ಶಾಹೀದ್ ಕಪೂರ್ ಹಾಗೂ ಕರೀನಾ ಕಪೂರ್ ಒಂದು ಕಾಲದ ಬಾಲಿವುಡ್‌ನ ಸೂಪರ್ ಹಿಟ್ ಜೋಡಿ ಜೊತೆಗೆ ಲವರ್‌ಗಳು ಜಬ್ ವಿ ಮೇಟ್ ಸಿನಿಮಾದಿಂದ ಆರಂಭವಾದ ಇವರ ಪ್ರೇಮ ಮದುವೆಯವರೆಗೆ ಮಾತ್ರ ಮುಂದುವರಿಯಲಿಲ್ಲ, ಆದರೂ ಎಲ್ಲಾ ಸಿನಿಮಾ ನಟರ ಲವ್ ಆಫೇರ್‌ಗಳಂತೆ ಇವರ ಪ್ರೇಮಕತೆಗಳು ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತವೆ.
ಶಾಹೀದ್ ಕಪೂರ್ ಹಾಗೂ ಕರೀನಾ ಕಪೂರ್ ಒಂದು ಕಾಲದ ಬಾಲಿವುಡ್‌ನ ಸೂಪರ್ ಹಿಟ್ ಜೋಡಿ ಜೊತೆಗೆ ಲವರ್‌ಗಳು, ಜಬ್ ವಿ ಮೇಟ್ ಸಿನಿಮಾದಿಂದ ಆರಂಭವಾದ ಇವರ ಪ್ರೇಮ ಮದುವೆಯವರೆಗೆ ಮಾತ್ರ ಮುಂದುವರಿಯಲಿಲ್ಲ, ಪ್ರಸ್ತುತ ಇವರಿಬ್ಬರು ಬೇರೆ ಬೇರೆ ಮದುವೆಯಾಗುವ ಸುಖ ಜೀವ ನಡೆಸುತ್ತಿದ್ದಾರೆ. ಆದರೂ ಎಲ್ಲಾ ಸಿನಿಮಾ ನಟರ ಲವ್ ಆಫೇರ್‌ಗಳಂತೆ ಇವರ ಪ್ರೇಮಕತೆಗಳು ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಅದೇ ರೀತಿ ತನ್ನ ಹಾಗೂ ನಟ ಶಾಹೀದ್ ಕಪೂರ್ ನಡುವಿನ ಪ್ರೇಮ ಸಂಬಂಧದ ಬಗ್ಗೆ ಸ್ವತಃ ಬಾಲಿವುಡ್ ಬೆಬೋ ಕರೀನಾ ಕಪೂರ್ ಮನಬಿಚ್ಚಿ ಮಾತನಾಡಿರುವ ಹಳೆಯ ವೀಡಿಯೋ ತುಣುಕೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಟಿವಿ ಶೋದ ತುಣುಕು ಇದಾಗಿದೆ. ಇದರಲ್ಲಿ ನಟಿ ಕರೀನಾ, ಬಾಲಿವುಡ್ ಬೆಬೋ ತಾವು ಶಾಹೀದ್ ಗೆಳೆತನಕ್ಕಾಗಿ ಎರಡು ತಿಂಗಳ ಕಾಲ ಆತನ ಹಿಂದೆ ಅಲೆದಾಡಿರುವ ವಿಚಾರವನ್ನು ಹೇಳಿಕೊಂಡಿದ್ದಾರೆ. ಎರಡು ತಿಂಗಳ ಕಾಲ ಆತನಿಗಾಗಿ ಅಲೆದಾಡಿದೆ. ಆದರೆ ಎರಡು ತಿಂಗಳ ಕಾಲ ಶಾಹೀದ್ ಕಪೂರ್ ತನ್ನ ಬಗ್ಗೆ ಸ್ವಲ್ಪವೂ ಕ್ಯಾರೇ ಮಾಡಿರಲಿಲ್ಲ, ನಾನೇ ಆತನನ್ನು ಹಿಂಬಾಲಿಸಿದೆ ಎಂದು ಕರೀನಾ ಹೇಳಿದ್ದಾರೆ. ಈ ವೇಳೆ ಕರಣ್ ಜೋಹರ್ ಅಚ್ಚರಿಯಿಂದ ಹೌದಾ ಎಂದು ಕೇಳುತ್ತಾರೆ. ಅಲ್ಲದೇ ನಾನೇ ಆತನಿಗೆ ಮೊದಲ ಬಾರಿ ಮೆಸೇಜ್ ಮಾಡುವುದಕ್ಕೆ ಮುಂದಾಗಿದ್ದೆ. ನಾನೇ ಆತನಿಗೆ ಮೊದಲ ಬಾರಿ ಕರೆ ಮಾಡಿದ್ದೆ. ಆತ ಇದಿದ್ದೇ ಹಾಗೆ ಎಂದು ಹೇಳಿಕೊಂಡಿದ್ದಾರೆ ಬೆಬೋ.
ಮಕ್ಕಳು ಬೇಕಂತ ಸೈಫ್ನ ಮದ್ವೆಯಾದೆ... ಇಲ್ಲದಿದ್ರೆ... ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ಕರೀನಾ ಕಪೂರ್!
