ಇಷ್ಟುದಿನ ಮೌನವಾಗಿರುವುದೇ ದೊಡ್ಡ ತಪ್ಪಾಗಿದೆ; ಬಾಯ್ಕಟ್ ಟ್ರೆಂಡ್‌ಗೆ ಅರ್ಜುನ್ ಕಪೂರ್ ರಿಯಾಕ್ಷನ್

By Shruiti G Krishna  |  First Published Aug 17, 2022, 5:44 PM IST

ಬಾಲಿವುಡ್‌ಗೆ ಬಾಯ್ಕಟ್ ಬಿಸಿ ಏರುತ್ತಿರುವಾಗಲೇ ಅನೇಕರು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಖ್ಯಾತ ನಿರ್ಮಾಪಕ ಏಕ್ತಾ ಕಪೂರ್ ಬಳಿಕ ಇದೀಗ ನಟ ಅರ್ಜುನ್ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ.  ನಾವು ಸೈಲೆಂಟ್ ಆಗಿರುವುದು ದೊಡ್ಡ ತಪ್ಪಾಗಿದೆ ಎಂದು ಹೇಳಿದ್ದಾರೆ. 


ಬಾಲಿವುಡ್‌ಗೆ ಬಾಯ್ಕಟ್ ಸಮಸ್ಯೆ ಎದುರಿಸುತ್ತಿವೆ. ಬಾಯ್ಕಟ್‌ಗೆ ಹೆದರಿರುವ ಬಾಲಿವುಡ್ ಸ್ಟಾರ್ಸ್ ಇದೀಗ ಬಾಯ್ಕಟ್‌ಗೆ ಬಾಯ್ಕಟ್ ಹೇಳಲು ಮುಂದಾಗಿದ್ದಾರೆ. ಇತ್ತೀಚಿಗಷ್ಟೆ ರಿಲೀಸ್ ಆದ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದ ವಿರುದ್ಧ ಅನೇಕರು ಆಕ್ರೋಶ ಹೊರಹಾಕಿದ್ದರು. ಲಾಲ್ ಸಿಂಗ್ ಚಡ್ಡಾ ಬಹಿಷ್ಕರಿಸುವಂತೆ ಒತ್ತಾಯಿಸಿ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಮಾಡಿದ್ದರು. ಬಾಯ್ಕಟ್ ಬಿಸಿನಾ ಅಥವಾ ಸಿನಿಮಾ ಅಭಿಮಾನಿಗಳ ನಿರೀಕ್ಷೆ ಮಟ್ಟ ಮುಟ್ಟಿಲ್ಲವೋ ಒಟ್ನಲ್ಲಿ ಲಾಲ್ ಸಿಂಗ್ ಚಡ್ಡಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿದೆ. ಬಾಯ್ಕಟ್ ಬಿಸಿ ಏರುತ್ತಿರುವಾಗಲೇ ಅನೇಕರು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಖ್ಯಾತ ನಿರ್ಮಾಪಕ ಏಕ್ತಾ ಕಪೂರ್ ಬಳಿಕ ಇದೀಗ ನಟ ಅರ್ಜುನ್ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ.  ನಾವು ಸೈಲೆಂಟ್ ಆಗಿರುವುದು ದೊಡ್ಡ ತಪ್ಪಾಗಿದೆ ಎಂದು ಹೇಳಿದ್ದಾರೆ. 

ಇತ್ತೀಚಿಗೆ ಆಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ಮಾತ್ರವಲ್ಲ ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನ್, ಇನ್ನು ರಿಲೀಸ್ ಆಗಬೇಕಿರುವ ಬ್ರಹ್ಮಾಸ್ತ್ರ ಶಾರುಖ್ ಖಾನ್ ಅವರ ಪಠಾಣ್, ಹೃತಿಕ್ ರೋಷನ್ ಅವರ ವಿಕ್ರಂ ವೇದ ಸಿನಿಮಾಗಳಿಗೂ ಬಾಯ್ಕಟ್ ಭೂತ ಕಾಡುತ್ತಿದೆ. ಬಾಯ್ಕಟ್ ಸಮಸ್ಯೆ ಜೋರಾಗುತ್ತಿದ್ದಂತೆ ಬಾಲಿವುಡ್ ಮಂದಿ ಮೌನ ಮುರಿಯುತ್ತಿದ್ದಾರೆ. ಬಾಯ್ಕಟ್ ಟ್ರೆಂಡ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಇದೀಗ ಅರ್ಜುನ್ ಕಪೂರ್ ಈ ಬಗ್ಗೆ ಮಾತನಾಡಿದ್ದಾರೆ. 

