
ಇತ್ತೀಚಿನ ದಿನಗಳಲ್ಲಿ ಹದಿಹರೆಯದವರಲ್ಲಿ ಆತಂಕಕಾರಿ ಎಂಬಂತೆ ಹೃದಯಾಘಾತವಾಗುತ್ತಿದೆ. ಇದಾಗಲೇ ಕೆಲವು ನಟ-ನಟಿಯರು ಸೇರಿದಂತೆ ಹಲವು ಯುವಕ- ಯುವತಿಯರು ಹೃದಯಾಘಾತದಿಂದ ಸಾವನ್ನಪ್ಪಿದ್ದರೆ, ಮತ್ತೆ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಬಾಲಿವುಡ್ ನಟಿ, ಹಿಂದಿನ ಬಿಗ್ ಬಾಸ್ 17 ಖ್ಯಾತಿಯ ಸೋನಿಯಾ ಬನ್ಸಾಲ್ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದು, ಆಸ್ಪತ್ರೆಯಲ್ಲಿ ನರಳುವ ವಿಡಿಯೋ ವೈರಲ್ ಆಗಿದೆ. ಇವರನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜುಲೈ 21 ರ ರಾತ್ರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಸೋನಿಯಾ ಬಂದಿದ್ದರು. ಅಲ್ಲಿ ಚೆನ್ನಾಗಿಯೇ ಓಡಾಡಿಕೊಂಡಿದ್ದ ನಟಿಗೆ ಏಕಾಏಕಿ ಆರೋಗ್ಯ ಹದಗೆಟ್ಟಿತು. ನಂತರ ಹೃದಯಾಘಾತವಾಗಿರುವುದು ತಿಳಿದು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಮೂಲಗಳ ಪ್ರಕಾರ, ಕಳೆದ ನಾಲ್ಕು ತಿಂಗಳಿನಿಂದ ಸೋನಿಯಾ ಅವರು ಪ್ಯಾನಿಕ್ ಅಟ್ಯಾಕ್‌ಗೆ ಒಳಗಾಗಿದ್ದಾರೆ. ಅವರಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿವೆ ಎನ್ನಲಾಗಿದೆ. ಈ ಮೊದಲು ಕೂಡ ಆರೋಗ್ಯ ಹದಗೆಡುತ್ತಿತ್ತು. ಆದರೆ ಇದೀಗ ಅದು ತೀವ್ರಗೊಂಡಿತು ಎಂದು ವರದಿಗಳು ಹೇಳುತ್ತಿವೆ. ಅಂದಹಾಗೆ ಆಗ್ರಾ ನಿವಾಸಿ ಸೋನಿಯಾ ಅವರಿಗೆ ಈಗ 27 ವರ್ಷ ವಯಸ್ಸು. ಇವರು ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಗೇಮ್ 100 ಕೋಟಿ ಕಾ’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ನಟಿ, ನಂತರ ‘ನಾಟಿ ಗ್ಯಾಂಗ್’, ‘ಡಬ್ಕಿ’ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇವರ ನಟನೆಯ 'ಶೂರ್ವೀರ್' ವೆಬ್ ಸರಣಿಯಲ್ಲಿ ಶೀಘ್ರದಲ್ಲಿಯೇ ತೆರೆ ಕಾಣಲಿದೆ. ಇಷ್ಟೇ ಅಲ್ಲದೇ ನಟಿ, ಈ ವರ್ಷ ತೆಲುಗಿನ 'ಧೀರ' ಮತ್ತು 'ಯೆಸ್ ಬಾಸ್' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ, ಅವರು ರಿಯಾಲಿಟಿ ಶೋ ಬಿಗ್ ಬಾಸ್ 17 ರಲ್ಲಿ ಕಾಣಿಸಿಕೊಂಡರು. ಆದರೆ ಎಲಿಮಿನೇಟ್ ಆದ ಮೊದಲ ಸ್ಪರ್ಧಿಯಾಗಿದ್ದರು.
