ರಾಜಕೀಯಕ್ಕೆ ರಶ್ಮಿಕಾ ಮಂದಣ್ಣ; 'ಪುಷ್ಪ' ನಟಿಯ ಭವಿಷ್ಯ ತೆರೆದಿಟ್ಟ ಖ್ಯಾತ ಜ್ಯೋತಿಷಿ

Published : Jul 24, 2022, 03:37 PM ISTUpdated : Dec 06, 2022, 01:54 PM IST
ರಾಜಕೀಯಕ್ಕೆ ರಶ್ಮಿಕಾ ಮಂದಣ್ಣ; 'ಪುಷ್ಪ' ನಟಿಯ ಭವಿಷ್ಯ ತೆರೆದಿಟ್ಟ ಖ್ಯಾತ ಜ್ಯೋತಿಷಿ

ಸಾರಾಂಶ

ಕೂರ್ಗ್ ಸುಂದರಿ ಚಿತ್ರರಂಗಕ್ಕೆ ಬೈ ಹೇಳಿ, ರಾಜಕೀಯಕ್ಕೆ ಎಂಟ್ರಿ ಆಗಲಿದ್ದಾರೆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ ನಟಿ ಈಗ ಬಾಲಿವುಡ್ ಮತ್ತು ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಹೀಗಿರುವಾಗ ರಶ್ಮಿಕಾ, ರಾಜಕೀಯ ಅಖಾಡಕ್ಕೆ ಧುಮುಖಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಹೀಗಂತ ರಶ್ಮಿಕಾ ಹೇಳಿದ್ದಲ್ಲಾ. ತೆಲುಗಿನ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಸ್ಟಾರ್ ನಟಿಯಾಗಿ ಮರೆಯುತ್ತಿರುವ ರಶ್ಮಿಕಾ ಮಂದಣ್ಣ ಸದ್ಯ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಕಿರಿಕ್ ಸುಂದರಿ ಬ್ಯೂಟಿ ಕುರಿತು ಹೊಸ ವಿಚಾರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೂರ್ಗ್ ಸುಂದರಿ ಚಿತ್ರರಂಗಕ್ಕೆ ಬೈ ಹೇಳಿ, ರಾಜಕೀಯಕ್ಕೆ ಎಂಟ್ರಿ ಆಗಲಿದ್ದಾರೆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ ನಟಿ ಈಗ ಬಾಲಿವುಡ್ ಮತ್ತು ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರಾಗಿ ನೇಮು ಫೇಮು ಗಿಟ್ಟಿಸಿಕೊಂಡಿದ್ದಾರೆ. ಪುಷ್ಪ ಸೂಪರ್ ಸಕ್ಸಸ್ ನಂತರ ರಶ್ಮಿಕಾಗೆ ಡಿಮ್ಯಾಂಡ್ ಮತ್ತಷ್ಟು ಹೆಚ್ಚಾಗಿದೆ. ಹೀಗಿರುವಾಗ ರಶ್ಮಿಕಾ, ರಾಜಕೀಯ ಅಖಾಡಕ್ಕೆ ಧುಮುಖಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಹೀಗಂತ ರಶ್ಮಿಕಾ ಹೇಳಿದ್ದಲ್ಲಾ. ತೆಲುಗಿನ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ರಶ್ಮಿಕಾ ರಾಜಕೀಯ ಭವಿಷ್ಯ

ರಶ್ಮಿಕಾ ಬಗ್ಗೆ ಭವಿಷ್ಯ ನುಡಿದಿರುವ ವೇಣು ಸ್ವಾಮಿ, ಕಾಂಗ್ರೆಸ್ ಪಕ್ಷ ಸೇರಲಿರುವ  ರಶ್ಮಿಕಾ ಕರ್ನಾಟಕದಿಂದ ಸಂಸದೆಯಾಗಿ ರಾಜಕೀಯ ಅಖಾಡಕ್ಕೆ ಇಳಿಯಲಿದ್ದಾರೆ ಎಂದಿದ್ದಾರೆ. ರಶ್ಮಿಕಾ ಬಗ್ಗೆ ತೆಲುಗಿನ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಮಾಡಿರುವ ಮಾತುಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ವೇಣು ಸ್ವಾಮಿ ರಶ್ಮಿಕಾ ಶೀಘ್ರದಲ್ಲೇ ರಾಜಕೀಯಕ್ಕೆ ಬರಲಿದ್ದಾರೆ ಎಂದು ಹೇಳಿದ್ದಾರೆ. 

