ಬಾಲಿವುಡ್‌ನ ಈ ಒಬ್ಬ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಹಲವಾರು ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಮಾತ್ರವಲ್ಲ ಇವರ ಎಲ್ಲಾ ಚಲನಚಿತ್ರಗಳು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿವೆ. ಆದರೆ ಆರಂಭದಲ್ಲಿ ಇವರ ನಿರ್ಮಾಣದ ಸಿನಿಮಾವನ್ನು ಶಾರೂಕ್ ಖಾನ್ ತಿರಸ್ಕರಿಸಿದ್ದರು. ಆ ನಿರ್ಮಾಪಕ ಮತ್ತು ನಿರ್ದೇಶಕ ಯಾರು?
ಸಿನಿಮಾರಂಗದಲ್ಲಿ ಸೋಲು-ಗೆಲುವು ಅನ್ನೋದು ಸಾಮಾನ್ಯವಾಗಿದೆ. ಕೆಲವು ಸಿನಿಮಾಗಳು ಸೂಪರ್‌ಹಿಟ್ ಆದರೆ ಇನ್ನು ಕೆಲವು ಸಿನಿಮಾಗಳು ನೆಲಕಚ್ಚಿ ಬಿಡುತ್ತವೆ. ಪ್ರತಿ ವರ್ಷ ಸಾವಿರಾರು ಚಿತ್ರಗಳು ನಿರ್ಮಾಣವಾದರೂ ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ ಯಶಸ್ವಿಯಾಗುತ್ತವೆ. . ಹೈ ಬಜೆಟ್, ಸೂಪರ್ ಸ್ಟಾರ್ ನಟರಿದ್ದರೂ ಕೆಲವೊಮ್ಮೆ ಸಿನಿಮಾ ಹಿಟ್ ಆಗುವುದಿಲ್ಲ. ಆದರೆ ಬಾಲಿವುಡ್‌ನ ಈ ಒಬ್ಬ ಚಲನಚಿತ್ರ ನಿರ್ಮಾಪಕ ಹಲವಾರು ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಮಾತ್ರವಲ್ಲ ಇವರ ಎಲ್ಲಾ ಚಲನಚಿತ್ರಗಳು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿವೆ. ಆದರೆ ಆರಂಭದಲ್ಲಿ ಇವರ ನಿರ್ಮಾಣದ ಸಿನಿಮಾವನ್ನು ಶಾರೂಕ್ ಖಾನ್ ತಿರಸ್ಕರಿಸಿದ್ದರು. ಆ ನಿರ್ಮಾಪಕ ಮತ್ತು ನಿರ್ದೇಶಕ ಯಾರು?
ಬಾಕ್ಸ್ ಆಫೀಸ್‌ನಲ್ಲಿ ರಾಜ್‌ಕುಮಾರ್ ಹಿರಾನಿ ಅದ್ಭುತ ದಾಖಲೆ
ಇತ್ತೀಚಿಗೆ ತಮ್ಮ 61ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ರಾಜ್‌ಕುಮಾರ್ ಹಿರಾನಿ, ತಮ್ಮ ವೃತ್ತಿಜೀವನದಲ್ಲಿ ಕೇವಲ ಹಿಟ್‌ಗಳನ್ನು ನೀಡಿದ ಅಪರೂಪದ ಚಲನಚಿತ್ರ ನಿರ್ಮಾಪಕ. ರಾಜ್‌ಕುಮಾರ್ ಹಿರಾನಿಯ ಬಹುತೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಿದೆ. ಇದಕ್ಕಿಂತ ಹೆಚ್ಚಾಗಿ, ಅವರ ಎಲ್ಲಾ ಚಲನಚಿತ್ರಗಳು ವಿಮರ್ಶಕರಿಂದ ಪ್ರಶಂಸಿಸಲ್ಪಟ್ಟಿವೆ. ಅವರಿಗೆ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಸಹ ಗೆದ್ದುಕೊಂಡಿವೆ, ಇದು ಯಾವುದೇ ಬಾಲಿವುಡ್ ಚಲನಚಿತ್ರ ನಿರ್ಮಾಪಕರ ಪಾಲಿಗೆ ಅತ್ಯುತ್ತಮ ದಾಖಲೆಯಾಗಿದೆ.
undefined
ಬರೋಬ್ಬರಿ ನಾಲ್ಕು ಬಾರಿ ರಜನಿಕಾಂತ್ ಸಿನಿಮಾ ಆಫರ್ ತಿರಸ್ಕರಿಸಿದ ಸ್ಟಾರ್ ನಟಿ; ಐದನೆಯದು ಓಕೆ ಅಂದ್ರಾ?
