'ತಂದೆ ಕಾರ್ಗಿಲ್​ ಯುದ್ಧಕ್ಕೆ ಹೋಗಿದ್ದರು' ಎನ್ನುತ್ತಲೇ ಯೋಧರ ಮನೆ ತಲ್ಲಣ ತೆರೆದಿಟ್ಟ ನಟಿ ಅನುಷ್ಕಾ ಶರ್ಮಾ

Published : May 13, 2025, 06:49 PM ISTUpdated : May 14, 2025, 09:56 AM IST
 'ತಂದೆ ಕಾರ್ಗಿಲ್​ ಯುದ್ಧಕ್ಕೆ ಹೋಗಿದ್ದರು' ಎನ್ನುತ್ತಲೇ ಯೋಧರ ಮನೆ ತಲ್ಲಣ ತೆರೆದಿಟ್ಟ ನಟಿ ಅನುಷ್ಕಾ ಶರ್ಮಾ

ಸಾರಾಂಶ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ತಂದೆ ಕರ್ನಲ್ ಅಜಯ್ ಕುಮಾರ್ ಶರ್ಮಾ ಅವರ ಕಾರ್ಗಿಲ್ ಯುದ್ಧದ ಅನುಭವಗಳನ್ನು ಹಂಚಿಕೊಂಡಿದ್ದಾರೆ. 11 ವರ್ಷದವಳಾಗಿದ್ದಾಗ ತಂದೆ ಯುದ್ಧಕ್ಕೆ ಹೋದಾಗ ತಾಯಿ ಪಟ್ಟ ಆತಂಕವನ್ನು ವಿವರಿಸಿದ್ದಾರೆ. ಸೈನಿಕರ ತ್ಯಾಗಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ಸಂಘರ್ಷದ ಭಾರತದ ಕೆಲವು ಯೋಧರು ಹುತಾತ್ಮರಾಗಿದ್ದಾರೆ. ದೇಶಕ್ಕಾಗಿ, ದೇಶ ಸೇವೆಗಾಗಿ, ದೇಶದ ಜನರ ಸುರಕ್ಷತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡುವ ಯೋಧರು ಒಂದೆಡೆಯಾದರೆ, ಯುದ್ಧ ಅಥವಾ ಇನ್ನಿತರ ಘರ್ಷಣೆಗಳ ಸಂದರ್ಭದಲ್ಲಿ ಇತ್ತ ಅವರ ಕುಟುಂಬದವರ ಆತಂಕ ಮಾತ್ರ ಅನುಭವಿಸಿದವರಿಗೇ ಗೊತ್ತು. ಆ ತಳಮಳ, ನೋವು, ಯಾತನೆ, ಯುದ್ಧ ಮುಗಿಯುವವರೆಗೆ ತಮ್ಮ ಮನೆಯ ಮಗ, ಪತಿ, ಸಹೋದರ ಬದುಕಿರುತ್ತಾರೋ ಇಲ್ಲವೋ ಎಂದು ಪಡುವ ಸಂಕಷ್ಟ ಯಾರಿಗೂ ಬೇಡ. ಈಗ ಅದರ ಬಗ್ಗೆಯೇ ಮಾತನಾಡಿದ್ದಾರೆ ಬಾಲಿವುಡ್​ ನಟಿ ಅನುಷ್ಕಾ ಶರ್ಮಾ. ಅವರು, ಇದನ್ನು ಬರೆಯುವುದಕ್ಕೆ ಕಾರಣವೂ ಇದೆ. ಅವರ ತಂದೆ ಕಾರ್ಗಿಲ್​ ಯುದ್ಧಕ್ಕೆ ಹೋದ ಸಂದರ್ಭದಲ್ಲಿ ಮನೆಯಲ್ಲಿಯನ ತಲ್ಲಣಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ತೆರೆದಿಟ್ಟಿದ್ದಾರೆ. 

 
ದೇಶದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಸಶಸ್ತ್ರ ಪಡೆಗಳು ಮತ್ತು ಅವರ ಕುಟುಂಬಗಳು ಮಾಡಿದ ತ್ಯಾಗಗಳಿಗೆ  ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಧನ್ಯವಾದಗಳನ್ನು ಅರ್ಪಿಸಿದರುವ  ಅನುಷ್ಕಾ ಶರ್ಮಾ ತಮ್ಮ ತಂದೆ ನಿವೃತ್ತ ಕರ್ನಲ್  ಅಜಯ್ ಕುಮಾರ್ ಶರ್ಮಾ ಅವರು ಕಾರ್ಗಿಲ್​ ಯುದ್ಧಕ್ಕೆ ಹೋದಾಗಿನ ಸ್ಥಿತಿಯನ್ನು ನೆನಪಿಸಿಕೊಂಡರು.   ಅವರು 1982 ರಿಂದ ಆಪರೇಷನ್ ಬ್ಲೂಸ್ಟಾರ್ ಮತ್ತು 1999ರಲ್ಲಿ ನಡೆದ ಕಾರ್ಗಿಲ್ ಯುದ್ಧ ಸೇರಿದಂತೆ ಹಲವು ಯುದ್ಧದಲ್ಲೂ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿರುವ ನಟಿ, ಕಾರ್ಗಿಲ್​ ಯುದ್ಧದ ಸಂದರ್ಭದಲ್ಲಿ 11 ವರ್ಷದ ತಾವು ಏನೂ ಅರಿಯದ ಸ್ಥಿತಿಯಲ್ಲಿ, ತಮ್ಮ ಅಮ್ಮನ ಸಂಕಟವನ್ನು ಹೇಳಿದ್ದಾರೆ. 

