ಡಿವೋರ್ಸ್ ಸುದ್ದಿ ನಡುವೆ ಮಗನನ್ನು ಹೊಗಳಿದ ಬಿಗ್‌ ಬಿ., ಒಂಟಿಯಾಗಿ ಕಾಣಿಸಿಕೊಂಡ ಅಭಿಷೇಕ್!

Published : Jul 23, 2024, 04:48 PM IST
ಡಿವೋರ್ಸ್ ಸುದ್ದಿ ನಡುವೆ ಮಗನನ್ನು ಹೊಗಳಿದ ಬಿಗ್‌ ಬಿ., ಒಂಟಿಯಾಗಿ ಕಾಣಿಸಿಕೊಂಡ ಅಭಿಷೇಕ್!

ಸಾರಾಂಶ

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ಬೇರೆಯಾಗ್ತಿದ್ದಾರೆಂಬ ಸುದ್ದಿ ಹರಿದಾಡ್ತಿರುವಾಗ್ಲೇ ಅಮಿತಾಬ್ ಬಚ್ಚನ್ ಪೋಸ್ಟ್ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಒಂದ್ಕಡೆ ಬೇಸರಪಟ್ಟುಕೊಂಡ್ರೆ ಇನ್ನೊಂದು ಕಡೆ ಅಭಿಷೇಕ್ ಬಚ್ಚನ್ ಮೇಲೆ ಪ್ರಶ್ನೆಯ ಮಳೆಗೈದಿದ್ದಾರೆ.   

ಬಾಲಿವುಡ್ ದೊಡ್ಮನೆಯಲ್ಲಿ ದೊಡ್ಡ ಗಲಾಟೆ ನಡೆಯುತ್ತಿರೋದು ಎಲ್ಲರಿಗೂ ಸ್ಪಷ್ಟವಾಗಿದೆ. ಬಿಗ್ ಬಿ ಅಮಿತಾಬ್ ಬಚ್ಚನ್ ಮಗ ಅಭಿಷೇಕ್ ಹಾಗೂ ನಟಿ ಐಶ್ವರ್ಯ ರೈ ದಾಂಪತ್ಯ ಬಿರುಕುಬಿಟ್ಟಂತೆ ಕಾಣ್ತಿದೆ. ಇದಕ್ಕೆ ಸಾಕಷ್ಟು ಉದಾಹರಣೆ ಕೂಡ ಸಿಕ್ಕಿದೆ. ಈ ಮಧ್ಯೆ ಅಮಿತಾಬ್ ಬಚ್ಚನ್ ತಮ್ಮ ಮುದ್ದಿನ ಮಗನನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ. ಇದ್ಯಾಕೋ ನೆಟ್ಟಿಗರಿಗೆ ಸರಿ ಬರ್ತಿಲ್ಲ. ಇನ್ನು ವಿಚ್ಛೇದನ ಪೋಸ್ಟ್ ಗೆ ಕಮೆಂಟ್ ಮಾಡಿದ್ದ ಅಭಿಷೇಕ್, ಒಂಟಿಯಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಐಶ್ವರ್ಯ ಎಲ್ಲಿ ಅಂತ ಪ್ರಶ್ನೆ ಮಾಡ್ತಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಗನ ನಟನೆ ಶ್ಲಾಘಿಸಿದ ಅಮಿತಾಬ್ ಬಚ್ಚನ್ (Amitabh Bachchan) : ಅಮಿತಾಬ್ ಬಚ್ಚನ್, ಅವಕಾಶ ಸಿಕ್ಕಾಗೆಲ್ಲ ಮಗನ ಬೆನ್ನು ತಟ್ಟುತ್ತಿರುತ್ತಾರೆ. ಈಗ ಅಮಿತಾಬ್ ಬಚ್ಚನ್ ಅವರ ಮತ್ತೊಂದು ಪೋಸ್ಟ್ (Post) ವೈರಲ್ ಆಗಿದೆ. ಪೋಸ್ಟ್ ಒಂದನ್ನು ರೀ ಪೋಸ್ಟ್ ಮಾಡಿದ ಅಮಿತಾಬ್ ಬಚ್ಚನ್, T 5080 – ಅಭಿಷೇಕ್ (Abhishek) ನೀವು ತುಂಬಾ ಕೂಲ್.. ನಿಮಗೆ ಬಹಳಷ್ಟು ಪ್ರೀತಿ ಎಂದು ಶೀರ್ಷಿಕೆ ಹಾಕಿದ್ದಾರೆ. ಇದಕ್ಕೂ ಮುನ್ನ ಅಮಿತಾಬ್ ಬಚ್ಚನ್ ತಮ್ಮ ಟ್ವೀಟ್ ಒಂದರಲ್ಲಿ ಅಭಿಷೇಕ್ ಅವರನ್ನು ಹೊಗಳಿದ್ದರು.

ಐಶ್​- ಅಭಿ ಡಿವೋರ್ಸ್ ಎಂಬ​ ಆಟ : ಇಷ್ಟು ದೊಡ್ಡ ಸ್ಟಾರ್​ ಆಗಿ ಇಂಥ ಚೀಪ್​ ಗಿಮಿಕ್ಕಾ? ಅಮಿತಾಭ್​ ಫ್ಯಾಮಿಲಿ ವಿರುದ್ಧ ಆಕ್ರೋಶ!

