
ಮುಂಬೈ(ಅ.24): ದೀಪಾವಳಿ ಬಂದರೆ ಸಾಕು ಬಾಲಿವುಡ್ ಅಂಗಳದಲ್ಲಿ ಸಂಭ್ರಮ ಡಬಲ್. ಒಂದೆಡೆ ಹಲವು ಚಿತ್ರಗಳು ಇದೇ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗುತ್ತದೆ. ಇನ್ನು ದೀಪಾವಳಿ ಪಾರ್ಟಿ. ನಿರ್ದೇಶಕರು, ನಿರ್ಮಾಪಕರು, ಸ್ಟಾರ್ ಸೆಲೆಬ್ರೆಟಿಗಳು ಪಾರ್ಟಿ ಆಯೋಜಿಸುತ್ತಾರೆ. ಈಗಾಗಲೇ ಹಲವು ದೀಪಾವಳಿ ಪಾರ್ಟಿ ನಡೆದಿದೆ. ನಿರ್ಮಾಪಕ ಅಮೃತ್ ಪಾಲ್ ಸಿಂಗ್ ಆಯೋಜಿಸಿದ ದೀಪಾವಳಿ ಪಾರ್ಟಿ ಇದೀಗ ಎಲ್ಲರ ಗಮನಸೆಳೆದಿದೆ. ಈ ಪಾರ್ಟಿಗೆ ಎಲ್ಲಾ ಸೆಲೆಬ್ರೆಟಿಗಳು ತಮ್ಮದೇ ಶೈಲಿಯಲ್ಲಿ ಆಗಮಿಸಿದ್ದಾರೆ. ಆದರೆ ಶಾರುಖ್ ಖಾನ್ ಪಾಪರಾಜಿಗಳ ಕೈಗೆ ಸಿಗದಂತೆ ಪಾರ್ಟಿಗೆ ಆಗಮಿಸಿದ್ದಾರೆ. ತಮ್ಮ ಬಳಿ ಬಮ್ಣದ ಮರ್ಸಿಡೀಸ್ ಬೆಂಜ್ ಕಾರಿನಲ್ಲಿ ಆಗಮಿಸಿದ ಶಾರೂಖ್ ಖಾನ್ ಕಾರಿನ ಗಾಜಿಗೆ ಕಪ್ಪು ಸ್ಕ್ರೀನ್ ಹಾಕಿದ್ದಾರೆ. ಹೀಗಾಗಿ ಶಾರೂಖ್ ಖಾನ್ ಫೋಟೋ ತೆಗೆಯಲು, ಪ್ರತಿಕ್ರಿಯೆ ಕೇಳಲು ಯಾರಿಗೂ ಸಾಧ್ಯವಾಗಿಲ್ಲ.
ಮರ್ಸಡೀಸ್ ಬೆಂಝ್ ಕಾರಿನ ಹಿಂಭಾಗದಲ್ಲಿ ಶಾರುಖ್ ಖಾನ್(Shah Rukh Khan) ಕುಳಿತಿದ್ದಾರೆ. ಕಪ್ಪು ಸ್ಕ್ರೀನ್ ಹಾಕಿದ ಕಾರಣ ಶಾರುಖ್ ಯಾರಿಗೂ ಕಾಣಿಸಲೇ ಇಲ್ಲ. ಆದರೆ ಮುಂಭಾಗದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್(Aryan Khan) ಕುಳಿತಿದ್ದರು. ಆರ್ಯನ್ ಖಾನ್ ತಮ್ಮ ಮುಖ ಮುಚ್ಚಿಕೊಳ್ಳುವ ಅಥವಾ ಯಾರಿಗೂ ಸಿಗದಂತೆ ಪಾರ್ಟಿ(Bollywood Diwali Bash) ಪ್ರವೇಶಿಸುವ ಪ್ರಯತ್ನ ಮಾಡಲಿಲ್ಲ.
