
ಬಾಲಿವುಡ್ ನಟ ಶಾರುಖ್ ಖಾನ್ ಯಂಗ್‌ಸ್ಟರ್‌ಗೆ ಸಂದೇಶವನ್ನು ನೀಡಿದ್ದಾರೆ. ಸಿನಿಮಾ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನಟ ಶಾರುಖ್, 'ನಾನು ಯುವಜನತೆಗೆ ಸಂದೇಶ ನೀಡಬಯಸುತ್ತೇನೆ. ಅದೇನೆಂದರೆ, ನಾವು ಎಲ್ಲಾ ಸಮಯಗಳಲ್ಲಿ ಪ್ರಾಮಾಣಿಕತೆ ಮತ್ತು ಮೃದು ಹೃದಯ ಹೊಂದಿರಬೇಕು. ಜೀವನದಲ್ಲಿ ಸಾಕಷ್ಟುವೇಳೆ ನಾವು ಮೋಸ ಮಾಡುತ್ತೇವೆ, ಕೆಟ್ಟ ಕೆಲಸಗಳನ್ನೂ ಮಾಡುತ್ತೇವೆ. ಆದರೆ, ಆ ದುರ್ಬಲ ಕ್ಷಣಗಳಲ್ಲಿ ನಾವು ಪ್ರಾಮಾಣಿಕತೆ ಮತ್ತು ಪರಿಶುದ್ಧ ಹೃದಯ ಹೊಂದಿದ್ದರೆ ನಮ್ಮಿಂದ ಯಾವುದೇ ತಪ್ಪು ಆಗುವುದಿಲ್ಲ. ನಮ್ಮ ಹೃದಯಾಂತರಾಳದಲ್ಲಿ ದಯೆ, ಕರುಣೆಗೆ ಸದಾ ಅಪಾರ ಸ್ಥಳವಿರಬೇಕು.
ಆದರೆ, ಜೀವನೋಪಾಯಕ್ಕೆ ನಾವು ಏನೋ ಮಾಡಬಾರದು. ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಪ್ರಮಾಣಿಕತೆ ಹಾಗೂ ಮೃದು ಹೃದಯ ಕೆಲಸ ಮಾಡಬೇಕು. ನಾವು ಹಾಗೆ ಇದ್ದರೆ ನಮ್ಮನ್ನು ಹುಟ್ಟಿಸಿದ ಅಲ್ಲಾ ಹಾಗು ಭಗವಾನ್ ದೇವರು ನಮ್ಮ ಸಹಾಯಕ್ಕೆ ಸದಾ ಇರುತ್ತಾರೆ. ಇದನ್ನು ಪ್ರತಿಯೊಬ್ಬ ಯುವಕಯುವತಿಯರೂ ಅರ್ಥೈಸಿಕೊಂಡು ಅಳವಿಡಿಕೊಂಡರೆ ಎಲ್ಲರೂ ಉತ್ತಮ ಜೀವನ ಸಾಗಿಸಬಹುದು' ಎಂದಿದ್ದಾರೆ ನಟ ಶಾರುಖ್ ಖಾನ್. ಶಾರುಖ್ ಮಾತಿಗೆ ಅಲ್ಲಿ ಸೇರಿದ್ದ ಎಲ್ಲರೂ ತಲೆದೂಗಿದ್ದಾರೆ.
ಬೆಂಗಳೂರು ನನ್ನ ಕಾಲ ಕೆಳಗೆ ಇರಬೇಕು, ಕಿಟ್ಟಿ ಹೇಳಿದಂಗೆ ಕೇಳ್ಬೇಕು; ಡೈಲಾಗ್ ಕೇಳಿ ಪೊಲೀಸ್ ಸುಸ್ತು!
ನಟ ಶಾರುಖ್ ಖಾನ್ ಅವರದು ತುಂಬಾ ಪರಿಣಾಮಕಾರಿ ವ್ಯಕ್ತಿತ್ವ ಎನ್ನಲಾಗುತ್ತದೆ. ಕಾರಣ, ಅವರು ಜೀರೋದಿಂದ ಹೀರೋ ಆಗಿ ಬೆಳೆದು ಬಂದಿರುವುದೇ ಒಂದು ಪವಾಡ ಎನ್ನಬಹುದು. ಸೀರಿಯಲ್ ಹಾಗೂ ಟಿವಿ ಶೋಗಳಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಶಾರುಖ್ ರಾತ್ರೋ ರಾತ್ರಿ ಹೀರೋ ಆದವರಲ್ಲ. ಅವರು ಬಾಲಿವುಡ್ ಬಾಗಲು ತಟ್ಟಿದ್ದು ವಿಲನ್ ಪಾತ್ರದ ಮೂಲಕವೇ ಎನ್ನುವುದು ಗಮನಿಸಬೇಕಾದ ಅಂಶ. ಆ ನಂತರವೇ ನಟ ಶಾರುಖ್ ಖಾನ್ ಹೀರೋ ಆಗಿ ಬೆಳೆದವರು. ಪ್ರತಿಭೆ ಹಾಗೂ ಸತತ ಪರಿಶ್ರಮದಿಂದ ಇಂದು ಏರಿರುವ ಎತ್ತರಕ್ಕೆ ತಲುಪಿದ್ದಾರೆ ನಟ ಶಾರುಖ್ ಖಾನ್.
ಈ ವರ್ಷ ಬಿಡುಗಡೆಯಾದ ಶಾರುಖ್ ಖಾನ್ ನಾಯಕತ್ವದ 'ಪಠಾಣ್' ಹಾಗೂ 'ಜವಾನ್' ಚಿತ್ರಗಳು ಸೂಪರ್ ಸಕ್ಸಸ್ ದಾಖಲಿಸಿವೆ. ಈ ಮೂಲಕ ನಟ ಶಾರುಖ್, ಈ ವರ್ಷ ತಮ್ಮ ಹಳೆಯ ದಾಖಲೆಗಳನ್ನೆಲ್ಲ ತಾವೇ ಪುಡಿಪುಡಿ ಮಾಡಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಬಾಲಿವುಡ್ ಕಿಂಗ್ ಖಾನ್ ಖ್ಯಾತಿಯ ಶಾರುಖ್ ಈಗ ಅಕ್ಷರಶಃ 'ಬಾಲಿವುಡ್ ಬಾಕ್ಸ್ ಆಫೀಸ್ ಕಿಂಗ್' ಆಗಿದ್ದಾರೆ. ತಮ್ಮದೇ ರೆಡ್ ಚಿಲ್ಲೀಸ್ ನಿರ್ಮಾಣ ಸಂಸ್ಥೆ ಮೂಲಕ ಈ ನಟ ಹಲವು ಚಿತ್ರಗಳ ನಿರ್ಮಾಣ ಹಾಗೂ ಹಂಚಿಕೆ ಮಾಡಿದ್ದಾರೆ. ಜತೆಗೆ, ಹಲವು ರೀತಿಯಲ್ಲಿ ಸಮಾಜ ಸೇವೆ ಕೂಡ ಕೈಗೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.