RRR Pre Release Event ಕನ್ನಡಕ್ಕೆ ಮಾಡಿದ ಅಪಮಾನ- ವಾಟಾಳ್ ನಾಗರಾಜ್

By Suvarna News  |  First Published Mar 21, 2022, 6:36 PM IST

ಆರ್ ಆರ್ ಆರ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ವಿರುದ್ಧ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾನ ಮರ್ಯಾದೆ ಇದ್ದವರು ಇಲ್ಲಿ ಮಾಡಬಾರದಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಶಿವರಾಜ್ ಕುಮಾರ್ ಭಾಗವಹಿಸಬಾರದಿತ್ತು ಎಂದು ಕಿಡಿಕಾರಿದ್ದಾರೆ.


ಆರ್ ಆರ್ ಆರ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ವಿರುದ್ಧ ವಾಟಾಳ್ ನಾಗರಾಜ್(Vatal Nagaraj ) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ ನಗರದ ರೈಲ್ವೆ ನಿಲ್ದಾಣ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ವಾಟಾಳ್, ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ನೆಲದಲ್ಲಿ ಅನ್ಯಭಾಷಿಗರು ದೌರ್ಜನ್ಯ ನಡೆಸುತ್ತಿದ್ದಾರೆ, ಗಂಡು ಮೆಟ್ಟಿದ ನಾಡು, ಕನ್ನಡದ ನೆಲ, ಕನ್ನಡಿಗರ ನೆಲ, ಕನ್ನಡಕ್ಕೆ ಮಾನ್ಯತೆ, ಗೌರವವಿದೆ. ಆದ್ರೆ ಇಲ್ಲಿ ತೆಲುಗು ಚಿತ್ರ ಆರ್ ಆರ್ ಆರ್ ಮಾನ ಮರ್ಯಾದೆ ಇದ್ದವರು ಮಾಡಬಾರದಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಶಿವರಾಜ್ ಕುಮಾರ್ ಭಾಗವಹಿಸಬಾರದಿತ್ತು. ಆರ್ ಆರ್ ಆರ್ ಕಾರ್ಯಕ್ರಮ ಕನ್ನಡಿಗರಿಗೆ ಮಾಡಿದ ಅಪಮಾನ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು(Vatal Nagaraj outrage Against RRR Pre Release Event).

ಆರ್ ಆರ್ ಆರ್ ಫ್ರೀ ರಿಲೀಸ್ ಕನ್ನಡಕ್ಕೆ ಮಾಡಿದ ಅಪಮಾನ

Tap to resize

Latest Videos

ಆರ್ ಆರ್ ಆರ್ ಮೂವಿ ಮೂಲತಃ ತೆಲುಗಿನ ಚಿತ್ರ ಆದ್ರೆ ಕನ್ನಡದ ನೆಲದಲ್ಲಿ ಇಂತಹ ಕಾರ್ಯಕ್ರಮ ಮಾಡಿದ್ದು, ಕನ್ನಡ ಭಾಷೆ, ಚಿತ್ರರಂಗಕ್ಕೆ ಮಾಡಿದ ಅಪಮಾನ ಎಂದು ವಾಟಾಳ್ ಕಿಡಿಕಾರಿದ್ರು. ಇದೇ ವೇಳೆ ಮಾತನಾಡಿದ ಅವರು ಅದೆಷ್ಟೊ ಒಳ್ಳೆಯ ಕನ್ನಡ ಸಿನೆಮಾಗಳು ಬಂದವು, ಯಾವುದಾದರು ಸಿನೆಮಾ ಕಾರ್ಯಕ್ರಮ ಈ ರೀತಿ ಮಾಡಿದ್ರಾ? ಯಾಕೆ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ರೆ, ಕನ್ನಡ ನೆಲ, ಜಲ ಮೇಲೆ ಇಂತಹ ದೌರ್ಜನ್ಯವನ್ನು ನಾವು ಸಹಿಸಲು ಆಗಲ್ಲ ಎಂದು ವಾಗ್ದಾಳಿ ನಡೆಸಿದ್ರು ಅಲ್ಲದೇ ಈ ಕಾರ್ಯಕ್ರಮವನ್ನು ನಡೆಸಿರೋದನ್ನು ಖಂಡಿಸುತ್ತೇನೆ, ಈ ಕಾರ್ಯಕ್ರಮದ ಬಗ್ಗೆ ಸಂಪೂರ್ಣ ತನಿಖೆ ಮಾಡಬೇಕೆಂದು ಆಗ್ರಹಿಸಿದರು.

