ಸಲ್ಮಾನ್ ಖಾನ್ 'ಕೃಷ್ಣಮೃಗ ಬೇಟೆ ಪ್ರಕರಣ' ರಾಜಸ್ಥಾನ ಹೈಕೋರ್ಟ್ ಗೆ ವರ್ಗಾವಣೆ

Suvarna News   | Asianet News
Published : Mar 22, 2022, 11:14 AM IST
ಸಲ್ಮಾನ್ ಖಾನ್ 'ಕೃಷ್ಣಮೃಗ ಬೇಟೆ ಪ್ರಕರಣ' ರಾಜಸ್ಥಾನ ಹೈಕೋರ್ಟ್ ಗೆ ವರ್ಗಾವಣೆ

ಸಾರಾಂಶ

ಬಾಲಿವುಡ್ ನಟ ಸಲ್ಮಾನ್ ಖಾನ್(Salman Khan) ಕೃಷ್ಣಮೃಗ ಭೇಟಿ ಪ್ರಕರಣ(Blackbuck Poaching Case) ಸಂಬಂಧ ಜೋಧಪುರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಎರಡು ಅರ್ಜಿಯನ್ನು ರಾಜಸ್ಥಾನದ ಹೈಕೋರ್ಟ್ ಗೆ(Rajasthan High Court) ವರ್ಗಾವಣೆ ಮಾಡಲು ಅನುಮತಿ ನೀಡಿದೆ.

ಬಾಲಿವುಡ್ ನಟ ಸಲ್ಮಾನ್ ಖಾನ್(Salman Khan) ಕೃಷ್ಣಮೃಗ ಭೇಟಿ ಪ್ರಕರಣ(Blackbuck Poaching Case) ಸಂಬಂಧ ಜೋಧಪುರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಎರಡು ಅರ್ಜಿಯನ್ನು ರಾಜಸ್ಥಾನದ ಹೈಕೋರ್ಟ್ ಗೆ(Rajasthan High Court) ವರ್ಗಾವಣೆ ಮಾಡಲು ಅನುಮತಿ ನೀಡಿದೆ. ಎಲ್ಲಾ ಮೂರು ಪ್ರಕರಣಗಳನ್ನು ಒಂದೇ ಸ್ಥಳದಲ್ಲಿ ವಿಚಾರಣೆ ನಡೆಯಲು ಜೋಧಪುರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಎರಡು ಅರ್ಜಿಗಳನ್ನು ವರ್ಗಾವಣೆ ಮಾಡುವಂತೆ ಕೋರಿ ಸಲ್ಮಾನ್ ಖಾನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ಆಗಲೇ ಒಂದು ಅರ್ಜಿ ವಿಚಾರಣೆ ನಡೆಯುತ್ತಿದೆ. ಇದೀಗ ವರ್ಗಾವಣೆಯಾದ ಅರ್ಜಿ ಸೇರಿದಂತೆ ಎಲ್ಲಾ ಅರ್ಜಿಗಳ ವಿಚಾರಣೆ ಹೈಕೋರ್ಟ್ ನಲ್ಲಿಯೇ ನಡೆಯಲಿದೆ.

ವಿಚಾರಣೆ ಬಳಿಕ ನ್ಯಾಯಮೂರ್ತಿ ಪಿ ಎಸ್ ಭಾಟಿ ಅರ್ಜಿ ವರ್ಗಾವಣೆಗೆ ಅನುಮತಿ ನೀಡಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಲ್ಮಾನ್ ಖಾನ್ ಪರ ವಕೀಲ ಹೆಚ್ ಎಂ ಸರಸ್ವತ್, ಎಲ್ಲಾ ಪ್ರಕರಣಗಳ ವಿಚಾರಣೆ ಒಂದೇ ಸ್ಥಳದಲ್ಲಿ ನಡೆಯಲಿದ್ದು, ಇದು ಅಮೂಲ್ಯ ಸಮಯವನ್ನು ಉಳಿಸುತ್ತೆದ ಎಂದು ಹೇಳಿದರು. ಎರಡು ಕೃಷ್ಣಮೃಗಗಳನ್ನು ಬೇಟಿಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 5, 2018ರಲ್ಲಿ ಜಿಲ್ಲಾ ಸೆಷನ್ ನ್ಯಾಯಾಲಯ ಸಲ್ಮಾನ್ ಖಾನ್ ತಪ್ಪಿತಸ್ಥ ಎಂದು ತೀರ್ಪು ನೀಡಿ, ಐದು ವರ್ಷಗಳ ಶಿಕ್ಷೆ ಪ್ರಕಟಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಮಾನ್ ಖಾನ್ ರಾಜಸ್ಥಾನ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಉಳಿದ ಎರಡು ಅರ್ಜಿ ಜೋಧಪುರ ಸೆಷನ್ ಕೋರ್ಟ್ ನಲ್ಲಿತ್ತು. ಈ ಎರಡು ಅರ್ಜಿಗಳು ಹೈಕೋರ್ಟ್ ಹೈಕೋರ್ಟ್ ಗೆ ವರ್ಗಾವಣೆಯಾದರೆ ಒಟ್ಟಿಗೆ ವಿಚಾರಣೆ ನಡೆಸಬಹುದು ಎಂಬುದು ಸಲ್ಮಾನ್ ಖಾನ್ ಅವರ ಮನವಿ ಆಗಿತ್ತು. ಸಲ್ಮಾನ್ ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ.