ಅರೆಬೆತ್ತಲಾಗಿ ಲಡ್ಡು ತಿನ್ನುತಾ ದೀಪಾವಳಿಗೆ ವಿಶ್ ಮಾಡಿದ ನಟಿ; ಮಿನಿ ಪಾರ್ನ್ ಪೇಜ್ ಎಂದ ನೆಟ್ಟಿಗರು
ಅಮೃತ್ ಪಾಲ್ ಸಿಂಗ್ ಆಯೋಜಿಸಿದ ದೀಪಾವಳಿ ಪಾರ್ಟಿಗೆ ಅನನ್ಯ ಪಾಂಡೆ, ಸಾರಾ ಆಲಿ ಖಾನ್, ಶನಾಯಾ ಕಪೂರ್, ಜಾನ್ಹವಿ ಕಪೂರ್, ಕಿಯಾರಾ ಅಡ್ವಾಣಿ, ವಿಕ್ಕಿ ಕೌಶಾಲ್, ಕತ್ರೀನಾ ಕೈಫ್, ಆಕಾಕ್ಷ ರಂಜನ್ ಕಪೂರ್, ಐಶ್ವರ್ಯ ರೈ, ಸಿದ್ಧಾರ್ಥ್ ಮಲ್ಹೋತ್ರ, ಭಾವನಾ ಪಾಂಡೆ, ನೇಹಾ ಧೂಪಿಯಾ ಸೇರಿದಂತೆ ಬಾಲಿವುಡ್ ಸೆಲೆಬ್ರೆಟಿಗಳ ದಂಡೇ ಪಾಲ್ಗೊಂಡಿತ್ತು.
ಶಾರುಖ್ ಖಾನ್ ಅಭಿಯನದ ಮೂರು ಚಿತ್ರಗಳು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ. ಪಠಾಣ್, ಜವಾನ್ ಹಾಗೂ ಡುನ್ಕಿ ಚಿತ್ರಗಳಲ್ಲಿ ಶಾರುಖ್ ಖಾನ್ ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಈ ಚಿತ್ರಕ್ಕಾಗಿ ಅಭಿಮಾನಿಗಳ ಕಾಯುವಿಕೆ ಹೆಚ್ಚಾಗಿದೆ.
ಅಕ್ಷಯ್ ಕುಮಾರ್ ಮನೆಯಲ್ಲಿ ದೀಪಾವಳಿ ಸಂಭ್ರಮ; ಆರತಿ ಬೆಳಗಿದ ವಿಡಿಯೋ ವೈರಲ್
ಅಮೃತ ಪಾಲ್ ಸಿಂಗ್ ಪಾರ್ಟಿಯಲ್ಲಿ ಶಾರುಖ್ ಸೇರಿದಂತೆ ದಿಗ್ಗಜರು ಪಾಲ್ಗೊಂಡಿದ್ದರು. ಅಮೃತ್ ಪಾಲ್ ಸಿಂಗ್ ಬಾಲಿವುಡ್ ಖ್ಯಾತ ನಿರ್ಮಾಪಕರಾಗಿದ್ದಾರೆ. ವೆಬ್ ಸೀರಿಸ್ ಮೂಲಕ ಅತೀ ಹೆಚ್ಚು ಯಶಸ್ಸು ಗಳಿಸಿರುವ ಅಮೃತ್ ಪಾಲ್ ಸಿಂಗ್ ಲವ್ ಪರ್ ಸ್ಕ್ವಾರ್ ಫೂಟ್, ಆಫೀಶಿಯಲ್ ಚುಕ್ಯಾಗಿರಿ, ಮಾಧುರಿ ದೀಕ್ಷಿತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಮಾಜಾ ಮಾ ವೆಬ್ ಸೀರಿಸ್ ನಿರ್ಮಾಪಕರಾಗಿದ್ದಾರೆ. ಸ್ಟಿಲ್ ಅಂಡ್ ಸ್ಟೀಲ್ ಮೀಡಯಾ ಅನ್ನೋ ಕಂಪನಿ ನಡೆಸುತ್ತಿರುವ ಅಮೃತ್ ಪಾಲ್ ಸಿಂಗ್ ಬಾಲಿವುಡ್‌ನಲ್ಲಿ ಅತ್ಯುತ್ತಮ ಚಿತ್ರ ನಿರ್ಮಾಣ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.