RRR Movie: ಪ್ರೀ-ರಿಲೀಸ್ ಈವೆಂಟ್‌ಗೂ ಮುನ್ನ ನಿರ್ದೇಶಕರು ಹಾಗೂ ನಟರ ನಡುವೆ ನಡೆದಿದ್ದೇನು ಗೊತ್ತಾ?

ರಾಜ್ಯದಲ್ಲಿ ಪರಭಾಷ ಚಿತ್ರಗಳ ಬ್ಯಾನ್ ಆಗಲಿ

ಆರ್ ಆರ್ ಆರ್ ಮೂವಿ ಈವೆಂಟ್ ಬಳಿಕ ಎಲ್ಲರೂ ಜಾಗೃತರಾಗಬೇಕು, ರಾಜ್ಯದಲ್ಲಿ ಪರಭಾಷಾ ಚಿತ್ರಗಳಿಗೆ ಬ್ರೇಕ್ ಹಾಕಬೇಕಿದೆ, ಇಲ್ಲವಾದಲ್ಲಿ ಕನ್ನಡಕ್ಕೆ ಅಪಾಯ ಕಟ್ಟಿಟ್ಟಬುತ್ತಿ ಎಂದು ವಾಟಾಳ್ ಹೇಳಿದ್ರು.. ತೆಲುಗು, ತಮಿಳು, ಮಲಯಾಳಂ, ಗುಜರಾತಿ, ಮಾರ್ವಾಡಿ, ಹಿಂದಿ ನಿಷೇಧ ಹಾಕಲಿ ಎಂದು ವಾಗ್ದಾಳಿ ನಡೆಸಿದರು.

ಬೇರೆ ರಾಜ್ಯಗಳಲ್ಲಿ ಕನ್ನಡ ಸಿನೆಮಾ ಯಾಕೆ ಓಡಲ್ಲ

ಸಿಲಿಕಾನ್ ಸಿಟಿ ಬೆಂಗಳೂರು ಕನ್ನಡಕ್ಕಿಂತ ಪರಭಾಷಿಗರ ದಬ್ಬಾಳಿಕೆಯೇ ಹೆಚ್ಚಾಗುತ್ತಿದೆ. ಎಲ್ಲಾ ಭಾಷೆಗಳ ಸಿನೆಮಾ ರಿಲೀಸ್ ಆಗ್ತಿದೆ, ಆದ್ರೆ ದುರಂತ ನಮ್ಮ ಕನ್ನಡ ಸಿನೆಮಾ ಯಾಕೆ ಬೇರೆ ಭಾಷೆಗಳಲ್ಲಿ ರಿಲೀಸ್ ಆಗಲ್ಲ, ಒಂದೆರಡು ಕಡೆ ಆದ್ರು ಹೆಚ್ಚು ದಿನಗಳ ಕಾಲ ಓಡಲ್ಲ ಎಂದ್ರು.

RRR Event: ಅದ್ಧೂರಿಯಾಗಿ ನಡೆಯಿತು 'ಆರ್‌ಆರ್‌ಆರ್‌' ಪ್ರೀ-ರಿಲೀಸ್ ಈವೆಂಟ್!

