ಒಂದೂವರೆ ಲಕ್ಷ ಬೆಲೆಯ ಡ್ರೆಸ್ನಲ್ಲಿ ಮಿಂಚಿದ ನಟಿ ದಿಶಾ ಪಟಾನಿ : ಅಷ್ಟಕ್ಕೂ ಈ ಡ್ರೆಸ್ನಲ್ಲಿ ಅಂಥದ್ದೇನಿದೆ?
ಬಾಲಿವುಡ್ ನಟಿ ದಿಶಾ ಪಟಾನಿಯನ್ನು(Disha Patani) ಬಾಲಿವುಡ್‌ನ ಬೋಲ್ಡ್, ಹಾಟ್ ಮತ್ತು ಮಾದಕ ನಟಿ ಎಂದು ಪರಿಗಣಿಸಲಾಗಿದೆ. ಸಮುದ್ರ ತೀರವನ್ನು ತುಂಬಾ ಇಷ್ಟಪಡುವ ನಟಿ ಅಲ್ಲಿಯೇ ಫೋಟೋಶೂಟ್ ಮಾಡಿಸಿಕೊಳ್ಳುವುದು ಹೆಚ್ಚು. ಆಗಾಗ್ಗೆ ಸಮುದ್ರ ತೀರದಲ್ಲಿ ತಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ದಿಶಾ ಮಾಲ್ಡೀವ್ಸ್ (Maldives) ಪ್ರವಾಸದ ಹಳೆಯ ಫೋಟೋವನ್ನು (ಥ್ರೋಬ್ಯಾಕ್ ಚಿತ್ರಗಳು) ಹಂಚಿಕೊಂಡಿದ್ದರು. ಇದರಲ್ಲಿ ಬಿಕಿನಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡು ಬಹಳ ಟ್ರೋಲ್ಗೆ ಒಳಗಾಗಿದ್ದರು. ಆದರೂ ದಿಶಾ ಪಟಾನಿ ತಮ್ಮ ಧೈರ್ಯಶಾಲಿ ಫ್ಯಾಷನ್ ಸೆನ್ಸ್‌ಗಾಗಿ ಹೊಗಳಿಕೆ, ತೆಗಳಿಕೆಗೆ ಒಳಗಾಗುತ್ತಲೇ ಇರುತ್ತಾರೆ. ಎಷ್ಟೇ ಟ್ರೋಲ್ಗೆ ಒಳಗಾದರೂ ವಿಚಲಿತರಾಗದೇ ಉಳಿಯುವುದೇ ವಿಶೇಷ.
ಈಗ ನಟಿ ತಮ್ಮ ಉಬರ್-ಫಿಟ್ ಮೈಕಟ್ಟು ನೋಟದಲ್ಲಿ ಎಲ್ಲರನ್ನೂ ಬೆಚ್ಚಿಬೀಳಿಸಿದ್ದಾರೆ. ಸೆಲೆಬ್ರಿಟಿಗಳ ಡ್ರೆಸ್ ಎಂದರೆ ಅದು ಲಕ್ಷದ ಮೇಲೆ ಇರುವುದು ಸಹಜವೇ. ಅದೇ ರೀತಿ ದಿಶಾ ಪಟಾನಿ ಇದೀಗ ಡ್ರೆಸ್ನಿಂದ ಸದ್ದು ಮಾಡುತ್ತಿದ್ದಾರೆ. ನಟಿ ಈಗ ಧರಿಸಿರುವ ಡ್ರೆಸ್ಸ್ ಬೆಲೆ ಒಂದೂವರೆ ಲಕ್ಷ ರೂಪಾಯಿ. ಎದೆಯ ಭಾಗದ ಮೇಲೆ ಇರುವ ಸ್ಫಟಿಕದಿಂದಾಗಿ ಈ ಡ್ರೆಸ್ ಇಷ್ಟು ದುಬಾರಿ. ಇದರ ಡ್ರೆಸ್ ಧರಿಸಿರುವ ನಟಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ತರ್ಲೆ ನೆಟ್ಟಿಗರು ಥಹರೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಒಂದೂವರೆ ಲಕ್ಷ ರೂಪಾಯಿಯ ಡ್ರೆಸ್ ಎನ್ನುತ್ತೀರಿ, ಹಾಗಿದ್ದರೆ ಡ್ರೆಸ್ ಎಲ್ಲಿ ಎಂದು ಕೇಳುತ್ತಿದ್ದಾರೆ. ಡ್ರೆಸ್ಸೇ ಕಾಣಿಸ್ತಿಲ್ಲವಲ್ಲ ಎಂದು ಮತ್ತೆ ಕೆಲವರು ಕೇಳುತ್ತಿದ್ದಾರೆ.
ಹುಟ್ಟುಹಬ್ಬ ಸಂಭ್ರಮದಲ್ಲಿ ನಿವೇದಿತಾ ಗೌಡ: ಗಂಡ ಸರಿ ಇದ್ರೆ ಹೀಗಾಗ್ತಿರಲಿಲ್ಲಾ ಅನ್ನೋದಾ ಫ್ಯಾನ್ಸ್?
