ನಟ ನಾಗ ಚೈತನ್ಯ ಹೈದರಾಬಾದ್ ನಲ್ಲಿ ಹುಡುಗಿಯೊಬ್ಬಳಿಗೆ ಕದ್ದು ಮುಚ್ಚಿ ಕಿಸ್ ಮಾಡಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆಯನ್ನು ಬಹಿರಂಗ ಪಡಿಸಿದ್ದಾರೆ.
ಟಾಲಿವುಡ್ ಸ್ಟಾರ್ ನಾಗ ಚೈತನ್ಯ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೆ ಇದ್ದಾರೆ. ಅದರಲ್ಲೂ ಅವರ ಖಾಸಗಿ ವಿಚಾರಗಳು ಹೆಚ್ಚಾಗಿ ಸದ್ದು ಮಾಡುತ್ತಿದೆ. ಸಮಂತಾ ಅವರಿಂದ ದೂರ ಆದ ಬಳಿಕ ಅನೇಕ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಸ್ಯಾಮ್ ಮತ್ತು ಚೈ ವಿಚ್ಛೇದನ ಸುದ್ದಿ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಅಕ್ಟೋಬರ್ 2, 2021ರಲ್ಲಿ ಇಬ್ಬರೂ ವಿಚ್ಛೇದನ ಪಡೆಯುತ್ತಿದ್ದೀವಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದರು. ಸಮಂತಾ ಮತ್ತು ನಾಗಚೈತನ್ಯ ಅವರ ಈ ನಿರ್ಧಾರ ಸಂಚಲನ ಸೃಷ್ಟಿಮಾಡಿತ್ತು. ಆದರೆ ಯಾಕೆ ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಿಲ್ಲ. ಆದರೆ ಇತ್ತೀಚಿಗೆ ಸಂದರ್ಶನಗಳಲ್ಲಿ ನಾಗ್ ಅೇಕ ಇಂಟ್ರಸ್ಟಿಂಗ್ ವಿಚಾರಗಳನ್ನು ವಿಚ್ಚಿಟ್ಟಿದ್ದಾರೆ. ಆಮೀರ್ ಖಾನ್ ನಟನೆಯ ಲಾಲಾ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಟಿಸಿದ್ದ ನಾಗ ಚೈತನ್ಯ ಬಾಲಿವುಡ್ ನ ಅನೇಕ ವಾಹಿನಿಗಳಿಗೆ ಸಂದರ್ಶನ ನೀಡಿದ್ದರು. ಈ ವೇಳೆ ಸಮಂತಾ ಬಗ್ಗೆ ಜೊತೆಗೆ ತನ್ನ ಲವ್ ಲೈಫ್ ಬಗ್ಗೆಯೂ ಬಹಿರಂಗ ಪಡಿಸಿದ್ದರು.
ಹೈದರಾಬಾದ್ ನಲ್ಲಿ ನಾಗ ಚೈತನ್ಯ ಹುಡುಗಿಯೊಬ್ಬಳಿಗೆ ಕದ್ದು ಮುಚ್ಚಿ ಕಿಸ್ ಮಾಡಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆಯನ್ನು ಬಹಿರಂಗ ಪಡಿಸಿದ್ದಾರೆ. ಸಮಂತಾ ಜೊತೆ ಪ್ರೀತಿಯಲ್ಲಿ ಬೀಳುವ ಮೊದಲೇ ನಾಗ ಚೈತನ್ಯ ಮಾಡಿದ ತುಂಟಾಟಗಳ ಬಗ್ಗೆ ಬಾಯಿಬಿಟ್ಟಿದ್ದಾರೆ. ಕಾರಿನ ಹಿಂದಿನ ಸೀಟಿನಲ್ಲಿ ನಾಗ ಚೈತನ್ಯ ತನ್ನ ಹುಡುಗಿ ಜೊತೆ ಕುಳಿತಿದ್ದರು. ರೊಮ್ಯಾಂಟಿಕ್ ಆದಂತಹ ಆ ಸಂದರ್ಭದಲ್ಲಿ ನಾಗ ಚೈತನ್ಯ ಹುಡುಗಿಗೆ ಮುತ್ತುಗಳನ್ನು ನೀಡುತ್ತಿದ್ದರು. ಆಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರಂತೆ. ಈ ವಿಚಾರವನ್ನು ನಾಗ ಚೈತನ್ಯ ಹೇಳಿದ್ದಾರೆ. ಆದರೆ ಯಾವ ಹುಡುಗಿ ಏನು ಅಂತ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಸಮಂತಾ ಸಿಕ್ಕಿದ್ರೆ ಹೀಗ್ ಮಾಡ್ತಾರಂತೆ ಮಾಜಿ ಪತಿ ನಾಗಚೈತನ್ಯ
ಇನ್ನು ನಾಗ ಚೈತನ್ಯ ಹೀಗೆ ಹೇಳಿದ ಬಳಿಕ ನಿರೂಪಕ, ಸಮಂತಾ ರುತ್ ಪ್ರಭು ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಬಳಿಕ ನಾಗ ಚೈತನ್ಯ ಬದುಕಿನಲ್ಲಿ ಮಹಿಳೆಯರ ಆಕರ್ಷಣೆ ಹೆಚ್ಚಿದೆಯೇ? ಎಂದು ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರಿಸಿದ ಅವರು, 'ಒಳ್ಳೆಯ ರೀತಿಯಲ್ಲಿ ಯಾವಾಗಲೂ ಮಹಿಳೆಯರು ನನ್ನ ಕಡೆಗೆ ಆಕರ್ಷಿತರಾಗುತ್ತಾರೆ. ಈ ರೀತಿ ಇರುವುದು ಖುಷಿ ಆಗುತ್ತದೆ' ಎಂದು ನಾಗ ಚೈತನ್ಯ ಹೇಳಿದರು.
ಬಾಲಿವುಡ್ ಸ್ಟಾರ್ ನಿರ್ದೇಶಕರ ಆಫೀಸ್‌ನಲ್ಲಿ ನಾಗಚೈತನ್ಯ; ಕುತೂಹಲ ಮೂಡಿಸಿದ ಭೇಟಿ
ಇನ್ನು ನಾಗ ಚೈತನ್ಯ ಸಿನಿಮಾ ವಿಚಾರಕ್ಕೆ ಬರುವುದಾದರೆ ನಾಗ ಚೈತನ್ಯತೆಲುಗಿನಲ್ಲಿ ಕೊನೆಯದಾಗಿ ಥ್ಯಾಂಕ್ ಯೂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಈ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಈ ಸಿನಿಮಾ ಬಳಿಕ ಲಾಲ್ ಸಿಂಗ್ ಚಡ್ಡಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಇದು ನಾಗ ಚೈತನ್ಯ ನಟನೆಯ ಮೊದಲ ಹಿಂದಿ ಸಿನಿಮಾವಾಗಿದೆ. ಸೈನಿಕನಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಸಿನಿಮಾವೂ ಹೇಳಿಕೊಳ್ಳುಷ್ಟು ಯಶಸ್ಸು ಕಾಣಲಿಲ್ಲ. ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿದೆ. ಸದ್ಯ ಮತ್ತೊಂದು ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ಮುಂದೆ ಹೆಚ್ಚು ಹಿಂದಿ ಸಿನಿಮಾಗಳನ್ನೂ ಸಹ ಮಾಡುತ್ತಾರಾ ಎಂದು ಕಾದುನೋಡಬೇಕು.