ಕಾಫಿ ವಿತ್ ಕರಣ್‌ನಲ್ಲಿ ಇಬ್ಬರು ಘಟಾನುಘಟಿ ನಿರ್ದೇಶಕರು: ಕುತೂಹಲ ಹೆಚ್ಚಿಸಿದ ಕರಣ್ ಶೋ

Published : Jul 24, 2022, 01:48 PM ISTUpdated : Jul 24, 2022, 01:51 PM IST
ಕಾಫಿ ವಿತ್ ಕರಣ್‌ನಲ್ಲಿ ಇಬ್ಬರು ಘಟಾನುಘಟಿ ನಿರ್ದೇಶಕರು: ಕುತೂಹಲ ಹೆಚ್ಚಿಸಿದ ಕರಣ್ ಶೋ

ಸಾರಾಂಶ

ಭಾರತೀಯ ಸಿನಿಮಾರಂಗದ ಘಟಾನುಘಟಿ ನಿರ್ದೇಶಕರಿಬ್ಬರನ್ನು ಕರಣ್ ಜೋಹರ್ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಕರಣ್ ಶೋಗೆ ಆಹ್ವಾನ ಕೊಟ್ಟ ಆ ಇಬ್ಬರು ಖ್ಯಾತ ನಿರ್ದೇಶಕರು ಮತ್ಯಾರು ಅಲ್ಲ ಸೌತ್ ನಿರ್ದೇಶಕ ಎಸ್ ಎಸ್ ರಾಜಮೌಳಿ ಮತ್ತು ಬಾಲಿವುಡ್ ಖ್ಯಾತ ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿ ಇಬ್ಬರಿಗೆ ಆಹ್ವಾನ ನೀಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. 

ಬಾಲಿವುಡ್ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಅವರ ಪ್ರಸಿದ್ಧ ಕಾಫಿ ವಿತ್ ಕರಣ್ ಶೋ ಪ್ರಸಾರವಾಗುತ್ತಿದೆ. ಈ ಬಾರಿ ಕಾಫಿ ವಿತ್ ಕರಣ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಮೊದಲ ಬಾರಿಗೆ ಒಟಿಟಿಯಲ್ಲಿ ಕಾಫಿ ವಿತ್ ಕರಣ್ ಶೋ ಪ್ರಸಾರವಾಗುತ್ತಿದೆ. ಅಂದಹಾಗೆ ಇದು 7ನೇ ಸೀಸನ್ ಆಗಿದೆ. ಈಗಾಗಲೇ ಕಾಫಿ ವಿತ್ ಕರಣ್ ಶೋನಲ್ಲಿ ಮೂರು ಎಪಿಸೋಡ್‌ಗಳು ಪ್ರಸಾರವಾಗಿದೆ. ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್, ರಣವೀರ್ ಮತ್ತು ಅಲಿಯಾ ಭಟ್ ಮತ್ತು ಇತ್ತೀಚಿಗಷ್ಟೆ ಸಮಂತಾ ಮತ್ತು ಅಕ್ಷಯ್ ಕುಮಾರ್ ಎಪಿಸೋಡ್ ಪ್ರಸಾರವಾಗಿದೆ. ಸಮಂತಾ ಮೊದಲ ಬಾರಿಗೆ ಕರಣ್ ಜೋಹರ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಅನೇಕ ಕಲಾವಿದರು ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಭಾರತೀಯ ಸಿನಿಮಾರಂಗದ ಘಟಾನುಘಟಿ ನಿರ್ದೇಶಕರಿಬ್ಬರನ್ನು ಕರಣ್ ಜೋಹರ್ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಕರಣ್ ಶೋಗೆ ಆಹ್ವಾನ ಕೊಟ್ಟ ಆ ಇಬ್ಬರು ಖ್ಯಾತ ನಿರ್ದೇಶಕರು ಮತ್ಯಾರು ಅಲ್ಲ ಸೌತ್ ನಿರ್ದೇಶಕ ಎಸ್ ಎಸ್ ರಾಜಮೌಳಿ ಮತ್ತು ಬಾಲಿವುಡ್ ಖ್ಯಾತ ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿ ಇಬ್ಬರಿಗೆ ಆಹ್ವಾನ ನೀಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. 

ಸಂಜಯ್ ಲೀಲಾ ಬನ್ಸಾಲಿ ಮತ್ತು ರಾಜಮೌಳಿ ಇಬ್ಬರನ್ನು ಒಟ್ಟಿಗೆ ಕರೆಸುವ ಪ್ಲಾನ್ ಮಾಡಿದ್ದಾರೆ ಕರಣ್ ಜೋಹರ್. ಆದರೆ ಇಬ್ಬರು ಸ್ಟಾರ್ ನಿರ್ದೇಶಕರು ಕಾರ್ಯಕ್ರಮಕ್ಕೆ ಬರುವ ಬಗ್ಗೆ ಇನ್ನು ಯಾವುದೇ ಅಧಿಕೃತಗೊಳಿಸಿಲ್ಲ ಎನ್ನಲಾಗಿದೆ. ಇನ್ನು ಕರಣ್ ಜೋಹರ್ ಸಹ ಇಬ್ಬರನ್ನು ಸಂದರ್ಶನ ಮಾಡಲು ತಯಾರಿ ನಡೆಸುತ್ತಿದ್ದಾರಂತೆ. ಖ್ಯಾತ ನಿರ್ದೇಶಕರಿಗೆ ಯಾವ ರೀತಿಯ ಪ್ರಶ್ನೆ ಕೇಳುವುದು, ರ್ಯಾಪಿಡ್ ಫೈರ್ ಪ್ರಶ್ನೆ ಹೇಗಿರಬೇಕೆಂದು ತಯಾರಿ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. 

ಮೂಲಗಳ ಪ್ರಕಾರ ಸಂಜಯ್ ಲೀಲಾ ಬನ್ಸಾಲಿ ಮತ್ತು ರಾಜಮೌಳಿ ಅವರನ್ನು ಶೋಗೆ ಒಟ್ಟಿಗೆ ಕರೆಸುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಸಂಜಯ್ ಲೀಲಾ ಬನ್ಸಾಲಿ ಸದ್ಯ ಹಿರಾಮಂಡಿ ವೆಬ್ ಸೀರಿಸ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಬನ್ಸಾಲಿ ಶೂಟಿಂಗ್‌ನಲ್ಲಿದ್ದಾಗ ಬೇರೆ ಯಾವುದರ ಬಗ್ಗೆಯೂ ಯೋಚಿಸುವುದಿಲ್ಲ ಹಾಗೂ ಕಾರ್ಯಕ್ರಮಕ್ಕೂ ಹಾಜರಾಗುವುದಿಲ್ಲ. ಹಾಗಾಗಿಯೇ ಬನ್ಸಾಲಿ ಇನ್ನೂ ಕಾಫಿ ವಿತ್ ಕರಣ್ ಶೋಗೆ ಯೆಸ್ ಹೇಳಿಲ್ಲ. ಇನ್ನು ರಾಜಮೌಳಿ ಸಹ ಬ್ಯುಸಿಯಾಗಿದ್ದಾರೆ. ವಿಶೇಷ ಎಂದರೆ ರಾಜಮೌಳಿ, ಸಂಜಯ್ ಲೀಲಾ ಬನ್ಸಾಲಿ ಅವರ ಅಭಿಮಾನಿ. ಹಾಗಾಗಿ ಇಬ್ಬರನ್ನೂ ಒಟ್ಟಿಗೆ ನೋಡುವುದು ತುಂಬಾ ಅಭಿಮಾನಿಗಳಿಗೆ ದೊಡ್ಡ ಹಬ್ಬವಾಗಿದೆ. 

ಡಿವೋರ್ಸ್ ಬಳಿಕ ತುಂಬಾ ಕಷ್ಟವಾಯ್ತು; ನಾಗಚೈತನ್ಯರಿಂದ ದೂರಾದ ಬಗ್ಗೆ ಸಮಂತಾ ಮಾತು

ಇಬ್ಬರು ಒಟ್ಟಿಗೆ ಕರಣ್ ಶೋನಲ್ಲಿ ಭಾಗಿಯಾಗುತ್ತಾರಾ ಎನ್ನುವುದು ಈಗ ಕುತೂಹಲ ಮೂಡಿಸಿದೆ. ಕರಣ್ ಜೋಹರ್ ಇಬ್ಬರನ್ನು ಒಪ್ಪಿಸಿ ಕಾರ್ಯಕ್ರಮಕ್ಕೆ ಕರೆತರುತ್ತಾರಾ ಎಂದು ಪ್ರೇಕ್ಷಕರು ಸಹ ಕಾತರದಿಂದ ಕಾಯುತ್ತಿದ್ದಾರೆ. ಆದಷ್ಟು ಬೇಗ ಕಾಫಿ ವಿತ್ ಕರಣ್ ಶೋನಲ್ಲಿ ಸಂಜಯ್ ಲೀಲಾ ಬನ್ಸಾಲಿ ಮತ್ತು ರಾಜಮೌಳಿ ಇಬ್ಬರೂ ಕಾಣಿಸಿಕೊಳ್ಳಲಿ ಎನ್ನುವುದೇ ಅಭಿಮಾನಿಗಳ ಆಶಯವಾಗಿದೆ. 



ಹೆಂಡತಿಯನ್ನು ಒಪ್ಪಿಸಲು ಕೈಕಾಲು ಹಿಡಿದು ಬೇಡಿಕೊಳ್ಳುತ್ತಾರಂತೆ ಅಕ್ಷಯ್‌ಕುಮಾರ್‌

ಕಾಫಿ ವಿತ್ ಕರಣ್ 7 ಶೋ ಜುಲ್ 7ರಿಂದ ಪ್ರಾರಂಭವಾಗಿದೆ. ಡೆಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಈ ಶೋ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಈಗಾಗಲೇ ಅಲಿಯಾ ಭಟ್ ಮತ್ತು ರಣ್ವೀರ್ ಸಿಂಗ್ ಮತ್ತು ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಎಪಿಸೋಡ್ ಪ್ರಸಾರವಾಗಿದೆ. ಇತ್ತೀಚಿಗಷ್ಟೆ ಸ್ಯಾಮ್ ಮತ್ತು ಅಕ್ಷಯ್ ಕುಮಾರ್ ಎಪಿಸೋಡ್ ಕೂಡ ಪ್ರಸಾರವಾಗಿದೆ. ಇನ್ನು ಕಿಯಾರಾ ಅಡ್ವಾನಿ ಮತ್ತು ಶ್ರದ್ಧಾ ಕಪೂರ್ ಮತ್ತು ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ ಮತ್ತು ಟೈಗರ್ ಶ್ರಾಫ್ ಮತ್ತು ಕೃತಿ ಸನೂನ್ ಎಪಿಸೋಡ್ ಪ್ರಸಾರ ಬಾಕಿ ಇದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?
ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!