ರಾಜ್‌ಕುಮಾರ್ ಹಿರಾನಿ 2003 ರಲ್ಲಿ ಮುನ್ನಾಭಾಯ್ MBBSನೊಂದಿಗೆ ತಮ್ಮ ಚಲನಚಿತ್ರ ನಿರ್ಮಾಣ ವೃತ್ತಿಯನ್ನು ಪ್ರಾರಂಭಿಸಿದರು. ಈ ಚಿತ್ರದಲ್ಲಿ ಅವರು ನಾಯಕ ನಟನಾಗಿ ಶಾರೂಕ್ ಖಾನ್ ನಟಿಸಬೇಕು ಎಂದು ಅಂದುಕೊಂಡಿದ್ದರು. ಆದರೆ ಶಾರೂಕ್ ಈ ಚಿತ್ರವನ್ನು ರಿಜೆಕ್ಟ್ ಮಾಡಿದ ಕಾರಣ ಇದರಲ್ಲಿ ಸಂಜಯ್ ದತ್ ಅಭಿನಯಿಸಿದರು. ದಿನಿಮಾ 50 ಕೋಟಿಗೂ ಅಧಿಕ ಗಳಿಕೆ ಮಾಡಿತು.
ಪ್ರಪಂಚದಾದ್ಯಂತ 126 ಕೋಟಿ ರೂಪಾಯಿ ಗಳಿಸಿದ ಲಗೇ ರಹೋ ಮುನ್ನಾಭಾಯ್ - ಚಿತ್ರದ ಸೀಕ್ವೆಲ್‌ನೊಂದಿಗೆ ಹಿರಾನಿ ಉತ್ತಮ ಸಾಧನೆ ಮಾಡಿದರು. ಅಂದಿನಿಂದ, ಹಿರಾನಿ ಅವರ ಎಲ್ಲಾ ಚಿತ್ರಗಳು ಬಾಕ್ಸ್ ಆಫೀಸ್ ಸಕ್ಸಸ್ ಆಗಿವೆ.
ಒಂದೇ ಸಿನಿಮಾದಿಂದ ಭರ್ತಿ 275 ಕೋಟಿ ಗಳಿಸಿದ್ದ ಸೂಪರ್‌ಸ್ಟಾರ್, ನಂತ್ರ ನಟಿಸಿದ ಸಿನ್ಮಾಗಳೆಲ್ಲವೂ ಫ್ಲಾಪ್!
3 ಈಡಿಯಟ್ಸ್, ಪಿಕೆ, ಸಂಜು ಸಿನಿಮಾ ನಿರ್ದೇಶಿಸಿದ ಹಿರಾನಿ
2009ರಲ್ಲಿ 3 ಈಡಿಯಟ್ಸ್ 400 ಕೋಟಿ ಗಳಿಸಿದ ಮೊದಲ ಭಾರತೀಯ ಸಿನಿಮಾವೆಂದು ಗುರುತಿಸಿಕೊಂಡಿತು. ಐದು ವರ್ಷಗಳ ನಂತರ, 770 ಕೋಟಿ ಗಳಿಸಿದ ಪಿಕೆಯೊಂದಿಗೆ ಹಿರಾನಿ ತಮ್ಮದೇ ಆದ ದಾಖಲೆಯನ್ನು ಮುರಿದರು. 2018 ರಲ್ಲಿ, ರಣಬೀರ್ ಕಪೂರ್ ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಗಳಿಕೆಯ ಚಿತ್ರವಾದ ಸಂಜುವನ್ನು ನಿರ್ದೇಶಿಸಿದರು. ಈ ಸಿನಿಮಾ ಬರೋಬ್ಬರಿ 586 ಕೋಟಿ ಗಳಿಸಿದೆ. ಒಟ್ಟಾರೆಯಾಗಿ, ಹಿರಾನಿ ಅವರ ಚಿತ್ರಗಳ ಗಳಿಕೆ 2000 ಕೋಟಿ ರೂ.ಗೂ ಮೀರಿದೆ.
ಈಗ, ಮುನ್ನಾಭಾಯ್ ಎಂಬಿಬಿಎಸ್ ನಂತರ 20 ವರ್ಷಗಳ ನಂತರ, ಹಿರಾನಿ ಅಂತಿಮವಾಗಿ ಶಾರೂಕ್ ಖಾನ್ ಅವರ ಮುಂಬರುವ ಚಿತ್ರ ಡಂಕಿ ನಿರ್ಮಿಸುತ್ತಿದ್ದಾರೆ. ಶಾರೂಕ್ ಖಾನ್ ಹಿರಾನಿ ಅವರೊಂದಿಗೆ ಬಹಳ ಸಮಯದಿಂದ ಕೆಲಸ ಮಾಡಲು ಬಯಸಿದ್ದರು ಎಂದು ತಿಳಿದುಬಂದಿದೆ. ಹಿಂದೊಮ್ಮೆ ಶಾರೂಕ್ ರಾಜ್‌ಕುಮಾರ್ ಹಿರಾನಿ ಸಿನಿಮಾದಲ್ಲಿ ನಟಿಸಲು ಹಿಂಜರಿದಿದ್ದರು. ಡಂಕಿ ಚಿತ್ರದಲ್ಲಿ ತಾಪ್ಸಿ ಪನ್ನು, ಬೊಮನ್ ಇರಾನಿ ಮತ್ತು ವಿಕ್ಕಿ ಕೌಶಲ್ ಕೂಡ ನಟಿಸಿದ್ದಾರೆ. ಭಾರೀ ನಿರೀಕ್ಷಿತ ಚಿತ್ರ ಡಿಸೆಂಬರ್‌ನಲ್ಲಿ ರಿಲೀಸ್ ಆಗಲಿದೆ.