ರಕ್ಷಿತ್ ಜೊತೆ ಬ್ರೇಕಪ್‌‌‌ಗೆ ಸಲಹೆ ನೀಡಿದ್ದ ಜ್ಯೋತಿಷಿ

ಅಷ್ಟಕ್ಕೂ ವೇಣು ಸ್ವಾಮಿ ಸೆಲೆಬ್ರಿಟಿಗಳ ಜಾತಕವನ್ನು ನೋಡಿ ಹೇಳುವುದರಲ್ಲಿ ಎತ್ತಿದ ಕೈ. ಸಲೆಬ್ರಿಟಿಗಳ ಬಗ್ಗೆ ಶಾಕಿಂಗ್ ಹೇಳಿಕೆ ನೀಡುತ್ತಿರುತ್ತಾರೆ. ಈಗ ರಶ್ಮಿಕಾ ಕುರಿತು ಹೇಳಿರುವ ಈ ಭವಿಷ್ಯ ನಿಜವಾಗುತ್ತಾ ಅಂತ ಕಾದು ನೋಡಬೇಕಿದೆ. ಸಿನಿಮಾರಂಗದಲ್ಲಿ ಸಿಕ್ಕಾಪಟ್ಟೆ ಖ್ಯಾತಿಗಳಿಸಿರುವ ರಶ್ಮಿಕಾ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರಾ ಎನ್ನುವ ಕುತೂಹಲ ಹೆಚ್ಚಾಗಿದೆ. ಅಂದಹಾಗೆ ರಶ್ಮಿಕಾ ಹೈದರಾಬಾದ್ ಮನೆಯ ಪೂಜೆಯನ್ನು ಇದೇ ಜ್ಯೋತಿಷಿ ವೇಣು ಸ್ವಾಮಿ ಮಾಡಿದ್ದರು. ಅಲ್ಲದೆ ರಕ್ಷಿತ್ ಜೊತೆ ದೂರ ಆಗಲು ಕಾರಣ ಸಹ ಇದೇ ವೇಣು ಸ್ವಾಮಿ. ರಕ್ಷಿತ್ ಜೊತೆ ಜಾತಕ ಹೊಂದಾಣಿಕೆಯಾಗದ ಕಾರಣ ಬ್ರೇಕಪ್ ಮಾಡಿಕೊಳ್ಳುವುದು ಒಳ್ಳೆಯದೆಂದು ಸಲಹೆ ನೀಡಿದ್ದೆ. ಹಾಗಾಗಿ ದೂರ ಆಗುವ ನಿರ್ಧಾರ ಮಾಡಿದರು ಎಂದು ವೇಣು ಸ್ವಾಮಿ ಹೇಳಿದ್ದಾರೆ. 



ರಕ್ಷಿತ್-ರಶ್ಮಿಕಾ ಮಂದಣ್ಣ ಬ್ರೇಕಪ್‌ಗೆ ಈತನೇ ಕಾರಣವಂತೆ..! ತಮಾಷೆ ಎನಿಸಿದರೂ ನಿಜ ಕಣ್ರೀ!

ಸಮಂತಾ-ನಾಗಚೈತನ್ಯ ಬಗ್ಗೆ ಭವಿಷ್ಯ

ಜ್ಯೋತಿಷಿ ವೇಣು ಗೋಪಾಲ್ ಈ ಮೊದಲು ಸಮಂತಾ ಮತ್ತು ನಾಗಚೈತನ್ಯ ಬೇರೆ ಬೇರೆ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರಂತೆ. ಈ ಬಗ್ಗೆಯೂ ಮಾೈತನಾಡಿರುವ ವೇಣು ಸ್ವಾಮಿ ನಾಗಚೈತನ್ಯ ಮತ್ತು ಸಮಂತಾ ಬೇರೆಯಾಗುತ್ತಾರೆ ಎಂದು ಮೊದಲೆ ಹೇಳಿದ್ದೆ ಹಾಗೆ ಆಗಿದೆ ಎಂದರು. 

ಕೂರಕ್ಕೂ ಆಗ್ತಿಲ್ಲ, ನಿಲ್ಲಕ್ಕೂ ಆಗ್ತಿಲ್ಲ! ಕೆಂಪು ಡ್ರೆಸ್‌ನಲ್ಲಿ ರಶ್ಮಿಕಾ ಪಾಡು...!

ಪವನ್ ಕಲ್ಯಾಣ್ ಮತ್ತು ಚಿರಂಜೀವಿ ಪುತ್ರಿ ಬಗ್ಗೆ ಹೇಳಿದ್ದೇನು?

ಇನ್ನು ಇದೇ ಸಮಯದಲ್ಲಿ ಪವನ್ ಕಲ್ಯಾಣ್ ರಾಜಕೀಯ ಭವಿಷ್ಯ, ಮೆಗಾಸ್ಟಾರ್ ಪುತ್ರಿಯ ಮದುವೆ ಬಗ್ಗೆಯೂ ಹೇಳಿದ್ದಾರೆ. ಪವನ್ ಕಲ್ಯಾಣ್ ಗೆ ರಾಜಕೀಯ ಭವಿಷ್ಯವಿಲ್ಲ, ಚಿರಂಜೀವಿ ಪುತ್ರಿ ಶ್ರೀಜಾ ನಾಲ್ಕು ಮದುವೆಯಾಗಬಹುದು ಎಂದು ವೇಣು ಸ್ವಾಮಿ ಬಾಂಬ್ ಸಿಡಿಸಿದ್ದಾರೆ. ಚಿರಂಜೀವಿ ಪುತ್ರಿ ಶ್ರೀಜಾ ತನ್ನ ಎರಡನೇ ಪತಿ ಕಲ್ಯಾಣ್ ದೇವ್‌ನಿಂದ ಬೇರ್ಪಟ್ಟಿದ್ದು ಗೊತ್ತೇ ಇದೆ. ದಂಪತಿ ಬಹಳ ದಿನಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಮತ್ತೊಂದೆಡೆ, ಶ್ರೀಜಾ ಮೂರನೇ ಬಾರಿಗೆ ಮದುವೆಯಾಗಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಸಮಯದಲ್ಲಿ ವೇಣು ಹೇಳಿಕೆ ಅಚ್ಚರಿ ಮೂಡಿಸಿದೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?
ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!