ಕೆಲ ತಿಂಗಳುಗಳಿಂದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಡಿವೋರ್ಸ್ ಸುದ್ದಿ ಸಕತ್ ಸದ್ದು ಮಾಡುತ್ತಿದೆ. ಆದರೆ ನಿಜಕ್ಕೂ ಬಚ್ಚನ್ ಕುಟುಂಬದವರು ಮಾಡ್ತಿರೋದೇನು? ಫ್ಯಾನ್ಸ್ ಆಕ್ರೋಶ
ಕೆಲ ತಿಂಗಳಿನಿಂದ ಬಿ-ಟೌನ್ನಲ್ಲಿ ಹರಿದಾಡುತ್ತಿರುವ ಸುದ್ದಿಯೆಂದರೆ, ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿಚ್ಛೇದನದ ಸುದ್ದಿ. ಅಭಿಷೇಕ್ ಬಚ್ಚನ್ ತಮ್ಮ ಮದುವೆಯ ಉಂಗುರವನ್ನು ಧರಿಸದೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದೇ ಇಷ್ಟೆಲ್ಲಾ ಊಹಾಪೋಹಕ್ಕೆ ಕಾರಣವಾಗಿತ್ತು. ರೆಡ್ಡಿಟ್ ಬಳಕೆದಾರರಲ್ಲಿ ಒಬ್ಬರು ಇದಕ್ಕೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದರು. 'ಅಭಿಷೇಕ್ ಅವರು ತಮ್ಮ ಇತ್ತೀಚಿನ ಸಂದರ್ಶನಗಳಲ್ಲಿ ತಮ್ಮ ಮದುವೆಯ ಉಂಗುರವನ್ನು ಧರಿಸುತ್ತಿಲ್ಲ, ಇಲ್ಲಿಯವರೆಗೆ ಅವರು ಯಾವಾಗಲೂ ಅದನ್ನು ಧರಿಸುತ್ತಿದ್ದರು. ಹೀಗಾಗಿ ಅಭಿಷೇಕ್ ಹಾಗೂ ಐಶ್ವರ್ಯಾ ಸಪರೇಟ್ ಆಗುತ್ತಾರೆ ಎಂಬುದು ನಿಜವೆಂದು ತೋರುತ್ತಿದೆ' ಎಂದು ಬರೆದುಕೊಂಡಿದ್ದರು. ಇದರಿಂದಾಗಿಯೇ ಇಬ್ಬರೂ ಪ್ರತ್ಯೇಕ ಆಗುತ್ತಿದ್ದಾರೆ ಎನ್ನುವ ಸುದ್ದಿ ಸಕತ್ ಸದ್ದು ಮಾಡಿತ್ತು. ಇದಾದ ಬಳಿಕ ಐಶ್ವರ್ಯ ಮಾವ ಅಮಿತಾಭ್ ಬಚ್ಚನ್ ಕೂಡ ಇದಕ್ಕೆ ಸ್ಪಷ್ಟವಾಗಿ ಉತ್ತರ ನೀಡದೇ, ಅಡ್ಡಗೋಡೆ ಮೇಲೆ ದೀಪ ಇಟ್ಟವರಂತೆ ಹಾರಿಕೆ ಉತ್ತರ ಕೊಟ್ಟಿರುವುದು ಕೂಡ ಈ ವಿಚ್ಛೇದನದ ಸುದ್ದಿ ನಿಜ ಎಂದೇ ಹೇಳಲಾಗಿತ್ತು.