ಡಬ್ಬಿಂಗ್ ಸಂಸ್ಕೃತಿ ವಿರೋಧಿಸಿದಕ್ಕೆ ಕೋರ್ಟ್ ನಿಂದ ಬಂತು ನೊಟೀಸ್

ವಾಟಾಳ್ ಎಂದ್ರೆ ಕನ್ನಡ, ಕನ್ನಡ ಎಂದ್ರೆ ವಾಟಾಳ್ ನಾನು ನನ್ನ ಕೊನೆ ಉಸಿರಿರೋವರೆಗೂ ಕನ್ನಡಕ್ಕಾಗಿಯೇ ಹೋರಾಡುತ್ತೇನೆ .. ಈ ಹಿಂದೆ ರಾಜ್ಯದಲ್ಲಿ ಬೇರೆ ಭಾಷೆ ಚಿತ್ರಗಳ ಡಬ್ಬಿಂಗ್ ಮಾಡಬಾರದೆಂದು ವಿರೋಧಿಸಿದಕ್ಕೆ ದೆಹಲಿಯ ಕೋರ್ಟ್ ನಿಂದ ಪೊಲೀಸರಿಗೆ ವಾಟಾಳ್ ನಾಗರಾಜ್ ರನ್ನು ಬಂಧಿಸಿ ಕರೆ ತನ್ನಿ ಎಂದು ಪೊಲೀಸರಿಗೆ ನೋಟೀಸ್ ನೀಡಿದೆ.. ಡಬ್ಬಿಂಗ್ ನಿಂದ ಕನ್ನಡ ಭಾಷೆ, ಸಂಸ್ಕೃತಿಗೆ ನಟರಿಗೆ ಅಪಾಯ, ಇದೊಂದು ಕೆಟ್ಟ ನೀತಿ ಆಗುತ್ತೆ, ರಾಜ್ಯ ಸರ್ಕಾರ ಇದನ್ನು ಕೂಡಲೇ ನಿಷೇಧಿಸಬೇಕು ಎಂದು ಹೇಳಿದ್ರು..

ಎಲ್ಲಾ ಕನ್ನಡ ಸಿನೆಮಾಗಳಿಗೂ ತೆರಿಗೆ ರಿಯಾಯ್ತಿ ನೀಡಲಿ

ಇತ್ತೀಚೆಗೆ ಬಿಡುಗಡೆಯಾದ ಕಾಶ್ಮೀರಿ ಪೈಲ್ಸ್ ಸಿನೆಮಾಗೆ ರಿಯಾಯಿತಿ ಜೊತೆಗೆ ಡಬ್ಬಿಂಗ್ ಗೂ ಒತ್ತಾಯ ಮಾಡುತ್ತಿದ್ದಾರೆ, ಆದ್ರೆ ಅದು ಒಳ್ಳೆಯದಲ್ಲ, ಎಲ್ಲಾ ಕನ್ನಡ ಸಿನೆಮಾಗಳಿಗೂ ತೆರಿಗೆ ರಿಯಾಯಿತಿ ನೀಡಲಿ ಎಂದು ಒತ್ತಾಯಿಸಿದರು.

ರಾಜಮೌಳಿ ವಿರುದ್ಧ ಕಿಡಿ

ಆರ್ ಆರ್ ಆರ್ ಸಿನೆಮಾ ನಿರ್ದೇಶಕ ರಾಜಮೌಳಿ ವಿರುದ್ಧ ಕಿಡಿಕಾರಿದ ವಾಟಾಳ್ ಕನ್ನಡ ಭಾಷೆ ಮೇಲೆ ಈ ರೀತಿಯ ದೌರ್ಜನ್ಯ ಸರಿಯಲ್ಲ ಎಂದರು, ಅವರಿಗೆ ಬೇಕಾದ್ರೆ ಆಂಧ್ರ, ತೆಲಂಗಾಣದಲ್ಲಿ ಕಾರ್ಯಕ್ರಮ ಮಾಡಲಿ, ಇಲ್ಲೆ ಕಾರ್ಯಕ್ರಮ ಮಾಡಿರೋ ಉದ್ದೇಶ ಏನು? ನಿಮ್ಮ ವ್ಯಾಪಾರಕ್ಕಾಗಿ ಕನ್ನಡದ ಭೂಮಿಯನ್ನು ದುರುಪಯೋಗ ಮಾಡಿಕೊಂಡಿದ್ದು ಸರಿಯಲ್ಲ ಜೊತೆಗೆ ವೇದಿಕೆ ಮೇಲೆ ಇದ್ದವರನ್ನು ಬಾಯಿಗೆ ಬಂದಂತೆ ಬೈಯೋದು ಸರಿಯಲ್ಲ ಎಂದ್ರು.

 

click me!