ಭಾರತದ ರೋಚಕ ಗೆಲುವಿಗೆ ಹರ್ಷ ವ್ಯಕ್ತಪಡಿಸಿದ ಶಾರುಖ್ ; ಕೊಹ್ಲಿ ಹಾಗೆ ಕಮ್‌ಬ್ಯಾಕ್ ಮಾಡಿ ಎಂದ ಫ್ಯಾನ್ಸ್

By Shruthi Krishna  |  First Published Oct 24, 2022, 1:48 PM IST

ವಿರಾಟ್ ಕೊಹ್ಲಿ ಆಟಕ್ಕೆ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಕೂಡ ಫಿದಾ ಆಗಿದ್ದಾರೆ. ಕೊಹ್ಲಿಯನ್ನು ಹಾಡಿಹೊಗಳಿರುವ ಶಾರುಖ್ ದೀಪಾವಳಿ ಈಗ ಶುರುವಾಯಿತು ಎಂದು ಟ್ವೀಟ್ ಮಾಡಿದ್ದಾರೆ. 


ಆಸ್ಟ್ರೇಲಿಯಾದಲ್ಲಿ ಟಿ-20 ವಿಶ್ವಕಪ್‌ ನಡೆಯುತ್ತಿದೆ. ಭಾನುವಾರ ನಡೆದ ಪಂದ್ಯದಲ್ಲಿ ಭಾರತ, ಪಾಕಿಸ್ತಾನದ ವಿರುದ್ಧ ರೋಚಕ ಗೆಲುವು ದಾಖಲಿಸಿದೆ. ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಪರಾಕ್ರಮಕ್ಕೆ ಇಡೀ ದೇಶವೇ ಕೊಂಡಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿ ಆಟದ ವೈಖರಿಯ ಗುಣಗಾನ ನಡೆಯುತ್ತಿದೆ. ಕಿಂಗ್ ಕೊಹ್ಲಿ ಆಟಕ್ಕೆ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಕೂಡ ಫಿದಾ ಆಗಿದ್ದಾರೆ. ಕೊಹ್ಲಿಯನ್ನು ಹಾಡಿಹೊಗಳಿರುವ ಶಾರುಖ್ ದೀಪಾವಳಿ ಈಗ ಶುರುವಾಯಿತು ಎಂದು ಟ್ವೀಟ್ ಮಾಡಿದ್ದಾರೆ. ಶಾರುಖ್ ಖಾನ್ ಮಾತಿಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರ ಬರುತ್ತಿದೆ.     

‘ಕ್ರಿಕೆಟ್​ನ ಈ ಅತ್ಯುತ್ತಮ ಪಂದ್ಯ ನೋಡಿ ತುಂಬಾ ಖುಷಿ ಆಯಿತು. ಭಾರತದ ಗೆಲುವು ಅದ್ಭುತ. ವಿರಾಟ್​ ಕೊಹ್ಲಿ ಅವರ ಬ್ರಿಲಿಯಂಟ್​ ಬ್ಯಾಟಿಂಗ್​. ಅವರ ನಗು-ಅಳು ಸ್ಫೂರ್ತಿದಾಯಕವಾಗಿತ್ತು. ಹಿನ್ನೆಲೆಯಲ್ಲಿ ಚಕ್​ ದೇ ಇಂಡಿಯಾ ಹಾಡು! ಖುಷಿಯ ದೀಪಾವಳಿ ಈಗ ಶುರು ಆಯಿತು’ ಎಂದು ಶಾರುಖ್​ ಖಾನ್​ ಟ್ವೀಟ್​ ಮಾಡಿದ್ದಾರೆ. 

ಆಸ್ಟ್ರೇಲಿಯಾದಲ್ಲಿ ಸುದೀಪ್ ದಂಪತಿ; ರೋಚಕ ಗೆಲುವು ಕಣ್ತುಂಬಿಕೊಂಡ ಕಿಚ್ಚ ಹೇಳಿದ್ದೇನು?

