ಅರೆರೆ ಉರ್ಫಿಗೆ ಇದೇನಾಗೋಯ್ತು? ತಲೆ ಬೋಳಿಸಿಕೊಂಡಿರೋ ನಟಿಯ ಕಂಡ ಫ್ಯಾನ್ಸ್​ ಕಂಗಾಲು!

Published : May 13, 2024, 04:18 PM ISTUpdated : May 13, 2024, 04:27 PM IST
ಅರೆರೆ ಉರ್ಫಿಗೆ ಇದೇನಾಗೋಯ್ತು? ತಲೆ ಬೋಳಿಸಿಕೊಂಡಿರೋ ನಟಿಯ ಕಂಡ ಫ್ಯಾನ್ಸ್​ ಕಂಗಾಲು!

ಸಾರಾಂಶ

ನಟಿ ಉರ್ಫಿ ತಲೆಗೂಲದನ್ನು ಬೋಳಿಸಿಕೊಂಡಿರುವ ಫೋಟೋ ವೈರಲ್​ ಆಗಿದ್ದು, ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಆಗಿರುವುದೇನು?  

 ಉರ್ಫಿ ಜಾವೇದ್​ ಎಂದರೆ, ಚಿತ್ರ ವಿಚಿತ್ರ ಡ್ರೆಸ್​ಗಳಿಂದಲೇ ಸೋಷಿಯಲ್​ ಮೀಡಿಯಾ ಸೆನ್ಸೇಷನ್​ ಆದವರು.  ಉರ್ಫಿ ಜಾವೇದ್​ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ  ಸೋಷಿಯಲ್ ಮೀಡಿಯಾದಲ್ಲಿ  (Social media) ಸೆನ್ಸೇಷನ್ ಕ್ರಿಯೇಟ್​ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್​ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್​ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. 

ಇದೀಗ ನಟಿ, ಸಂಪೂರ್ಣ ತಲೆಗೂದಲನ್ನು ಬೋಳಿಸಿಕೊಂಡು ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಇದನ್ನು ನೋಡಿ ನಟಿಯ ಅಭಿಮಾನಿಗಳು ಶಾಕ್​ ಆಗಿದ್ದಾರೆ. ಸಾಮಾನ್ಯವಾಗಿ ಕೂದಲನ್ನು ಕ್ಯಾನ್ಸರ್​ ಬಂದವರು ಬೋಳಿಸಿಕೊಳ್ಳುತ್ತಾರೆ. ಕಿಮೋಥೆರಪಿ ಮಾಡಿಸಿಕೊಳ್ಳುವ ಸಮಯದಲ್ಲಿ ಹೀಗೆ ಕೂದಲು ಉದುರುತ್ತದೆ. ಆದ್ದರಿಂದ ಉರ್ಫಿಗೆ ಕ್ಯಾನ್ಸರ್​ ಬಂದಿದೆಯೇ ಎಂದು ಕೆಲವರು ಆತಂಕ ಪಟ್ಟುಕೊಳ್ಳುತ್ತಿದ್ದಾರೆ. ಉರ್ಫಿಯ ಫೋಟೋ ಅನ್ನು ಮಾರ್ಫ್​ ಮಾಡಲಾಗಿದೆ ಎಂದು ಕೆಲವರು ಹೇಳುತ್ತಿದ್ದರೆ, ಇದು ಡೀಪ್​ಫೇಕ್​ ಎನ್ನುತ್ತಿದ್ದಾರೆ. ಇದಾಗಲೇ ಉರ್ಫಿ ಜಾವೇದ್​, ಹಲವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸಮಾಜಕಾರ್ಯಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಕ್ಯಾನ್ಸರ್​ಪೀಡಿತರಿಗಾಗಿ ಕೂದಲು ಕೊಟ್ಟಿರಬಹುದು ಎಂದು ಕೆಲವರು ಹೇಳುತ್ತಿದ್ದರೆ, ಇದೆಲ್ಲವೂ ನಾಟಕ. ಇದು ವಿಗ್​ ಎನ್ನುತ್ತಿದ್ದಾರೆ ಇನ್ನು ಕೆಲವರು. ಒಟ್ಟಿನಲ್ಲಿ ನಟಿಯ ಬಗ್ಗೆ ಅಭಿಮಾನಿಗಳ ಆತಂಕ ವ್ಯಕ್ತಪಡಿಸುತ್ತಿದ್ದಾರೆ. 

ಡ್ರೆಸ್​ನಿಂದ ಉದುರಿದ ಹೂವು, ಎಲೆಗಳು... ಅಬ್ಬಬ್ಬಾ ಉರ್ಫಿಗೆ ಉರ್ಫಿನೇ ಸಾಟಿ ಕಣ್ಲಾ ಅಂತಿದ್ದಾರೆ ಫ್ಯಾನ್ಸ್​..

