ಬಾಲಿವುಡ್ ನಟಿ ಫಿಟ್ನೆಸ್ ಫ್ರೀಕ್ ಶಿಲ್ಪಾ ಶೆಟ್ಟಿ(Shilpa Shetty) ಸಿನಿಮಾಗಿಂತ ಹೆಚ್ಚಾಗಿ ವರ್ಕೌಟ್(workout), ಡಯಟ್, ಯೋಗ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಫಿಟ್ನೆಸ್ ಕಡೆ ಸಿಕ್ಕಾಪಟ್ಟೆ ಗಮನ ಕೊಡುವ ನಟಿ ಇದೀಗ ಬಸ್‌ನಲ್ಲೂ ವರ್ಕೌಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಬಾಲಿವುಡ್ ನಟಿ ಫಿಟ್ನೆಸ್ ಫ್ರೀಕ್ ಶಿಲ್ಪಾ ಶೆಟ್ಟಿ(Shilpa Shetty) ಸಿನಿಮಾಗಿಂತ ಹೆಚ್ಚಾಗಿ ವರ್ಕೌಟ್(workout), ಡಯಟ್, ಯೋಗ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಫಿಟ್ನೆಸ್ ಕಡೆ ಸಿಕ್ಕಾಪಟ್ಟೆ ಗಮನ ಕೊಡುವ ನಟಿ ಇದೀಗ ಬಸ್‌ನಲ್ಲೂ ವರ್ಕೌಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಹೌದು, ಇತ್ತೀಚಿಗೆ ಬಸ್ ಏರಿದ್ದ ನಟಿ ಶಿಲ್ಪಾ ಶೆಟ್ಟಿ ಬಸ್‌ನಲ್ಲಿ ಯಾರು ಇಲ್ಲ ಎನ್ನುವ ಕಾರಣಕ್ಕೆ ವರ್ಕೌಟ್ ಮಾಡಿದ್ದಾರೆ. ಬಸ್ ಒಳಗೆ ವರ್ಕೌಟ್ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಡೆನಿಮ್ ಬ್ಲೇಸರ್ ಮತ್ತು ಡೆನಿಮ್ ಪ್ಯಾಂಟ್ ಧರಿಸಿದ್ದ ಶಿಲ್ಪಾ ಶೆಟ್ಟಿ ಬಸ್‌ನಲ್ಲಿ ವರ್ಕೌಟ್ ಮಾಡಿದ್ದಾರೆ. ಅಂದಹಾಗೆ ಶಿಲ್ಪಾ ಶೆಟ್ಟಿ ವಿಮಾನ ನಿಲ್ದಾಣಕ್ಕೆ ಬಸ್ ನಲ್ಲಿ ಹೊರಟಿದ್ದರು. ಫ್ಯಾಷನ್ ವೀಕ್ ನಲ್ಲಿ ರ್ಯಾಂಪ್ ವಾಕ್ ಮಾಡಿದ್ದ ಶಿಲ್ಪಾ ವಿಮಾನ ಕ್ಯಾಚ್ ಮಾಡಲು ಬಸ್ ನಲ್ಲಿ ತೆರಳಿದ್ದರು. ವರ್ಕೌಟ್ ವಿಡಿಯೋ ಶೇರ್ ಮಾಡಿ, 'ಬಸ್ ಖಾಲಿ ಇದ್ದಿದ್ದರಿಂತ ಮಾತ್ರ. ನಾನು ಮನೆಗೆ ಹಿಂತಿರುಗುವಾಗ ಕೆಲವು ಪುಶ್ ಅಪ್, ಪುಲ್ ಅಪ್ ಮಾಡಿ ಹೋಗುತ್ತಾನೆ. ಫಿಟ್ ಇಂಡಿಯಾ ಸ್ವಚ್ಛ ಭಾರತ' ಎಂದು ಹೇಳಿದ್ದಾರೆ.