ಕಳೆದ ಹಲವು ತಿಂಗಳಿಂದ ಐಶ್ವರ್ಯಾ ಬಗ್ಗೆ ಅಮಿತಾಬ್ ಬಚ್ಚನ್ ಒಂದೇ ಒಂದು ಮಾತು ಆಡಿಲ್ಲ. ಹಾಗಾಗಿ ಬಚ್ಚನ್ ಕುಟುಂಬದ ಸೊಸೆಯನ್ನು ಅಮಿತಾಬ್ ಕಡೆಗಣಿಸಿದ್ದಾರೆ ಎಂದು ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ. ಐಶ್ವರ್ಯಾ ಮತ್ತು ಅಭಿಷೇಕ್ ನಡುವಿನ ಮನಸ್ತಾಪದ ಬಗ್ಗೆ ನಟ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಈ ಮಧ್ಯೆ ಅಭಿಷೇಕ್ ಬಚ್ಚನ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಅಭಿಷೇಕ್ ಬಚ್ಚನ್,  ಆಟಗಾರರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ವಿಚ್ಛೇದನದ ಪೋಸ್ಟ್ ಲೈಕ್ ಮಾಡಿದ ನಂತರ ಅಭಿಷೇಕ್ ಒಂಟಿಯಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಐಶ್ವರ್ಯಾ ಎಲ್ಲಿ? ಎಂದು ಪ್ರಶ್ನೆ ಮಾಡ್ತಿದ್ದಾರೆ.  ನೀವು ಯಾವಾಗಲೂ ಒಂಟಿಯಾಗಿ ಏಕೆ ಕಾಣಿಸಿಕೊಳ್ಳುತ್ತೀರಿ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ನೀವಿಬ್ಬರೂ ಒಳ್ಳೆಯ ಜೋಡಿ. ಎಂದಿಗೂ ವಿಚ್ಛೇದನ ಪಡೆಯಬೇಡಿ ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ. 
 
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಗೆ ಬಚ್ಚನ್ ಕುಟುಂಬ ಒಟ್ಟಿಗೆ ಬಂದಾಗ. ಆದರೆ ಸೊಸೆ ಐಶ್ವರ್ಯಾ ರೈ ತನ್ನ ಪ್ರಿಯತಮೆ ಆರಾಧ್ಯ ಜೊತೆ ಒಬ್ಬಂಟಿಯಾಗಿ ಕಾಣಿಸಿಕೊಂಡಿದ್ದರು. ನಟಿ ಒಮ್ಮೆಯೂ ತನ್ನ ಅತ್ತೆಯೊಂದಿಗೆ ಪೋಸ್ ನೀಡಲಿಲ್ಲ. ಇದಾದ ನಂತರ ಅಭಿಷೇಕ್ ಮತ್ತು ಐಶ್ವರ್ಯಾ ನಡುವೆ ಗಲಾಟೆ ನಡೆದಿದೆ ಎಂಬ ಚರ್ಚೆ ಎಲ್ಲೆಡೆ ಶುರುವಾಗಿದೆ.

ಕಳೆದ ಕೆಲ ತಿಂಗಳಿಂದ ಐಶ್ವರ್ಯ ಹಾಗೂ ಅಭಿಷೇಕ್ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಅನಂತ್ ಅಂಬಾನಿ ಹಾಗೂ ರಾಧಿಕಾ ಮದುವೆಯಲ್ಲಿ ಕೂಡ ಐಶ್ವರ್ಯ ರೈ ಹಾಗೂ ಅವರ ಮಗಳು ಒಟ್ಟಿಗೆ ಬಂದ್ರೆ, ಅಭಿಷೇಕ್, ಅಮಿತಾಬ್, ಜಯಾ ಸೇರಿದಂತೆ ಅವರ ಕುಟುಂಬ ಪ್ರತ್ಯೇಕವಾಗಿ ಬಂದಿತ್ತು. ಇದನ್ನು ನೋಡಿದ ಅಭಿಮಾನಿಗಳು ಇಬ್ಬರ ಮಧ್ಯೆ ಎಲ್ಲವೂ ಮುಗಿದಿದೆ ಎಂದು ಸುದ್ದಿ ಮಾಡ್ತಿದ್ದಾರೆ. ಈವರೆಗೂ ಐಶ್ವರ್ಯ ರೈ ಹಾಗೂ ಅಭಿಷೇಕ್ ತಮ್ಮ ವಿಚ್ಛೇದನದ ಬಗ್ಗೆ ಹೇಳಿಲ್ಲ. 

ಗರ್ಭಿಣಿ ಪತ್ನಿ ಮೇಲೆ 'ನೇತ್ರಾವತಿ' ನಟನಿಂದ ಹಲ್ಲೆ; ಮತ್ತೊಬ್ಬರ ಜೊತೆ ಸೈಲೆಂಟ್‌ ಆಗಿ ನಿಶ್ಚಿತಾರ್ಥ?

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ 2007 ರಲ್ಲಿ ಮದುವೆಯಾಗಿದ್ದಾರೆ. ಮದುವೆಯಾದ 4 ವರ್ಷಗಳ ನಂತರ ದಂಪತಿ  ಮಗಳು ಆರಾಧ್ಯಳನ್ನು ಸ್ವಾಗತಿಸಿದ್ರು. ಇಬ್ಬರು ಮದುವೆಯಾಗಿ 17 ವರ್ಷ ಪೂರೈಸಿದ್ದು, ಈಗ ಅಗಲಿಕೆ ಸುದ್ದಿ ಬರ್ತಿದೆ. ಇಬ್ಬರು ಬೇರ್ಪಡಲು ಜಯಾ ಬಚ್ಚನ್ ಕಾರಣ ಎನ್ನುವ ಸುದ್ದಿ ಕೂಡ ಇದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?
Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!