ಇನ್ನು ನಟಿಯ ಬಗ್ಗೆ ಹೇಳುವುದಾದರೆ, ಇತ್ತೀಚೆಗಷ್ಟೇ ನಟಿ ಮುಖದಿಂದಾಗಿ ಟ್ರೋಲ್ಗೆ ಒಳಗಾಗಿದ್ದರು. ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕ್ಲೋಸ್ ಅಪ್ ಫೋಟೋಗಳನ್ನು ಶೇರ್ ಮಾಡಿದ್ದರು. ಇದರಲ್ಲಿ ಫ್ಯಾನ್ಸ್ ನಟಿಯ ಮುಖವು ಊದಿಕೊಂಡಿದೆ ಎಂದು ಟ್ರೋಲ್ ಮಾಡಿದ್ದದರು. ಅವರು ಚಿತ್ರರಂಗಕ್ಕೆ ಬಂದಾಗ ಅವರ ಮುಖ ಇದ್ದಿದ್ದಕ್ಕೂ ಈಗ ಇರುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಇದನ್ನೇ ಇಟ್ಟುಕೊಂಡು ಟೀಕೆ ಮಾಡಲಾಗಿದೆ. ಒಬ್ಬ ಬಳಕೆದಾರರು 'ನಿಮ್ಮ ಮುಖವು ಜೇನುನೊಣಗಳು ಕಚ್ಚಿದಂತೆ ಕಾಣಿಸುತ್ತದೆ' ಎಂದರೆ, ಮತ್ತೆ ಕೆಲವರು ಕಚ್ಚಿದ್ದು ಹೌದು. ಆದರೆ ಜೇನುನೋಣವೋ ಅಥವಾ... ಎಂದು ಕಾಲೆಳೆದಿದ್ದರು. ಮತ್ತಿಷ್ಟು ಮಂದಿ ಈಗಷ್ಟೇ ಎದ್ದು ಮುಖ ತೊಳಿಯದೇ ಪೋಸ್ ಕೊಟ್ಟಿರಬೇಕು ಅದಕ್ಕಾಗಿಯೇ ಹೀಗೆ ಕಾಣಿಸುತ್ತಿದ್ದಾಳೆ ಎಂದಿದ್ದರು.
ದಿಶಾ ಪಟಾನಿ ನಟನೆಗಿಂತ ಗ್ಲಾಮರ್ ಹಾಗೂ ಲವ್ ಲೈಫ್ ವಿಚಾರಕ್ಕೆ ಹೆಚ್ಚು ಸುದ್ದಿಯಲ್ಲಿರುತ್ತಾರೆ ಬಾಲಿವುಡ್ ನಟ ಟೈಗರ್ ಶ್ರಾಫ್ ಜೊತೆಗಿನ ದಿಶಾ ಅವರ ಡೇಟಿಂಗ್ ಅಫೇರ್ ಬಾಲಿವುಡ್‌ನಲ್ಲಿ ಹಾಟ್ ಟಾಪಿಕ್ ಆಗಿದೆ. ಇವರಿಬ್ಬರಿಗೆ ಸಂಬಂಧಿಸಿದ ಹಲವು ಫೋಟೋಗಳು ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಬಾಲಿವುಡ್‌ಗಿಂತ ಸೌತ್‌ನ ಸಾಲು ಸಾಲು ಸಿನಿಮಾಗಳಲ್ಲಿಯೇ ದಿಶಾ ಬಿಜಿಯಾಗಿದ್ದಾರೆ. ಪ್ರಭಾಸ್ ಜತೆಗಿನ ಕಲ್ಕಿ 2898 ಎಡಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸೂರ್ಯ ಜತೆಗೆ ಕಂಗುವ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ. ಬಾಲಿವುಡ್‌ನಲ್ಲಿ ನಿರ್ಮಾಣವಾಗುತ್ತಿರುವ ವೆಲ್‌ಕಮ್ ಟು ಜಂಗಲ್ ಸಿನಿಮಾದಲ್ಲೂ ದಿಶಾ ನಟಿಸುತ್ತಿದ್ದಾರೆ. ಅಕ್ಷಯ್ ಕುಮಾರ್, ಸಂಜಯ್ ದತ್, ಸುನೀಲ್ ಶೆಟ್ಟಿ ಸೇರಿ ಬಹುತಾರಾಗಣದ ಸಿನಿಮಾ ಇದಾಗಿದೆ.
ಆ ನಟಿ ಕೈಕೊಟ್ಟಾಗ ಹೃದಯವೇ ಕಿತ್ತುಬಂತು, ಆಮೇಲೆ ಅದೃಷ್ಟದ ಬಾಗಿಲೇ ತೆರೆಯಿತು: ನಟ ಮಿಥುನ್ ಚಕ್ರವರ್ತಿ