ಪಾಕ್​ನಲ್ಲಿ ವಿಕಿರಣ ಸೋರಿಕೆ- ವೈದ್ಯಕೀಯ ಎಮರ್ಜೆನ್ಸಿ? ಕದನ ವಿರಾಮದ ಘನಘೋರ ಸತ್ಯ ಬಯಲು?

ನಾನಾಗ 11 ವರ್ಷದವಳಾಗಿದ್ದೆ. ಅಪ್ಪ ಕಾರ್ಗಿಲ್​ ಯುದ್ಧಕ್ಕೆ ಹೋಗಿದ್ದರು. ಆದರೆ  ಯುದ್ಧ ಎಂದರೇನು, ಅಲ್ಲಿ ಏನಾಗುತ್ತದೆ, ಆ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳುವಷ್ಟು ದೊಡ್ಡವಳಾಗಿರಲಿಲ್ಲ ನಾನು. ಏನೂ ಗೊತ್ತಾಗುತ್ತಿರಲಿಲ್ಲ. ನನ್ನ ಅಮ್ಮ ಸಂಕಟ ಪಡುತ್ತಿದ್ದುದು ನೆನಪಿದೆ. ಆದರೆ ಆದರೆ ಯುದ್ಧದಲ್ಲಿ ಏನಾಗಬಹುದು ಎನ್ನುವುದನ್ನು ಊಹಿಸದ ನಾನು, ಆ ಸಮಯದಲ್ಲಿಯೂ ಆರಾಮಾಗಿ ಇದ್ದೆ. ನನ್ನ ಸ್ನೇಹಿತರನ್ನು ಮನೆಗೆ ಕರೆಯುತ್ತಿದ್ದೆ, ಅಮ್ಮನ ಬಳಿ ಶಾಲೆಯ, ಗೆಳೆಯರ ವಿಷಯ ಮಾತನಾಡುತ್ತಿದ್ದೆ. ಆದರೆ ಅಮ್ಮ ಮಾತ್ರ ತುಂಬಾ ಗಾಬರಿಯಿಂದ ಇರುತ್ತಿದ್ದರು. ಸದಾ ಟಿವಿಯ ಮುಂದೆ ಕುಳಿತು ಯುದ್ಧದ ಬಗ್ಗೆ ವೀಕ್ಷಿಸುತ್ತಿದ್ದರು. ತುಂಬಾ ಭಯಭೀತರಾಗಿರುತ್ತಿದ್ದರು. ದಿನವಿಡೀ ಟಿವಿ ಆನ್​ ಮಾಡಿಯೇ ಕುಳಿತುಕೊಳ್ಳುತ್ತಿದ್ದರು. ಸಾವು ನೋವಿನ ಬಗ್ಗೆ ವಿವರ ತಿಳಿಸಿದಾಗ ಅಮ್ಮನ ಮೈಯೆಲ್ಲಾ ನಡುಗುತ್ತಿತ್ತು ಎಂದು ಹೇಳಿದ್ದಾರೆ.

 "ನಾನು ಒಬ್ಬ ನಟಿಯೆನ್ನುವುದಕ್ಕಿಂತ  ಹೆಚ್ಚಾಗಿ ಸೇನಾ ಅಧಿಕಾರಿಯ ಮಗಳು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಾಗುತ್ತದೆ" ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.  "ನಮ್ಮ ಭಾರತೀಯ ಸಶಸ್ತ್ರ ಪಡೆಗಳು ಈ ಸಮಯದಲ್ಲಿ ನಮ್ಮನ್ನು ರಕ್ಷಿಸಿದ್ದಕ್ಕಾಗಿ ಅವರು ನಾಯಕರಂತೆ ಶಾಶ್ವತವಾಗಿ ಕೃತಜ್ಞರಾಗಿರುತ್ತಾರೆ. ಅವರು ಮತ್ತು ಅವರ ಕುಟುಂಬಗಳು ಮಾಡಿದ ತ್ಯಾಗಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಜೈ ಹಿಂದ್" ಎಂದು ಬರೆದಿದ್ದಾರೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆ ಅನುಷ್ಕಾ ಶರ್ಮಾ ಅವರು ಮದುವೆಯಾದ ಬಳಿಕ ಸಿನಿಮಾದಿಂದ ನಟಿ ದೂರ ಉಳಿದಿದ್ದಾರೆ. 2018 ರಲ್ಲಿ ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಝೀರೋ ಚಿತ್ರ ಅವರು ನಟಿಸಿದ್ದ  ಕೊನೆಯ ಚಿತ್ರ.  ಈ ಸಿನಿಮಾ ಬಳಿಕ ಚಕ್ಡಾ ಎಕ್ಸ್‌ಪ್ರೆಸ್ ಸಿನಿಮಾ ಶೂಟಿಂಗ್ ‌ ಮಾಡಿದ್ದರೂ, ಚಿತ್ರದ ಬಿಡುಗಡೆಯನ್ನು ಇನ್ನೂ ಘೋಷಿಸಲಾಗಿಲ್ಲ.

ಪಾಕಿಗಳ ಮೇಲೆ ಪ್ರಕೃತಿಗೂ ಮುನಿಸು! ಉಗ್ರರ ನೆಲೆ ಛಿದ್ರಗೊಳ್ತಿದ್ದಂತೆಯೇ ಹಲವೆಡೆ ಭೂಕಂಪ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?