ಅಂದಹಾಗೆ ಶಿಲ್ಪಾ ಶೆಟ್ಟಿ ವಿಡಿಯೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದಾ ಫಿಟ್ನೆಸ್ ಕಡೆ ಗಮನ ಹರಿಸುವ ಶಿಲ್ಪಾ ಶೆಟ್ಟಿ ಬಸ್‌ನಲ್ಲೂ ಸುಮ್ಮನಿರಲ್ವಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಯೊಬ್ಬ ಮೇಡಮ್ ನೀವು ನಿಜವಾಗಿಯೂ ಸ್ಫೂರ್ತಿ ಎಂದಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ಅದ್ಭುತ ಎಂದಿದ್ದಾರೆ. ಅನೇಕರು ಲೈಕ್ಸ್ ಒತ್ತಿ ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ನಚ ಅಮಿತ್ ಸಾದ್ ಕಾಮೆಂಟ್ ಮಾಡಿ ನಾವು ಮುಂದೆ ಭೇಟಿಯಾದಾಗ ಇವುಗಳಲ್ಲಿ ಕೆಲವುಗಳನ್ನು ಮಾಡೋಣ ಎಂದು ಹೇಳಿದ್ದಾರೆ.
ಯಶ್ ವೈಲೆನ್ಸ್...ವೈಲೆನ್ಸ್ ಡೈಲಾಗ್ ಹೊಡೆದು ಖುಷಿ ಪಟ್ಟ ಶಿಲ್ಪಾ ಶೆಟ್ಟಿ.!
ಅಂದಹಾಗೆ ನಟಿ ಶಿಲ್ಪಾ ಶೆಟ್ಟಿ ಸದಾ ವರ್ಕೌಟ್ ವಿಡಿಯೋ ಮತ್ತು ಯೋಗದ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಕೆಲ ವಾರಗಳ ಹಿಂದೆ ವರ್ಕೌಟ್‌ನಲ್ಲಿ ಸ್ಥಿರತೆ ಹೇಗೆ ಫಿಟ್ನೆಸ್‌ಗೆ ಪ್ರಮುಖವಾಗುತ್ತದೆ ಎಂಬುದನ್ನು ಶಿಲ್ಪಾ ಶೆಟ್ಟಿ ಹಂಚಿಕೊಂಡಿದ್ದರು.
on the go… only because the bus was empty😅 Squeezed in some pull-ups, push-ups, and lunges on my way back home: 2 MISSIONs ACCOMPLISHED!💪♥️
FIT INDIA & SWACHCH BHARAT ABHIYAN!
For more exercises & other programs, download the : https://t.co/AeKJQyYi7p pic.twitter.com/syQ3GMFmX0
ಏರ್ಪೋರ್ಟ್‌ನಲ್ಲಿ ಮುಖ ಮುಚ್ಚಿಕೊಂಡು ಓಡಾಡಿದ ರಾಜ್ ಕುಂದ್ರ, ಇದೆಂಥಾ ಅವತಾರ ರೀ.?
ಇನ್ನು ಇತ್ತೀಚಿಗಷ್ಟೆ ಶಿಲ್ಪಾ ಶೆಟ್ಟಿ, ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ಕೆಜಿಎಫ್-2 ಸಿನಿಮಾದ ಡೈಲಾಗ್ ಹೊಡೆದು ಸದ್ದು ಮಾಡಿದ್ದರು. ಯಶ್ ಅವರ ಖಡಕ್ ಡೈಲಾಗ್ ಹೊಡೆದು ಟ್ರೆಂಡ್ ಆಗಿದ್ದರು. ಕೆಜಿಎಫ್-2 ಸಿನಿಮಾ ನೋಡಿರೋ ಶಿಲ್ಪಾ ಶೆಟ್ಟಿ ಯಶ್‌ರ ಬಿಗ್ ಫ್ಯಾನ್ ಆಗಿದ್ದು, ಆ ಸಿನಿಮಾದಲ್ಲಿ ರಾಕಿ ಹೇಳೋ ವೈಲೆನ್ಸ್ ಡೈಲಾಗ್ಅನ್ನ ಶಿಲ್ಪಾ ಶೆಟ್ಟಿ ತನ್ನದೇ ಸ್ಟೈಲ್ನಲ್ಲಿ ಹೇಳಿದ್ದರು. ಶಿಲ್ಪಾ ಶೆಟ್ಟಿ ಅವರ ಡೈಲಾಗ್ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.