
ಮುಂಬೈ(ಜು.24): ಬಾಲಿವುಡ್ ನಟ ಅಕ್ಷಯ್ ಕುಮಾರ್‌ಗೆ ಆದಾಯ ತೆರಿಗೆ ಇಲಾಖೆ ಸಮ್ಮಾನ್ ಪಾತ್ರಾ ಪ್ರಮಾಣಪತ್ರ ನೀಡಿ ಗೌರವಿಸಿದೆ. ಮನೋರಂಜನಾ ಕ್ಷೇತ್ರದಿಂದ ತಕ್ಕ ಸಮಯದಲ್ಲಿ, ಯಾವುದೇ ಮುಚ್ಚು ಮರೆ, ವಂಚನೆಗಳಿಲ್ಲದೇ ಗರಿಷ್ಠ ಆದಾಯ ತೆರಿಗೆ ಪಾವತಿ ಮಾಡುತ್ತಿರುವವರ ಪೈಕಿ ಅಕ್ಷಯ್ ಕುಮಾರ್ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ಆದಾಯ ತೆರಿಗೆ ಇಲಾಖೆ ಈ ಪ್ರಮಾಣಪತ್ರ ನೀಡಿ ಗೌರವಿಸಿದೆ. ಫಿಲ್ಮ್ ಇಂಡಸ್ಟ್ರಿಯಲ್ಲಿ ಅತೀ ಹೆಚ್ಚು ಆದಾಯ ತೆರಿಗೆ ಪಾವತಿ ಮಾಡುತ್ತಿರುವ ಹೆಗ್ಗಳಿಕೆಗೆ ಅಕ್ಷಯ್ ಕುಮಾರ್‌ಗಿದೆ. ಅಕ್ಷಯ್ ಕುಮಾರ್ ಪ್ರತಿ ವರ್ಷ ತಕ್ಕ ಸಮಯದಲ್ಲಿ ತಮ್ಮ ಆದಾಯ ತೆರಿಗೆಯನ್ನು ಪಾವತಿ ಮಾಡಿದ್ದಾರೆ. ಸದ್ಯ ಅಕ್ಷಯ್ ಕುಮಾರ್ ಸಿನಿಮಾ ಚಿತ್ರೀಕರಣಕ್ಕಾಗಿ ಲಂಡನ್‌ನಲ್ಲಿ ಬೀಡುಬಿಟ್ಟಿದ್ದಾರೆ. ಹೀಗಾಗಿ ಅಕ್ಷಯ್ ಕುಮಾರ್ ಪರ ಅವರ ತಂಡ ಈ ಪ್ರಶಸ್ತಿಯನ್ನು ಆದಾಯ ಇಲಾಖೆಯಿಂದ ಸ್ವೀಕರಿಸಿದೆ.
ಕಳೆದ 5 ವರ್ಷಗಳಲ್ಲಿ ಅಕ್ಷಯ್ ಕುಮಾರ್ ಬಾಲಿವುಡ್ ಇಂಡಸ್ಟ್ರಿಯ(Bollywood Industry) ಗರಿಷ್ಠ ತೆರಿಗೆ ಪಾವತಿದಾರರಾಗಿದ್ದಾರೆ. ಪ್ರತಿ ವರ್ಷವೂ ಅಕ್ಷಯ್(Akshay Kumar) ಅತೀ ಹೆಚ್ಚು ಮೊತ್ತವನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿ ಮಾಡುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ವರ್ಷದಲ್ಲಿ ಅಕ್ಷಯ್ ಕುಮಾರ್ 4 ರಿಂದ 5 ಚಿತ್ರದಲ್ಲಿ ನಟಿಸುತ್ತಾರೆ. ಅತೀ ವೇಗದಲ್ಲಿ ಶೂಟಿಂಗ್ ಮುಗಿಸುವ ಹೆಗ್ಗಳಿಕೆಯೂ ಅಕ್ಷಯ್ ಕುಮಾರ್‌ಗಿದೆ. ಅಕ್ಷಯ್ ಕುಮಾರ್ ಬಹುತೇಕ ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡಿದಿದೆ. ಪ್ರತಿ ಚಿತ್ರದಿಂದ ಅಕ್ಷಯ್ ಅತೀ ಹೆಚ್ಚಿನ ಆದಾಯವನ್ನೂ ಪಡೆಯುತ್ತಿದ್ದಾರೆ. ಹೀಗಾಗಿ ಅಕ್ಷಯ್ ಗರಿಷ್ಠ ಮೊತ್ತವನ್ನು ಆದಾಯ ತೆರಿಗೆ(Income tax payer) ರೂಪದಲ್ಲಿ ಪಾವತಿ ಮಾಡುತ್ತಿದ್ದಾರೆ.
