
ಬಾಲಿವುಡ್ ಹಿರಿಯ ನಟ, ಬಿಗ್ ಬಿ ಅಮಿತಾಭ್ ಬಚ್ಚನ್ ಶೂಟಿಂಗ್ ವೇಳೆ ಕಾಲಿಗೆ ಏಟು ಮಾಡಿಕೊಂಡಿದ್ದಾರೆ. ಅಮಿತಾಭ್ ಎಡಗಾಲಿಗೆ ತೀವ್ರ ಏಟು ಬಿದಿದ್ದು ರಕ್ತನಾಳ ಕಟ್ ಆಗಿದೆ. ಇದರಿಂದ ವಿಪರೀತ ರಕ್ತಸ್ರಾವವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕೆರದುಕೊಂಡು ಹೊಗಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಅಮಿತಾಬ್ ಕಾಲಿಗೆ ಹೊಲಿಗೆ ಹಾಕಲಾಗಿದ್ದು ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಇತ್ತೀಚಿಗಷ್ಟೆ ಅಮಿತಾಭ್ ಬಚ್ಚನ್ 80ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅಭಿಮಾನಿಗಳು, ಸಿನಿಮಾ ಗಣ್ಯರು ವಿಶ್ ಮಾಡಿ ಪ್ರೀತಿಯ ಶುಭಾಶಯ ತಿಳಿಸಿದ್ದರು. ಇದರ ಬೆನ್ನಲ್ಲೇ ಹಿರಿಯನಟ ಗಾಯಗೊಂಡಿರುವುದು ಅಭಿಮಾನಿಗಳಲ್ಲಿ ದುಃಖ ತಂದಿದೆ.
ಅಮಿತಾಭ್ ಬಚ್ಚನ್ ಅವರಿಗೆ ಏಟಾಗಿದೆ ಎನ್ನುವ ಸುದ್ದಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಸದ್ಯ ಆರೋಗ್ಯವಾಗಿದ್ದು ಚೇತರಿಸಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಿಗ್ ಬಿ ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು, ಸೆಲೆಬ್ರಿಟಿಗಳು, ಆಪ್ತರು ಪ್ರಾರ್ಥಿಸುತ್ತಿದ್ದಾರೆ. ಈ ಹಿಂದೆ ಎರಡು ಬಾರಿ ಅಮಿತಾಭ್ ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಈಗ ಕಾಲಿಗೆ ಪೆಟ್ಟು ಮಾಡಿಕೊಂಡಿರುವುದು ಬೇಸರದ ಸಂಗತಿ. ಆರೋಗ್ಯ ಎಷ್ಟೇ ಕೈಕೊಟ್ಟರೂ ಅಮಿತಾಭ್ ಕುಗ್ಗುವುದಿಲ್ಲ. ಪ್ರತಿ ಬಾರಿಯೂ ಅವರು ಹೊಸ ಹುಮ್ಮಸ್ಸಿನೊಂದಿಗೆ ಕೆಲಸಕ್ಕೆ ಮರಳುತ್ತಾರೆ. ಅದು ಅನೇಕರಿಗೆ ಸ್ಫೂರ್ತಿ ತುಂಬುತ್ತದೆ.
ಚಿತ್ರರಂಗದಲ್ಲಿ ಅಮಿತಾಭ್ ಬಚ್ಚನ್ 53 ವರ್ಷಗಳಿಗಿಂತಲೂ ಹೆಚ್ಚು ಕಾಲ ಸಕ್ರಿಯರಾಗಿದ್ದಾರೆ. ದಣಿವರಿಯದ ಯುವಕನಂತೆ ಈಗಲೂ ಕೆಲಸ ಮಾಡುತ್ತಿದ್ದಾರೆ. ಇಳಿ ವಯಸ್ಸಿನಲ್ಲೂ ಅವರು ನಿರ್ವಹಿಸುವ ಪಾತ್ರಗಳು, ಕೆಲಸ ಎಷ್ಟೋ ಜನರಿಗೆ ಮಾದರಿ. ತಮ್ಮದೇ ಬ್ಲಾಗ್ ಹೊಂದಿರುವ ಅವರು ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಈಗ ಕಾಲಿಗೆ ಪೆಟ್ಟಾಗಿರುವ ಬಗ್ಗೆಯೂ ಬ್ಲಾಗ್ ಮೂಲಕ ಅವರು ಮಾಹಿತಿ ನೀಡಿದ್ದಾರೆ.