ನಾನು ಸಿಂಗಲ್ ಎಂದ ಸುಷ್ಮಿತಾ: ನಿನ್ ಜೊತೆ ಆರು ವರ್ಷ ಇದ್ದೋನು ನಾನೇ ಕಣೆ ಅಂದ ಈ ತರುಣ!
'ಬಿಗ್ ಬಾಸ್ 17' ರಿಯಾಲಿಟಿ ಷೋನಲ್ಲಿ ಕಾಣಿಸಿಕೊಂಡಿದ್ದ ಸೋನಿಯಾ ಬನ್ಸಾಲ್ ತಮ್ಮ ಕ್ಯೂಟ್‌ನೆಸ್ ಮತ್ತು ಸ್ಟೈಲ್‌ನಿಂದ ಎಲ್ಲರನ್ನೂ ಹುಚ್ಚೆಬ್ಬಿಸಿದರು. ಷೋನಲ್ಲಿ ನಟಿಯ ಮ್ಯಾಜಿಕ್ ಹೆಚ್ಚು ಕಾಲ ಉಳಿಯದಿದ್ದರೂ, ಮನೆಯಿಂದ ಹೊರಬಂದ ನಂತರ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಾರೆ. ಅಂದಹಾಗೆ ಆಸ್ಪತ್ರೆಯಲ್ಲಿ ಸೋನಿಯಾ ಬನ್ಸಾಲ್ ನರಳಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ನಟಿ ಹಾಸಿಗೆಯ ಮೇಲೆ ನೋವಿನಿಂದ ನರಳುತ್ತಿರುವುದನ್ನು ಕಾಣಬಹುದು. ಸೋನಿಯಾ ಸ್ಥಿತಿ ತೀರಾ ಹದಗೆಟ್ಟಿರುವುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಸೋನಿಯಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವುದನ್ನು ನೋಡಬಹುದು. ವಿಡಿಯೋ ನೋಡಿದ ನಂತರ ನಟಿಯ ಅಭಿಮಾನಿಗಳು ಕೂಡ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಕಳೆದ 4 ತಿಂಗಳಿನಿಂದ ಸೋನಿಯಾ ಬನ್ಸಾಲ್ ಅವರು ಪ್ಯಾನಿಕ್ ಅಟ್ಯಾಕ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಇದಲ್ಲದೆ, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳೂ ಇವೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಸೋನಿಯಾ ಬನ್ಸಾಲ್ ಅವರು ಪ್ರಶಸ್ತಿ ಸಮಾರಂಭವೊಂದರಲ್ಲಿ ಭಾಗವಹಿಸಲು ತೆರಳಿದ್ದರು. ಅಲ್ಲಿ ಚೆನ್ನಾಗಿಯೇ ಇದ್ದರು. ಅಲ್ಲಿಂದ ವಾಪಸಾಗುತ್ತಿದ್ದಾಗ ಇದ್ದಕ್ಕಿದ್ದಂತೆ ಚಡಪಡಿಸತೊಡಗಿದರು. ಬಳಿಕ ನಟಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟಕ್ಕೂ ಬಿಗ್ಬಾಸ್ನಲ್ಲಿ ನಟಿಯನ್ನು ಮನೆಯವರು ಹೊರಹಾಕಿದ್ದರಿಂದ ಸಕತ್ ಸದ್ದು ಮಾಡಿದ್ದರು. ನಟಿ, ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ನಟಿ ಗ್ಲಾಮರಸ್ ಫೋಟೋಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಸೋನಿಯಾಳ ಕ್ಯೂಟ್ ನೆಸ್ ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಆದರೆ, ಇದೀಗ ಆಸ್ಪತ್ರೆಯಲ್ಲಿ ನೋವಿನಿಂದ ನರಳುತ್ತಿರುವ ನಟಿಯನ್ನು ಕಂಡು ಅಭಿಮಾನಿಗಳು ಕೂಡ ಕಂಗಾಲಾಗಿದ್ದು, ಸೋನಿಯಾ ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.