Tap to resize

Latest Videos

ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ ಬಾಲಿವುಡ್ ಬಹಿಷ್ಕಾರದ ಟ್ರೆಂಡ್ ಬಗ್ಗೆ ಮಾತನಾಡಿರುವ ಅರ್ಜುನ್, 'ನಾವು ಯಾವಾಗಲೂ ಕೆಲಸ ಮಾತನಾಡಲಿ ಎನ್ನುವುದನ್ನು ನಂಬಿದ್ದೇವೆ, ಇದೆಲ್ಲ ಪರವಾಗಿಲ್ಲ. ನಾವು ಇಷ್ಟು ದಿನ ಹಿಸಿಕೊಂಡಿದ್ದಕ್ಕೆ ಜನರು ಈಗ ಇದನ್ನೇ ಬಳಸಿಕೊಳ್ಳುತ್ತಿದ್ದಾರೆ. ಇದ್ಯಾವುದು ಮ್ಯಾಟರ್ ಆಗಲ್ಲ' ಎಂದು ಹೇಳಿದರು. 

ಬಾಲಿವುಡ್‌ಗೆ ಹೆಚ್ಚಾಯ್ತು ಬಾಯ್ಕಟ್ ಭಯ; ಖಾನ್‌ಗಳಿಗೆ ಕಂಠಕವಾಗುತ್ತಾ ಅಭಿಯಾನ?

ಬಾಯ್ಕಟ್ ಟ್ರೆಂಡ್ ಬಗ್ಗೆ ಮಾತನಾಡಿದ ಅರ್ಜುನ್, 'ನಾವು ಒಟ್ಟಾಗಿ ಇದರ ವಿರುದ್ಧ ಏನಾದರೂ ಮಾಡಬೇಕಾಗಿದೆ, ಏಕೆಂದರೆ ಏನೇ ಬರೆದರೂ, ಯಾವುದೇ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿದರೂ ಅವು ವಾಸ್ತವದಿಂದ ದೂರವಿದೆ. ಕೆಲವು ಅಜೆಂಡಾಗಳು, ವಾಸ್ತವವಾಗಿ ಅವು ಅಸ್ತಿತ್ವದಲ್ಲಿಲ್ಲದಿದ್ದಾಗ ಅವುಗಳನ್ನು ದೊಡ್ಡದಾಗಿ ಪರಿವರ್ತಿಸಲಾಗುತ್ತದೆ' ಎಂದು ಹೇಳಿದರು. 'ಇಂಡಸ್ಟ್ರಿ ತನ್ನ ಹೊಳಪನ್ನು ಕಳೆದುಕೊಳ್ಳುತ್ತಿದೆ. ನಾವು ಕಣ್ಣು ಮುಚ್ಚಿ ಇರಲಿ ಬಿಡಿ ಎನ್ನುತ್ತಿದ್ದೇವೆ. ಥಿಯೇಟರ್‌ಗಳು ಮತ್ತೆ ತೆರೆದಾಗ, ಸಿನಿಮಾಗಳು ಚೆನ್ನಾಗಿ ಬರುತ್ತವೆ, ಎಲ್ಲವೂ ಚೆನ್ನಾಗಿರುತ್ತದೆ ಎಂದು ನಾವು ನಂಬಿದ್ದೇವೆ' ಎಂದರು 'ಕಳೆದ ಎರಡು ತಿಂಗಳಿನಿಂದ ಸಾಕಷ್ಟು ಚಿತ್ರಗಳು ಸೋತಿವೆ ಇದು ಚಿತ್ರರಂಗಕ್ಕೆ ದೊಡ್ಡ ಹೊಡೆತವಾಗಿದೆ' ಎಂದರು. 

ಬಾಲಿವುಡ್ ಖಾನ್‌ಗಳು ಲೆಜೆಂಡ್; ಬಾಯ್ಕಟ್ ಟ್ರೆಂಡ್‌ಗೆ ಏಕ್ತಾ ಕಪೂರ್ ರಿಯಾಕ್ಷನ್

ಏಕ್ತಾ ಕಪೂರ್ ಹೇಳಿಕೆ

'ಇಂಡಸ್ಟ್ರಿಯಲ್ಲಿ ಅತ್ಯುತ್ತಮ ಬ್ಯುಸಿನೆಸ್ ನೀಡಿದ ಜನರನ್ನು ನಾವು ಬಹಿಷ್ಕರಿಸುತ್ತಿರುವುದು ತುಂಬಾ ವಿಚಿತ್ರವಾಗಿದೆ. ಉದ್ಯಮದಲ್ಲಿರುವ ಎಲ್ಲಾ ಖಾನ್‌ಗಳು (ಶಾರುಖ್ ಖಾನ್, ಸಲ್ಮಾನ್ ಖಾನ್) ಮತ್ತು ವಿಶೇಷವಾಗಿ ಅಮೀರ್ ಖಾನ್ ಲೆಜೆಂಡ್‌ಗಳು. ನಾವು ಅವರನ್ನು ಬಹಿಷ್ಕರಿಸಲು ಸಾಧ್ಯವಿಲ್ಲ, ಅಮೀರ್ ಖಾನ್ ಅವರನ್ನು ಎಂದಿಗೂ ಬಹಿಷ್ಕರಿಸಲಾಗುವುದಿಲ್ಲ, ಅವರು ಸಾಫ್ಟ್ ರಾಯಭಾರಿ, ಅಮೀರ್ ಖಾನ್ ಅವರನ್ನು ಬಹಿಷ್ಕರಿಸಲು ಸಾಧ್ಯವಿಲ್ಲ' ಎಂದು ಹೇಳಿದರು. 

click me!