
ಹಿಂದಿ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಕಾಫಿ ವಿತ್ ಕರಣ್ (Koffee with Karan) ಮತ್ತೆ ಆರಂಭವಾಗುತ್ತಿದೆ. ಪ್ರತಿ ವರ್ಷ ಟ್ರೆಂಡ್‌ನಲ್ಲಿರುವ ಸೆಲೆಬ್ರಿಟಿಗಳನ್ನು ಕರಣ್ ಜೋಹರ್ ಈ ಶೋಗೆ ಕರೆಸಿ ಮಾತನಾಡಿಸಿ, ಗಾಸಿಪ್ ಕ್ರಿಯೇಟ್ ಆಗುವಂತೆ ಮಾಹಿತಿಗಳನ್ನು ರಿವೀಲ್ ಮಾಡಿಸುತ್ತಾರೆ. ಹಾಸ್ಯ ತಮಾಷೆ ಮತ್ತು ವಿವಾದ ತುಂಬಿಕೊಂಡಿರುವ ಈ ಶೋ ಮತ್ತೆ ಬರ್ತಿದೆ. ಆದರೆ ಈ ಬಾರಿ ಟಿವಿಯಲ್ಲಿ ಅಲ್ಲ. ಬದಲಿಗೆ ಒಟಿಟಿಯಲ್ಲಿ ಪ್ರಸಾರವಾಗಲಿದೆ. ಶೋ ಕಾಫಿ ವಿತ್ ಕರಣ್ 7ನೇ ಶೋ ಇದಾಗಿದೆ. ಮೊದಲ ಬಾರಿಗೆ ಒಟಿಟಿಯಲ್ಲಿ ಬರ್ತಿರುವ ಈಶೋ ನೋಡಲು ಪ್ರೇಕ್ಷಕರು ಸಹ ಕಾತರರಾಗಿದ್ದಾರೆ.
ಅಂದಹಾಗೆ ಈ ಶೋನಲ್ಲಿ ಬಾಲಿವುಡ್ ಸ್ಟಾರ್‌ಗಳೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಸೌತ್ ಸ್ಟಾರ್‌ಗಳು ಸಹ ಇರಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಅನೇಕರ ಹೆಸರು ತೇಳಿಬರುತ್ತಿದ್ದು ಅದರಲ್ಲಿ ರಶ್ಮಿಕಾ ಮಂದಣ್ಣ(Rashmika Mandanna) ಹೆಸರು ವೈರಲ್ ಆಗಿದೆ. ಕಾಫಿ ವಿತ್ ಕರಣ್ ನಲ್ಲಿ ರಶ್ಮಿಕಾ ಮೊದಲ ಸೆಲೆಬ್ರಿಟಿ ಆಗಲಿದ್ದಾರೆ ಎನ್ನಲಾಗುತ್ತಿದೆ. ಅಂದಹಾಗೆ ರಶ್ಮಿಕಾ ಜೊತೆ ಮತ್ತೊಬ್ಬ ಸ್ಟಾರ್ ನಟ ಕೂಡ ಎಂಟ್ರ ಕೊಡುತ್ತಿದ್ದಾರೆ. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್(Allu Arjun). ಹೌದು, ಪುಷ್ಪ(Pushpa) ಸಿನಿಮಾದ ಜೋಡಿ ಈ ಬಾರಿಯ ಕಾಫಿ ವಿತ್ ಕರಣ್ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಸದ್ಯ ರಶ್ಮಿಕಾ ಮತ್ತು ಅಲ್ಲು ಅರ್ಜುನ್ ಪುಷ್ಪ-2ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ ಪುಷ್ಪ-2 ಚಿತ್ರೀಕರಣ ಪ್ರಾರಂಭವಾಗಲಿದ್ದು ಪಾರ್ಟ್-2ಗಾಗಿ ಅಭಿಮಾನಿಗಳು ಸಹ ಕಾತರರಾಗಿದ್ದಾರೆ.
7 ವರ್ಷದ ಬಳಿಕ ಮತ್ತೆ ತೆರೆಮೇಲೆ ಶಾರುಖ್-ಕಾಜೋಲ್ ಜೋಡಿ; ಕರಣ್ ಜೋಹರ್‌ಗೆ ಥ್ಯಾಂಕ್ಸ್ ಎಂದ ಫ್ಯಾನ್ಸ್
ಇನ್ನು ಕಾಫಿ ವಿತ್ ಕರಣ್ ತಂಡ ಈಗಾಗಲೇ ರಶ್ಮಿಕಾ ಮತ್ತು ಅಲ್ಲು ಅರ್ಜುನ್ ಅವರನ್ನು ಸಂಪರ್ಕ ಮಾಡಿದೆ. ಇವರಿಬ್ಬರ ಎಪಿಸೋಡ್ ಸಖತ್ ಎಕ್ಸಾಯಿಟ್ ಆಗಿದೆ. ಇಬ್ಬರು ಸಾಕಷ್ಟು ರಹಸ್ಯಗಳನ್ನು ರಿವೀಲ್ ಮಾಡಿದ್ದಾರೆ ಎಂದು ಎಂದು ಆಂಗ್ಲ ಮಾಧ್ಯಮ ವರದಿ ಮಾಡಿದೆ. ಇನ್ನು ಮೂಲಗಳ ಪ್ರಕಾರ ಈ ಬಾರಿಯ ಶೋನಲ್ಲಿ ಸೌತ್ ಸ್ಟಾರ್‌ಗಳು ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಪ್ರೇಕ್ಷಕರ ಗಮನ ಸೆಳೆಯಲು ದಕ್ಷಿಣ ಭಾರತದ ಸೆಲೆಬ್ರಿಟಿಗಳ ಕಡೆ ಹೆಚ್ಚು ಗಮನ ಹರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಕಾಫಿ ವಿತ್ ಕರಣ್ ಶೋ ಇನ್ನಿಲ್ಲ: ಬೇಸರದಲ್ಲಿ ಅಭಿಮಾನಿಗಳು
ಅಂದಹಾಗೆ ಕರಣ್ ಜೋಹರ್ ಇತ್ತೀಚಿಗಷ್ಟೆ ಕಾಫಿ ವಿತ್ ಕರಣ್ ಶೋ ಪ್ರಸಾರವಾಗುವುದಿಲ್ಲ ಎಂದು ಹೇಳಿ ಶಾಕ್ ನೀಡಿದ್ದರು. ಬಳಿಕ ಈ ಬಾರಿಯ ಶೋ ಟಿವಿಯಲ್ಲಿ ಪ್ರಸಾರವಾಗುತ್ತಿಲ್ಲ ಒಟಿಟಿಯಲ್ಲಿ ಬರ್ತಿದೆ ಎಂದು ಬಹಿರಂಗ ಪಡಿಸಿದ್ದರು. 'ಕಾಫಿ ವಿತ್ ಕರಣ್ ಟಿವಿಯಲ್ಲಿ ಬರ್ತಿಲ್ಲ. ಏಕೆಂದರೆ ಪ್ರತಿಯೊಂದು ಉತ್ತಮ ಕತೆಗೂ ಉತ್ತಮ ತಿರುವು ಇರುತ್ತದೆ. ಕಾಫಿ ವಿತ್ ಕರಣ್ ಸೀಸನ್ 7 ಅನ್ನು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಸ್ಕ್ರೀಮಿಂಗ್ ಆಗಲಿದೆ ಎಂದು ಬಹಿರಂಗ ಪಡಿಸಲು ಸಂತೋಷವಾಗುತ್ತಿದೆ' ಎಂದು ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.