Puneeth Parva ಅಪ್ಪು ನಗುವಿನ ಮುಖ ಕಣ್ಣಮುಂದಿದೆ, ಗಂಧದ ಗುಡಿಗೆ ಶುಭೋರಿದ ಅಮಿತಾಬ್!
ಅಮಿತಾಭ್ ಅತ್ತೀಚಿಗಷ್ಟೆ ಅದ್ದೂರಿಯಾಗಿ ನಡೆದ ಪುನೀತ ಪರ್ವಕ್ಕೆ ವಿಶ್ ಮಾಡಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆ ಕಾರ್ಯಕ್ರಮದಲ್ಲಿ ಅಮಿತಾಭ್ ಬಚ್ಚನ್ ಕೂಡ ಹಾಜರಿರಬೇಕಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಿಲ್ಲ. ಹಾಗಂತ ಸುಮ್ಮನಿರದ ಅಮಿತಾಭ್ ಪ್ರೀತಿಯ ವಿಶ್ ಕಳುಹಿಸಿದ್ದರು. ಪುನೀತ್ ರಾಜ್ ಕುಮಾರ್ ಬಗ್ಗೆ ಪ್ರೀತಿಯ ಮಾತುಗಳನ್ನು ಹಾಗೂ ಗಂಧದ ಗುಡಿಗೆ ಶುಭಾಶಯವನ್ನು ವಿಡಿಯೋ ಮೂಲಕ ಕಳುಹಿಸಿದ್ದರು. ಕಾರ್ಯಕ್ರಮದಲ್ಲಿ ಕೊನೆಯಲ್ಲಿ ಅಮಿತಾಭ್ ವಿಡಿಯೋ ಪ್ಲೇ ಮಾಡಲಾಗಿತ್ತು. ಅಮಿತಾಭ್ ಮಾತಿಗೆ ಅಪ್ಪು ಅಭಿಮಾನಿಗಳು ಭಾವುಕರಾದರು. ಡಾ. ರಾಜ್ಕುಮಾರ್ ಕುಟುಂಬದ ಜೊತೆ ಅಮಿತಾಭ್ ಅವರಿಗೆ ಉತ್ತಮ ಒಡನಾಟ ಇದೆ. ಶಿವರಾಜ್ ಕುಮಾರ್ ಜೊತೆಯೂ ಪ್ರೀತಿಯ ಬಾಂಧವ್ಯ ಹೊಂದಿದ್ದಾರೆ. ಶಿವಣ್ಣ ಮತ್ತು ಅಮಿತಾಭ್ ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದೇ ಪ್ರೀತಿ ವಿಶ್ವಾಸ ಅಪ್ಪು ಮೇಲೆಯೂ ಇದೆ.
ಈ ಕಾರಣದಿಂದ 22 ಚಿತ್ರಗಳಲ್ಲಿ ಅಮಿತಾಬ್‌ಗೆ ವಿಜಯ್ ಎಂಬ ಹೆಸರಿಡಲಾಗಿದೆ
80ರ ಇಳಿ ವಯಸ್ಸಿನಲ್ಲೂ ಅಮಿತಾಭ್ ಬಚ್ಚನ್ ಅವರು ಸಖತ್ ಬ್ಯುಸಿ ಆಗಿದ್ದಾರೆ. ಸದ್ಯ ಬಿಗ್ ಬಿ ಕಿರುತೆರೆಯಲ್ಲಿ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮ ನಡೆಸಿಕೊಡುವುದರ ಜೊತೆಗೆ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಇತ್ತೀಚಿಗಷ್ಟೆ ಅಮಿತಾಭ್ ಗುಡ್ಬೈ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ರಶ್ಮಿಕಾ ಮಂದಣ್ಣ ತಂದೆಯ ಪಾತ್ರದಲ್ಲಿ ನಟಿಸಿದ್ದರು. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚು ಕಮಾಯಿ ಮಾಡಲು ವಿಫಲವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.