊ ಡಿಕಾಪ್ರಿಯೊ ಮತ್ತು ನಾಯಕಿ ಕೇಟ್ ವಿನ್ಸ್ಲೆಟ್ ಇಬ್ಬರ ಸ್ನೇಹ ಕೂಡ ಅಷ್ಟೆ ಅದ್ಭುತವಾಗಿದೆ. 20 ರ ದಶಕದ ಆರಂಭದಲ್ಲಿ ಪ್ರಾರಂಭವಾದ ಇವರ ಸ್ನೇಹ ಇಂದಿಗೂ ಹಾಗೆ ಇದೆ. 

ಟೈಟಾನಿಕ್ ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಅಭಿಮಾನಿಗಳ ಹೃದಯ ಗೆದ್ದಿತ್ತು. ಈ ಸಿನಿಮಾ ಬಳಿಕ ಇಬ್ಬರೂ ಮತ್ತೆ ತೆರೆಮೇಲೆ ಒಟ್ಟಿಗೆ ಕಾಣಿಸಿಕೊಂಡಿದ್ದು ಅನೇಕ ವರ್ಷಗಳ ಬಳಿಕ. ರೆವಲ್ಯೂಷನರಿ ರೋಡ್‌ ಸಿನಿಮಾದಲ್ಲಿ ಇಬ್ಬರೂ ಅನೇಕ ವರ್ಷಗಳ ಬಳಿಕ ಮತ್ತೆ ಒಟ್ಟಿಗೆ ನಟಿಸಿದರು. 2008ರಲ್ಲಿ ಬಂದ  ರೆವಲ್ಯೂಷನರಿ ರೋಡ್‌ ಚಿತ್ರಕ್ಕೆ ಕೇಸ್ ಅಂದಿನ ಪತಿ  ಸ್ಯಾಮ್ ಮೆಂಡೆಸ್ ಆಕ್ಷನ್ ಕಟ್ ಹೇಳಿದ್ದರು. ಆ ಸಿನಿಮಾದಲ್ಲಿ ಸಾಕಷ್ಟು ರೊಮ್ಯಾಟಿಂಕ್ ಮತ್ತು ಇಂಟಿಮೇಟ್ ದೃಶ್ಯಗಳಿವೆ.  ಲಿಯೊನಾರ್ಡೊ ಡಿಕಾಪ್ರಿಯೊ ಜೊತೆ ಇಂಟಿಮೇಟ್ ದೃಶ್ಯಗಳಲ್ಲಿ ಕಾಣಿಸಿಕೊಂಡ ಬಗ್ಗೆ ನಟಿ ಕೇಟ್ ಬಹಿರಂಗ ಪಡಿಸಿದ್ದಾರೆ. ಪತಿ ನಿರ್ದೇಶನದ ಸಿನಿಮಾದಲ್ಲಿ ಲಿಯೊನಾರ್ಡೊ ಜೊತೆ ಇಂಟಿಮೇಟ್ ದೃಶ್ಯ ಮಾಡುವುದು ತುಂಬಾ ಕಷ್ಟವಾಗಿತ್ತು ಎಂದು ಬಹಿರಂಗ ಪಡಿಸಿದ್ದಾರೆ.

Latest Videos

ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಟಿ ಕೇಟ್, ಲಿಯೊನಾರ್ಡೊ ಡಿಕಾಪ್ರಿಯೊ ಜೊತೆಗಿನ ಬಾಂಧವ್ಯದ ಬಗ್ಗೆ ಮಾತನಾಡಿದರು. 'ಆ ಸ್ನೇಹಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ ಮತ್ತು ನಮ್ಮ ಕುಟುಂಬ ಇದ್ದಹಾಗೆ. ಇದು ಅಪರೂಪದ ಹಾಲಿವುಡ್ ಸ್ನೇಹಗಳಲ್ಲಿ ಒಂದಾಗಿದೆ, ಅದನ್ನು ಪಡೆಯಲು ನಾನು ತುಂಬಾ ಪುಣ್ಯಮಾಡಿದ್ದೇನೆ' ಎಂದು ಹೇಳಿದ್ದಾರೆ. ಅದೇ ವೇಳೆ ಟೈಟಾನಿಕ್ ಸಿನಿಮಾದ ಶೂಟಿಂಗ್ ಅನುಭವ ಬಿಚ್ಚಿಟ್ಟಿದ್ದಾರೆ. ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಟೈಟಾನಿಕ್ ವೇಳೆ 21 ವರ್ಷದ ಕೇಟ್ 22 ವರ್ಷದ ಡಿಕಾಪ್ರಿಯೊ ಜೊತೆ ನಟಿಸಲು ತುಂಬಾ ಚಿಂತಿತರಾಗಿದ್ದರು ಎಂದು ಹೇಳಿದ್ದಾರೆ. 