ಅಲ್ಲಿಂದ ಶುರುವಾಗಿರುವ ಐಶ್-ಅಭಿಷೇಕ್ ಬಚ್ಚನ್ ಸುದ್ದಿ ಇನ್ನೂ ತಣ್ಣಗಾಗಿಲ್ಲ. ಏಕೆಂದರೆ ಬಚ್ಚನ್ ಕುಟುಂಬ ಈ ಸುದ್ದಿಯನ್ನು ತಣ್ಣಗೆ ಮಾಡಲು ಬಿಡುತ್ತಲೇ ಇಲ್ಲ. ಇವರಿಬ್ಬರ ಡಿವೋರ್ಸ್ ವಿಷಯ ತಣ್ಣಗಾಗುತ್ತಿದೆ ಎಂದು ಅನಿಸಿದಾಗ, ಒಂದೋ ಅಭಿಷೇಕ್ ಇಲ್ಲವೇ ಐಶ್ವರ್ಯ ಅದೂ ಇಲ್ಲದಿದ್ರೆ ಅಮಿತಾಭ್ ಸೋಷಿಯಲ್ ಮೀಡಿಯಾದಲ್ಲಿ ಪರೋಕ್ಷವಾಗಿ ಪೋಸ್ಟ್ ಹಾಕುವ ಮೂಲಕ ಇವರಿಬ್ಬರೂ ಡಿವೋರ್ಸ್ ಪಡೆಯುತ್ತಾರೆ ಎಂಬಂತೆ ಹೇಳುತ್ತಿದ್ದಾರೆ. ಇದು ಭಾರಿ ಸುದ್ದಿಯಾಗುತ್ತಲೇ, ದಂಪತಿ ಒಂದಾಗಿರುವ ಫೋಟೋ ಶೇರ್ ಮಾಡಿಕೊಳ್ಳುತ್ತಾರೆ. ಕೆಲ ತಿಂಗಳಿನಿಂದ ಬಚ್ಚನ್ ಕುಟುಂಬದ ಆಟ ಮುಂದುವರೆದಿದೆ. ಇದರಲ್ಲಿ ಬಿಗ್ ಬಿ ಎಂದೇ ಕರೆಸಿಕೊಳ್ಳುವ ಅಮಿತಾಭ್ ಕೂಡ ಸಾಕಷ್ಟು ಪಾತ್ರ ವಹಿಸುತ್ತಿದ್ದಾರೆ. ಹಿಂದೊಮ್ಮೆ ಕೂಡ ಈ ಫ್ಯಾಮಿಲಿಗೆ ಪ್ರಚಾರದ ಹುಚ್ಚು ಜಾಸ್ತಿಯಾಗಿದೆ ಎಂದೇ ನೆಟ್ಟಿಗರು ಹೇಳುತ್ತಿದ್ದರು. ಮದುವೆಯೆಂಬ ಸಂಬಂಧವನ್ನು ಈ ರೀತಿ ಬಳಸಿಕೊಳ್ಳಲಾಗುತ್ತಿದೆ ಎಂದು ಸಾಕಷ್ಟು ಟ್ರೋಲ್ ಕೂಡ ಆಗಿತ್ತು.
undefined
ವಿಚ್ಛೇದನ ಸುಲಭವಲ್ಲ... ಆದರೆ ನಿರೀಕ್ಷೆಯೇ ಹುಸಿಯಾದಾಗ.... ಐಷ್-ಅಭಿ ಬಿರುಕಿಗೆ ಸಾಕ್ಷಿಯಾದ ಪೋಸ್ಟ್?
ಇದರ ನಡುವೆಯೇ ಕೆಲ ದಿನಗಳ ಹಿಂದೆ, ಡಿವೋರ್ಸ್‌ಗೆ ಸಂಬಂಧಿಸಿದಂತೆ ಇರುವ ಪೋಸ್ಟ್ ಒಂದನ್ನು ಲೈಕ್ ಮಾಡುವ ಮೂಲಕ ಅಭಿಷೇಕ್ ಬಚ್ಚನ್ ತಾವೂ ಡಿವೋರ್ಸ್ ಪಡೆದುಕೊಳ್ಳುತ್ತೇವೆ ಎನ್ನುವಂತೆ ಸೂಚಿಸಿದ್ದರು. ’ಪ್ರತಿಯೊಬ್ಬರಿಗೂ ನಿರೀಕ್ಷೆ ಬರುತ್ತದೆ. ಆದರೆ ಕೆಲವು ಬಾರಿ ಜೀವನ ನಾವು ನಿರೀಕ್ಷಿಸದಂತೆ ಇರುವುದಿಲ್ಲ. ಅಷ್ಟಕ್ಕೂ ಡಿವೋರ್ಸ್ ಎನ್ನುವುದು ಸುಲಭದ ಮಾತಲ್ಲ. ಪ್ರತಿಯೊಬ್ಬಗೂ ಸಂತೋಷದ ಕನಸು ಕಾಣುತ್ತಾರೆ. ಖುಷಿಯ ಕ್ಷಣಗಳನ್ನು ಆನಂದಿಸುತ್ತಾರೆ. ಅದೇ ರೀತಿ, ರಸ್ತೆ ದಾಟುತ್ತಿರುವಾಗ ಕೈಗಳನ್ನು ಹಿಡಿದಿರುವ ವೃದ್ಧ ದಂಪತಿಯ ಹೃದಯಸ್ಪರ್ಶಿ ವಿಡಿಯೋ ನೋಡಿದಾಗ ಎಲ್ಲರ ಮನಸ್ಸೂ ಪ್ರಫುಲ್ಲವಾಗುತ್ತದೆ. ಆದರೆ ಎಲ್ಲರ ಜೀವನವೂ ಹಾಗಲ್ಲವಲ್ಲ. ಜೊತೆಯಾಗಿಯೇ ಇದ್ದವರು ದಶಕಗಳ ನಂತರ ಬೇರ್ಪಟ್ಟಾಗ ತಮ್ಮ ಜೀವನದ ಮಹತ್ವದ ಭಾಗ, ಕಡಿದುಕೊಳ್ಳಬೇಕಾಗುತ್ತದೆ. ಗ್ರೇ ಡಿವೋರ್ಸ್ ಎನ್ನುವುದು ಸಾಮಾನ್ಯವಾಗಿ 50 ವರ್ಷ ವಯಸ್ಸಿನ ನಂತರ ವಿವಾಹ ವಿಚ್ಚೇದನ ನೀಡುವುದಕ್ಕೆ ಸಂಬಂಧಪಟ್ಟಿದೆ ಎಂದು ಹೀನಾ ಖಂಡೇವಾಲ ಎನ್ನುವವರು ಶೇರ್ ಮಾಡಿದ್ದ ಪೋಸ್ಟ್ಗೆ ಅಭಿಷೇಕ್ ಲೈಕ್ ಮಾಡಿ ಮತ್ತೆ ಡಿವೋರ್ಸ್ ಸುದ್ದಿ ಹರಿಯುವ ಹಾಗೆ ಮಾಡಿದ್ದರು. ಇದರಲ್ಲಿ ಬಹುತೇಕ ಯಶಸ್ವಿಯನ್ನೂ ಆದರು.
