30 ಲಕ್ಷದ ಜಮೀನನ್ನು 70 ಕೋಟಿಗೆ ಮಾರಿದ ನಟ ಚಿರಂಜೀವಿ: ಏನಿದು ಗೋಲ್‌ಮಾಲ್‌ ಎಂದ ನೆಟ್ಟಿಗರು!

Published : Aug 17, 2022, 05:29 PM IST
30 ಲಕ್ಷದ ಜಮೀನನ್ನು 70 ಕೋಟಿಗೆ ಮಾರಿದ ನಟ ಚಿರಂಜೀವಿ: ಏನಿದು ಗೋಲ್‌ಮಾಲ್‌ ಎಂದ ನೆಟ್ಟಿಗರು!

ಸಾರಾಂಶ

90 ದಶಕದಲ್ಲಿ ಖರೀದಿಸಿದ ಜಾಗವನ್ನು ಮಾರುತ್ತಿರುವ ಮೆಗಾ ಸ್ಟಾರ್. ಕಾರಣ ತಿಳಿಸಿ ಎಂದು ಡಿಮ್ಯಾಂಡ್ ಮಾಡುತ್ತಿರುವ ನೆಟ್ಟಿಗರು.... 

150ಕ್ಕೂ ಹೆಚ್ಚು ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿ ಸೂಪರ್ ಸ್ಟಾರ್, ಮೆಗಾ ಸ್ಟಾರ್ ಎಂದು ಕರೆಸಿಕೊಂಡಿರುವ ಓನ್ಲಿ ಕಿಂಗ್ ಚಿರಂಜೀವಿ. 90ರ ದಶಕದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಅತಿ ಹೆಚ್ಚು ಸಂಪಾದನೆ ಮಾಡಿರುವ ನಟ ಹೈದರಾಬಾದ್‌ನಲ್ಲಿ ಸಾಕಷ್ಟು ಆಸ್ತಿಗಳನ್ನು ಖರೀದಿ ಮಾಡಿದ್ದಾರೆ. ಆಗಿದ್ದ ಬೆಲೆಗೂ ಈಗಿನ ಬೆಲೆ ತುಂಬಾನೇ ವ್ಯತ್ಯಾಸವಿದೆ. ಇದೀಗ ಹೈದರಾಬಾದ್‌ನಲ್ಲಿರುವ ಮತ್ತೊಂದು ಆಸ್ತೆಯನ್ನು ಚಿರು ಮಾರಾಟ ಮಾಡಲು ಮುಂದಾಗಿದ್ದಾರೆ. 

ಹೌದು! ಹೈದರಾಬಾದ್‌ ಫಿಲ್ಮ್‌ ನಗರ್‌ನ ಮುಖ್ಯರಸ್ತೆಯಲ್ಲಿರುವ 3 ಸಾವಿರ ಚದರ ಜಮೀನನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. 90ರ ದಶಕದಲ್ಲಿ 30 ಲಕ್ಷ್ಮಿ ರೂಪಾಯಿ ಕೊಟ್ಟು ಚಿರಂಜೀವಿ ಈ ಜಾಗವನ್ನು ಖರೀದಿ ಮಾಡಿದ್ದರು. ಈಗ ಈ ಜಾಗವನ್ನು 70 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಮಾತುಕತೆ ನಡೆಯುತ್ತಿದ್ದು ಟೋಕನ್ ಅಡ್ವಾನ್ಸ್‌ ಮಾತ್ರ ಪಡೆದುಕೊಂಡಿದ್ದಾರಂತೆ. 