Titanic: ಟೈಟಾನಿಕ್​ ಚಿತ್ರ ಬಿಡುಗಡೆಯಾದಾಗ ಹುಟ್ಟೇ ಇರದವಳ ಜೊತೆ ಹೀರೋ ಡೇಟಿಂಗ್​!

'ನಾನು ಮೊದಲೇ ಯೋಚಿಸಿದ್ದೆ, ತುಂಬಾ ಕಷ್ಟಕರವಾಗಿರುತ್ತದೆ, ಏಕೆಂದರೆ ನಿಮಗೆ ಗೊತ್ತಾ, ನಾನು ಅವನನ್ನು ನಿಜವಾಗಿಯೂ ಇಷ್ಟಪಟ್ಟರೆ ಏನು? ಎಂದು ನಾನು ಭಾವಿಸಿದೆ, ಏಕೆಂದರೆ ಅಷ್ಟು ಸುಂದರವಾಗಿದ್ದರು. ನಾವು ತುಂಬಾ, ತುಂಬಾ, ತುಂಬಾ ಹತ್ತಿರವಾಗಿದ್ದೆವು ಮತ್ತು ನಿಜವಾಗಿಯೂ ಒಟ್ಟಿಗೆ ಅಂಟಿಕೊಂಡಿದ್ದೆವು' ಎಂದು ಹೇಳಿದ್ದಾರೆ.

ರೆವಲ್ಯೂಷನರಿ ರೋಡ್‌ ಸಿನಿಮಾದಲ್ಲಿ ಕೇಟ್ ತನ್ನ ಪತಿ ಸ್ಯಾಮ್ ಮುಂದೆಯೇ   ಲಿಯೊನಾರ್ಡೊ ಡಿಕಾಪ್ರಿಯೊ ಜೊತೆ ರೊಮ್ಯಾಟಿಂಕ್ ಮತ್ತು ಇಂಟಿಮೇಟ್ ದೃಶ್ಯಗಳನ್ನು ಮಾಡಿದ್ದರು. ಅಷ್ಟು ಸುಲಭವಾಗಿರಲಿಲ್ಲ ಎಂದು ಹೇಳಿದ್ದಾರೆ. 'ನನ್ನ ಪತಿ ಕೂಡ ಅಲ್ಲಿಗೆ ಬಂದಿದ್ದರು. ತುಂಬಾ ವಿಚಿತ್ರ ಎನಿಸುತ್ತಿತ್ತು. ಸ್ಯಾಮ್ ಮುಂದೆ ಇನ್ನೊಬ್ಬ ವ್ಯಕ್ತಿಯೊಂದಿಗೆ ತುಂಬಾ ಕ್ಲೋಸ್ ಆಗಿರುವುದು, ಇಂಟಿಮೇಟ್ ದೃಶ್ಯ ಮಾಡುವುದು ವಿಚಿತ್ರ ಭಾವನೆಯಾಗಿತ್ತು. ಡಿಕಾಪ್ರಿಯೊ ತುಂಬಾ ಪ್ರೊಫೇಷನಲ್' ಎಂದು ಕೇಟ್ ಬಹಿರಂಗ ಪಡಿಸಿದರು.  

ಕೇಟ್‌ ಅಲ್ಲ ಕ್ಯಾಟ್... ಟೈಟಾನಿಕ್‌ ಸಿನಿಮಾದಲ್ಲಿ ಹಿರೋಯಿನ್ ಬದಲು ಬೆಕ್ಕು... ಎಡಿಟರ್‌ ಕೈಚಳಕಕ್ಕೆ ಬೆರಗಾದ ಇಂಟರ್‌ನೆಟ್‌

2008 ರ ರೆವಲ್ಯೂಷನರಿ ರೋಡ್‌ನಲ್ಲಿ ಸಮಯದಲ್ಲಿ ಕೇಟ್‌ ಮೊದಲ ಪತಿ ಜಿಮ್ ಥ್ರೆಪಲ್‌ಟನ್‌ರಿಂದ ದೂರ ಆಗಿ  ಸ್ಯಾಮ್ ಮೆಂಡೆಸ್ ಮದುವೆಯಾಗಿದ್ದರು. 47 ವರ್ಷದ ನಟಿ ಕೇಟ್ ಸದ್ಯ ಸ್ಯಾಮ್ ಮೆಂಡೆಸ್ ಅವರಿಂದ ದೂರ ಆಗಿ ಎಡ್ವರ್ಡ್ ಎಬೆಲ್ ಸ್ಮಿತ್ ಜೊತೆ ಇದ್ದಾರೆ. 
 

click me!