ನಂತರ ಏನಾಯ್ತು ಕೊನೆಗೂ ಆತ ನಿಮಗೆ ಸಿಕ್ಕಿದಾ ಅಲ್ವಾ ಎಂದು ಕುತೂಹಲದಿಂದ ಕೆಜೆ ಕೇಳಿದ್ದು, ಇದಕ್ಕೆ ಉತ್ತರಿಸಿದ ಕರೀನಾ ಹಾ ಕೊನೆಗೂ ನಾವು ಪರಸ್ಪರ ಭೇಟಿಯಾದೆವು. ಇಲ್ಲೂ ನಾನೇ ಮೊದಲ ಹೆಜ್ಜೆ ಇರಿಸಿದೆ. ಈ ಸಂಬಂಧಕ್ಕೆ ನಾನೇ ಮೊದಲು ಅಕ್ಸಿಲೇಟರ್ ಒತ್ತಿದೆ ಎಂದು ಕರೀನಾ ಹೇಳಿದ್ದು, ಕರೀನಾ ಇಷ್ಟೆಲ್ಲಾ ಹೇಳುತ್ತಿದ್ದರೆ ಪಕ್ಕದಲ್ಲೇ ಇರುವ ಶಾಹೀದ್ ಕಪೂರ್ ಸುಮ್ಮನೇ ನಗುವ ದೃಶ್ಯ ಈ ವೀಡಿಯೋದಲ್ಲಿದೆ. ಇವರ ಈ ಹಳೆ ವೀಡಿಯೋ ಈಗ ವೈರಲ್ ಆಗಿದ್ದು, ಇವರಿಬ್ಬರ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ನಟಿ ಕರೀನಾ ಶಾಹೀದ್ ಕಪೂರ್ ಜೊತೆಗಿನ ಸಂಬಂಧ ಕಡಿದುಕೊಂಡ ನಂತರ ಪಟೌಡಿ ರಾಜ ಮನೆತನದ ಬಾಲಿವುಡ್ ನಟ ಸೈಫ್ ಆಲಿಖಾನ್ ಜೊತೆ ಡೇಟಿಂಗ್ ಮಾಡಿದ್ದರು. ಪ್ರಪೋಸ್ ಮಾಡಿದ್ದು, ಕರೀನಾ ಆಗಿದ್ದರೂ ಈ ಸಂಬಂಧದಲ್ಲಿ ಗಾಢವಾಗಿ ಇದ್ದಿದ್ದು ಶಾಹೀದ್ ಕಫೂರ್, ಕರೀನಾ ಜೊತೆ ಬ್ರೇಕಾಫ್ ಅವರನ್ನು ಬಹುವಾಗಿ ಕಾಡಿತ್ತು ಎಂದೆಲ್ಲಾ ಶಾಹೀದ್ ಅಭಿಮಾನಿಗಳು ದೂರಿದರೆ, ಇತ್ತ ಕರೀನಾ ಅಭಿಮಾನಗಳು, ಶಾಹೀದ್‌ಗಾಗಿ ಕರೀನಾ ತುಂಬಾ ಬದಲಾಗಿದ್ದಳು. ಆಕೆ ಶಾಹೀದ್ ನನ್ನು ತುಂಬಾ ಪ್ರೀತಿಸಿದ್ದಳು. ಆದರೆ ಶಾಹೀದ್ದೇ ಆಕೆಯ ಬಗ್ಗೆ ನಿರ್ಲಕ್ಷ್ಯವಹಿಸಿದ್ದ ಎಂದು ಕರೀನಾ ಅಭಿಮಾನಿಗಳು ದೂರಿದ್ದಾರೆ.
ಕರೀನಾ ಕಪೂರ್ಗೆ ನಟ ಯಶ್ ಜೊತೆ ನಟಿಸುವ ಆಸೆಯಂತೆ: ಕರಣ್ ಷೋದಲ್ಲಿ ನಟಿ ಹೇಳಿದ್ದೇನು?
ಈ ಜೋಡಿಯ ಬ್ರೇಕಾಫ್ ಇವರ ಅಭಿಮಾನಿಗಳ ಹೃದಯವನ್ನು ಭಗ್ನಗೊಳಿಸಿತ್ತು. ಆದರೆ ಕರೀನಾ ಮಾತ್ರ ತನಗಿಂತ 10 ವರ್ಷ ಹಿರಿಯ ಸೈಫ್ ಅಲಿಖಾನ್ ಅವರ ಜೊತೆ ಡೇಟಿಂಗ್ ಶುರು ಮಾಡಿ ಅವರನ್ನೇ 2012 ರಲ್ಲಿ ಮದುವೆಯಾಗಿದ್ದರು. ಇದಾದ ಎರಡು ವರ್ಷಗಳ ನಂತರ ಶಾಹೀದ್ ಕಪೂರ್ ಕೂಡ ಮೀರಾ ರಾಜಪುತ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಈ ಜೋಡಿಗೂ ಈಗ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಬೇರೆ ಬೇರೆ ಮದುವೆಯಾಗಿ ಸುಖ ಜೀವನ ನಡೆಸುತ್ತಿದ್ದರು ಇವರ ಈ ಲವ್ ಆಫೇರ್‌ಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ.