ಅಮೀರ್‌ಖಾನ್ ಮಗನ ಶಿಖಂಡಿ ಅವತಾರ ನೋಡಿ ಬೆಚ್ಚಿಬಿದ್ದ ಬಾಲಿವುಡ್ ಜನತೆ!

Published : May 13, 2024, 05:01 PM IST
ಅಮೀರ್‌ಖಾನ್ ಮಗನ ಶಿಖಂಡಿ ಅವತಾರ ನೋಡಿ ಬೆಚ್ಚಿಬಿದ್ದ ಬಾಲಿವುಡ್ ಜನತೆ!

ಸಾರಾಂಶ

ಅಮೀರ್ ಖಾನ್ ಮಗನ ಹೆಸರು ಜುನೈದ್ ಖಾನ್. ಆತನ ಶಿಖಂಡಿ ಅವತಾರ ಕಂಡು ಸೂಪರ್ ಸ್ಟಾರ್ ಅಮೀರ್ ಮಗನಿಗೆ ಇದೇ ಆಯ್ತು ಅಂತ ಬೆಚ್ಚಿಬಿದ್ದಿದ್ದಾರೆ ಮುಂಬೈ ಮಂದಿ!

ಅಮೀರ್ ಖಾನ್ ಇತ್ತೀಚೆಗೆ ಹೇಳಿದ ಮಾತು ನನ್ ಮಕ್ಕಳು ನನ್ನ ಮಾತೇ ಕೇಳಲ್ಲ ಅಂತ. 'ನಾವೆಲ್ಲ ಚಿಕ್ಕವರಾಗಿದ್ದಾಗ ನಮಗೆ ಅಪ್ಪ ಅಮ್ಮನ ಮಾತೇ ವೇದವಾಕ್ಯವಾಗಿತ್ತು. ಅವರಿಗೆ ಗೌರವ, ಪ್ರೀತಿ ಕೊಟ್ಟು ಅವರ ಮಾತನ್ನೂ ಚಾಚೂ ತಪ್ಪದೆ ಕೇಳುತ್ತಿದ್ದೆವು, ಪಾಲಿಸುತ್ತಲೂ ಇದ್ದೆವು. ಆದರೆ ನನ್ನ ಮಕ್ಕಳ ಕಾಲಕ್ಕೆ ಹೀಗಾಗ್ತಿಲ್ಲ ನೋಡಿ. ಅವರ್ಯಾರೂ ನನ್ನ ಮಾತೇ ಕೇಳಲ್ಲ. ಬದಲಿಗೆ ಅವರ ಹೆತ್ತವರಾದ ತಪ್ಪಿಗೆ ನಾವೇ ಅವರ ಮಾತು ಕೇಳಬೇಕು. ನಮ್ಮ ಲೈಫಿನ ಕಥೆ ನೋಡಿ, ಚಿಕ್ಕವರಿದ್ದಾಗ ಅಪ್ಪ ಅಮ್ಮನಿಂದ ಬೈಗಳ ತಿಂದು ಅವರ ಮಾತಿಗೆ ತಲೆ ಬಾಗೋದು, ದೊಡ್ಡವರಾದ ಮೇಲಾದ್ರೂ ಮಕ್ಕಳಿಂದ ಇದನ್ನೆಲ್ಲ ಬಡ್ಡಿ ಸಮೇತ ವಾಪಾಸ್ ಪಡೆಯೋಣ ಅಂದರೆ ಇಲ್ಲೂ ನಾವು ನತದೃಷ್ಟರು.

ಮಕ್ಕಳು ನಮ್ಮನ್ನು ಚೆನ್ನಾಗಿ ಅರೆದು ಹಾಕ್ತಿದ್ದಾರೆ, ಅವರಿಗೂ ಏನೂ ಹೇಳುವಂತಿಲ್ಲ, ಬದಲಿಗೆ ಅವರ ಮಾತನ್ನೇ ಜೀ ಹುಜೂರ್ ಅಂತ ಪಾಲಿಸಬೇಕು..' ಎಂದ ಅಮೀರ್‌ ಖಾನ್ ಮಾತು ಕೇಳಿ ಜನ ಬಿದ್ದು ಬಿದ್ದು ನಕ್ಕರು. ಆದರೆ ಅದೇ ಜನರಿಗೆ ಈಗ ಅಮೀರ್ ಖಾನ್ ಮಾತಿನ ಮರ್ಮ ಗೊತ್ತಾಗಿದೆ. ಅಮೀರ್ ಮಗ ಜುನೈದ್ ಖಾನ್ ಹೊಸ ಅವತಾರವನ್ನು ನೋಡಿ ಅವರು ಬೆಚ್ಚಿಬಿದ್ದಿದ್ದಾರೆ.

ಕಿಯಾರಾ ಹಾಡಿ ಹೊಗಳಿದ ಮೃಣಾಲ್ ಠಾಕೂರ್, ಸೂರ್ಯ ಪಶ್ಚಿಮದಲ್ಲಿ ಹುಟ್ಟಿದ್ನಾ ಕೇಳ್ಬೇಡಿ!

ಅಷ್ಟಕ್ಕೂ ಈ ಅಮೀರ್ ಖಾನ್ ಮಗ ತೀರಾ ಸಾದಾ ಸೀದಾ ವ್ಯಕ್ತಿ. ದೊಡ್ಡಸ್ತಿಗೆ, ಸ್ಟಾರ್ ಕಿಡ್ ಅನ್ನೋ ಇಗೋ ಇವೆಲ್ಲ ಏನೂ ಇಲ್ಲ. ಆತ ಸಾಮಾನ್ಯರ ಥರ ಕಾರು ಬಿಟ್ಟು ಕಾಲ್ನಡಿಗೆಯಲ್ಲೇ ಓಡಾಡ್ತಾರೆ. ಅನೇಕ ಪ್ರವಾಸಿ ತಾಣಗಳಲ್ಲಿ ಒಬ್ಬಂಟಿಯಾಗಿ ಸುತ್ತಾಡುತ್ತಾರೆ. ಅವರ ಈ ಅವತಾರ್ ಕಂಡು ಜನ, ಅರೆ, ಅಮೀರ್‌ಖಾನ್ ಮಗ ಇಷ್ಟು ಸಾದಾ ಸೀದಾನ ಅಂತ ಕೇಳ್ತಿದ್ದಾರೆ. ಅಂದಹಾಗೆ ಈ ನಟ ಇನ್ನೇನು ಬಾಲಿವುಡ್‌ಗೂ ಎಂಟ್ರಿ ಕೊಡ್ತಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುವ 'ಮಹಾರಾಜ್' ಎಂಬ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಇದು ಅಮೀರ್ ಖಾನ್ ಪುತ್ರನ ಮೊದಲ ಸಿನಿಮಾವೂ ಹೌದು. ಸಿದ್ಧಾರ್ಥ್ ಮಲ್ಹೋತ್ರಾ ನಿರ್ದೇಶನದ ಈ ಚಿತ್ರವನ್ನು ಯಶ್‌ರಾಜ್ ಫಿಲಂಸ್ ನಿರ್ಮಾಣ ಮಾಡುತ್ತಿದೆ.

ಈಗ ಸುದ್ದಿ ಅದಲ್ಲ. ಅಮೀರ್ ಖಾನ್ ಪುತ್ರನ ಹೊಸ ಅವತಾರ ಸದ್ಯ ಸುದ್ದಿಯಲ್ಲಿದೆ. ಈ ಹಿಂದೆ ಈತನ ಸಹೋದರಿ ಇರಾ ಖಾನ್ ಮದುವೆ ನಡೆದಿತ್ತು. ಅಲ್ಲಿ ಈತನನ್ನು 'ಸೂಪರ್ ಮ್ಯಾನ್' (Super Man) ಅಂತ ಜನ ಕರೆದಿದ್ರು. ಕಾರಣ ಈತನ ಲುಕ್. ಸೂಪರ್ ಮ್ಯಾನ್ ಪಾತ್ರದ ಮೂಲಕ ಸಖತ್ ಫೇಮಸ್ ಆದ ಹೆನ್ರಿ ಕ್ಯಾವಿಲ್‌ನನ್ನು ಈತ ಹೋಲುವುದು ಇದಕ್ಕೆ ಕಾರಣ. ಈಗ ನೇರ ವಿಷಯಕ್ಕೆ ಬರೋಣ. ಅಮೀರ್‌ಖಾನ್ ಮಗನ ಶಿಖಂಡಿ ಅವತಾರದ ಬಗ್ಗೆ.

‘ಮಹಾಭಾರತ’ ಅಲ್ಲ, ತಮ್ಮ ಬಹುದೊಡ್ಡ ಡ್ರೀಮ್ ಪ್ರಾಜೆಕ್ಟ್ ಬಗ್ಗೆ ತಿಳಿಸಿದ ನಿರ್ದೇಶಕ ರಾಜಮೌಳಿ!

ಮುಂಬೈಯಲ್ಲಿ ಪೃಥ್ವಿ ಥಿಯೇಟರ್ ವರ್ಲ್ಡ್ ಫೇಮಸ್. ರಂಗಭೂಮಿ ಪ್ರಿಯರ ನೆಚ್ಚಿನ ತಾಣ ಅದು. ಅಲ್ಲಿ ವರ್ಲ್ಡ್ ಫೇಮಸ್  (world famous) ನಾಟಕಗಳು ಆಗ್ತಿರುತ್ತೆ. ಅಮೀರ್ ಖಾನ್ ಮಗ ಜುನೈದ್ ಸಹ ಇಲ್ಲಿ ನಾಟಕ ಮಾಡುತ್ತಿರುತ್ತಾರೆ. ಇತ್ತೀಚೆಗೆ ಅವರು ಇಲ್ಲಿ ಒಂದು ನಾಟಕದಲ್ಲಿ ನಟಿಸಿದ್ದಾರೆ. ಅದರಲ್ಲಿ ಈತನಿಗೆ ಶಿಖಂಡಿ ಪಾತ್ರ. ಇವರು ಇನ್ನೂ ಮೇಕಪ್‌ನಲ್ಲಿರುವಾಗಲೇ ಪಾಪರಾಜಿಗಳು ಗ್ರೀನ್ ರೂಮ್ ಪಕ್ಕ ಇವರ ಶಿಖಂಡಿ ಲುಕ್ ಸೆರೆ ಹಿಡಿದಿದ್ದಾರೆ. 'ಇನ್ನೂ ಮೇಕಪ್ ತೆಗ್ದಿಲ್ಲ ಕಣ್ರೀ, ಸ್ವಲ್ಪ ತಡೀರಿ, ಮೇಕಪ್ ತೆಗ್ದು ಬರ್ತೀನಿ' ಅಂದ್ರೂ ಕೇಳಲಿಲ್ಲ. ಕೊನೆಗೆ ಸೂಪರ್ ಸ್ಟಾರ್ ಅಮೀರ್ ಖಾನ್ ಪುತ್ರ ಶಿಖಂಡಿ ಲುಕ್‌ನಲ್ಲೇ ಕ್ಯಾಮರಕ್ಕೆ ದರ್ಶನ ಕೊಡ್ತಾರೆ. ಅಮೀರ್ ಮಗನ ಹೊಸ ಅವತಾರ ಕಂಡು ಜನ ಹೊಟ್ಟೆ ಹಿಡ್ಕೊಂಡು ನಕ್ಕಿದ್ದಾರೆ.
 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?