ಈ ಜಮೀನಿನ ಚದರಡಿ ಬೆಲೆ 2 ಲಕ್ಷ ರೂಪಾಯಿ. ಎಲ್ಲಾ ವಿಚಾರಗಳು ಲೀಕ್ ಆಗುತ್ತಿದ್ದಂತೆ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ. ಒಂದು ಚಿತ್ರಕ್ಕೆ 20-30 ಕೋಟಿ ಪಡೆಯುವ ನಟ ಇಷ್ಟೊಂದು ಹಣ ಡಿಮ್ಯಾಂಡ್ ಮಾಡಿ ಯಾಕೆ ಜಮೀನು ಮಾರಾಟ ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಕೆಲವು ಮೂಲಗಳಿಂದ ಕೇಳಿ ಬಂದಿರುವ ಮಾಹಿತಿ ಪ್ರಕಾರ ತೆಲುಗು ಪ್ರಮುಖ ದಿನ ಪತ್ರಿಕೆಯೊಂದರ ಮಾಲೀಕರು ಈ ಜಮೀನು ಬೇಕೆಂದು ಕೇಳುತ್ತಿದ್ದರಂತೆ. ದೊಡ್ಡ ಕಟ್ಟದ ಕಟ್ಟಿಸಿ ಆಫೀಸ್‌ ಪ್ರಾರಂಭಿಸಲು ಮುಂದಾಗಿದ್ದಾರಂತೆ.

ಹೆಸರು ಬದಲಾಯಿಸಿಕೊಂಡ ಚಿರಂಜೀವಿ?

Chiranjeevi ಎಂದು ಇಷ್ಟು ದಿನ ಹೆಸರು ಬಳಸಲಾಗಿತ್ತು ಆದರೀಗ  Chiranjeeevi ಎಂದು ಮಾಡಿಕೊಂಡಿದ್ದಾರೆ. ಎರಡು e ಇದ್ದ ಜಾಗದಲ್ಲಿ ಮೂರು e ಮಾಡಿಕೊಂಡಿದ್ದಾರೆ. ಸಣ್ಣ ಬದಲಾವಣೆ ಆಗಿದ್ದರೂ ಅದರ ಹಿಂದಿರುವ ಕಾರಣ ಹುಡುಕಲು ಅಭಿಮಾನಿಗಳು ಶುರು ಮಾಡಿದ್ದಾರೆ. ಆಚಾರ್ಯ ಸಿನಿಮಾದ ಮೇಲೆ ಚಿರಂಜೀವಿ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಇಟ್ಟುಕೊಂಡಿದ್ದರು ಸಿನಿಮಾ ಹಿಟ್ ಆಗದಿದ್ದರೂ ತಮ್ಮ ಪಾತ್ರಕ್ಕೆ ಪ್ರಶಂಸೆ ಸಿಕ್ಕಿ ಮತ್ತಷ್ಟು ಆಫರ್‌ಗಳು ಬರುತ್ತದೆ ಎಂದುಕೊಂಡಿದ್ದರು ಆದರೆ ಎಲ್ಲಾ ಉಲ್ಟಾ ಹೊಡೆಯಿತ್ತು.

ಅಸಲಿ ಕಥೆ ಏನು?

ಚಿರಂಜೀವಿ ಹೆಸರಿನ ಹಿಂದಿರುವ ಕಥೆ ಹುಡುಕುತ್ತಿರುವ ನೆಟ್ಟಿಗರಿಗೆ ಆಪ್ತ ಮೂಲಗಳಿಂದ ಸ್ಪಷ್ಟನೆ ಸಿಕ್ಕಿದೆ. ಗಾಡ್‌ಫಾದರ್‌ ಸಿನಿಮಾದ ಫಸ್ಟ್‌ ಲುಕ್ ಟೀಸರ್‌ನಲ್ಲಿ ಹೆಸರು ತಪ್ಪಾಗಿದೆ ಇದೆಲ್ಲಾ ತಾಂತ್ರಿಕ ಸಮಸ್ಯೆ ಅಷ್ಟೆ ಜನರು ಅದನ್ನು ತಪ್ಪಾಗಿ ತಿಳಿದುಕೊಂಡಿದ್ದಾರೆ. ಮುಂದಿನ ವಿಡಿಯೋದಲ್ಲಿ ಇದೆಲ್ಲಾ ಸರಿ ಮಾಡಲಾಗುತ್ತದೆ ಎಂದಿದ್ದಾರೆ. 