Tap to resize

Latest Videos

undefined

ಶಾರುಖ್ ಟ್ವೀಟ್‌ಗೆ ಅಭಿಮಾನಿಗಳು ಕಾಮೆಂಟ್ ಮಾಡಿ 'ನೀವು ಕೂಡ ವಿರಾಟ್ ಕೊಹ್ಲಿ ಹಾಗೆ ಕಮ್‌ಬ್ಯಾಕ್ ಮಾಡಿ' ಎಂದು ಹಾರೈಸುತ್ತಿದ್ದಾರೆ. 'ಮತ್ತೆ ಫೀಲ್ಡ್‌ನಲ್ಲಿ ಅಬ್ಬರಿಸುತ್ತಿರುವ ವಿರಾಟ್ ಕೊಹ್ಲಿ ಹಾಗೆ ನೀವು ಕೂಡ ಹಳೆಯ ಶಾರುಖ್ ಆಗಿ ಹಿಂದಿರುಗಿ' ಎಂದು ಹೇಳುತ್ತಿದ್ದಾರೆ. ಅಂದಹಾಗೆ ಶಾರುಖ್ ಖಾನ್ ಸತತ ಸೋಲಿನಿಂದ ಕಂಗೆಟ್ಟು ಕೆಲ ಸಮಯ ಸಿನಿಮಾ ಮಾಡುವುದನ್ನೆ ಬಿಟ್ಟಿದ್ದರು. ಜೀರೋ ಸಿನಿಮಾ ಬಳಿಕ ಶಾರುಖ್ ಮತ್ತೆ ತೆರೆಮೇಲೆ ಮಿಂಚಿಲ್ಲ. ಸಾಲು ಸಾಲು ಸೋಲು ಶಾರುಖ್ ಅವರನ್ನು ಕೆಲ ಕಾಲ ಬಣ್ಣದ ಲೋಕದಿಂದನೇ ದೂರ ಇರುವಂತೆ ಮಾಡಿತ್ತು. ಇದೀಗ ಅನೇಕ ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿದ್ದಾರೆ. ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ. ದೊಡ್ಡ ಹಿಟ್ ಗಾಗಿ ಶಾರುಖ್ ಕಾಯುತ್ತಿದ್ದಾರೆ.

So good to see a great game of cricket. So wonderful to see India win. So brilliant to see batting….and so inspiring to see him cry and smile….and the background score of Chak de India!! Happy Diwali starts right now!!!

— Shah Rukh Khan (@iamsrk)

ಸೀರೆ ನೀನೆ ಉಟ್ಟಿದ್ದಾ? ಮಗಳ ಫೋಟೋಗೆ ಶಾರುಖ್ ಕಾಮೆಂಟ್, ಸುಹಾನಾ ಉತ್ತರ ಹೀಗಿತ್ತು

ಹಾಗಾಗಿ ಶಾರುಖ್​ ಖನ್​ ಉತ್ತಮ ನಿರ್ದೇಶಕ ಜೊತೆ ಕೈ ಜೋಡಿಸುತ್ತಿದ್ದಾರೆ. ದಕ್ಷಿಣ ಭಾರತದ ಸ್ಟಾರ್​ ಡೈರೆಕ್ಟರ್​ ಅಟ್ಲೀ ಜೊತೆ ‘ಜವಾನ್​’, ಬಾಲಿವುಡ್​ನ ಖ್ಯಾತ ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಜೊತೆ ‘ಡಂಕಿ’ ಹಾಗೂ ಸಿದ್ದಾರ್ಥ್​ ಆನಂದ್​ ಜೊತೆ ‘ಪಠಾಣ್​’ ಚಿತ್ರವನ್ನು ಮಾಡುತ್ತಿದ್ದಾರೆ ಈಗಾಗಾಲೇ ಶಾರುಖ್ ಪಠಾಣ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೊಣೆ ಜೊತೆ ನಟಿಸಿದ್ದಾರೆ. ಸದ್ಯ ಜವಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಟ್ಲೀ ಕುಮಾರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಜವಾನ್ ಸಿನಿಮಾದಲ್ಲಿ ನಯನತಾರಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಅವರ ಈ ಮೂರು ಸಿನಿಮಾಗಳ ಮೇಲೆ ಅಭಿಮಾನಿಗಳು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಶಾರುಖ್ ಮತ್ತೆ ಗೆಲುವಿನ ಹಾದಿಗೆ ಹಿಂದಿರುಗುತ್ತಾರಾ ಎನ್ನುವುದನ್ನು ನೋಡಲು ಮುಂದಿನ ವರ್ಷದ ವರೆಗೂ ಕಾಯಲೇ ಬೇಕು. 

click me!