ಇದಕ್ಕೆ ಇನ್ನಷ್ಟು ಪುಷ್ಟಿ ನೀಡಲು ಎಂಬಂತೆ ಅಮಿತಾಭ್ ಬಚ್ಚನ್ ಅವರು ತಮ್ಮ ಪುತ್ರನನ್ನಷ್ಟೇ ಹೊಗಳುವುದು, ಸೊಸೆಯನ್ನು ಕಡೆಗಣಿಸುವ ನಾಟಕವನ್ನೂ ಧಾರಾಳವಾಗಿ ಮಾಡುತ್ತಲೇ ಬಂದಿದ್ದಾರೆ. ಇದೀಗ ಡಿವೋರ್ಸ್ ಪೋಸ್ಟ್ಗೆ ಲೈಕ್ ಮಾಡಿರುವ ವಿಷಯಕ್ಕೆ ಅಭಿಷೇಕ್ ಸ್ಪಷ್ಟನೆ ಕೊಟ್ಟಿದ್ದಾರೆ. ಅದೇನೆಂದರೆ ಐಶ್ವರ್ಯಾ ಅವರ ಫ್ರೆಂಡ್ ಝೈರತ್ ಮಾರ್ಕರ್ ಅವರು ಈ ಪೋಸ್ಟ್ಗೆ ಕೊಡುಗೆ ನೀಡಿದ್ದಾರೆ. ಆದ್ದರಿಂದ ಪತ್ನಿಯ ಗೆಳೆಯನಿಗೆ ಸಹಾಯ ಆಗಲಿ ಎನ್ನುವ ಕಾರಣಕ್ಕೆ ಅವರು ಲೈಕ್ ಒತ್ತಿದ್ದೇನೆ. ಇದನ್ನು ಹೇಳಿರುವುದು ಐಶ್ವರ್ಯ, ಆದ್ದರಿಂದ ಲೈಕ್ ಒತ್ತಿದ್ದೇನೆ ಎಂದು ಹೇಳುವ ಮೂಲಕ ತಮ್ಮ ನಡುವೆ ಎಲ್ಲವೂ ಚೆನ್ನಾಗಿದೆ ಎಂದು ಹೇಳಿದ್ದಾರೆ. ಇದರಿಂದ ಅಭಿಮಾನಿಗಳು ತೀವ್ರ ಕೆಂಡಾಮಂಡಲವಾಗಿದ್ದಾರೆ. ಇನ್ನು ಸ್ವಲ್ಪ ದಿನದಲ್ಲಿ ಮತ್ತೊಂದು ಪೋಸ್ಟ್ ಹಾಕಿ ಡಿವೋರ್ಸ್ ಆಗುತ್ತಿದ್ದೇವೆ ಎನ್ನುವ ಅರ್ಥದಲ್ಲಿ ಬರೆಯುತ್ತೀರಲ್ಲವೆ ಎಂದು ಪ್ರಶ್ನಿಸುತ್ತಿದ್ದಾರೆ.
ಕಂಗನಾ ಸ್ನೇಹ ವಿವರಿಸುತ್ತಲೇ ಮದುವೆ ವಿಷಯ ತಿಳಿಸಿದ ತರುಣಿಯರ ಕ್ರಷ್ ಸಂಸದ ಚಿರಾಗ್ ಪಾಸ್ವಾನ್!