ಮೆಗಾಸ್ಟಾರ್ ಚೀರಂಜೀವಿ ಬಿಚ್ಚಿಟ್ರು ದಕ್ಷಿಣ ಚಿತ್ರರಂಗಕ್ಕಾದ ಅವಮಾನದ ಕಥೆ

ಸತ್ಯ ತೆರೆದಿಟ್ಟ ನಟ ಚಿರಂಜೀವಿ:

1989ರಲ್ಲಿ ಚಿರಂಜೀವಿ (Chiranjeevi) ಅಭಿನಯದ ರುದ್ರವೇಣಿ ಸಿನಿಮಾಗೆ ನರ್ಗೀಸ್‌ ದತ್ ಅವಾರ್ಡ್‌ (Nargis Dutt Award) ಸಿಕ್ಕಿತ್ತು. ಅದನ್ನು ಪಡೆಯಲು ಚಿರಂಜೀವಿ ದೆಹಲಿಗೆ ತೆರಳಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಟೀ ಪಾರ್ಟಿ ಆಯೋಜಿಸಲಾಗಿತ್ತು ಈ ವೇಳೆ ನಡೆದ ಘಟನೆಯನ್ನು ಚಿರಂಜೀವಿ ಹಂಚಿಕೊಂಡಿದ್ದಾರೆ. 

'ನರ್ಗೀಸ್ ಅವಾರ್ಡ್‌ ಪಡೆಯುವ ಕಾರ್ಯಕ್ರಮದಲ್ಲಿ ನನಗೆ ಅವಮಾನ ಆಯ್ತು ತುಂಬಾ ಬೇಸರ ಆಯ್ತು. ಅಲ್ಲಿನ ಟೀ ಹಾಲಿನಲ್ಲಿ ಗೋಡೆಗಳ ಮೇಲೆ ಬರೀ ಬಾಲಿವುಡ್ ಸಿನಿಮಾ ಪೋಸ್ಟರ್ ಹಾಕಿದ್ದಾರೆ. ಪೃಥ್ವಿರಾಜ್‌ ಕಪೂರ್,ರಾಜ್ ಕಪೂರ್ (Raj kapoor), ದಿಲೀಪ್‌ ಕುಮಾರ್, ದೇವ್ ಆನಂದ್, ಅಮಿತಾಭ್ ಬಚ್ಚನ್ (Amithab Bachchan), ರಾಜೇಶ್ ಕನ್ನಾ, ದರ್ಮೇಂದ್ರ ಹೀಗೆ ಪ್ರತಿಯೊಬ್ಬರ ಚಿತ್ರ ಮತ್ತು ಅವರ ಬಗ್ಗೆ ಸಂಪೂರ್ಣ ಮಾಹಿತಿ ಹಾಕಲಾಗಿತ್ತು. ಇದಾದ ನಂತರ ಸೌತ್‌ ಸಿನಿಮಾಗಳ ಫೋಟೋ ಮಾತ್ರ ಹಾಕಲಾಗಿತ್ತು. ಎಂಜಿಆರ್‌ ಮತ್ತು ಜಯಲಲಿತಾ (Jayalalitha) ಡ್ಯಾನ್ಸ್ ಮಾಡುತ್ತಿರುವ ಫೋಟೋ ಹಾಕಲಾಗಿತ್ತು ಅಷ್ಟೆ. ಪ್ರೇಮ್ ನಜೀರ್ ಅವರು ಅತಿ ಸಿನಿಮಾಗಳನ್ನು ಮಾಡಿರುವ ಭಾರತೀಯ ನಟ ಅವರ ಫೋಟೋ. ಇದೆಲ್ಲಾ ಬಿಡಿ ನಮ್ಮ ಹೆಮ್ಮೆಯ ಕರ್ನಾಟಕದ ರಾಜಕಂಠೀರವ ರಾಜ್‌ಕುಮಾರ್ (Dr Rajkumar) ಮತ್ತು ವಿಷ್ಣುವರ್ಧನ್ (Vishnuvardhan) ಬಗ್ಗೆ ಏನೂ ಮಾತನಾಡಲಿಲ್ಲ. ತೆಲುಗು ಚಿತ್ರರಂಗ ನಟ ರಾಮಾ ರಾವ್, ನಾಗೇಶ್ವರ್ ರಾವ್ ಅವರೆಲ್ಲಾ ನಮಗೆ ದೇವರಿದ್ದಂತೆ ಅವರ ಫೋಟೋನೂ ಹಾಕಿರಲಿಲ್ಲ' ಎಂದು ನಟ ಚಿರಂಜೀವಿ ಬೇಸರ ವ್ಯಕ್ತ ಪಡಿಸಿ ಮಾತನಾಡಿದ್ದಾರೆ.