ಸ್ವಂತ OTT ಘೋಷಿಸಿದ ಶಾರುಖ್ ಖಾನ್; ಸಲ್ಮಾನ್ ಖಾನ್ ಹೇಳಿದ್ದೇನು?

ಸಲ್ಮಾನ್ ಖಾನ್ ಜೊತೆ ಇನ್ನು ಉಳಿದ ಆರೋಪಿಗಳಾದ ನಟ ಸೈಫ್ ಅಲಿ ಖಾನ್, ನೀಲಂ ಕೊಠಾರಿ, ಸೊನಾಲಿ ಬೇಂದ್ರೆ ಮತ್ತು ಟಬು ಅವರ ಅರ್ಜಿ ವಿಚಾರಣೆ ಸಹ ಹೈಕೋರ್ಟ್ ನಲ್ಲಿ ನಡೆಯುತ್ತಿದೆ.

ಏನಿದು ಪ್ರಕರಣ?

ನಟ ಸಲ್ಮಾನ್ ಖಾನ್ 1998ರಲ್ಲಿ ಹಮ್ ಸಾಥ್ ಸಾಥ್ ಹೈ ಸಿನಿಮಾ ಚಿತ್ರೀಕರಣ ವೇಳೆ ಜೋಧಪುರ್ ಬಳಿಯ ಕಂಕಣಿ ಗ್ರಾಮದಲ್ಲಿ ಸಲ್ಮಾನ್ ಖಾನ್ ಕೃಷ್ಣಮೃಗ ಬೇಟೆಯಾಡಿದ್ದರು. ಪರವಾನಗಿ ಇಲ್ಲದ ಬಂದೂಕು ಬಳಕೆ ಮಾಡಲಾಗಿತ್ತು ಎನ್ನುವ ಆರೋಪ ಕೇಳಿಬಂದಿತ್ತು. ಅಕ್ರಮ ಶಸ್ತ್ರಾಸ್ತ್ರ ಬಳಕೆ ಮಾಡಿರುವ ಸಂಬಂಧ ಅಕ್ರಮ ಶಸ್ತ್ರಾಸ್ತ ಕಾಯ್ದೆ ಮತ್ತು ವನ್ಯಜೀವಿ ರಕ್ಷಣಾ ಕಾಯಿದೆ ಪ್ರತ್ಯೇಕ ಪ್ರಕರಣಗಳು ದಾಖಲಾಗಿತ್ತು.

Salman Khan Marriage: ಬಾಲಿವುಡ್ ಸುಲ್ತಾನ್ ಸೀಕ್ರೆಟ್ ಆಗಿ ಮದುವೆ ಆದ್ರಾ ?

1998ರ ಸೆಪ್ಟೆಂಬರ್‌ 26, 27ರಂದು ಭಾವಾಡದಲ್ಲಿ ಕೃಷ್ಣಮೃಗ ಕೊಂದಿದ್ದ ಪ್ರಕರಣ, ಹಾಗೂ 1998ರ ಸೆಪ್ಟೆಂಬರ್‌ 28, 29ರಂದು ಮಥಾನಿಯಾದಲ್ಲಿ ಚಿಂಕಾರ ಕೊಂದ ಆರೋಪ ಹೊರಿಸಲಾಗಿತ್ತು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?