ಅಷ್ಟಕ್ಕೂ ಉರ್ಫಿ ಎಂದರೆ, ಒಮ್ಮೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್​ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ. ದಿನವೂ ಬಟ್ಟೆಗಳಿಂದಲೇ ಟ್ರೋಲ್​ (Troll) ಆಗುವುದು ಎಂದರೆ ತುಂಬಾ ಖುಷಿಯ ಹಾಗೆ ಕಾಣಿಸುತ್ತಿದೆ. ಇದೇ  ಕಾರಣಕ್ಕೆ  ಮುಂಬೈನ ರೆಸ್ಟೋರೆಂಟ್‌ಗೆ ತಮಗೆ ಎಂಟ್ರಿ ಸಿಗಲಿಲ್ಲ, ಯಾರೂ ಮನೆ ಬಾಡಿಗೆ ಕೊಡುತ್ತಿಲ್ಲ ಎಂದೆಲ್ಲಾ ಗೋಳೋ ಅನ್ನುತ್ತಿದ್ದರೂ ನಟಿ  ಅರೆಬರೆ ಡ್ರೆಸ್​ ರುಚಿ ನೋಡಿ ಅದನ್ನು ಮಾತ್ರ ಬಿಡುತ್ತಿಲ್ಲ. 

ಕೆಲ ದಿನಗಳ ಹಿಂದೆ  ಉಡುಪಿನೊಳಗೇ ಬ್ರಹ್ಮಾಂಡ ತೋರಿಸಿದ್ದರು.  ಇದಕ್ಕಾಗಿ ಈಕೆಯನ್ನು ಆಧುನಿಕ ಶ್ರೀಕೃಷ್ಣ ಎಂದಿದ್ದರು ಅಭಿಮಾನಿಗಳು. ಉಡುಪಿನಲ್ಲಿ ಬ್ರಹ್ಮಾಂಡ ತಿರುಗುವ ರೀತಿಯಲ್ಲಿ ತೋರಿಸಿದ್ದರು. ಈಕೆಯ ಉಡುಪು ತಿರುಗುವಂತೆ ಮಾಡಲಾಗಿದ್ದು, ಅದರಲ್ಲಿ ಗ್ರಹಗಳನ್ನು ನೋಡಬಹುದಾಗಿದೆ. ಆರಂಭದಲ್ಲಿ ಕೆಲವರು ನಟಿಯ ಕೈಹಿಡಿದು ಕರೆದುಕೊಂಡು ಬಂದಿದ್ದರು. ಆ ಬಳಿಕ ನಟಿಯ ಉಡುಪನ್ನು ಗಮನಿಸಿದರೆ, ಬ್ರಹ್ಮಾಂಡವನ್ನು ನೋಡಬಹುದಾಗಿದೆ. ಇದನ್ನು ನೋಡಿ ಅಭಿಮಾನಿಗಳು ಉಫ್​ ಎಂದಿದ್ದರು. ನಿಮಗೆ ನೀವೇ ಸಾಟಿ ಎನ್ನುತ್ತಿದ್ದರೆ, ನಿಮ್ಮ ಡ್ರೆಸ್ಸಿಂಗ್​ ಸೆನ್ಸ್​ಗೆ ಹ್ಯಾಟ್ಸ್​ ಆಫ್​ ಎಂದಿದ್ದರು.  ಮತ್ತೆ ಕೆಲವರು ಶ್ರೀಕೃಷ್ಣ ಪರಮಾತ್ಮ ಬಾಯಲ್ಲಿ ಬ್ರಹ್ಮಾಂಡ ತೋರಿದರೆ, ನೀವು ಉಡುಪಿನೊಳಗೇ ಬ್ರಹ್ಮಾಂಡ ತೋರಿದ್ದೀರಿ, ಆಧುನಿಕ ಕೃಷ್ಣ ನೀವು ಎಂದರು. ಕಳೆದ ವಾರ,  ನಟಿ ಬಟ್ಟೆಯ ಮೇಲೆ ಹೂವು, ಎಲೆಗಳನ್ನು ಇರಿಸಿಕೊಂಡು, ಅದು ಮ್ಯಾಜಿಕ್​ ರೀತಿಯಲ್ಲಿ ಉದುರುವ ಹಾಗೆ ಮಾಡಿದ್ದರು. ಇದನ್ನು ನೋಡಿ ಉರ್ಫಿ ಜಾವೇದ್​ ಫ್ಯಾನ್ಸ್​ ಫಿದಾ ಆಗಿದ್ದು, ನಿಮಗೆ ನೀವೇ ಸಾಟಿ ಎಂದಿದ್ದರು.  

ಉರ್ಫಿ ಎದುರಿದ್ದರೆ ತಿರುಗುತ್ತೆ ಫ್ಯಾನ್​, ಕೂಲೋ ಕೂಲ್​: ಇಂಥ ಐಡಿಯಾ ಯಾರಿಗೂ ಬರಲು ಸಾಧ್ಯನೇ ಇಲ್ಲ ಬಿಡಿ!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!