ನನ್ನ ಮಗ ನನ್ನ ಹೆಮ್ಮೆ; ಅಪರೂಪದ ಫೋಟೋ ಶೇರ್ ಮಾಡಿ ಪುತ್ರನಿಗೆ ವಿಶ್ ಮಾಡಿದ ಚಿರಂಜೀವಿ

'ನಮ್ಮ ಹೆಮ್ಮೆಯ ಶಿವಾಜಿ ಗಣೇಶನ್‌ ಅವರ ಫೋಟೋ ಕೂಡ ಇರಲಿಲ್ಲ. ಭಾರತೀಯ ಸಿನಿಮಾ ಅಂದ್ರೆ ಬರೀ ಹಿಂದಿ ಸಿನಿಮಾ ಅನ್ನೋ ರೀತಿ ಬಿಂಬಿಸುತ್ತಾರೆ. ಬೇರೆ ಭಾಷೆ ಸಿನಿಮಾಗಳು ಅವರಿಗೆ ಲೆಕ್ಕವೇ ಇಲ್ಲ. ನಮ್ಮ ಸಾಧನೆ ಬಗ್ಗೆ ಒಂದು ಮಾತು ಕೂಡ ಹೇಳಲಿಲ್ಲ. ತುಂಬಾ ಬೇಸರದಿಂದ ನಾನು ಚೆನ್ನೈಗೆ ಬಂದು ಇದರ ಬಗ್ಗೆ ಮಾತನಾಡಿದೆ. ಕೆಲವೊಂದು ಪತ್ರಿಕೆ ಅದ್ಭುತವಾಗಿ ಬರೆದರು ಆದರೆ ಯಾವ ರೀತಿ ಪ್ರತಿಕ್ರಿಯೆನೂ ಸಿಗಲಿಲ್ಲ. ಆಗ ನಿರ್ಧಾರ ಮಾಡಿದೆ ನಾನು ಮಾಡುವ ಕೆಲಸ ನಮ್ಮೆ ಚಿತ್ರರಂಗ ಹೆಮ್ಮೆ ಪಡಬೇಕು ಎದೆ ತಟ್ಟಿ ಹೇಳಬೇಕು ಇವರು ನಮ್ಮವರು ಎಂದು. ನಮ್ಮ ಚಿತ್ರರಂಗ ಸಾಭೀತು ಮಾಡಿದೆ. ತೆಲಗು ಸಿನಿಮಾ ಅಂದ್ರೆ ರೀಜನಲ್ ಸಿನಿಮಾ (Regional language) ಅಲ್ಲ ಭಾರತೀಯ ಸಿನಿಮಾ ಅನ್ನುವ ರೀತಿ ಕೆಲಸ ಮಾಡಿದ್ದೀವಿ. ನಮ್ಮ ಭಾಷೆ ಬಗ್ಗೆ ಜನರಿಗೆ ಹೆಮ್ಮೆ ಇದೆ ಸಿನಿಮಾ ಅಂದ್ರೆ ತೆಲುಗು ಸಿನಿಮಾ ನೋಡಲು ಶುರು ಮಾಡಿದ್ದಾರೆ. ಈ ತಾರತಮ್ಯದಿಂದ ನಾವು ಆಗಲೇ ದೂರ ಬಂದಿದ್ದೀವಿ. ಬಾಹುಬಲಿ (Bahubali), ಬಾಹುಬಲಿ 2 ಮತ್ತು ಆರ್‌ಆರ್‌ಆರ್‌ (RRR) ಸಿನಿಮಾಗಳಿಂದ ನಾವು ಮುಂದೆ ಬಂದಿದ್ದೀವಿ. ಇಷ್ಟು ಅದ್ಭುತ ಸಿನಿಮಾಗಳನ್ನು ನೀಡಿದ ನಿರ್ದೇಶಕ ರಾಜಮೌಳಿ (Rajamouli) ಅವರಿಗೆ ನನ್ನ ಸಲಾಂ. ಅವರಂತೆ ಈ ಭೂಮಿ ಮೇಲೆ ಯಾರೂ ಇಲ್ಲ' ಎಂದು ಚಿರಂಜೀವಿ ಹೇಳಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!