ಸಮಂತಾರನ್ನು ಎತ್ತಿ ಕುಣಿದಾಡಿದ ಅಕ್ಷಯ್ ಕುಮಾರ್: ವಿಡಿಯೋ ವೈರಲ್
ಆದರೆ ಇತ್ತೀಚಿಗೆ ಬಿಡುಗಡೆಯಾದ ಸಾಮ್ರಾಟ್ ಪೃಥ್ವಿರಾಜ್, ಬಚ್ಚನ್ ಪಾಂಡೆ ಚಿತ್ರಗಳು ಮಕಾಡೆ ಮಲಗಿತ್ತು. ಈ ಚಿತ್ರಗಳು ಆದಾಯ ತಂದುಕೊಡುವಲ್ಲಿ ವಿಫಲವಾಗಿದೆ. ಇತರ ನಟರಿಗೆ ಹೋಲಿಸಿದರೆ ವರ್ಷವಿಡಿ ಶೂಟಿಂಗ್, ಸಿನಿಮಾ, ಪ್ರಮೋಶನ್ ಸೇರಿದಂತೆ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಏಕೈಕ ನಟ ಅಕ್ಷಯ್ ಕುಮಾರ್.
ಅಕ್ಷಯ್ ಕುಮಾರ್ ತಮ್ಮ ಆದಾಯದಲ್ಲಿ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಹಲವು ಸಂಘ ಸಂಸ್ಥೆಗಳ ಜೊತೆ ಸೇರಿ ಹಲವರ ಬದುಕಿಗೆ ನೆರವಾಗಿದ್ದಾರೆ. ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನಿಧಿಗೆ 25 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು.
ಬಾಲಿವುಡ್‌ನ ಈ ಸ್ಟಾರ್ಸ್ ಬಂಗಲೆ ಬೆಲೆ ಕೇಳಿದರೆ ತಲೆ ತಿರುಗುವುದು ಗ್ಯಾರಂಟಿ
100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ಸೂರ್ಯವಂಶಿ
ಅಕ್ಷಯ ಕುಮಾರ್ ಹಾಗೂ ಕತ್ರಿನಾ ಆಭಿನಯದ ಸೂರ್ಯವಂಶಿ ಬಿಡುಗಡೆಯಾದ ಕೇವಲ ನಾಲ್ಕು ದಿನಗಳಲ್ಲೇ 100 ಕೋಟಿ ಗಳಿಕೆಯನ್ನು ದಾಟಿತ್ತು. ಕೋವಿಡ್ ಲಾಕ್‌ಡೌನ್ ನಂತರ ಬಿಡುಗಡೆಯಾಗಿ 1000 ಕೋಟಿ ಕ್ಲಬ್ ಸೇರಿದ ಮೊದಲ ಸಿನಿಮಾ ಇದಾಗಿದೆ. ಸೂರ್ಯವಂಶಿ’ ವಾರಾಂತ್ಯದವರೆಗೆ ಒಟ್ಟು 120 ಕೋಟಿ ಗಳಿಕೆ ಮಾಡಬಹುದು ಎಂದು ವಾಣಿಜ್ಯ ವಿಶ್ಲೇಷಕ ತರಣ್ ಆದರ್ಶ ಅಂದಾಜಿಸಿದ್ದಾರೆ. ರೋಹಿತ್ ಶೆಟ್ಟಿಯನ್ನು ‘ಹಿಟ್ ಮಶೀನ್’ ಎಂದು ಕರೆದಿರುವ ತರಣ್, ‘100 ಕೋಟಿ ಮೈಲಿಗಲ್ಲು ದಾಟಿದ ರೋಹಿತ್ ಶೆಟ್ಟಿನಿರ್ದೇಶನದ 9ನೇ ಸಿನಿಮಾ ‘ಸೂರ್ಯವಂಶಿ’ ಆಗಿದೆ. ಅತಿ ಹೆಚ್ಚು 100 ಕೋಟಿ ಕ್ಲಬ್ ಸೇರ್ಪಡೆಗೊಂಡ ಸಿನಿಮಾಗಳ ನಿರ್ದೇಶಕರಾಗಿ ರೋಹಿತ್ ಹೊರಹೊಮ್ಮಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.